logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಿಮ್ಮ ಆಧಾರ್ ದುರುಪಯೋಗ ಆಗಿದ್ಯಾ, ಇಲ್ವಾ ಅಂತ ತಿಳಿಯಬೇಕಾ? ಹೀಗೆ ಪರಿಶೀಲಿಸಿ

ನಿಮ್ಮ ಆಧಾರ್ ದುರುಪಯೋಗ ಆಗಿದ್ಯಾ, ಇಲ್ವಾ ಅಂತ ತಿಳಿಯಬೇಕಾ? ಹೀಗೆ ಪರಿಶೀಲಿಸಿ

Published May 15, 2025 07:36 PM IST

ಆಧಾರ್​ ಉಪಯೋಗದ ಜೊತೆಗೆ ದುರುಪಯೋಗದ ಸಾಧ್ಯತೆಯೂ ಹೆಚ್ಚಾಗಿದೆ. ನಿಮ್ಮದೇ ಆಧಾರ್ ಬಳಸಿ ವಂಚನೆಗಳನ್ನೂ ಮಾಡಲಾಗುತ್ತಿದೆ. ಆಧಾರ್ ದುರುಪಯೋಗ ಆಗಿದ್ಯಾ, ಇಲ್ವಾ ಅಂತ ತಿಳಿಯಬೇಕಾ? ಹೀಗೆ ಪರಿಶೀಲಿಸಿ.

ಆಧಾರ್​ ಉಪಯೋಗದ ಜೊತೆಗೆ ದುರುಪಯೋಗದ ಸಾಧ್ಯತೆಯೂ ಹೆಚ್ಚಾಗಿದೆ. ನಿಮ್ಮದೇ ಆಧಾರ್ ಬಳಸಿ ವಂಚನೆಗಳನ್ನೂ ಮಾಡಲಾಗುತ್ತಿದೆ. ಆಧಾರ್ ದುರುಪಯೋಗ ಆಗಿದ್ಯಾ, ಇಲ್ವಾ ಅಂತ ತಿಳಿಯಬೇಕಾ? ಹೀಗೆ ಪರಿಶೀಲಿಸಿ.
ಪ್ರಸ್ತುತ ಆಧಾರ್ ಸಂಖ್ಯೆ ಒಂದು ಪ್ರಮುಖ ಗುರುತಿನ ದಾಖಲೆಯಾಗಿದೆ. ಪ್ರಯಾಣ, ಶಾಲೆ ಅಥವಾ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಅಥವಾ ಹೊಸ ಬ್ಯಾಂಕ್ ಖಾತೆ ತೆರೆಯಲು, ಆಧಾರ್ ಎಲ್ಲೆಡೆ ಅಗತ್ಯ ಇದೆ. ಇದು ಸರ್ಕಾರಿ ಸೇವೆ ಮತ್ತು ಬ್ಯಾಂಕಿಂಗ್ ಸೌಲಭ್ಯಗಳನ್ನು ಸುಲಭಗೊಳಿಸಿದ್ದರೂ ಅದರ ಹೆಚ್ಚಿದ ಬಳಕೆಯು ವಂಚಕರ ಗುರಿಯಾಗುತ್ತಿದೆ. ಹಾಗಿದ್ದರೆ, ಆಧಾರ್ ದುರುಪಯೋಗ ಆಗ್ತಿದೆಯೇ ಎಂಬುದನ್ನು ಪರಿಶೀಲಿಸುವುದು ಹೇಗೆ? ಇಲ್ಲಿದೆ ವಿವರ.
(1 / 6)
ಪ್ರಸ್ತುತ ಆಧಾರ್ ಸಂಖ್ಯೆ ಒಂದು ಪ್ರಮುಖ ಗುರುತಿನ ದಾಖಲೆಯಾಗಿದೆ. ಪ್ರಯಾಣ, ಶಾಲೆ ಅಥವಾ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಅಥವಾ ಹೊಸ ಬ್ಯಾಂಕ್ ಖಾತೆ ತೆರೆಯಲು, ಆಧಾರ್...
ಮತ್ತಷ್ಟು ಓದು
ಯುಐಡಿಎಐ ಆಧಾರ್ ವಂಚನೆ ತಡೆಗೆ ಸಂಬಂಧಿಸಿ ‘ದೃಢೀಕರಣ (ಅಂಥೆಟಿಕೇಷನ್) ಇತಿಹಾಸ’ ಎಂಬ ಆನ್​ಲೈನ್​ ಸಾಧನ ಲಭ್ಯವಾಗುವಂತೆ ಮಾಡಿದೆ. ಈ ಸೌಲಭ್ಯವು ಮೈ ಆಧಾರ್ ಪೋರ್ಟಲ್​​ನಲ್ಲಿ ಲಭ್ಯವಿದೆ.
(2 / 6)
ಯುಐಡಿಎಐ ಆಧಾರ್ ವಂಚನೆ ತಡೆಗೆ ಸಂಬಂಧಿಸಿ ‘ದೃಢೀಕರಣ (ಅಂಥೆಟಿಕೇಷನ್) ಇತಿಹಾಸ’ ಎಂಬ ಆನ್​ಲೈನ್​ ಸಾಧನ ಲಭ್ಯವಾಗುವಂತೆ ಮಾಡಿದೆ. ಈ ಸೌಲಭ್ಯವು ಮೈ ಆಧಾರ್ ಪೋರ್ಟಲ್​​...
ಮತ್ತಷ್ಟು ಓದು
ಆಧಾರ್ ದೃಢೀಕರಣ ಇತಿಹಾಸ ಪರಿಶೀಲಿಸುವುದು ಹೇಗೆ: https://myaadhaar.uidai.gov.in ಮೈ ಆಧಾರ್ ಪೋರ್ಟಲ್​ಗೆ ಹೋಗಿ. ಒಟಿಪಿಯೊಂದಿಗೆ ಲಾಗಿನ್ ಮಾಡಿ, ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ, ಒಟಿಪಿಯೊಂದಿಗೆ ಲಾಗಿನ್ ಕ್ಲಿಕ್ ಮಾಡಿ. ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿಯನ್ನು ನಮೂದಿಸುವ ಮೂಲಕ ಲಾಗಿನ್ ಮಾಡಿ.
(3 / 6)
ಆಧಾರ್ ದೃಢೀಕರಣ ಇತಿಹಾಸ ಪರಿಶೀಲಿಸುವುದು ಹೇಗೆ: https://myaadhaar.uidai.gov.in ಮೈ ಆಧಾರ್ ಪೋರ್ಟಲ್​ಗೆ ಹೋಗಿ. ಒಟಿಪಿಯೊಂದಿಗೆ ಲಾಗಿನ್ ಮಾಡಿ, ನಿಮ್ಮ ಆಧಾರ್...
ಮತ್ತಷ್ಟು ಓದು
ಲಾಗಿನ್ ಆದ ನಂತರ ನೀವು “ದೃಢೀಕರಣ ಇತಿಹಾಸ” ವಿಭಾಗಕ್ಕೆ ಹೋಗಿ ದಿನಾಂಕ ಆಯ್ಕೆ ಮಾಡಬಹುದು. ನಿಮ್ಮ ಆಧಾರ್ ಸಂಖ್ಯೆ ಎಲ್ಲಿ ಮತ್ತು ಯಾವ ಉದ್ದೇಶಕ್ಕಾಗಿ ಬಳಸಲಾಗಿದೆ ಎಂದು ನೋಡಬಹುದು. ಯುಐಡಿಎಐ ಸಹಾಯವಾಣಿ 1947ಗೆ ಕರೆ ಮಾಡುವ ಮೂಲಕ ಅಥವಾ help@uidai.gov.in ಇಮೇಲ್ ಕಳುಹಿಸುವ ಮೂಲಕ ದೂರು ಸಲ್ಲಿಸಬಹುದು.
(4 / 6)
ಲಾಗಿನ್ ಆದ ನಂತರ ನೀವು “ದೃಢೀಕರಣ ಇತಿಹಾಸ” ವಿಭಾಗಕ್ಕೆ ಹೋಗಿ ದಿನಾಂಕ ಆಯ್ಕೆ ಮಾಡಬಹುದು. ನಿಮ್ಮ ಆಧಾರ್ ಸಂಖ್ಯೆ ಎಲ್ಲಿ ಮತ್ತು ಯಾವ ಉದ್ದೇಶಕ್ಕಾಗಿ ಬಳಸಲಾಗಿದೆ ಎಂ...
ಮತ್ತಷ್ಟು ಓದು
ನಿಮ್ಮ ಅನುಮತಿಯಿಲ್ಲದೆ ಯಾರಾದರೂ ನಿಮ್ಮ ಫಿಂಗರ್ ಪ್ರಿಂಟ್ ಅಥವಾ ಐರಿಸ್ ಸ್ಕ್ಯಾನ್ ಬಳಸಲು ಸಾಧ್ಯವಾಗಬಾರದು ಎಂದು ನೀವು ಬಯಸಿದರೆ, ನೀವು ಆಧಾರ್ ಬಯೋಮೆಟ್ರಿಕ್ ಅನ್ನು ಲಾಕ್ ಮಾಡಬಹುದು. ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡುವುದು ಹೇಗೆ ಎಂದರೆ, https://uidai.gov.in ಯುಐಡಿಎಐ ವೆಬ್​ಸೈಟ್​ಗೆ ಹೋಗಿ. "ಲಾಕ್/ಅನ್ಲಾಕ್ ಬಯೋಮೆಟ್ರಿಕ್ಸ್" ವಿಭಾಗಕ್ಕೆ ಹೋಗಿ. ವಿಐಡಿ, ಹೆಸರು, ಪಿನ್ ಕೋಡ್ ಮತ್ತು ಕ್ಯಾಪ್ಚಾವನ್ನು ಭರ್ತಿ ಮಾಡಿ. OTP ಯೊಂದಿಗೆ ದೃಢೀಕರಿಸಿ.
(5 / 6)
ನಿಮ್ಮ ಅನುಮತಿಯಿಲ್ಲದೆ ಯಾರಾದರೂ ನಿಮ್ಮ ಫಿಂಗರ್ ಪ್ರಿಂಟ್ ಅಥವಾ ಐರಿಸ್ ಸ್ಕ್ಯಾನ್ ಬಳಸಲು ಸಾಧ್ಯವಾಗಬಾರದು ಎಂದು ನೀವು ಬಯಸಿದರೆ, ನೀವು ಆಧಾರ್ ಬಯೋಮೆಟ್ರಿಕ್ ಅನ್ನ...
ಮತ್ತಷ್ಟು ಓದು
ನಿಮ್ಮ ಮೊಬೈಲ್ ಸಂಖ್ಯೆ, ವಿಳಾಸ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಕಾಲಕಾಲಕ್ಕೆ ಅಪ್​ಡೇಟ್ ಮಾಡಲು ಯುಐಡಿಎಐ ಸಲಹೆ ನೀಡುತ್ತದೆ. ವಿಶೇಷವಾಗಿ ಕಳೆದ 10 ವರ್ಷಗಳಲ್ಲಿ ನೀವು ಯಾವುದೇ ಅಪ್​ಡೇಟ್ ಮಾಡದಿದ್ದರೆ, ಮೊದಲು ಮಾಡಿ. ಇದು ನಿಮ್ಮ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುತ್ತದೆ. ಯಾವುದೇ ರೀತಿಯ ವಂಚನೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.
(6 / 6)
ನಿಮ್ಮ ಮೊಬೈಲ್ ಸಂಖ್ಯೆ, ವಿಳಾಸ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಕಾಲಕಾಲಕ್ಕೆ ಅಪ್​ಡೇಟ್ ಮಾಡಲು ಯುಐಡಿಎಐ ಸಲಹೆ ನೀಡುತ್ತದೆ. ವಿಶೇಷವಾಗಿ ಕಳೆದ 10 ವರ್ಷಗಳಲ್ಲಿ...
ಮತ್ತಷ್ಟು ಓದು

    ಹಂಚಿಕೊಳ್ಳಲು ಲೇಖನಗಳು