logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿರುಷ್ಕಾ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ; ಟೆಸ್ಟ್‌ನಿಂದ ವಿರಾಟ್ ಹಿಂದೆ ಸರಿಯಲು ಕಾರಣ ಬಹಿರಂಗಪಡಿಸಿದ ಎಬಿಡಿ

ವಿರುಷ್ಕಾ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ; ಟೆಸ್ಟ್‌ನಿಂದ ವಿರಾಟ್ ಹಿಂದೆ ಸರಿಯಲು ಕಾರಣ ಬಹಿರಂಗಪಡಿಸಿದ ಎಬಿಡಿ

Feb 03, 2024 08:31 PM IST

ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್‌ ಪಂದ್ಯಗಳಿಂದ ವಿರಾಟ್‌ ಕೊಹ್ಲಿ ಬ್ರೇಕ್‌ ತೆಗೆದುಕೊಂಡರು. ವೈಯಕ್ತಿಕ ಕಾರಣಗಳಿಂದ ಪಂದ್ಯಗಳಿಂದ ಹಿಂದೆ ಸರಿದ ಕೊಹ್ಲಿ ನಿರ್ಧಾರದಿಂದ ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದರು. ವಿರಾಟ್‌ ಹಾಗೂ ಅನುಷ್ಕಾ ದಂಪತಿಯು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಈಗ ಈ ಗಾಳಿಸುದ್ದಿಯೇ ಸತ್ಯವಾಗಿದೆ.

  • ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್‌ ಪಂದ್ಯಗಳಿಂದ ವಿರಾಟ್‌ ಕೊಹ್ಲಿ ಬ್ರೇಕ್‌ ತೆಗೆದುಕೊಂಡರು. ವೈಯಕ್ತಿಕ ಕಾರಣಗಳಿಂದ ಪಂದ್ಯಗಳಿಂದ ಹಿಂದೆ ಸರಿದ ಕೊಹ್ಲಿ ನಿರ್ಧಾರದಿಂದ ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದರು. ವಿರಾಟ್‌ ಹಾಗೂ ಅನುಷ್ಕಾ ದಂಪತಿಯು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಈಗ ಈ ಗಾಳಿಸುದ್ದಿಯೇ ಸತ್ಯವಾಗಿದೆ.
ವಿರುಷ್ಕಾ ದಂಪತಿಯು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಮಾತು ಸತ್ಯವಾಗಿದೆ. ಈ ಬಗ್ಗೆ ಕೊಹ್ಲಿಯ ಸ್ನೇಹಿತ ಹಾಗೂ ಆರ್‌ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಖಚಿತಪಡಿಸಿದ್ದಾರೆ.
(1 / 8)

ಇಂಗ್ಲೆಂಡ್‌ ಟೆಸ್ಟ್‌ನಿಂದ ಹೊರಗುಳಿದ ವಿರಾಟ್‌ ಅವರ ಖಾಸಗಿತನವನ್ನು ನಾವು ಗೌರವಿಸಬೇಕು ಎಂದು ಬಿಸಿಸಿಐ ಹೇಳಿತ್ತು. ಆದರೆ ಪಂದ್ಯಗಳಿಂದ ವಿರಾಮ ಕೇಳಿದ ವಿರಾಟ್‌ ನಿರ್ಧಾರಕ್ಕೆ ಕಾರಣ ಬಹಿರಂಗವಾಗಿರಲಿಲ್ಲ. ಇದೀಗ ಅನುಷ್ಕಾ ಎರಡನೇ ಬಾರಿಗೆ ತಾಯಿಯಾಗುತ್ತಿದ್ದಾರೆ ಎನ್ನುವುದನ್ನು ಎಬಿಡಿ ವಿಡಿಯೋ ಮೂಲಕ ತಿಳಿಸಿದ್ದಾರೆ.
(2 / 8)

ಯೂಟ್ಯೂಬ್ ಲೈವ್‌ ವಿಡಿಯೋದಲ್ಲಿ ಮಾತನಾಡಿದ ಎಬಿ ಡಿವಿಲಿಯರ್ಸ್ ಅವರ ಬಳಿ, ವಿರಾಟ್ ಕೊಹ್ಲಿಯೊಂದಿಗೆ ಮಾತನಾಡಿದ್ದೀರಾ ಮತ್ತು ಅವರು ಚೆನ್ನಾಗಿದ್ದಾರೆಯೇ ಎಂಬ ಪ್ರಶ್ನೆ ಕೇಳಲಾಯ್ತು. ಇದಕ್ಕೆ ಎಬಿಡಿ ಉತ್ತರಿಸಿದ್ದಾರೆ.
(3 / 8)

"ಅವರು ಚೆನ್ನಾಗಿದ್ದಾರೆ ಎಂದು ನನಗೆ ಗೊತ್ತು . ಅವರು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಅದಕ್ಕಾಗಿಯೇ ಅವರು ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದಾರೆ. ನಾನು ಬೇರೆ ಏನನ್ನೂ ಖಚಿತಪಡಿಸಲು ಹೋಗುತ್ತಿಲ್ಲ. ಅವರು ಸಂತೋಷವಾಗಿದ್ದಾರೆ" ಎಂದು ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಬಹಿರಂಗಪಡಿಸಿದ್ದಾರೆ.
(4 / 8)

ಹೌದು, ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೌದು, ಈಗ ಅವರು ಕುಟುಂಬದೊಂದಿಗೆ ಸಮಯ ಕಳೆಯಬೇಕಾದ ದಿನಗಳು. ಅವರಿಗೆ ಈ ಸಮಯ ತುಂಬಾ ಮುಖ್ಯ. ಹೆಚ್ಚಿನ ಎಲ್ಲಾ ಜನರ ಮೊದಲ ಆದ್ಯತೆಯೇ ಕುಟುಂಬ ಎಂದು ನಾನು ಭಾವಿಸುತ್ತೇನೆ ಎಂದು ಎಬಿಡಿ ಹೇಳಿದ್ದಾರೆ.
(5 / 8)

ವಿರಾಟ್ ಅವರ ಬಗ್ಗೆ ನಾವು ಸುಲಭವಾಗಿ ನರ್ಧಾರಕ್ಕೆ ಬರಲು ಆಗಲ್ಲ. ನಾವು ಅವರನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇವೆ ಹೌದು. ಆದರೆ ಅವರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಎಬಿಡಿ ಹೇಳಿದ್ದಾರೆ.
(6 / 8)

ಸದ್ಯ ಕೊನೆಯ ಮೂರು ಟೆಸ್ಟ್‌ಗಳಿಗೆ ವಿರಾಟ್ ಲಭ್ಯವಿರುತ್ತಾರೆಯೇ ಎಂಬ ಕುರಿತು ಇನ್ನೂ ಸ್ಪಷ್ಟವಾಗಿಲ್ಲ.
(7 / 8)

ಈ ಸಮಯದಲ್ಲಿ ವಿರಾಟ್ ಕೊಹ್ಲಿ ಅವರ ಗೌಪ್ಯತೆಯನ್ನು ಗೌರವಿಸಬೇಕು.  ಅವರ ವೈಯಕ್ತಿಕ ಕಾರಣಗಳ ಬಗ್ಗೆ ಯಾವುದೇ ಊಹಾಪೋಹ ಬೇಡ ಎಂದು ಬಿಸಿಸಿಐ ಹೇಳಿತ್ತು.
(8 / 8)

    ಹಂಚಿಕೊಳ್ಳಲು ಲೇಖನಗಳು