logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Viral Video: ಮನುಷ್ಯರಂತೆ ವರ್ತಿಸುವ ಕರಡಿಗಳು, ಚೀನಾದ ವೈರಲ್ ವಿಡಿಯೊ ನಂತರ ಇದೀಗ ಬ್ರಿಟನ್‌ನ ಸರದಿ

Viral Video: ಮನುಷ್ಯರಂತೆ ವರ್ತಿಸುವ ಕರಡಿಗಳು, ಚೀನಾದ ವೈರಲ್ ವಿಡಿಯೊ ನಂತರ ಇದೀಗ ಬ್ರಿಟನ್‌ನ ಸರದಿ

HT Kannada Desk HT Kannada

Aug 06, 2023 11:01 AM IST

google News

ಪ್ಯಾರಡೈಸ್ ವೈಲ್ಡ್‌ಲೈಫ್ ಪಾರ್ಕ್‌ನ ಕರಡಿ "ಕೈರಾ"

  • Viral Video: ಚೀನಾದ ಮೃಗಾಲಯದಲ್ಲಿ ಮನುಷ್ಯನಂತೆ ವರ್ತಿಸುವ ಕರಡಿ ವಿಡಿಯೋ ವೈರಲ್‌ ಆದ ನಂತರದಲ್ಲಿ, ಅದು ಕರಡಿ ವೇಷ ಧರಿಸಿದ ಮನುಷ್ಯ ಇರಬಹುದು ಎಂದು ಸಂದೇಹದಿಂದ ನೋಡುವ ಪ್ರವೃತ್ತಿ ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿ ಸನ್‌ ಬೇರ್‌ನ ವಿಡಿಯೋ ಶೇರ್‌ ಮಾಡಿದ ಬ್ರಿಟನ್‌ನ ಮೃಗಾಲಯ, ಇನ್‌ಸ್ಟಾಗ್ರಾಮ್‌ನಲ್ಲಿ ಚರ್ಚೆಗೆ ವೇದಿಕೆ ಒದಗಿಸಿದೆ.

ಪ್ಯಾರಡೈಸ್ ವೈಲ್ಡ್‌ಲೈಫ್ ಪಾರ್ಕ್‌ನ ಕರಡಿ "ಕೈರಾ"
ಪ್ಯಾರಡೈಸ್ ವೈಲ್ಡ್‌ಲೈಫ್ ಪಾರ್ಕ್‌ನ ಕರಡಿ "ಕೈರಾ" (Instagram/@Paradise Wildlife Park )

ಪೂರ್ವ ಚೀನಾದ ಹ್ಯಾಂಗ್‌ಝೌ ಮೃಗಾಲಯದಲ್ಲಿನ 'ಮನುಷ್ಯರ ಮಾದರಿಯ ಕರಡಿ'ಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ತೀವ್ರ ಟೀಕೆಗೆ ಒಳಗಾಗಿದೆ. ಅಂದಿನಿಂದ, ಆ ಮೃಗಾಲಯದ ಕರಡಿಗಳು ವೇಷಭೂಷಣಗಳನ್ನು ಧರಿಸಿರುವ ಜನರು ಎಂಬ ಆರೋಪ ವ್ಯಕ್ತವಾಗಿದೆ. ಆದರೆ, ಮೃಗಾಯದ ಆಡಳಿತ ಈ ಆರೋಪಗಳನ್ನು ನಿರಾಕರಿಸಿದೆ.

ಇದೀಗ, ಈ ಅನುಮಾನಗಳ ನಡುವೆ, ಬ್ರಿಟನ್‌ನ ಪ್ಯಾರಡೈಸ್ ವೈಲ್ಡ್‌ಲೈಫ್ ಪಾರ್ಕ್, ಅನುಮಾನವೇ ಬೇಡ ಇದು ಕರಡಿಯೇ ಹೌದು ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಒಂದನ್ನು ಇನ್‌ಸ್ಟಾಗ್ರಾಂನಲ್ಲಿ ತಮಾಷೆಯಾಗಿ ಶೇರ್‌ ಮಾಡಿದೆ.

"ಕೈರಾ ಎಂಬ ಸನ್‌ ಬೇರ್‌ ಇದು ಎಂಬುದನ್ನು ನಾವು ಖಚಿತಪಡಿಸಬಹುದು" ಎಂದು ಪ್ಯಾರಡೈಸ್ ವೈಲ್ಡ್‌ಲೈಫ್ ಪಾರ್ಕ್ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದುಕೊಂಡಿದೆ. ಮೃಗಾಲಯವು ಶೇರ್‌ ಮಾಡಿಕೊಂಡಿರುವ ವೀಡಿಯೊದಲ್ಲಿ, ನೀವು 'ಮನುಷ್ಯನಂತೆ ವರ್ತಿಸುವ ಕರಡಿ'ಯನ್ನು ಹತ್ತಿರದಿಂದ ನೋಡಬಹುದು. ಈ ವಿಡಿಯೋದಲ್ಲಿ ಕೈರಾ ಉದ್ಯಾನ ಪ್ರದೇಶದಲ್ಲಿ ತಿರುಗಾಡುತ್ತ ಎದ್ದು ನಿಂತು ನೋಡುವ ದೃಶ್ಯವಿದೆ.

ಕರಡಿಯ ವಿಡಿಯೋ ಇಲ್ಲಿದೆ ನೋಡಿ:

ಈ ಪೋಸ್ಟ್ ಅನ್ನು ಆಗಸ್ಟ್ 1 ರಂದು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ನಂತರ, ಇದನ್ನು 77,000 ಕ್ಕೂ ಹೆಚ್ಚು ಬಾರಿ ಲೈಕ್ ಆಗಿದೆ. ಶೇರ್‌ಗೆ ಸಾವಿರಕ್ಕೂ ಹೆಚ್ಚು ಕಾಮೆಂಟ್‌ಗಳು ಕೂಡ ಬಂದಿವೆ.

ಈ ಕರಡಿ ಕುರಿತು ಜನ ಹೇಳುತ್ತಿರುವುದೇನು

"ಅವುಗಳೇಕೆ ತುಂಬಾ ಮುದ್ದಾಗಿವೆ? ನಾನು ಅದನ್ನು ತಬ್ಬಿಕೊಳ್ಳಲಾಗದು ಎಂದು ನನಗೆ ತಿಳಿದಿದೆ. ಆದರೆ ಈಗ ನಾನು ಅದನ್ನು ತಬ್ಬಲು ಬಯಸುತ್ತೇನೆ!" ಎಂದು ಒಬ್ಬ ಬರೆದಿದ್ದಾರೆ.

"ಓ ಮೈ ಗಾಡ್‌, ಅದರ ಕುತ್ತಿಗೆ ತುಂಬಾ ಚಪ್ಪಟೆಯಾಗಿದೆ. ಈ ವದಂತಿಗಳು ಎಲ್ಲಿಂದ ಹುಟ್ಟಿಕೊಂಡಿವೆಯೋ ಎಂಬುದನ್ನುನಾನು ಅರ್ಥಮಾಡಿಕೊಂಡಿದ್ದೇನೆ" ಎಂದು ಇನ್ನೊಬ್ಬ ವ್ಯಕ್ತಿ ಬರೆದಿದ್ದಾರೆ.

"ಈ ಕರಡಿ ನಿಜವಾಗಿಯೂ ನಕಲಿಯಾಗಿ ಕಾಣುತ್ತದೆ. ಇದು ನಿಜವಾಗಿಯೂ ತುಂಬಾ ವಿಶಿಷ್ಟ ಮತ್ತು ತೆಳ್ಳಗಿದೆ!" ಎಂದು ಮೂರನೇ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ.

"ನೀವೆಲ್ಲರೂ ಮಕ್ಕಳಾಗಿ ಝೂ ಬುಕ್‌ ಗಳನ್ನು ಓದಿದವರಾದರೆ, ಸನ್‌ ಬೇರ್‌ಗಳು ತಮ್ಮ ನೆಚ್ಚಿನ ಆಹಾರವನ್ನು ಹಿಡಿಯಲು ನೇರವಾಗಿ ನಡೆಯುತ್ತವೆ ಎಂಬುದು ನಿಮಗೆ ತಿಳಿದಿರುತ್ತದೆ" ಎಂದು ನಾಲ್ಕನೇ ವ್ಯಕ್ತಿ ಹೇಳಿದ್ದಾರೆ.

ಇನ್ನು ಐದನೇಯವರು, ಓಹ್ಹೋ ಈ ಸುಂದರಿಯನ್ನು ತಮಾಷೆ ಜನ ಮನುಷ್ಯ ಎಂದು ಭಾವಿಸಿದ್ದಾರೆ ಎಂದು ಉದ್ಗರಿಸಿ ಕಾಮೆಂಟ್‌ ಮಾಡಿದ್ದಾರೆ.

“ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ಪ್ರಕೃತಿಯನ್ನು ಗಮನಿಸುವುದೇ ಇಲ್ಲ ಎಂಬುದು ನಾಚಿಕೆಗೇಡಿನ ಸಂಗತಿಯಾಗಿದೆ. ಸನ್‌ ಬೇರ್‌ಗಳು ಮತ್ತು ಮೂನ್‌ ಬೇರ್‌ಗಳು ಒಂದೇ ರೀತಿ ಕಾಣುತ್ತವೆ ನೋಡಿ” ಎಂದು ಆರನೆಯವರು ಹೇಳಿಕೊಂಡಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ