logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Aishwarya Rai Birthday: ಮುದ್ದಾದ ಫ್ಯಾಮಿಲಿ ಜೊತೆಗಿನ ಐಶ್ವರ್ಯಾ ರೈ ಫೋಟೋಸ್​ ಇಲ್ಲಿವೆ..

Aishwarya Rai Birthday: ಮುದ್ದಾದ ಫ್ಯಾಮಿಲಿ ಜೊತೆಗಿನ ಐಶ್ವರ್ಯಾ ರೈ ಫೋಟೋಸ್​ ಇಲ್ಲಿವೆ..

Nov 01, 2022 02:45 PM IST

ಮಂಗಳೂರು ಬೆಡಗಿ, ಬಾಲಿವುಡ್​ನ ಖ್ಯಾತ​​ ನಟಿ ಐಶ್ವರ್ಯಾ ರೈ ಬಚ್ಚನ್​​ ಅವರು ಇಂದು 49ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಐಶ್​ ಒಬ್ಬ ಒಳ್ಳೆಯ ಮಗಳು, ಹೆಂಡತಿ ಹಾಗೂ ತಾಯಿ ಎಂಬುದರಲ್ಲಿ ಎರಡನೇ ಮಾತಿಲ್ಲ. 1994ರಲ್ಲಿ ವಿಶ್ವಸುಂದರಿ ಪಟ್ಟ ಗಳಿಸಿದ ಐಶ್ವರ್ಯಾ ರೈ 1997 ರಲ್ಲಿ ತಮಿಳಿನ 'ಇರುವರ್' ಚಿತ್ರದ ಮೂಲಕ ಸಿನಿಮಾ ಜಗತ್ತಿಗೆ ಕಾಲಿಟ್ಟರು. ಅದೇ ವರ್ಷ' ಔರ್ ಪ್ಯಾರ್​ ಹೋ ಗಯಾ' ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದರು. ಅಂದಿನಿಂದ ಇಂದಿನ ವರೆಗೂ ಐಶ್​ ಹಿಟ್​​ ಸಿನಿಮಾಗಳನ್ನು ನೀಡಿದ್ದಾರೆ. ಮುದ್ದಾದ ಫ್ಯಾಮಿಲಿ ಜೊತೆಗಿನ ಐಶ್ವರ್ಯಾ ರೈ ಫೋಟೋಸ್​ ಇಲ್ಲಿವೆ ನೋಡಿ..

  • ಮಂಗಳೂರು ಬೆಡಗಿ, ಬಾಲಿವುಡ್​ನ ಖ್ಯಾತ​​ ನಟಿ ಐಶ್ವರ್ಯಾ ರೈ ಬಚ್ಚನ್​​ ಅವರು ಇಂದು 49ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಐಶ್​ ಒಬ್ಬ ಒಳ್ಳೆಯ ಮಗಳು, ಹೆಂಡತಿ ಹಾಗೂ ತಾಯಿ ಎಂಬುದರಲ್ಲಿ ಎರಡನೇ ಮಾತಿಲ್ಲ. 1994ರಲ್ಲಿ ವಿಶ್ವಸುಂದರಿ ಪಟ್ಟ ಗಳಿಸಿದ ಐಶ್ವರ್ಯಾ ರೈ 1997 ರಲ್ಲಿ ತಮಿಳಿನ 'ಇರುವರ್' ಚಿತ್ರದ ಮೂಲಕ ಸಿನಿಮಾ ಜಗತ್ತಿಗೆ ಕಾಲಿಟ್ಟರು. ಅದೇ ವರ್ಷ' ಔರ್ ಪ್ಯಾರ್​ ಹೋ ಗಯಾ' ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದರು. ಅಂದಿನಿಂದ ಇಂದಿನ ವರೆಗೂ ಐಶ್​ ಹಿಟ್​​ ಸಿನಿಮಾಗಳನ್ನು ನೀಡಿದ್ದಾರೆ. ಮುದ್ದಾದ ಫ್ಯಾಮಿಲಿ ಜೊತೆಗಿನ ಐಶ್ವರ್ಯಾ ರೈ ಫೋಟೋಸ್​ ಇಲ್ಲಿವೆ ನೋಡಿ..
ಏಪ್ರಿಲ್ 20, 2007 ರಲ್ಲಿ ಬಾಲಿವುಡ್​ ನಟ ಅಭಿಷೇಕ್​ ಬಚ್ಚನ್​ರನ್ನು ವಿವಾಹವಾಗುವ ಮೂಲಕ ಐಶ್ವರ್ಯಾ ಬಿಗ್​ ಬಿ ಅಮಿತಾಬ್​ ಬಚ್ಚನ್​ ಮನೆಗೆ ಸೊಸೆಯಾಗಿ ಹೋದರು. ಈ ದಂಪಂತಿಗೆ ಆರಾಧ್ಯ ಎಂಬ ಮುದ್ದಾದ ಹೆಣ್ಣು ಮಗಳಿದ್ದಾಳೆ.
(1 / 5)
ಏಪ್ರಿಲ್ 20, 2007 ರಲ್ಲಿ ಬಾಲಿವುಡ್​ ನಟ ಅಭಿಷೇಕ್​ ಬಚ್ಚನ್​ರನ್ನು ವಿವಾಹವಾಗುವ ಮೂಲಕ ಐಶ್ವರ್ಯಾ ಬಿಗ್​ ಬಿ ಅಮಿತಾಬ್​ ಬಚ್ಚನ್​ ಮನೆಗೆ ಸೊಸೆಯಾಗಿ ಹೋದರು. ಈ ದಂಪಂತಿಗೆ ಆರಾಧ್ಯ ಎಂಬ ಮುದ್ದಾದ ಹೆಣ್ಣು ಮಗಳಿದ್ದಾಳೆ.
ಫ್ಯಾಮಿಲಿ ಫಂಕ್ಷನ್​ ಆಗಲಿ, ರೆಡ್ ಕಾರ್ಪೆಟ್ ಈವೆಂಟ್ ಆಗಿರಲಿ ಅಥವಾ ಚಲನಚಿತ್ರದ ಶೂಟಿಂಗ್ ಆಗಿರಲಿ ಅಲ್ಲಿಗೆ ಮಗಳು ಆರಾಧ್ಯಳನ್ನು ಐಶ್​ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ.
(2 / 5)
ಫ್ಯಾಮಿಲಿ ಫಂಕ್ಷನ್​ ಆಗಲಿ, ರೆಡ್ ಕಾರ್ಪೆಟ್ ಈವೆಂಟ್ ಆಗಿರಲಿ ಅಥವಾ ಚಲನಚಿತ್ರದ ಶೂಟಿಂಗ್ ಆಗಿರಲಿ ಅಲ್ಲಿಗೆ ಮಗಳು ಆರಾಧ್ಯಳನ್ನು ಐಶ್​ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ.
ಮಾವ ಅಮಿತಾಬ್​​ ಹಾಗೂ ಮಗಳು ಆರಾಧ್ಯ ಜೊತೆಯಲ್ಲಿ 'ದೇವ್​ದಾಸ್'​ ಬೆಡಗಿ ಫೋಟೋ ಇವರ ಸಂಬಂಧ ಎಷ್ಟು ಚೆನ್ನಾಗಿದೆ ಎಂಬುದನ್ನು ಹೇಳುತ್ತದೆ.
(3 / 5)
ಮಾವ ಅಮಿತಾಬ್​​ ಹಾಗೂ ಮಗಳು ಆರಾಧ್ಯ ಜೊತೆಯಲ್ಲಿ 'ದೇವ್​ದಾಸ್'​ ಬೆಡಗಿ ಫೋಟೋ ಇವರ ಸಂಬಂಧ ಎಷ್ಟು ಚೆನ್ನಾಗಿದೆ ಎಂಬುದನ್ನು ಹೇಳುತ್ತದೆ.
ಐಶ್ವರ್ಯಾ ಆಗಾಗ್ಗ ತನ್ನ ತಾಯಿ ಮತ್ತು ಸಹೋದರ ಆದಿತ್ಯ ರೈ ಜೊತೆ ಸಮಯ ಕಳೆಯುತ್ತಾರೆ.
(4 / 5)
ಐಶ್ವರ್ಯಾ ಆಗಾಗ್ಗ ತನ್ನ ತಾಯಿ ಮತ್ತು ಸಹೋದರ ಆದಿತ್ಯ ರೈ ಜೊತೆ ಸಮಯ ಕಳೆಯುತ್ತಾರೆ.
ಜನ್ಮದಿನಗಳು, ವಿವಾಹ ವಾರ್ಷಿಕೋತ್ಸವಗಳು ಮತ್ತು ಇನ್ನೂ ಅನೇಕ ಸಂದರ್ಭಗಳಲ್ಲಿ ಬಚ್ಚನ್​ ಕುಟುಂಬ ಒಟ್ಟಾಗಿ ಕಾಣಿಸಿಕೊಳ್ಳುತ್ತದೆ.
(5 / 5)
ಜನ್ಮದಿನಗಳು, ವಿವಾಹ ವಾರ್ಷಿಕೋತ್ಸವಗಳು ಮತ್ತು ಇನ್ನೂ ಅನೇಕ ಸಂದರ್ಭಗಳಲ್ಲಿ ಬಚ್ಚನ್​ ಕುಟುಂಬ ಒಟ್ಟಾಗಿ ಕಾಣಿಸಿಕೊಳ್ಳುತ್ತದೆ.

    ಹಂಚಿಕೊಳ್ಳಲು ಲೇಖನಗಳು