logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಕ್ಷ ಸೇರಿದ ಎಂಟೇ ದಿನಕ್ಕೆ ವೈಎಸ್‌ಆರ್ ಕಾಂಗ್ರೆಸ್ ತೊರೆದ ಅಂಬಟಿ ರಾಯುಡು; ಮುಂದಿನ ನಿರ್ಧಾರ ಗೌಪ್ಯ

ಪಕ್ಷ ಸೇರಿದ ಎಂಟೇ ದಿನಕ್ಕೆ ವೈಎಸ್‌ಆರ್ ಕಾಂಗ್ರೆಸ್ ತೊರೆದ ಅಂಬಟಿ ರಾಯುಡು; ಮುಂದಿನ ನಿರ್ಧಾರ ಗೌಪ್ಯ

Jan 07, 2024 02:10 PM IST

Ambati Rayudu: ರಾಜಕೀಯ ಮೈದಾನದ ಪಿಚ್‌ನಲ್ಲಿ ಕೇವಲ 8 ದಿನಗಳ ಕಾಲ ಬ್ಯಾಟಿಂಗ್ ನಡೆಸಿದ ಬಳಿಕ ಮಾಜಿ ಕ್ರಿಕೆಟಿಗ ಅಂಬಟಿ ರಾಯಡು ವಿಕೆಟ್‌ ಒಪ್ಪಿಸಿದ್ದಾರೆ. ಸಿಎಸ್‌ಕೆ ಮಾಜಿ ಆಟಗಾರ ಆಂಧ್ರಪ್ರದೇಶದ ಆಡಳಿತ ಪಕ್ಷ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ತೊರೆದಿದ್ದಾರೆ. ಸದ್ಯ ರಾಜಕೀಯ ರಂಗದಲ್ಲಿ ತಮ್ಮ ಮುಂದಿನ ನಡೆಯನ್ನು ಅವರು ಗೌಪ್ಯವಾಗಿ ಇಟ್ಟುಕೊಂಡಿದ್ದಾರೆ.

  • Ambati Rayudu: ರಾಜಕೀಯ ಮೈದಾನದ ಪಿಚ್‌ನಲ್ಲಿ ಕೇವಲ 8 ದಿನಗಳ ಕಾಲ ಬ್ಯಾಟಿಂಗ್ ನಡೆಸಿದ ಬಳಿಕ ಮಾಜಿ ಕ್ರಿಕೆಟಿಗ ಅಂಬಟಿ ರಾಯಡು ವಿಕೆಟ್‌ ಒಪ್ಪಿಸಿದ್ದಾರೆ. ಸಿಎಸ್‌ಕೆ ಮಾಜಿ ಆಟಗಾರ ಆಂಧ್ರಪ್ರದೇಶದ ಆಡಳಿತ ಪಕ್ಷ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ತೊರೆದಿದ್ದಾರೆ. ಸದ್ಯ ರಾಜಕೀಯ ರಂಗದಲ್ಲಿ ತಮ್ಮ ಮುಂದಿನ ನಡೆಯನ್ನು ಅವರು ಗೌಪ್ಯವಾಗಿ ಇಟ್ಟುಕೊಂಡಿದ್ದಾರೆ.
ವೈಎಸ್‌ಆರ್‌ಸಿಪಿಗೆ ಸೇರಿದ ಎಂಟು ದಿನಗಳ ನಂತರ ಅಂಬಟಿ ರಾಯಡು ಪಕ್ಷ ತೊರೆದಿದ್ದಾರೆ. ಟೀಮ್‌ ಇಂಡಿಯಾ ಮತ್ತು ಸಿಎಸ್‌ಕೆ ಮಾಜಿ ಆಟಗಾರ ದಿಢೀರ್ ಆಗಿ ಆಂಧ್ರಪ್ರದೇಶದ ಆಡಳಿತ ಪಕ್ಷವನ್ನು ತೊರೆದಿದ್ದು ಏಕೆ ಎಂಬುದರ ಕುರಿತು ಏನನ್ನೂ ಹೇಳಿಕೊಂಡಿಲ್ಲ. ಅಲ್ಲದೆ ತಮ್ಮ ಮುಂದಿನ ನಿರ್ಧಾರವನ್ನು ಮುಂದಿನ ದಿನಗಳಲ್ಲಿ‌ ತಿಳಿಸುವುದಾಗಿ ಹೇಳಿಕೊಂಡಿದ್ದಾರೆ.
(1 / 5)
ವೈಎಸ್‌ಆರ್‌ಸಿಪಿಗೆ ಸೇರಿದ ಎಂಟು ದಿನಗಳ ನಂತರ ಅಂಬಟಿ ರಾಯಡು ಪಕ್ಷ ತೊರೆದಿದ್ದಾರೆ. ಟೀಮ್‌ ಇಂಡಿಯಾ ಮತ್ತು ಸಿಎಸ್‌ಕೆ ಮಾಜಿ ಆಟಗಾರ ದಿಢೀರ್ ಆಗಿ ಆಂಧ್ರಪ್ರದೇಶದ ಆಡಳಿತ ಪಕ್ಷವನ್ನು ತೊರೆದಿದ್ದು ಏಕೆ ಎಂಬುದರ ಕುರಿತು ಏನನ್ನೂ ಹೇಳಿಕೊಂಡಿಲ್ಲ. ಅಲ್ಲದೆ ತಮ್ಮ ಮುಂದಿನ ನಿರ್ಧಾರವನ್ನು ಮುಂದಿನ ದಿನಗಳಲ್ಲಿ‌ ತಿಳಿಸುವುದಾಗಿ ಹೇಳಿಕೊಂಡಿದ್ದಾರೆ.(IPL)
ಕ್ರಿಕೆಟ್‌ನಿಂದ ವಿರಾಮ ಘೋಷಿಸಿದ ನಂತರ, ರಾಯಡು ಸದ್ಯ ರಾಜಕೀಯದಿಂದಲೂ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಮುಂದೆ ರಾಜಕೀಯಕ್ಕೆ ಮರಳಲಿದ್ದೇನೆ ಎಂದು ಭಾರತದ ಮಾಜಿ ಕ್ರಿಕೆಟಿಗ ವಿವರಿಸಿದ್ದಾರೆ. ಆದರೆ ಸ್ವಂತ ಪಕ್ಷ ಕಟ್ಟಬೇಕೋ, ಅಥವಾ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಕ್ಕೆ ಸೇರಬೇಕೋ ಎನ್ನುವ ಕುರಿತು ಮಾಹಿತಿ ನೀಡಿಲ್ಲ.
(2 / 5)
ಕ್ರಿಕೆಟ್‌ನಿಂದ ವಿರಾಮ ಘೋಷಿಸಿದ ನಂತರ, ರಾಯಡು ಸದ್ಯ ರಾಜಕೀಯದಿಂದಲೂ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಮುಂದೆ ರಾಜಕೀಯಕ್ಕೆ ಮರಳಲಿದ್ದೇನೆ ಎಂದು ಭಾರತದ ಮಾಜಿ ಕ್ರಿಕೆಟಿಗ ವಿವರಿಸಿದ್ದಾರೆ. ಆದರೆ ಸ್ವಂತ ಪಕ್ಷ ಕಟ್ಟಬೇಕೋ, ಅಥವಾ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಕ್ಕೆ ಸೇರಬೇಕೋ ಎನ್ನುವ ಕುರಿತು ಮಾಹಿತಿ ನೀಡಿಲ್ಲ.(IPL)
“ನಾನು ವೈಎಸ್‌ಆರ್‌ಸಿಪಿ ಪಕ್ಷ ತೊರೆಯಲು ನಿರ್ಧರಿಸಿದ್ದೇನೆ ಎಂದು ಎಲ್ಲರಿಗೂ ತಿಳಿಸಲು ಬಯಸುತ್ತೇನೆ” ಎಂದು ರಾಯಡು ಶನಿವಾರ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹೇಳಿಕೊಂಡಿದ್ದಾರೆ. ಕೆಲಕಾಲ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ್ದು, ಮುಂದೆ ಏನು ಮಾಡಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಹೇಳಿದ್ದಾರೆ.
(3 / 5)
“ನಾನು ವೈಎಸ್‌ಆರ್‌ಸಿಪಿ ಪಕ್ಷ ತೊರೆಯಲು ನಿರ್ಧರಿಸಿದ್ದೇನೆ ಎಂದು ಎಲ್ಲರಿಗೂ ತಿಳಿಸಲು ಬಯಸುತ್ತೇನೆ” ಎಂದು ರಾಯಡು ಶನಿವಾರ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹೇಳಿಕೊಂಡಿದ್ದಾರೆ. ಕೆಲಕಾಲ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ್ದು, ಮುಂದೆ ಏನು ಮಾಡಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಹೇಳಿದ್ದಾರೆ.(IPL)
ಡಿಸೆಂಬರ್ 28ರಂದು ಆಂಧ್ರಪ್ರದೇಶದ ಆಡಳಿತ ಪಕ್ಷ ವೈಎಸ್‌ಆರ್‌ಸಿಪಿಗೆ ರಾಯಡು ಸೇರ್ಪಡೆಯಾಗಿದ್ದರು. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನಿವಾಸಿಯಾಗಿರುವ ಅವರು, ವೈಎಸ್‌ಆರ್‌ಸಿಪಿಗೆ ಸೇರಿದಾಗ ಆಡಳಿತ ಪಕ್ಷದ ವರಿಷ್ಠ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್‌ಮೋಹನ್ ರೆಡ್ಡಿ ಪಕ್ಷಕ್ಕೆ ಸ್ವಾಗತಿಸಿದ್ದರು. ಈ ಹಿಂದೆ ರಾಯುಡು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ಊಹಾಪೋಹವಿತ್ತು.
(4 / 5)
ಡಿಸೆಂಬರ್ 28ರಂದು ಆಂಧ್ರಪ್ರದೇಶದ ಆಡಳಿತ ಪಕ್ಷ ವೈಎಸ್‌ಆರ್‌ಸಿಪಿಗೆ ರಾಯಡು ಸೇರ್ಪಡೆಯಾಗಿದ್ದರು. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನಿವಾಸಿಯಾಗಿರುವ ಅವರು, ವೈಎಸ್‌ಆರ್‌ಸಿಪಿಗೆ ಸೇರಿದಾಗ ಆಡಳಿತ ಪಕ್ಷದ ವರಿಷ್ಠ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್‌ಮೋಹನ್ ರೆಡ್ಡಿ ಪಕ್ಷಕ್ಕೆ ಸ್ವಾಗತಿಸಿದ್ದರು. ಈ ಹಿಂದೆ ರಾಯುಡು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ಊಹಾಪೋಹವಿತ್ತು.(PTI)
2023ರ ಐಪಿಎಲ್ ಬಳಿಕ ರಾಯಡು ಲೀಗ್‌ಗೆ ವಿದಾಯ ಹೇಳಿದ್ದರು. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿರುವ ಅವರು ಭಾರತ ಪರ 55 ಏಕದಿನ ಪಂದ್ಯಗಳನ್ನು ಆಡಿ 1,694 ರನ್ ಗಳಿಸಿದ್ದಾರೆ. ಮೂರು ಶತಕ ಮತ್ತು 10 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಆರು ಟಿ20 ಪಂದ್ಯಗಳನ್ನು ಆಡಿರುವ ಅವರು 2019ರ ಮಾರ್ಚ್ 8ರಂದು ಭಾರತದ ಪರ ಕೊನೆಯ ಪಂದ್ಯ ಆಡಿದ್ದಾರೆ.
(5 / 5)
2023ರ ಐಪಿಎಲ್ ಬಳಿಕ ರಾಯಡು ಲೀಗ್‌ಗೆ ವಿದಾಯ ಹೇಳಿದ್ದರು. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿರುವ ಅವರು ಭಾರತ ಪರ 55 ಏಕದಿನ ಪಂದ್ಯಗಳನ್ನು ಆಡಿ 1,694 ರನ್ ಗಳಿಸಿದ್ದಾರೆ. ಮೂರು ಶತಕ ಮತ್ತು 10 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಆರು ಟಿ20 ಪಂದ್ಯಗಳನ್ನು ಆಡಿರುವ ಅವರು 2019ರ ಮಾರ್ಚ್ 8ರಂದು ಭಾರತದ ಪರ ಕೊನೆಯ ಪಂದ್ಯ ಆಡಿದ್ದಾರೆ.(AFP)

    ಹಂಚಿಕೊಳ್ಳಲು ಲೇಖನಗಳು