Indian Army: ಭಾರತೀಯ ಸೇನೆಯಲ್ಲಿ ಈ ವರ್ಷ ಇತಿಹಾಸ ಸೃಷ್ಟಿಸಿದ ಮಹಿಳೆಯರಿವರು
Dec 26, 2023 07:00 AM IST
ಭಾರತೀಯ ಸೇನೆಯಲ್ಲಿ ಈ ವರ್ಷ ಇತಿಹಾಸ ಸೃಷ್ಟಿಸಿದ ಮಹಿಳೆಯರು
- Indian Army Women Officers: ಭಾರತೀಯ ಸೇನೆಯಲ್ಲಿ ಇತಿಹಾಸ ಸೃಷ್ಟಿಸಿದ ಪ್ರಮುಖ ಐವರು ಮಹಿಳೆಯರ ಲಿಸ್ಟ್ ಹಾಗೂ ಅವರ ಸಾಧನೆ ಹೀಗಿದೆ..
ಶೌರ್ಯ ಪ್ರಶಸ್ತಿಯನ್ನು ಸ್ವೀಕರಿಸುವುದರಿಂದ ಹಿಡಿದು ಪ್ರಮುಖ ಹುದ್ದೆ ಪಡೆಯುವವರೆಗೆ ಭೂಸೇನೆ, ವಾಯುಪಡೆ, ನೌಕಾಪಡೆ ಸೇರಿದಂತೆ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಇತಿಹಾಸ ಸೃಷ್ಟಿಸಿದ ಪ್ರಮುಖ ಐವರು ಮಹಿಳೆಯರ ಪಟ್ಟಿ ಇಲ್ಲಿದೆ.
ಭಾರತೀಯ ಸೇನೆಯಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆ ಹೆಚ್ಚಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಶಸ್ತ್ರ ಪಡೆಗಳಲ್ಲಿ ಮಹಿಳಾ ಸೈನಿಕರು, ನಾವಿಕರು ಮತ್ತು ವಾಯು ಪಡೆಯ ಮಹಿಳಾ ಯೋಧರಿಗೆ ಮಾತೃತ್ವ, ಮಕ್ಕಳ ಆರೈಕೆ ಮತ್ತು ಮಕ್ಕಳ ದತ್ತು ರಜೆಯ ನಿಯಮಗಳನ್ನು ವಿಸ್ತರಿಸುವ ಪ್ರಸ್ತಾವನೆಯನ್ನು ಈ ವರ್ಷ ಅನುಮೋದಿಸಿದರು.
ಇದಲ್ಲದೆ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಅವರು ಡಿಸೆಂಬರ್ 1 ರಂದು 1,000 ಕ್ಕೂ ಹೆಚ್ಚು ಮಹಿಳಾ ಅಗ್ನಿವೀರರನ್ನು ಭಾರತೀಯ ನೌಕಾಪಡೆಗೆ ಸೇರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
1. ಪ್ರೇರಣಾ ದಿಯೋಸ್ಥಲೀ: ಕಮಾಂಡರ್ ಪ್ರೇರಣಾ ದಿಯೋಸ್ಥಲೀ ಅವರು ಭಾರತೀಯ ನೌಕಾಪಡೆಯ ಯುದ್ಧನೌಕೆಗೆ ಕಮಾಂಡರ್ ಆಗಲಿರುವ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ. ಇವರು ಪ್ರಸ್ತುತ ಯುದ್ಧನೌಕೆ ಐಎನ್ಎಸ್ ಚೆನ್ನೈನ ಮೊದಲ ಲೆಫ್ಟಿನೆಂಟ್ ಆಗಿದ್ದಾರೆ.
2. ಶಾಲಿಜಾ ಧಾಮಿ : ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರು ಮುಂಚೂಣಿ ಯುದ್ಧ ಘಟಕದ ಉಸ್ತುವಾರಿ ವಹಿಸಿದ ಮೊದಲ ಮಹಿಳಾ ವಾಯುಪಡೆ ಅಧಿಕಾರಿಯಾಗಿದ್ದಾರೆ. ಇವರನ್ನು ಪಶ್ಚಿಮ ವಲಯದಲ್ಲಿ ಕ್ಷಿಪಣಿ ಸ್ಕ್ವಾಡ್ರನ್ ಅನ್ನು ಮುನ್ನಡೆಸಲು ಆಯ್ಕೆ ಮಾಡಲಾಯಿತು.
3. ದೀಪಿಕಾ ಮಿಶ್ರಾ: ವಿಂಗ್ ಕಮಾಂಡರ್ ದೀಪಿಕಾ ಮಿಶ್ರಾ ಅವರು ಭಾರತೀಯ ವಾಯುಪಡೆಯಲ್ಲಿ ಶೌರ್ಯ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ. ಅವರು ಏಪ್ರಿಲ್ 20 ರಂದು IAF ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರಿಂದ ಪದಕವನ್ನು ಪಡೆದರು. ಇವರು 2021 ರಲ್ಲಿ ಮಧ್ಯಪ್ರದೇಶದಲ್ಲಿ ಪ್ರವಾಹದ ಸಂದರ್ಭದಲ್ಲಿ 47 ಜೀವಗಳನ್ನು ಉಳಿಸಲು ಸಹಾಯ ಮಾಡಿದ್ದರು.
4. ಶಿವ ಚೌಹಾಣ್: ಕ್ಯಾಪ್ಟನ್ ಶಿವ ಚೌಹಾಣ್ ಅವರು ಇತರ ಸಿಬ್ಬಂದಿಗಳೊಂದಿಗೆ ಸಿಯಾಚಿನ್ ಬ್ಯಾಟಲ್ ಸ್ಕೂಲ್‌ನಲ್ಲಿ ತರಬೇತಿ ಪಡೆದ ನಂತರ ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಕಾರ್ಯಾಚರಣೆಗೆ ನಿಯೋಜನೆಗೊಂಡ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ.
5.ಸುನೀತಾ: ನವೆಂಬರ್ 22, 2023 ರಂದು, ಆರ್ಮಿ ಮೆಡಿಕಲ್ ಕಾರ್ಪ್ಸ್ ಅಧಿಕಾರಿ ಕರ್ನಲ್ ಸುನೀತಾ ಅವರು ಸಶಸ್ತ್ರ ಪಡೆಗಳ ಅತಿದೊಡ್ಡ ರಕ್ತ ವರ್ಗಾವಣೆ ಕೇಂದ್ರವಾದ ದೆಹಲಿ ಕ್ಯಾಂಟ್‌ನ ಸಶಸ್ತ್ರ ಪಡೆಗಳ ವರ್ಗಾವಣೆ ಕೇಂದ್ರಕ್ಕೆ ಕಮಾಂಡ್ ಮಾಡಿದ ಮೊದಲ ಮಹಿಳೆಯಾಗಿದ್ದಾರೆ.
ವಿಭಾಗ