logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಏಷ್ಯಾಕಪ್‌ನಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ಆಟಗಾರರಿವರು; ಈ ಐವರ ಮೇಲಿದೆ ಭಾರಿ ನಿರೀಕ್ಷೆ

ಏಷ್ಯಾಕಪ್‌ನಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ಆಟಗಾರರಿವರು; ಈ ಐವರ ಮೇಲಿದೆ ಭಾರಿ ನಿರೀಕ್ಷೆ

Aug 30, 2023 10:00 AM IST

Asia Cup 2023: ಏಷ್ಯಾದ ಬಲಿಷ್ಠ ಕ್ರಿಕೆಟ್‌ ತಂಡಗಳ ನಡುವಿನ ಕಾದಾಟಕ್ಕೆ ವೇದಿಕೆ ಸಿದ್ಧಗೊಂಡಿದೆ. ಇಂದಿನಿಂದ (ಆಗಸ್ಟ್ 30) ಏಷ್ಯಾಕಪ್‌ ಟೂರ್ನಿ ಆರಂಭವಾಗುತ್ತಿದ್ದು, ಭಾರತವು ಕಪ್‌ ಗೆಲ್ಲು ಫೇವರೆಟ್‌ ತಂಡವಾಗಿದೆ. ಹಾಗಿದ್ರೆ ಭಾರತ ತಂಡವನ್ನು ಏಷ್ಯಾ ಚಾಂಪಿಯನ್‌ ಆಗಿಸುವ ಸಾಮರ್ಥ್ಯ ಯಾರಿಗೆಲ್ಲಾ ಇದೆ ಎಂಬುದನ್ನು ನೋಡೋಣ.

  • Asia Cup 2023: ಏಷ್ಯಾದ ಬಲಿಷ್ಠ ಕ್ರಿಕೆಟ್‌ ತಂಡಗಳ ನಡುವಿನ ಕಾದಾಟಕ್ಕೆ ವೇದಿಕೆ ಸಿದ್ಧಗೊಂಡಿದೆ. ಇಂದಿನಿಂದ (ಆಗಸ್ಟ್ 30) ಏಷ್ಯಾಕಪ್‌ ಟೂರ್ನಿ ಆರಂಭವಾಗುತ್ತಿದ್ದು, ಭಾರತವು ಕಪ್‌ ಗೆಲ್ಲು ಫೇವರೆಟ್‌ ತಂಡವಾಗಿದೆ. ಹಾಗಿದ್ರೆ ಭಾರತ ತಂಡವನ್ನು ಏಷ್ಯಾ ಚಾಂಪಿಯನ್‌ ಆಗಿಸುವ ಸಾಮರ್ಥ್ಯ ಯಾರಿಗೆಲ್ಲಾ ಇದೆ ಎಂಬುದನ್ನು ನೋಡೋಣ.
ಏಷ್ಯಾಕಪ್ 2023ರಲ್ಲಿ ಆಗಸ್ಟ್ 30ರಂದು ಮೊದಲ ಪಂದ್ಯ ನಡೆಯುತ್ತಿದೆ. ಈ ಟೂರ್ನಿಯ ಮೊದಲ ಪಂದ್ಯ ಪಾಕಿಸ್ತಾನ ಮತ್ತು ನೇಪಾಳ ನಡುವೆ ನಡೆಯಲಿದೆ. ಭಾರತವು ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ.
(1 / 8)

ಟೀಮ್ ಇಂಡಿಯಾಗೆ ಟ್ರೋಫಿ ಗೆಲ್ಲಿಸಬಲ್ಲ ಐವರು ಆಟಗಾರರ ಪೈಕಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಟೀಮ್‌ ಇಂಡಿಯಾದ ಅನುಭವಿ ಆಟಗಾರ ಹಾಗೂ ರನ್‌ ಮಷಿನ್ ಕೊಹ್ಲಿ ಭಾರತ ತಂಡದ ಭರವಸೆಯ ಆಟಗಾರ. 2011ರ ವಿಶ್ವಕಪ್‌ ಸೇರಿದಂತೆ ಮಹತ್ವದ ಟೂರ್ನಿಗಳಲ್ಲಿ ಆಡಿದ ಅನುಭವವೂ ಅವರಿಗಿದೆ. ಜೊತೆಗೆ ತಿಲಕ್ ವರ್ಮಾ, ಶ್ರೇಯಸ್‌ ಅಯ್ಯರ್‌, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಮತ್ತು ಇಶಾನ್ ಕಿಶನ್ ಮೇಲೆ ಭರವಸೆ ಹೆಚ್ಚಿದೆ.
(2 / 8)

‌ಆಂಧ್ರ ಪ್ರದೇಶ ಮೂಲದ ಯುವ ಬ್ಯಾಟರ್ ತಿಲಕ್ ವರ್ಮಾ, ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಭಾರತ ಪರ ಆಡಿದ 7 ಪಂದ್ಯಗಳಲ್ಲಿ ಅವರು 174 ರನ್ ಸಿಡಿಸಿದ್ದಾರೆ. ತಿಲಕ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಹೀಗಾಗಿಯೇ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ತಿಲಕ್ ವರ್ಮಾ ಏಷ್ಯಾಕಪ್ ನಲ್ಲೂ ಉತ್ತಮ ಪ್ರದರ್ಶನ ನೀಡಬಲ್ಲರು. ಆದರೆ, ಅವರಿಗೆ ಆಡುವ ಬಳಗದಲ್ಲಿ ಅವಕಾಶ ಸಿಗುತ್ತೋ ಎನ್ನುವುದನ್ನು ಕಾದು ನೋಡಬೇಕಿದೆ.
(3 / 8)

ಇಶಾನ್ ಕಿಶನ್ ವೆಸ್ಟ್ ಇಂಡೀಸ್ ವಿರುದ್ಧ ಸರಣಿಯಲ್ಲಿ ಸತತ 4 ಅರ್ಧಶತಕಗಳನ್ನು ಗಳಿಸಿದರು. ಅದರಲ್ಲಿ ಏಕದಿನ ಪಂದ್ಯಗಳಲ್ಲಿ ಮೂರು ಅರ್ಧಶತಕಗಳನ್ನು ಸಿಡಿಸಿದ್ದರು. ಫಾರ್ಮ್‌ನಲ್ಲಿರುವ ಅವರು ಈಗ ಏಷ್ಯಾಕಪ್‌ನಲ್ಲೂ ಉತ್ತಮ ಪ್ರದರ್ಶನ ನೀಡಬಲ್ಲರು. ಸದ್ಯ ಕೆಎಲ್‌ ರಾಹುಲ್‌ ಮೊದಲೆರಡು ಪಂದ್ಯಗಳಿಂದ ಹೊರಬಿದ್ದಿದ್ದು, ಆ ಸ್ಥಾನಕ್ಕೆ ವಿಕೆಟ್‌ ಕೀಪರ್‌ ಆಗಿ ಇಶಾನ್ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಬಾಂಗ್ಲಾದೇಶ ವಿರುದ್ಧ ಏಕದಿನ ಮಾದರಿಯಲ್ಲಿ ದ್ವಿಶತಕ ಸಿಡಿಸಿದ್ದ ಇಶಾನ್‌ ಮೇಲೆ ಭಾರಿ ನಂಬಿಕೆ ಇದೆ.
(4 / 8)

ಬ್ಯಾಟ್‌ ಹಾಗೂ ಬಾಲ್‌ ಎರಡರಲ್ಲೂ ಮ್ಯಾಜಿಕ್‌ ಮಾಡಬಲ್ಲ ಸಾಮರ್ಥ್ಯವಿರುವ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ, ಭಾರತದ ಪರ ಹಲವಾರು ಸಂದರ್ಭಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ಇದುವರೆಗೆ ಆಡಿದ 177 ಏಕದಿನ ಪಂದ್ಯಗಳಲ್ಲಿ 2560 ರನ್ ಗಳಿಸಿದ್ದಾರೆ. ಇದರೊಂದಿಗೆ 194 ವಿಕೆಟ್‌ಗಳನ್ನು ಕೂಡಾ ಕಬಳಿಸಿದ್ದಾರೆ. ವಿಶ್ವದ ಪ್ರಬಲ ಆಲ್‌ರೌಂಡರ್‌ ಎನಿಸಿರುವ ಜಡ್ಡು ಮಹತ್ವದ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಮೂಡಿಸಿದ್ದಾರೆ.
(5 / 8)

ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅದ್ಭುತ ಪುನರಾಗಮನ ಮಾಡಿದ್ದಾರೆ. ಅವರು ಇತ್ತೀಚೆಗೆ ಐರ್ಲೆಂಡ್ ವಿರುದ್ಧದ T20I ಸರಣಿಯಲ್ಲಿ 4 ವಿಕೆಟ್ಗಳನ್ನು ಪಡೆದರು. ಗಾಯದ ಸಮಸ್ಯೆಯಿಂದಾಗಿ ಬುಮ್ರಾ ಟೀಮ್ ಇಂಡಿಯಾದಿಂದ ಬಹಳ ಕಾಲ ಹೊರಗಿದ್ದರು. ಅವರು ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಪರ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಬಲ್ಲರು.
(6 / 8)

ಸುದೀರ್ಘ ಅವಧಿಯ ಗಾಯದ ಬಳಿಕ ಟೀಮ್‌ ಇಂಡಿಯಾಗೆ ಆಯ್ಕೆಯಾಗಿರುವ ಶ್ರೇಯಸ್‌ ಅಯ್ಯರ್‌, ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲ ತುಂಬಲಿದ್ದಾರೆ. ಅಯ್ಯರ್ ಏಕದಿನ ಅಂಕಿ ಅಂಶಗಳು‌ ಉತ್ತಮವಾಗಿದೆ. ಹೀಗಾಗಿ ಸಹಜವಾಗಿ ಶ್ರೇಯಸ್‌ ಬ್ಯಾಟಿಂಗ್‌ ಮೇಲೆ ಅಭಿಮಾನಿಗಳಿಗೆ ವಿಶ್ವಾಸ ಹೆಚ್ಚಿದೆ.
(7 / 8)

ಈ ಬಾರಿಯ ಟೂರ್ನಿಗೆ ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳು ಜಂಟಿಯಾಗಿ ಆತಿಥ್ಯ ವಹಿಸುತ್ತಿವೆ. ಬುಧವಾರ ಪಾಕಿಸ್ತಾನದ ಮುಲ್ತಾನ್‌ನಲ್ಲಿರುವ ಮುಲ್ತಾನ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ, ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡವು ಏಷ್ಯಾಕಪ್‌ಗೆ ಪದಾರ್ಪಣೆ ಮಾಡುತ್ತಿರುವ ನೇಪಾಳವನ್ನು ಎದುರಿಸಲಿದೆ.
(8 / 8)
ಈ ಬಾರಿಯ ಟೂರ್ನಿಗೆ ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳು ಜಂಟಿಯಾಗಿ ಆತಿಥ್ಯ ವಹಿಸುತ್ತಿವೆ. ಬುಧವಾರ ಪಾಕಿಸ್ತಾನದ ಮುಲ್ತಾನ್‌ನಲ್ಲಿರುವ ಮುಲ್ತಾನ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ, ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡವು ಏಷ್ಯಾಕಪ್‌ಗೆ ಪದಾರ್ಪಣೆ ಮಾಡುತ್ತಿರುವ ನೇಪಾಳವನ್ನು ಎದುರಿಸಲಿದೆ.(photos- instagram)

    ಹಂಚಿಕೊಳ್ಳಲು ಲೇಖನಗಳು