logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm Modi In Egypt: ಕೈರೋದ 1000 ವರ್ಷ ಹಳೆಯ ಅಲ್‌ ಹಕಿಮ್‌ ಮಸೀದಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ; ಮಹತ್ವದ ಭೇಟಿ ಯಾಕೆ, ಇಲ್ಲಿದೆ ವಿವರ

PM Modi in Egypt: ಕೈರೋದ 1000 ವರ್ಷ ಹಳೆಯ ಅಲ್‌ ಹಕಿಮ್‌ ಮಸೀದಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ; ಮಹತ್ವದ ಭೇಟಿ ಯಾಕೆ, ಇಲ್ಲಿದೆ ವಿವರ

HT Kannada Desk HT Kannada

Jan 09, 2024 08:07 PM IST

google News

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈಜಿಪ್ಟ್‌ ತಲುಪಿದ್ದು, ಕೈರೋದಲ್ಲಿರುವ 1000 ವರ್ಷ ಹಳೆಯ ಅಲ್‌ ಹಕಿಮ್‌ ಮಸೀದಿಗೆ ಭೇಟಿ ನೀಡಲಿದ್ದಾರೆ.

  • PM Modi to visit Al-Hakim Mosque: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈಜಿಪ್ಟ್‌ ತಲುಪಿದ್ದು, ಕೈರೋದಲ್ಲಿರುವ 1000 ವರ್ಷ ಹಳೆಯ ಅಲ್‌ ಹಕಿಮ್‌ ಮಸೀದಿಗೆ ಭೇಟಿ ನೀಡಲಿದ್ದಾರೆ. ಅವರ ಈ ಭೇಟಿ ಭಾರತದ ದಾವೂದಿ ಮುಸ್ಲಿಂ ಸಮುದಾಯದ ಮಟ್ಟಿಗೆ ಮಹತ್ವದ್ದಾಗಿದೆ. ಯಾಕೆ ಎಂಬುದರ ವಿವರ ಇಲ್ಲಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈಜಿಪ್ಟ್‌ ತಲುಪಿದ್ದು, ಕೈರೋದಲ್ಲಿರುವ 1000 ವರ್ಷ ಹಳೆಯ ಅಲ್‌ ಹಕಿಮ್‌ ಮಸೀದಿಗೆ ಭೇಟಿ ನೀಡಲಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಈಜಿಪ್ಟ್‌ ತಲುಪಿದ್ದು, ಕೈರೋದಲ್ಲಿರುವ 1000 ವರ್ಷ ಹಳೆಯ ಅಲ್‌ ಹಕಿಮ್‌ ಮಸೀದಿಗೆ ಭೇಟಿ ನೀಡಲಿದ್ದಾರೆ.

ಯುನೈಟೆಡ್‌ ಸ್ಟೇಟ್ಸ್‌ಗೆ ಐತಿಹಾಸಿಕ ಭೇಟಿ (PM Modi US visit) ಮತ್ತು ಶ್ವೇತಭವನದಲ್ಲಿ ಸರ್ಕಾರಿ ಔತಣಕೂಟ, ಉದ್ಯಮಿಗಳು, ಅನಿವಾಸಿ ಭಾರತೀಯರ ಜತೆಗೆ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು (ಜೂ.24) ನಂತರ ಈಜಿಪ್ಟ್‌ಗೆ ಬಂದಿಳಿದರು. ಅವರ ಈಜಿಪ್ಟ್‌ ಪ್ರವಾಸದ (PM Modi Egypt Visit) ವೇಳಾಪಟ್ಟಿಯಲ್ಲಿ ಮೊದಲ ದಿನವೇ ಕೈರೊದಲ್ಲಿರುವ 1000 ವರ್ಷಗಳಷ್ಟು ಹಳೆಯದಾದ ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ ಎಂಬ ಅಂಶ ಗಮನಸೆಳೆದಿದೆ.

ಈಜಿಪ್ಟ್‌ನ ನಾಗರಿಕತೆಯು ಪ್ರಪಂಚದ ಅತ್ಯಂತ ಪುರಾತನ ನಾಗರಿಕತೆಗಳಲ್ಲಿ ಒಂದು. ಇಂತಹ ದೇಶದ ನಾಲ್ಕನೇ ಅತ್ಯಂತ ಹಳೆಯ ಮಸೀದಿ. ಇಬ್ನ್ ತುಲುನ್ ಮಸೀದಿಯ ನಂತರ ಎರಡನೇ ದೊಡ್ಡ ಮಸೀದಿ ಇದು.

ಪ್ರಧಾನಿ ಮೋದಿ ಅವರ ಮಸೀದಿ ಭೇಟಿಗೆ ಏಕಿಷ್ಟು ಮಹತ್ವ

ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಈಜಿಪ್ಟ್‌ ಭೇಟಿ ಮತ್ತು ಕೈರೋದಲ್ಲಿನ ಮಸೀದಿ ಭೇಟಿಯು ಭಾರತದ ದಾವೂದಿ ಮುಸ್ಲಿಂ ಸಮುದಾಯದ ಮಟ್ಟಿಗೆ ಮಹತ್ವದ್ದಾಗಿದೆ.

ದಾವೂದಿ ಬೊಹ್ರಾಸ್ ಮುಸ್ಲಿಂ ಸಮುದಾಯದ ಮೂಲವು ಫಾತಿಮಿಡ್ ರಾಜವಂಶದ ಹಿಂದಿನದು. 1970 ರ ದಶಕದಲ್ಲಿ ಈ ಮಸೀದಿಯನ್ನು ನವೀಕರಿಸಿದರು. ವಾಸ್ತವವಾಗಿ, ಸಮುದಾಯವು ಎರಡು ನವೀಕರಣ ಯೋಜನೆಗಳನ್ನು ಕೈಗೊಂಡಿತು; ಮೊದಲನೆಯದು ಸುಮಾರು 40 ವರ್ಷಗಳ ಹಿಂದೆ ಪೂರ್ಣಗೊಂಡಿತು.

ದಾವೂದಿ ಬೊಹ್ರಾ-ಪಿಎಂ ಮೋದಿ ಸಂಪರ್ಕ

ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತ್‌ನಲ್ಲಿ ದಾವೂದಿ ಬೋಹ್ರಾಗಳ ದೊಡ್ಡ ಜನಸಂಖ್ಯೆ ಇದೆ. ಅವರು 11 ನೇ ಶತಮಾನದಲ್ಲಿ ಭಾರತದಲ್ಲಿ ಬಂದು ನೆಲೆಸಿದವರು. ಸಮುದಾಯದ ಆರಂಭಿಕ ಜನರು 1539 ರಲ್ಲಿ ಯೆಮೆನ್‌ನಿಂದ ಗುಜರಾತ್‌ಗೆ ಸ್ಥಳಾಂತರಗೊಂಡವರು.

ಗುಜರಾತಿನಲ್ಲಿ ತನಗೆ ಸಹಾಯ ಮಾಡಿದ ಸಮುದಾಯಕ್ಕೆ ನರೇಂದ್ರ ಮೋದಿ ಯಾವಾಗಲೂ ಕೃತಜ್ಞತೆ ಸಲ್ಲಿಸುತ್ತಾರೆ.

ನರೇಂದ್ರ ಮೋದಿ ಅವರು 2011 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಧಾರ್ಮಿಕ ಮುಖ್ಯಸ್ಥ ಸೈಯದ್ನಾ ಬುರ್ಹಾನುದ್ದೀನ್ ಅವರ 100 ನೇ ಹುಟ್ಟುಹಬ್ಬವನ್ನು ತಮ್ಮೊಂದಿಗೆ ಆಚರಿಸಲು ಬೋಹ್ರಾ ಸಮುದಾಯವನ್ನು ಆಹ್ವಾನಿಸಿದರು. 2014ರಲ್ಲಿ ಬುರ್ಹಾನುದ್ದೀನ್ ನಿಧನರಾದಾಗ ಪ್ರಧಾನಿ ಮುಂಬೈಗೆ ತೆರಳಿ ಅಂತಿಮ ನಮನ ಸಲ್ಲಿಸಿದ್ದರು. ಅವರ ಉತ್ತರಾಧಿಕಾರಿ ಸೈಯದ್ನಾ ಮುಫದ್ದಲ್ ಸೈಫುದ್ದೀನ್ ಅವರನ್ನು ಭೇಟಿಯಾದರು. ಸೈಯದ್ನಾ ಮುಫದ್ದಲ್ ಸೈಫುದ್ದೀನ್ ಅವರು ಪ್ರಸ್ತುತ ಸಮುದಾಯದ ಮುಖ್ಯಸ್ಥರಾಗಿದ್ದಾರೆ.

ಬಾಂಗ್ಲಾದೇಶಕ್ಕೆ 2021 ರಲ್ಲಿ ಭೇಟಿ ನೀಡಿದಾಗ, ಪ್ರಧಾನಿ ಮೋದಿ ಬೋಹ್ರಾಗಳ ನಿಯೋಗವನ್ನು ಭೇಟಿಯಾದರು. 2018 ರಲ್ಲಿ, ಇಂದೋರ್‌ನ ಸೈಫೀ ಮಸೀದಿಯಲ್ಲಿ ಇಮಾಮ್ ಹುಸೇನ್ (ಎಸ್‌ಎ) ಅವರ ಹುತಾತ್ಮರ ಸ್ಮರಣೆಯ ಆಶಾರಾ ಮುಬಾರಕಾ - ಬೋಹ್ರಾ ಸಮುದಾಯ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು. ಈ ಎಲ್ಲ ಘಟನಾವಳಿಗಳನ್ನು ಗಮನಿಸಿದರೆ ಈ ಮಸೀದಿ ಭೇಟಿಗೆ ಯಾಕಿಷ್ಟು ಮಹತ್ವ ಎಂಬುದು ಮನದಟ್ಟಾದೀತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ