logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /   Jaggesh In Village: ಮುಂದೆ ನಿಂತು ತಮ್ಮನ ಮಗನ ಮದುವೆ ನಿಶ್ಚಯ ಮಾಡಿದ ನವರಸ ನಾಯಕ..ಇಲ್ಲಿವೆ ಫೋಟೋಗಳು

Jaggesh in Village: ಮುಂದೆ ನಿಂತು ತಮ್ಮನ ಮಗನ ಮದುವೆ ನಿಶ್ಚಯ ಮಾಡಿದ ನವರಸ ನಾಯಕ..ಇಲ್ಲಿವೆ ಫೋಟೋಗಳು

Jan 27, 2023 09:45 AM IST

ಗ್ರಾಮೀಣ ಪ್ರದೇಶದಿಂದ ಬೆಂಗಳೂರಿಗೆ ಬಂದು, ವೃತ್ತಿಯಲ್ಲಿ ದೊಡ್ಡ ಯಶಸ್ಸು ಕಂಡು ಲಕ್ಸುರಿ ಜೀವನ ನಡೆಸುತ್ತಿರುವ ಎಷ್ಟೋ ಸೆಲೆಬ್ರಿಟಿಗಳನ್ನು ನೋಡಿದ್ದೇವೆ. ಆದರೆ ಅವರಲ್ಲಿ ಕೆಲವರು ತಮ್ಮ ಮೂಲವನ್ನೇ ಮರೆಯುತ್ತಾರೆ. ಇನ್ನೂ ಕೆಲವರು ಹತ್ತಿ ಬಂದ ಏಣಿಯನ್ನು ಎಂದಿಗೂ ಮರೆಯುವುದಿಲ್ಲ. 

  • ಗ್ರಾಮೀಣ ಪ್ರದೇಶದಿಂದ ಬೆಂಗಳೂರಿಗೆ ಬಂದು, ವೃತ್ತಿಯಲ್ಲಿ ದೊಡ್ಡ ಯಶಸ್ಸು ಕಂಡು ಲಕ್ಸುರಿ ಜೀವನ ನಡೆಸುತ್ತಿರುವ ಎಷ್ಟೋ ಸೆಲೆಬ್ರಿಟಿಗಳನ್ನು ನೋಡಿದ್ದೇವೆ. ಆದರೆ ಅವರಲ್ಲಿ ಕೆಲವರು ತಮ್ಮ ಮೂಲವನ್ನೇ ಮರೆಯುತ್ತಾರೆ. ಇನ್ನೂ ಕೆಲವರು ಹತ್ತಿ ಬಂದ ಏಣಿಯನ್ನು ಎಂದಿಗೂ ಮರೆಯುವುದಿಲ್ಲ. 
ನವರಸನಾಯಕ ಜಗ್ಗೇಶ್‌ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಜಡೆ ಮಾಯಸಂದ್ರ ಗ್ರಾಮದವರು. ಇಂದು ಕನ್ನಡ ಚಿತ್ರರಂಗದಲ್ಲಿ ಅವರು ಎಷ್ಟು ಸಾಧನೆ ಮಾಡಿದ್ದಾರೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಜೊತೆಗೆ ಅವರು ರಾಜಕೀಯದಲ್ಲೂ ಸಕ್ರಿಯರಾಗಿದ್ದು ರಾಜ್ಯಸಭೆ ಸದಸ್ಯ ಸ್ಥಾನ ಪಡೆದಿದ್ದಾರೆ. 
(1 / 8)

 ಜಗ್ಗೇಶ್‌ ಬಳಿ ಹಣ, ಹೆಸರು ಇಲ್ಲದ ಸಮಯದಲ್ಲಿ ಅವರ ಜೊತೆಯಾಗಿದ್ದ ಪತ್ನಿ  ಪರಿಮಳಾ ಪರಿಮಳಾ ಜಗ್ಗೇಶ್‌ ಇಂದಿಗೂ ಪತಿಗೆ ಬೆನ್ನುಲುಬಾಗಿ ನಿಂತಿದ್ದಾರೆ. ಇತರರಂತೆ ತಾವಾಯಿತು ತಮ್ಮ ಕುಟುಂಬವಾಯ್ತು ಎನ್ನದೆ, ಮನೆಗೆ ಹಿರಿಯ ಮಗನಾಗಿರುವ ಜಗ್ಗೇಶ್‌ ತಮ್ಮ ಸಹೋದರ, ಸಹೋದರಿಯರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ. 
(2 / 8)

ಇತ್ತೀಚೆಗೆ ನಟ ಜಗ್ಗೇಶ್‌, ತಮ್ಮ ಸಹೋದರ ರಾಮಚಂದ್ರ ಅವರ ಪುತ್ರನ ಮದುವೆಯನ್ನು ಮುಂದೆ ನಿಂತು ನಿಶ್ಚಯ ಮಾಡಿದ್ದಾರೆ. 
(3 / 8)

ತಮ್ಮ ರಾಮಚಂದ್ರ ಅವರ ಪುತ್ರನ ನಿಶ್ಚಿತಾರ್ಥದ ಫೋಟೋಗಳನ್ನು ಜಗ್ಗೇಶ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  
(4 / 8)

''ನಮ್ಮ ಕುಟುಂಬದ ಹಿನ್ನೆಲೆ ಸಂಪೂರ್ಣ ಗ್ರಾಮದಿಂದ ಬಂದಿದ್ದು. ಅದರ ಸಂಬಂಧ ಹಾಗೆ ಮುಂದುವರೆಯಬೇಕು ಎಂಬುದು ನನ್ನ ಆಸೆ. ಅದರಂತೆ ನನ್ನ ತಮ್ಮ ರಾಮಚಂದ್ರನ ಮಗ ಮೋಹನನಿಗೆ ಹಿರಿಸಾವೆಯ ಬಿದಿರೆಕೆರೆ ಗ್ರಾಮದ ಹೆಣ್ಣುಮಗಳೊಂದಿಗೆ ಇಂದು ನಿಶ್ಚಯ ಮಾಡಿಕೊಂಡೆವು, ಮುಂದಿನ ಪೀಳಿಗೆಯನ್ನು ಹರಸಿ ಹಾರೈಸಿ, ನಮ್ಮ ಕರ್ತವ್ಯ ಪೂರೈಸಿ ಬಂದೆ, ಗ್ರಾಮದ ಬದುಕಿಗೆ ಶರಣು ಶರಣಾರ್ಥಿ'' ಎಂದು ಜಗ್ಗೇಶ್‌ ಬರೆದುಕೊಂಡಿದ್ದಾರೆ. 
(5 / 8)

ಈ ಫೋಟೋಗಳನ್ನು ನೋಡಿ ನೆಟಿಜನ್ಸ್‌ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನೀವು ಸೆಲೆಬ್ರಿಟಿ ಎನಿಸಿಕೊಂಡಿದ್ದರೂ ಇಂದಿಗೂ ಹಳ್ಳಿಯ ಜನರು, ಹಳ್ಳಿ ಜೀವನವನ್ನು ನೆನಪಿಟ್ಟುಕೊಂಡಿರುವುದು ನಿಜಕ್ಕೂ ಖುಷಿಯ ವಿಚಾರ ಎಂದು ಕಮೆಂಟ್‌ ಮಾಡುತ್ತಿದ್ದಾರೆ. 
(6 / 8)

ಜಗ್ಗೇಶ್‌ ಹೀಗೆ ತಮ್ಮ ಊರಿನ ಫೋಟೋಗಳನ್ನು ಹಂಚಿಕೊಳ್ಳುವುದು ಇದೇ ಮೊದಲಲ್ಲ. ಅವರಿಗೆ ಸಮಯ ದೊರೆತಾಗಲೆಲ್ಲಾ ತಮ್ಮ ಊರಿಗೆ ಹೋಗಿ ಅಲ್ಲಿನ ಹಿರಿಯರನ್ನು ಭೇಟಿ ಮಾಡಿ, ಊರೆಲ್ಲಾ ಸುತ್ತಾಡಿ ಬರುತ್ತಾರೆ. 
(7 / 8)

ಜಗ್ಗೇಶ್‌ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಸದ್ಯಕ್ಕೆ ಅವರು 'ರಂಗನಾಯಕ' ಹಾಗೂ 'ರಾಘವೇಂದ್ರ ಸ್ಟೋರ್ಸ್‌' ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ರಂಗನಾಯಕ ಚಿತ್ರವನ್ನು ಗುರುಪ್ರಸಾದ್‌ ನಿರ್ದೇಶಿಸುತ್ತಿದ್ದು ವಿಖ್ಯಾತ್‌ ನಿರ್ಮಿಸುತ್ತಿದ್ದಾರೆ. ರಾಘವೇಂದ್ರ ಸ್ಟೋರ್ಸ್‌ ಸಿನಿಮಾ, ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ನಿರ್ಮಾಣ ಹಾಗೂ ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನದಲ್ಲಿ ತಯಾರಾಗುತ್ತಿದೆ.  
(8 / 8)

    ಹಂಚಿಕೊಳ್ಳಲು ಲೇಖನಗಳು