logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Uddhav Thackeray: 40 ತಲೆಯ ರಾವಣನಿಂದ ಶ್ರೀರಾಮನ ಬಿಲ್ಲು-ಬಾಣದ ಅಕ್ರಮ ವಶ: ಶಿಂಧೆ ಬಣದ ವಿರುದ್ಧ ಉದ್ಧವ್‌ ಕಿಡಿ!

Uddhav Thackeray: 40 ತಲೆಯ ರಾವಣನಿಂದ ಶ್ರೀರಾಮನ ಬಿಲ್ಲು-ಬಾಣದ ಅಕ್ರಮ ವಶ: ಶಿಂಧೆ ಬಣದ ವಿರುದ್ಧ ಉದ್ಧವ್‌ ಕಿಡಿ!

Oct 09, 2022 09:38 PM IST

ಮುಂಬೈ: ಮುಂಬೈನ ಪೂರ್ವ ಅಂಧೇರಿ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ, ಉದ್ಧವ್ ಠಾಕ್ರೆ ಮತ್ತು‌ ಏಕನಾಥ್ ಶಿಂಧೆ ಬಣ ಶಿವಸೇನೆಯ ಬಿಲ್ಲು ಮತ್ತು ಬಾಣದ ಗುರುತನ್ನು ಬಳಸುವಂತಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.‌ ಈ ಹಿನ್ನೆಲೆಯಲ್ಲಿ ಠಾಕ್ರೆ ಬಣ ಬೇರೆ ಹೆಸರು ಮತ್ತು ಚಿಹ್ನೆಯನ್ನು ಪ್ರಸ್ತಾವನೆಗಾಗಿ ಚುನಾವಣಾ ಆಯೋಗಕ್ಕೆ ಕಳುಹಿಸಿ ಕೊಟ್ಟಿದೆ. ಈ ಮಧ್ಯೆ ಏಕನಾಥ್‌ ಶಿಂಧೆ ಬಣದ ವಿರುದ್ಧದ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಉದ್ಧವ್‌ ಠಾಕ್ರೆ, 40 ತಲೆಯ ರಾವಣ(ಶಿಂಧೆ ಬಣದ 40 ಶಾಸಕರು) ಪ್ರಭು ಶ್ರೀರಾಮನ ಬಿಲ್ಲು-ಬಾಣವನ್ನು ಅಕ್ರಮವಾಗಿ ಕೈವಶ ಮಾಡಿಕೊಂಡಿದ್ದಾನೆ ಎಂದು ಗುಡುಗಿದ್ದಾರೆ. ತಮ್ಮ ಅಧಿಕೃತ ಫೇಸ್‌ಬುಕ್‌ನಲ್ಲಿ ಉದ್ಧವ್‌ ಠಾಕ್ರೆ ಮಾಡಿರುವ ಪೋಸ್ಟ್‌ನ ಸಾರಾಂಶ ಇಲ್ಲಿದೆ.

  • ಮುಂಬೈ: ಮುಂಬೈನ ಪೂರ್ವ ಅಂಧೇರಿ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ, ಉದ್ಧವ್ ಠಾಕ್ರೆ ಮತ್ತು‌ ಏಕನಾಥ್ ಶಿಂಧೆ ಬಣ ಶಿವಸೇನೆಯ ಬಿಲ್ಲು ಮತ್ತು ಬಾಣದ ಗುರುತನ್ನು ಬಳಸುವಂತಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.‌ ಈ ಹಿನ್ನೆಲೆಯಲ್ಲಿ ಠಾಕ್ರೆ ಬಣ ಬೇರೆ ಹೆಸರು ಮತ್ತು ಚಿಹ್ನೆಯನ್ನು ಪ್ರಸ್ತಾವನೆಗಾಗಿ ಚುನಾವಣಾ ಆಯೋಗಕ್ಕೆ ಕಳುಹಿಸಿ ಕೊಟ್ಟಿದೆ. ಈ ಮಧ್ಯೆ ಏಕನಾಥ್‌ ಶಿಂಧೆ ಬಣದ ವಿರುದ್ಧದ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಉದ್ಧವ್‌ ಠಾಕ್ರೆ, 40 ತಲೆಯ ರಾವಣ(ಶಿಂಧೆ ಬಣದ 40 ಶಾಸಕರು) ಪ್ರಭು ಶ್ರೀರಾಮನ ಬಿಲ್ಲು-ಬಾಣವನ್ನು ಅಕ್ರಮವಾಗಿ ಕೈವಶ ಮಾಡಿಕೊಂಡಿದ್ದಾನೆ ಎಂದು ಗುಡುಗಿದ್ದಾರೆ. ತಮ್ಮ ಅಧಿಕೃತ ಫೇಸ್‌ಬುಕ್‌ನಲ್ಲಿ ಉದ್ಧವ್‌ ಠಾಕ್ರೆ ಮಾಡಿರುವ ಪೋಸ್ಟ್‌ನ ಸಾರಾಂಶ ಇಲ್ಲಿದೆ.
ನಾನು ಚುನಾವಣಾ ಆಯೋಗದಿಂದ ಈ ಆದೇಶದ ನಿರೀಕ್ಷೆ ಮಾಡಿರಲಿಲ್ಲ. ಆದರೆ ಅಂತಿಮವಾಗಿ ನಮ್ಮ ಬಣಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ. ಶಿಂಧೆ ಬಣ ಪಕ್ಷದ ಬೆನ್ನಿಗೆ ಚೂರಿ ಹಾಕಿದ್ದು, ತಾಕತ್ತಿದ್ದರೆ ಶಿವಸೇನೆ ಸಂಸ್ಥಾಪಕ ದಿವಂಗತ ಭಾಳ್‌ ಸಾಹೇಬ್‌ ಠಾಕ್ರೆ ಅವರ ಹೆಸರು ಪ್ರಸ್ತಾಪಿಸದೇ ಉಪಚುನಾವಣೆ ಎದುರಿಸಲಿ ಎಂದು ಉದ್ಧವ್‌ ಠಾಕ್ರೆ ಸವಾಲು ಹಾಕಿದ್ದಾರೆ.
(1 / 5)
ನಾನು ಚುನಾವಣಾ ಆಯೋಗದಿಂದ ಈ ಆದೇಶದ ನಿರೀಕ್ಷೆ ಮಾಡಿರಲಿಲ್ಲ. ಆದರೆ ಅಂತಿಮವಾಗಿ ನಮ್ಮ ಬಣಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ. ಶಿಂಧೆ ಬಣ ಪಕ್ಷದ ಬೆನ್ನಿಗೆ ಚೂರಿ ಹಾಕಿದ್ದು, ತಾಕತ್ತಿದ್ದರೆ ಶಿವಸೇನೆ ಸಂಸ್ಥಾಪಕ ದಿವಂಗತ ಭಾಳ್‌ ಸಾಹೇಬ್‌ ಠಾಕ್ರೆ ಅವರ ಹೆಸರು ಪ್ರಸ್ತಾಪಿಸದೇ ಉಪಚುನಾವಣೆ ಎದುರಿಸಲಿ ಎಂದು ಉದ್ಧವ್‌ ಠಾಕ್ರೆ ಸವಾಲು ಹಾಕಿದ್ದಾರೆ.(ANI)
ಭಾಳ್‌ ಸಾಹೇಬ್‌ ಠಾಕ್ರೆ ಇಲ್ಲದೇ ಉದ್ಧವ್‌ ಠಾಕ್ರೆ ಅಸ್ತಿತ್ವವೇ ಇಲ್ಲ. ಪಕ್ಷದ ಸಮಸ್ತ ಕಾರ್ಯಕರ್ತರೇ ಭಾಳ್‌ ಸಾಹೇಬ್‌ ಠಾಕ್ರೆ ಅವರಿಂದ ಸ್ಥಾಪಿಸಲ್ಪಟ್ಟ ಶಿವಸೇನೆಯ ವಾರಸುದಾರರು. ಶಿವಸೇನೆ ಸ್ಥಾಪನೆಯ ಇತಿಹಾಸವೇ ರೋಚಕವಾದುದು. ಪಕ್ಷಕ್ಕೆ ಶಿವಸೇನೆ ಎಂದು ಹೆಸರಿಡಲು ಸೂಚಿಸಿದವರು ನನ್ನ ತಾತ ಪ್ರಭೋಧಂಕರ್ ಠಾಕ್ರೆ ಎಂದು ಉದ್ಧವ್‌ ಇತಿಹಾಸವನ್ನು ಮೆಲಕು ಹಾಕಿದ್ದಾರೆ. (ಸಂಗ್ರಹ ಚಿತ್ರ)
(2 / 5)
ಭಾಳ್‌ ಸಾಹೇಬ್‌ ಠಾಕ್ರೆ ಇಲ್ಲದೇ ಉದ್ಧವ್‌ ಠಾಕ್ರೆ ಅಸ್ತಿತ್ವವೇ ಇಲ್ಲ. ಪಕ್ಷದ ಸಮಸ್ತ ಕಾರ್ಯಕರ್ತರೇ ಭಾಳ್‌ ಸಾಹೇಬ್‌ ಠಾಕ್ರೆ ಅವರಿಂದ ಸ್ಥಾಪಿಸಲ್ಪಟ್ಟ ಶಿವಸೇನೆಯ ವಾರಸುದಾರರು. ಶಿವಸೇನೆ ಸ್ಥಾಪನೆಯ ಇತಿಹಾಸವೇ ರೋಚಕವಾದುದು. ಪಕ್ಷಕ್ಕೆ ಶಿವಸೇನೆ ಎಂದು ಹೆಸರಿಡಲು ಸೂಚಿಸಿದವರು ನನ್ನ ತಾತ ಪ್ರಭೋಧಂಕರ್ ಠಾಕ್ರೆ ಎಂದು ಉದ್ಧವ್‌ ಇತಿಹಾಸವನ್ನು ಮೆಲಕು ಹಾಕಿದ್ದಾರೆ. (ಸಂಗ್ರಹ ಚಿತ್ರ)(HT_PRINT)
ಬಿಜೆಪಿ ಶಿಂಧೆ ಬಣವನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಒಂದಲ್ಲ ಒಂದು ದಿನ ಬಿಜೆಪಿ ಶಿಂಧೆ ಬಣವನ್ನು ದೂರ ತಳ್ಳಲಿದೆ. ಅಧಿಕಾರಕ್ಕಾಗಿ ಪಕ್ಷಕ್ಕೆ ದ್ರೋಹ ಬಗೆದ ಶಿಂಧೆ ಬಣ ಇದಕ್ಕಾಗಿ ಪ್ರಾಯಶ್ಚಿತಪಡಲಿದೆ ಎಂದು ಉದ್ಧವ್‌ ಠಾಕ್ರೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. (ಸಂಗ್ರಹ ಚಿತ್ರ)
(3 / 5)
ಬಿಜೆಪಿ ಶಿಂಧೆ ಬಣವನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಒಂದಲ್ಲ ಒಂದು ದಿನ ಬಿಜೆಪಿ ಶಿಂಧೆ ಬಣವನ್ನು ದೂರ ತಳ್ಳಲಿದೆ. ಅಧಿಕಾರಕ್ಕಾಗಿ ಪಕ್ಷಕ್ಕೆ ದ್ರೋಹ ಬಗೆದ ಶಿಂಧೆ ಬಣ ಇದಕ್ಕಾಗಿ ಪ್ರಾಯಶ್ಚಿತಪಡಲಿದೆ ಎಂದು ಉದ್ಧವ್‌ ಠಾಕ್ರೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. (ಸಂಗ್ರಹ ಚಿತ್ರ)(HT)
ಶಿವಸೇನೆಯನ್ನು ಹೋಳು ಮಾಡಿ ಬಿಜೆಪಿಗೆ ಏನು ದಕ್ಕಿತು ಎಂಬುದು ಅರ್ಥವಾಗುತ್ತಿಲ್ಲ. ನಿಮಗೆ ಅಧಿಕಾರ ಬೇಕು ಎಂಬ ಕಾರಣಕ್ಕೆ ನಮ್ಮ ಪಕ್ಷವನ್ನು ವಿಘಟಿಸಿದ್ದೀರಿ. ಶಿವಸೇನೆಯ ಕಾರ್ಯಕರ್ತರು ಈ ವಿಶ್ವಾಸದ್ರೋಹಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಉದ್ಧವ್‌ ಠಾಕ್ರೆ ಗುಡುಗಿದ್ದಾರೆ. (ಸಂಗ್ರಹ ಚಿತ್ರ)
(4 / 5)
ಶಿವಸೇನೆಯನ್ನು ಹೋಳು ಮಾಡಿ ಬಿಜೆಪಿಗೆ ಏನು ದಕ್ಕಿತು ಎಂಬುದು ಅರ್ಥವಾಗುತ್ತಿಲ್ಲ. ನಿಮಗೆ ಅಧಿಕಾರ ಬೇಕು ಎಂಬ ಕಾರಣಕ್ಕೆ ನಮ್ಮ ಪಕ್ಷವನ್ನು ವಿಘಟಿಸಿದ್ದೀರಿ. ಶಿವಸೇನೆಯ ಕಾರ್ಯಕರ್ತರು ಈ ವಿಶ್ವಾಸದ್ರೋಹಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಉದ್ಧವ್‌ ಠಾಕ್ರೆ ಗುಡುಗಿದ್ದಾರೆ. (ಸಂಗ್ರಹ ಚಿತ್ರ)(HT PHOTO)
ನಾವು ಚುನಾವಣಾ ಆಯೋಗಕ್ಕೆ ಶಿವಸೇನೆ ಭಾಳ್‌ ಸಾಹೇಬ್‌ ಠಾಕ್ರೆ, ಶಿವಸೇನೆ ಪ್ರಭೋಧಂಕರ್‌ ಠಾಕ್ರೆ, ಶಿವಸೇನೆ ಉದ್ಧವ್‌ ಠಾಕ್ರೆ ಎಂಬ ಹೆಸರಿನ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅದೇ ರೀತಿ ತ್ರಿಶೂಲ, ಉದಯಿಸುತ್ತಿರುವ ಸೂರ್ಯ ಮತ್ತು ಬೆಳಗುತ್ತಿರುವ ಜ್ಯೋತಿಯ ಚಿಹ್ನೆಯನ್ನು ಪ್ರಸ್ತಾವನೆಗೆ ಕಳುಹಿಸಿದ್ದೇವೆ ಎಂದು ಉದ್ಧವ್‌ ಠಾಕ್ರೆ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. (ಸಂಗ್ರಹ ಚಿತ್ರ)
(5 / 5)
ನಾವು ಚುನಾವಣಾ ಆಯೋಗಕ್ಕೆ ಶಿವಸೇನೆ ಭಾಳ್‌ ಸಾಹೇಬ್‌ ಠಾಕ್ರೆ, ಶಿವಸೇನೆ ಪ್ರಭೋಧಂಕರ್‌ ಠಾಕ್ರೆ, ಶಿವಸೇನೆ ಉದ್ಧವ್‌ ಠಾಕ್ರೆ ಎಂಬ ಹೆಸರಿನ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅದೇ ರೀತಿ ತ್ರಿಶೂಲ, ಉದಯಿಸುತ್ತಿರುವ ಸೂರ್ಯ ಮತ್ತು ಬೆಳಗುತ್ತಿರುವ ಜ್ಯೋತಿಯ ಚಿಹ್ನೆಯನ್ನು ಪ್ರಸ್ತಾವನೆಗೆ ಕಳುಹಿಸಿದ್ದೇವೆ ಎಂದು ಉದ್ಧವ್‌ ಠಾಕ್ರೆ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. (ಸಂಗ್ರಹ ಚಿತ್ರ)(HT PHOTO)

    ಹಂಚಿಕೊಳ್ಳಲು ಲೇಖನಗಳು