logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  World Television Day: ನವೆಂಬರ್‌ 21 ವಿಶ್ವ ಟೆಲಿವಿಷನ್‌ ದಿನ, ಟೆಲಿವಿಷನ್‌ ದಿನದ ಇತಿಹಾಸ, ಮಹತ್ವ ಗೊತ್ತೆ?

World Television Day: ನವೆಂಬರ್‌ 21 ವಿಶ್ವ ಟೆಲಿವಿಷನ್‌ ದಿನ, ಟೆಲಿವಿಷನ್‌ ದಿನದ ಇತಿಹಾಸ, ಮಹತ್ವ ಗೊತ್ತೆ?

Praveen Chandra B HT Kannada

Nov 20, 2022 06:15 PM IST

google News

World Television Day: ನವೆಂಬರ್‌ 21 ವಿಶ್ವ ಟೆಲಿವಿಷನ್‌ ದಿನ, ಟೆಲಿವಿಷನ್‌ ದಿನದ ಇತಿಹಾಸ, ಮಹತ್ವ ಗೊತ್ತೆ?

    • ಪ್ರತಿ ವರ್ಷ ನವೆಂಬರ್‌ 21ರಂದು ಜಗತ್ತಿನ ನಾನಾ ಭಾಗಗಳಲ್ಲಿ ವಿಶ್ವ ಟೆಲಿವಿಷನ್‌ ದಿನ (World Television Day) ಆಚರಿಸಲಾಗುತ್ತದೆ. ಜನರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಟೆಲಿವಿಷನ್‌ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
World Television Day: ನವೆಂಬರ್‌ 21 ವಿಶ್ವ ಟೆಲಿವಿಷನ್‌ ದಿನ, ಟೆಲಿವಿಷನ್‌ ದಿನದ ಇತಿಹಾಸ, ಮಹತ್ವ ಗೊತ್ತೆ?
World Television Day: ನವೆಂಬರ್‌ 21 ವಿಶ್ವ ಟೆಲಿವಿಷನ್‌ ದಿನ, ಟೆಲಿವಿಷನ್‌ ದಿನದ ಇತಿಹಾಸ, ಮಹತ್ವ ಗೊತ್ತೆ?

ಟೆಲಿವಿಷನ್‌ನಿಂದ ಸಾಕಷ್ಟು ಪ್ರಯೋಜನಗಳು ಇವೆ. ಜನರ ಮೇಲೆ ಟೆಲಿವಿಷನ್‌ ಬೀರುವ ನಕಾರಾತ್ಮಕ ಅಂಶಗಳಿಗಿಂತ ಸಕಾರಾತ್ಮಕ ಅಂಶಗಳೂ ಹೆಚ್ಚಿವೆ. ಇದೇ ಕಾರಣಕ್ಕೆ ವಿಶ್ವ ಟೆಲಿವಿಷನ್‌ ದಿನ (World Television Day) ಆರಂಭಿಸಲಾಗಿದೆ.

ವಿಶ್ವ ಟೆಲಿವಿಷನ್‌ ದಿನಾಚರಣೆಯ ಆರಂಭ

ಜಗತ್ತಿನಲ್ಲಿ ಸಂಭವಿಸುತ್ತಿರುವ ಬಿಕ್ಕಟ್ಟುಗಳು, ಶಾಂತಿ, ಭದ್ರತೆ, ಆರ್ಥಿಕ ಮತ್ತು ಸಾಮಾಜಿಕ ವಿಷಯಗಳು, ಶಿಕ್ಷಣ ಕುರಿತು ಜನರ ಮೇಲೆ ಟಿವಿ ಬೀರುತ್ತಿರುವ ಪರಿಣಾಮವನ್ನು ಗುರುತಿಸಿ ವಿಶ್ವಸಂಸ್ಥೆಯು 1996ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನವೆಂಬರ್‌ 21 ಅನ್ನು ವಿಶ್ವ ಟೆಲಿವಿಷನ್‌ ದಿನವಾಗಿ ಘೋಷಿಸಿತು. ಪ್ರತಿದಿನ ಟೆಲಿವಿಷನ್‌ನಿಂದ ಆಗುತ್ತಿರುವ ಪ್ರಯೋಜನಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ವಿಶ್ವಸಂಸ್ಥೆಯು ಟೆಲಿವಿಷನ್‌ ದಿನವನ್ನು ಆಚರಿಸಿಕೊಂಡು ಬರುತ್ತಿದೆ.

ಟೆಲಿವಿಷನ್‌ ಕಂಡುಹಿಡಿದದ್ದು ಯಾರು?

ಅಮೆರಿಕದ ಇದೋದ ಗ್ರಾಮದ ಹವ್ಯಾಸಿ ಸಂಶೋಧಕ ಫಿಲೊ ಟೇಲರ್‌ ಫ್ರಾನ್ಸ್‌ವರ್ತ್‌ ಟೆಲಿವಿಷನ್‌ ಅನ್ನು ಮೊತ್ತ ಮೊದಲ ಬಾರಿಗೆ ಆವಿಷ್ಕರಿಸಿದ್ದರು. ಹಲವಾರು ಜನರ ಆರ್ಥಿಕ ನೆರವಿನಿಂದ ಫಿಲೊ 1934 ಆಗಸ್ಟ್‌ 25ರಂದು ಎಲೆಕ್ಟ್ರಾನಿಕ್‌ ಟೆಲಿವಿಷನ್‌ ಸೆಟ್‌ ಕಂಡು ಹಿಡಿದು, ಅದರಲ್ಲಿ ತಮ್ಮ ಪತ್ನಿಯ ಭಾವಚಿತ್ರವನ್ನು ಪ್ರಸಾರ ಮಾಡಿದ್ದರು. ಇದಾದ ನಂತರ ಜಾನ್‌ ಲಾಗಿ ಬೇರ್ಡ್‌ ಎಂಬುವರು 1925ರಲ್ಲಿ ಡುಮ್ಮ ಗಾತ್ರದ ಟೆಲಿವಿಷನ್‌ ಕಂಡು ಹಿಡಿದು ಅದನ್ನು ಟೆಲಿವಿಸರ್‌ ಎಂದು ಕರೆದರು. 1930ರಲ್ಲಿ ಸಣ್ಣ ಗಾತ್ರ ಪರದೆಯ , ಮತ್ತಷ್ಟು ಅತ್ಯಾಧುನಿಕವಾದ ಟೆಲಿವಿಷನ್‌ ಅಭಿವೃದ್ಧಿಪಡಿಸಿದರು. ಇದು ಜನಪ್ರಿಯಗೊಳ್ಳುತ್ತಿದ್ದಂತೆ ವಿಜ್ಞಾನಿಗಳು, ಸಂಶೋಧಕರು ಆಧುನಿಕ ತಂತ್ರಜ್ಞಾನದಿಂದ ಕೂಡಿದ ಟೆಲಿವಿಷನ್‌ ಅನ್ನು ಅಭಿವೃದ್ಧಿಪಡಿಸಿದರು.

ಟೆಲಿವಿಷನ್‌ಗಳ ಸಂಖ್ಯೆ

ಭೂಮಿ ಮೇಲೆ 8 ಶತಕೋಟಿ ಜನರು ವಾಸಿಸುತ್ತಿದ್ದು, 1.59 ಶತಕೋಟಿ ಟೆಲಿವಿಷನ್‌ ಅನ್ನು ಬಳಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಜಗತ್ತಿನ ಒಟ್ಟು ಟೆಲಿವಿಷನ್‌ ಪ್ರಮಾಣದಲ್ಲಿ ಚೀನಾವು ಶೇ. 28.2ರಷ್ಟು ಪಾಲನ್ನು ಹೊಂದಿ, ಮೊದಲ ಸ್ಥಾನದಲ್ಲಿದ್ದರೆ, ಅಮೆರಿಕವು ಶೇ. 15.5 ಟೆಲಿವಿಷನ್‌ ಸೆಟ್‌ ಹೊಂದಿದ್ದು ಎರಡನೇ ಸ್ಥಾನದಲ್ಲಿದೆ. ಈಗ ಮೊಬೈಲ್‌ ಬಳಕೆಯೂ ಹೆಚ್ಚಾಗಿದ್ದು, ಟೆಲಿವಿಷನ್‌ ಬಳಕೆ ತುಸು ಕಡಿಮೆಯಾಗುತ್ತ ಬರುತ್ತಿದೆ.

ಭಾರತದಲ್ಲಿ ಟೆಲಿವಿಷನ್‌

ಭಾರತದಲ್ಲಿ ಪ್ರಾಯೋಗಿಕ ಆಧಾರದ ಮೇಲೆ 1959 ಸೆಪ್ಟೆಂಬರ್‌ 15ರಂದು ಟೆಲಿವಿಷನ್‌ ಕಾರ‍್ಯಕ್ರಮವನ್ನು ಆಲ್‌ ಇಂಡಿಯಾ ರೇಡಿಯೊದ ಸಹಭಾಗಿತ್ವದೊಂದಿಗೆ ಶುರು ಮಾಡಲಾಯಿತು. ವಾರದಲ್ಲಿ ಮೂರು ದಿನ ಮಾತ್ರ, ಅದರಲ್ಲೂ ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರಸಾರ ಮಾಡಲಾಗುತಿತ್ತು. 1965ರಲ್ಲಿ ದಿನಕ್ಕೆ ಒಂದು ಗಂಟೆಯಂತೆ ಪ್ರತಿದಿನ ಕಾರ‍್ಯಕ್ರಮ ಪ್ರಸಾರ ಮಾಡಲಾಗುತಿತ್ತು. 1972-1982ರ ಅವಧಿಯಲ್ಲಿ ಈ ಮಾಧ್ಯಮ ಕ್ಷೇತ್ರದಲ್ಲಿ ಅಪಾರ ಬದಲಾವಣೆಗಳು ಉಂಟಾದವು. ಮೊದಮೊದಲು ಹೊಸದಿಲ್ಲಿಯ ಸೀಮಿತ ಪ್ರದೇಶಗಳಿಗಷ್ಟೇ ಪ್ರಸಾರವಾಗುತ್ತಿದ್ದ ಟೆಲಿವಿಷನ್‌ ಕಾರ‍್ಯಕ್ರಮಗಳು ನಂತರ ಆಂಧ್ರಪ್ರದೇಶ, ಬಿಹಾರ, ಕರ್ನಾಟಕ, ಮಧ್ಯಪ್ರದೇಶ, ಒರಿಸ್ಸಾ ಮತ್ತು ರಾಜಸ್ಥಾನಕ್ಕೆ ವಿಸ್ತಾರಗೊಂಡವು. 1976ರಲ್ಲಿ ಟೆಲಿವಿಷನ್‌ ಪ್ರಸಾರವು ಆಲ್‌ ಇಂಡಿಯಾ ರೇಡಿಯೊದಿಂದ ಪ್ರತ್ಯೇಕಗೊಂಡು ಸ್ವತಂತ್ರ ಸಂಸ್ಥೆಯಾಗಿ (ದೂರದರ್ಶನ) ರೂಪುಗೊಂಡಿತು. ನಂತರದ ಬೆಳವಣಿಗೆಗಳಲ್ಲಿ ದಿನದ 24 ಗಂಟೆಯೂ ಹಲವಾರು ಚಾನೆಲ್‌ಗಳು ಜಗತ್ತಿನ ಮೂಲೆಮೂಲೆಯಲ್ಲೂ ನಡೆಯುವ ಘಟನೆಗಳನ್ನು ಪ್ರಸಾರ ಮಾಡುತ್ತಿವೆ.

ಆಚರಣೆ ಹೇಗೆ?

ಟೆಲಿವಿಷನ್‌ ಮಾಧ್ಯಮದ ಅಭಿವೃದ್ಧಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಸರಕಾರಗಳು, ಸಂಘ-ಸಂಸ್ಥೆಗಳು ಮತ್ತು ಜನರು ಪ್ರಮುಖ ವಿಷಯಗಳು ಮತ್ತು ಘಟನೆಗಳ ಬಗ್ಗೆ ಪಕ್ಷಪಾತವಿಲ್ಲದೆ ಪರಸ್ಪರ ಮಾಹಿತಿಯನ್ನು ಒದಗಿಸಿಕೊಳ್ಳುವುದು, ಆ ದಿನದ ಬಗ್ಗೆ ಮುದ್ರಣ, ಆನ್‌ಲೈನ್‌ ಮತ್ತು ಪ್ರಸಾರ ಮಾಧ್ಯಮದ ಮೂಲಕ ಸುದ್ದಿಯನ್ನು ಹಂಚಿಕೊಳ್ಳುವುದನ್ನು ಮಾಡುತ್ತಾರೆ. ಟೆಲಿವಿಷನ್‌ ದಿನದ ಬಗ್ಗೆ ಟೆಲಿವಿಷನ್‌ ಮತ್ತು ರೇಡಿಯೊ ಬ್ಲಾಗರ್‌ಗಳು ಸಂಪಾದಕರು ಅಂಕಣದಲ್ಲಿಬರೆಯುತ್ತಾರೆ. ಶಿಕ್ಷಣ ತಜ್ಞರು ಮತ್ತು ಪತ್ರಕರ್ತರು ಈ ಕಾರ‍್ಯಕ್ರಮದ ಹಿಂದಿನ ಉದ್ದೇಶದ ಬಗ್ಗೆ ಲೇಖನಗಳನ್ನು ಬರೆಯುತ್ತಾರೆ, ಶೈಕ್ಷಣಿಕ ಸಂಸ್ಥೆಗಳು ಅಂದು ಅತಿಥಿ ಉಪನ್ಯಾಸಕರನ್ನು ವಿಶೇಷ ಉಪನ್ಯಾಸ ಕಾರ‍್ಯಕ್ರಮವನ್ನು ಏರ್ಪಡಿಸುತ್ತವೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ