PM Modi on Union Budget: ಭಾರತದ ಬಜೆಟ್ ಮೇಲೆ ವಿಶ್ವದ ಕಣ್ಣಿದೆ: ಪ್ರಧಾನಿ ಮೋದಿ ಅಭಿಮತ
Feb 01, 2023 10:47 AM IST
ಪ್ರಧಾನಿ ಮೋದಿ
- ಆರ್ಥಿಕ ಜಗತ್ತಿನಲ್ಲಿ ಮಹತ್ವದ ಧ್ವನಿಗಳು ಸಕಾರಾತ್ಮಕ ಸಂಕೇತಗಳನ್ನು ನೀಡುತ್ತಿವೆ ಎಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತದ ಬಜೆಟ್ ಮೇಲೆ ಇಡೀ ವಿಶ್ವದ ಕಣ್ಣಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂದು(ಫೆ.01-ಬುಧವಾರ) ಬಜೆಟ್ ಅಧಿವೇಶನಕ್ಕೆ ಸಂಸತ್ತಿಗೆ ಆಗಮಿಸಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಾತನಾಡಿದರು.
ನವದೆಹಲಿ: ಆರ್ಥಿಕ ಜಗತ್ತಿನಲ್ಲಿ ಮಹತ್ವದ ಧ್ವನಿಗಳು ಸಕಾರಾತ್ಮಕ ಸಂಕೇತಗಳನ್ನು ನೀಡುತ್ತಿವೆ ಎಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತದ ಬಜೆಟ್ ಮೇಲೆ ಇಡೀ ವಿಶ್ವದ ಕಣ್ಣಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂದು(ಫೆ.01-ಬುಧವಾರ) ಬಜೆಟ್ ಅಧಿವೇಶನಕ್ಕೆ ಸಂಸತ್ತಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೊದಲ ಬಾರಿಗೆ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡುತ್ತಿರುವುದು, ಬುಡಕಟ್ಟು ಸಮಾಜಕ್ಕೆ ಹೆಮ್ಮೆಯ ದಿನವಾಗಿದೆ ಎಂದು ಹೇಳಿದರು.
ಕೇಂದ್ರ ಬಜೆಟ್ ಮಂಡಿಸಲಿರುವ ವಿತ್ತ ಸಚಿವರೂ ಒಬ್ಬ ಮಹಿಳೆಯಾಗಿದ್ದು, ಭಾರತ ಮಾತ್ರವಲ್ಲದೇ ಇಡೀ ವಿಶ್ವವೇ ನಮ್ಮ ಬಜೆಟ್ ಮೇಲೆ ಕಣ್ಣಿಟ್ಟಿದೆ ಎಂದು ಪ್ರಧಾನಿ ಹೇಳಿದರು. ಈ ಬಜೆಟ್ ಅಸ್ಥಿರವಾದ ಜಾಗತಿಕ ಆರ್ಥಿಕತೆಗೆ ಉಜ್ವಲ ತಾಣವಾಗಿ ಮಾರ್ಪಡಿಲಿದೆ. ನಿರ್ಮಲಾ ಸೀತಾರಾಮನ್ ಅವರು ಎಲ್ಲಾ ವರ್ಗದ ಜನರ ನಿರೀಕ್ಷೆಗಳನ್ನು ಪೂರೈಸುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಪ್ರಧಾನಿ ಹೇಳಿದರು.
ದೇಶಕ್ಕೆ ಮೊದಲ ಸ್ಥಾನ ಎಂಬುದು ನಮ್ಮ ಒಂದೇ ಒಂದು ಆಲೋಚನೆ. ಬಜೆಟ್ ಅಧಿವೇಶನದಲ್ಲಿ ನಾವು ಜಗಳವಾಡುತ್ತೇವೆ ಮತ್ತು ಚರ್ಚಿಸುತ್ತೇವೆ. ಸದನದಲ್ಲಿ ನಾವು ಪ್ರತಿ ವಿಷಯದ ಬಗ್ಗೆಯೂ ನಾವು ಉತ್ತಮ ಚರ್ಚೆ ಮಾಡುತ್ತೇವೆ, ಎಲ್ಲಾ ಸಂಸದರು ಈ ಅಧಿವೇಶನದಲ್ಲಿ ಸಂಪೂರ್ಣ ಸಿದ್ಧತೆಯೊಂದಿಗೆ ಭಾಗವಹಿಸುತ್ತಾರೆ. ಈ ಅಧಿವೇಶನವು ನಮಗೆಲ್ಲರಿಗೂ ಮಹತ್ವದ್ದಾಗಿದೆ. ಎಂದು ಮೋದಿ ನುಡಿದರು.
ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಅವರ ಆರ್ಥಿಕ ಸಮೀಕ್ಷೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂದಿನ ಹಣಕಾಸು ವರ್ಷಕ್ಕೆ ಬಜೆಟ್ ಮಂಡಿಸುವ ಒಂದು ದಿನ ಮೊದಲು ಇಂದು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಆರ್ಥಿಕ ಸಮೀಕ್ಷೆಯು ಕಳೆದ ವರ್ಷದಲ್ಲಿ ಆರ್ಥಿಕತೆಯು ಹೇಗೆ ಸಾಗಿತು ಎಂಬುದರ ಕುರಿತು ಸರ್ಕಾರದ ವಿಮರ್ಶೆಯಾಗಿದೆ.
ಭಾರತದ ವಾರ್ಷಿಕ ಪೂರ್ವ-ಬಜೆಟ್ ಆರ್ಥಿಕ ಸಮೀಕ್ಷೆಯು 2023-24ರಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇ. 6-6.8 ಕ್ಕೆ ನಿಗದಿಪಡಿಸುವ ಸಾಧ್ಯತೆಯಿದೆ.
2023-24ಕ್ಕೆ ಶೇ.6.5ರಷ್ಟು ಬೆಳವಣಿಗೆಯನ್ನು ಕಾಣಬಹುದು ಎಂದು ಸರ್ಕಾರದ ಸಮೀಕ್ಷೆಯು ಹೇಳುವ ಸಾಧ್ಯತೆಯಿದೆ. ಇದು ಮೂರು ವರ್ಷಗಳಲ್ಲಿ ಅತ್ಯಂತ ನಿಧಾನ ಗತಿಯ ಬೆಳವಣಿಗೆಯಾಗಿರಲಿದೆ. 2023-24ರಲ್ಲಿ ನಾಮಮಾತ್ರದ ಬೆಳವಣಿಗೆಯನ್ನು ಶೇ.11ರಷ್ಟು ಎಂದು ಮುನ್ಸೂಚಿಸುವ ಸಾಧ್ಯತೆಯಿದೆ ಎಂದು ಮೂಲಗಳು ಖಚಿತಪಡಿಸಿವೆ.
ಮುಂದಿನ ಹಣಕಾಸು ವರ್ಷದಲ್ಲಿ ಭಾರತೀಯ ಆರ್ಥಿಕತೆಯಲ್ಲಿ ಸ್ವಲ್ಪಮಟ್ಟಿನ ಕುಸಿತವನ್ನು ನಿರೀಕ್ಷಿಸುತ್ತಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮಂಗಳವಾರ ಹೇಳಿದೆ. ಹಾಗೆಯೇ ಮಾರ್ಚ್ 31 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಬೆಳವಣಿಗೆಯನ್ನು ಶೇ.6.8ರಿಂದ ಶೇ.6.1ಕ್ಕೆ ಯೋಜಿಸಿದೆ.
ಬುಧವಾರದ ಕೇಂದ್ರ ಬಜೆಟ್ ಕಡಿಮೆ ತೆರಿಗೆಗಳು, ವ್ಯಾಪಕ ಸಾಮಾಜಿಕ ಭದ್ರತಾ ನಿವ್ವಳ ಮತ್ತು ಉತ್ಪಾದನೆಗೆ ಮತ್ತಷ್ಟು ಉತ್ತೇಜನದ ನಿರೀಕ್ಷೆಗಳನ್ನು ಹೊತ್ತು ತರಲಿದೆ. ದೇಶದ ವಿಶಾಲ ಮಧ್ಯಮ ವರ್ಗಕ್ಕೆ ಪರಿಹಾರವನ್ನು ಒದಗಿಸಲು ಆದಾಯ ತೆರಿಗೆ ಸ್ಲ್ಯಾಬ್‌ಗಳನ್ನು ಬದಲಾಯಿಸುವ ನಿರೀಕ್ಷೆಯೂ ಇದೆ.
ಸಂಬಂಧಿತ ಸುದ್ದಿ
Union Budget 2023: ಅಭಿವೃದ್ಧಿಗೆ ಒತ್ತು, ಚುನಾವಣೆ ಮೇಲೆ ಕಣ್ಣು: ಏನಿರಲಿದೆ ಈ ಬಾರಿಯ ಸೀತಾರಾಮನ್ ಬಜೆಟ್ ಬುಟ್ಟಿಯಲ್ಲಿ?
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ 2024 ರ ಹಣಕಾಸು ವರ್ಷದ ಕೇಂದ್ರ ಬಜೆಟ್, ಭಾರತದ ಆರ್ಥಿಕ ಬೆಳವಣಿಗೆಯನ್ನು ಶೇ.6.8 ರ ಮುನ್ಸೂಚನೆ ದರಕ್ಕೆ ಕೊಂಡೊಯ್ಯಲು ಅಡಿಪಾಯವನ್ನು ಹೊಂದಿಸುತ್ತದೆ. 2019 ರಿಂದ ಇದು ಸೀತಾರಾಮನ್ ಅವರು ಮಂಡನೆ ಮಾಡಿರುವ ಐದನೇ ಬಜೆಟ್ ಆಗಲಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.
ವಿಭಾಗ