logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ನೇಪಾಳ ವಿಮಾನ ಪತನ; ಪೋಖರಕ್ಕೆ ಹೋಗುತ್ತಿದ್ದ ವಿಮಾನ ಅಪಘಾತ, 19 ಪ್ರಯಾಣಿಕರು ಸಜೀವ ದಹನ- ವೈರಲ್ ವಿಡಿಯೋ

ನೇಪಾಳ ವಿಮಾನ ಪತನ; ಪೋಖರಕ್ಕೆ ಹೋಗುತ್ತಿದ್ದ ವಿಮಾನ ಅಪಘಾತ, 19 ಪ್ರಯಾಣಿಕರು ಸಜೀವ ದಹನ- ವೈರಲ್ ವಿಡಿಯೋ

Umesh Kumar S HT Kannada

Jul 24, 2024 12:33 PM IST

google News

ನೇಪಾಳ ವಿಮಾನ ಪತನ; ಪೋಖರಕ್ಕೆ ಹೋಗುತ್ತಿದ್ದ ವಿಮಾನ ಅಪಘಾತ, 19 ಪ್ರಯಾಣಿಕರು ಸಜೀವ ದಹನ ಶಂಕೆ ವ್ಯಕ್ತವಾಗಿದೆ.

  • ನೇಪಾಳ ವಿಮಾನ ಪತನ; ಕಠ್ಮಂಡುವಿನಿಂದ ಪೋಖರಕ್ಕೆ ಹೋಗುತ್ತಿದ್ದ ವಿಮಾನ ಅಪಘಾತವಾಗಿ 19 ಪ್ರಯಾಣಿಕರು ಸಜೀವ ದಹನ ಶಂಕೆ ವ್ಯಕ್ತವಾಗಿದೆ. ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೂಡಲೇ ವಿಮಾನ ಪತನವಾಗಿರುವುದಾಗಿ ವರದಿಗಳು ಹೇಳಿವೆ.

ನೇಪಾಳ ವಿಮಾನ ಪತನ; ಪೋಖರಕ್ಕೆ ಹೋಗುತ್ತಿದ್ದ ವಿಮಾನ ಅಪಘಾತ, 19 ಪ್ರಯಾಣಿಕರು ಸಜೀವ ದಹನ ಶಂಕೆ ವ್ಯಕ್ತವಾಗಿದೆ.
ನೇಪಾಳ ವಿಮಾನ ಪತನ; ಪೋಖರಕ್ಕೆ ಹೋಗುತ್ತಿದ್ದ ವಿಮಾನ ಅಪಘಾತ, 19 ಪ್ರಯಾಣಿಕರು ಸಜೀವ ದಹನ ಶಂಕೆ ವ್ಯಕ್ತವಾಗಿದೆ.

ಕಠ್ಮಂಡು: ನೇಪಾಳದ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಸೌರ್ಯ ಏರ್‌ಲೈನ್ಸ್ ವಿಮಾನವೊಂದು ಟೇಕಾಫ್ ಆಗುವ ವೇಳೆ ಪತನಗೊಂಡಿದೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಅಪಘಾತಕ್ಕೀಡಾದ ವಿಮಾನದಲ್ಲಿ ವಿಮಾನ ಸಿಬ್ಬಂದಿ ಸೇರಿದಂತೆ 19 ಮಂದಿ ಇದ್ದರು ಎಂದು ವಿಮಾನ ನಿಲ್ದಾಣದ ವಕ್ತಾರ ಪ್ರೇಮನಾಥ್ ಠಾಕೂರ್ ತಿಳಿಸಿದ್ದಾಗಿ ವರದಿ ಹೇಳಿದೆ.

ಅಪಘಾತ ಸ್ಥಳದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ನೇಪಾಳ ವಿಮಾನ ಪತನ ಸ್ಥಳದ ವಿಡಿಯೋ

ನೇಪಾಳ ವಿಮಾನ ಪತನ; ಸೌರ್ಯ ಏರ್‌ಲೈನ್ಸ್ ವಿಮಾನ ಅಪಘಾತದ ಮುಖ್ಯ ಅಂಶಗಳು

  • ಸೌರ್ಯ ಏರ್‌ಲೈನ್ಸ್ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ದಟ್ಟ ಹೊಗೆ ಆವರಿಸಿದೆ ಎಂದು ಖಬರ್‌ಹಬ್ ನ್ಯೂಸ್ ಪೋರ್ಟಲ್ ವರದಿ ಮಾಡಿದೆ.
  • ಸೌರ್ಯ ಏರ್‌ಲೈನ್ಸ್ ವಿಮಾನವು ಹಿಮಾಲಯ ಗಣರಾಜ್ಯದ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾದ ಪೋಖರಾಗೆ ತೆರಳುತ್ತಿತ್ತು.
  • ಸೌರ್ಯ ಏರ್‌ಲೈನ್ಸ್ ತನ್ನ ವೆಬ್‌ಸೈಟ್ ನೀಡಿರುವ ಮಾಹಿತಿ ಪ್ರಕಾರ ಬೊಂಬಾರ್ಡಿಯರ್ ಸಿಆರ್‌ಜೆ 200 ಜೆಟ್‌ಗಳನ್ನು ಪ್ರತ್ಯೇಕವಾಗಿ ವಾಯುಯಾನಕ್ಕೆ ಬಳಸುತ್ತದೆ.

ನೇಪಾಳದ ವಿಮಾನ ಯಾನ ಉದ್ಯಮವು ಇತ್ತೀಚಿನ ವರ್ಷಗಳಲ್ಲಿ ಪ್ರವರ್ಧಮಾನಕ್ಕೆ ಬಂದಿದೆ. ತಲುಪಲು ಕಷ್ಟವಾದ ಪ್ರದೇಶಗಳು ಮತ್ತು ವಿದೇಶಿ ಚಾರಣಿಗರು ಮತ್ತು ಆರೋಹಿಗಳ ಅಗತ್ಯ ಈಡೇರಿಸಲು ಸರಕುಗಳು ಮತ್ತು ಜನರನ್ನು ಸಾಗಿಸುತ್ತದೆ. ಆದರೆ ಸಾಕಷ್ಟು ತರಬೇತಿ ಕೊರತೆ ಮತ್ತು ಕಳಪೆ ನಿರ್ವಹಣೆ, ಕನಿಷ್ಠ ಸುರಕ್ಷಾ ಕ್ರಮಗಳ ಕಾರಣ ಸಂಕಷ್ಟ ಎದುರಿಸಿದೆ. ಐರೋಪ್ಯ ಒಕ್ಕೂಟವು ಎಲ್ಲಾ ನೇಪಾಳಿ ವಾಹಕಗಳನ್ನು ತನ್ನ ವಾಯುಪ್ರದೇಶ ಪ್ರವೇಶ ಮಾಡದಂತೆ ಸುರಕ್ಷತೆಯ ಕಾಳಜಿಯಿಂದ ನಿಷೇಧಿಸಿದೆ.

ನೇಪಾಳದಲ್ಲಿ ವರ್ಷಕ್ಕೆ ಸರಾಸರಿ ಒಂದು ವಿಮಾನ ದುರಂತ ಸಂಭವಿಸಿದೆ. 2010 ರಿಂದ, ಹಿಮಾಲಯದ ತಾಣವು ಇತ್ತೀಚಿನದು ಸೇರಿದಂತೆ ಕನಿಷ್ಠ 12 ಮಾರಣಾಂತಿಕ ವಿಮಾನ ಅಪಘಾತಗಳಿಗೆ ಸಾಕ್ಷಿಯಾಗಿದೆ.

2023ರ ಜನವರಿಯಲ್ಲಿ ಕೇಂದ್ರ ನಗರವಾದ ಪೊಖರಾ ಬಳಿ ಯೇತಿ ಏರ್‌ಲೈನ್ಸ್ ವಿಮಾನ ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 72 ಜನರು ಪ್ರಾಣ ಕಳೆದುಕೊಂಡಿದ್ದರು. ವಿಮಾನವು ಕಡಿದಾದ ಕಮರಿಗೆ ಬಿದ್ದು ಸ್ಪೋಟಗೊಂಡಿತ್ತು.

ಇದಕ್ಕೂ ಮೊದಲು 2022ರ ಮೇ 29 ರಂದು ತಾರಾ ಏರ್ ವಿಮಾನವು ಮುಸ್ತಾಂಗ್ ಜಿಲ್ಲೆಯಲ್ಲಿ ಪತನಗೊಂಡು 22 ಪ್ರಯಾಣಿಕರು ಮೃತಪಟ್ಟಿದ್ದರು.

ಯುಎಸ್-ಬಾಂಗ್ಲಾ ಏರ್ಲೈನ್ಸ್ ವಿಮಾನ 2018 ರಲ್ಲಿ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿತ್ತು. ಅಂದು ವಿಮಾನವು ಕ್ರ್ಯಾಶ್-ಲ್ಯಾಂಡ್ ಆಗಿದ್ದು, 51 ಜನ ಮೃತಪಟ್ಟು, 20 ಇತರರಿಗೆ ಗಂಭೀರ ಗಾಯಗಳಾಗಿವೆ.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್‌. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ