logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಏಷ್ಯಾಕಪ್‌ನಲ್ಲಿ ಅತ್ಯಂತ ಯಶಸ್ವಿ ತಂಡ ಭಾರತವಲ್ಲ; ಟೀಮ್ ಇಂಡಿಯಾಗಿಂತ ಶ್ರೀಲಂಕಾ ದಾಖಲೆಯೇ ಹೆಚ್ಚು

ಏಷ್ಯಾಕಪ್‌ನಲ್ಲಿ ಅತ್ಯಂತ ಯಶಸ್ವಿ ತಂಡ ಭಾರತವಲ್ಲ; ಟೀಮ್ ಇಂಡಿಯಾಗಿಂತ ಶ್ರೀಲಂಕಾ ದಾಖಲೆಯೇ ಹೆಚ್ಚು

Aug 27, 2023 07:15 AM IST

Asia Cup 2023: ಅತಿ ಹೆಚ್ಚು ಬಾರಿ ಏಷ್ಯಾಕಪ್‌ ಟ್ರೋಫಿ ಗೆದ್ದ ರಾಷ್ಟ್ರ ಭಾರತ. ಆದರೆ, ಏಷ್ಯಾಕಪ್‌ನಲ್ಲಿ ಅತ್ಯಂತ ಯಶಸ್ವಿ ತಂಡ ಭಾರತವಲ್ಲ, ಬದಲಿಗೆ ದ್ವೀಪರಾಷ್ಟ್ರ ಶ್ರೀಲಂಕಾ. ಟೂರ್ನಿಯುದ್ದಕ್ಕೂ ಲಂಕಾ ತಂಡ ಸಾಧಿಸಿದ ಯಶಸ್ಸು ಮತ್ತು ಸ್ಥಿರ ಪ್ರದರ್ಶನ ಇದಕ್ಕೆ ಸಾಕ್ಷಿ. ಭಾರತ ಏಳು ಬಾರಿ ಟ್ರೋಫಿ ಗೆದ್ದರೂ, ಶ್ರೀಲಂಕಾದಷ್ಟು ಸ್ಥಿರವಾಗಿ ಆಡಿಲ್ಲ.

  • Asia Cup 2023: ಅತಿ ಹೆಚ್ಚು ಬಾರಿ ಏಷ್ಯಾಕಪ್‌ ಟ್ರೋಫಿ ಗೆದ್ದ ರಾಷ್ಟ್ರ ಭಾರತ. ಆದರೆ, ಏಷ್ಯಾಕಪ್‌ನಲ್ಲಿ ಅತ್ಯಂತ ಯಶಸ್ವಿ ತಂಡ ಭಾರತವಲ್ಲ, ಬದಲಿಗೆ ದ್ವೀಪರಾಷ್ಟ್ರ ಶ್ರೀಲಂಕಾ. ಟೂರ್ನಿಯುದ್ದಕ್ಕೂ ಲಂಕಾ ತಂಡ ಸಾಧಿಸಿದ ಯಶಸ್ಸು ಮತ್ತು ಸ್ಥಿರ ಪ್ರದರ್ಶನ ಇದಕ್ಕೆ ಸಾಕ್ಷಿ. ಭಾರತ ಏಳು ಬಾರಿ ಟ್ರೋಫಿ ಗೆದ್ದರೂ, ಶ್ರೀಲಂಕಾದಷ್ಟು ಸ್ಥಿರವಾಗಿ ಆಡಿಲ್ಲ.
ಏಷ್ಯಾಕಪ್‌ನಲ್ಲಿ ಅತ್ಯಂತ ಯಶಸ್ವಿ ತಂಡ ಯಾವುದು ಎಂಬುದನ್ನು ತಿಳಿಯೋಣ
(1 / 6)
ಏಷ್ಯಾಕಪ್‌ನಲ್ಲಿ ಅತ್ಯಂತ ಯಶಸ್ವಿ ತಂಡ ಯಾವುದು ಎಂಬುದನ್ನು ತಿಳಿಯೋಣ
ಭಾರತವು ಅತಿ ಹೆಚ್ಚು, ಅಂದರೆ ಏಳು ಬಾರಿ ಏಷ್ಯಾಕಪ್‌ ಟ್ರೋಫಿ ಗೆದ್ದಿದೆ. 1984, 1988, 1990, 1995, 2010, 2016 ಮತ್ತು 2018 ರಲ್ಲಿ ಟೀಮ್‌ ಇಂಡಿಯಾ ಪ್ರಶಸ್ತಿ ಗೆದ್ದಿತ್ತು. ಇದಲ್ಲದೆ 1997, 2004 ಮತ್ತು 2008ರಲ್ಲಿ ಫೈನಲ್ ತಲುಪಿ ಸೋತಿತ್ತು. ಆದರೆ ಭಾರತಕ್ಕೆ ಹೋಲಿಸಿದರೆ ಶ್ರೀಲಂಕಾದ ದಾಖಲೆ ಇನ್ನೂ ಉತ್ತಮವಾಗಿದೆ.
(2 / 6)

ಶ್ರೀಲಂಕಾ ತಂಡವು ಆರು ಟ್ರೋಫಿಗಳೊಂದಿಗೆ ಭಾರತದ ನಂತರ ಎರಡನೇ ಸ್ಥಾನದಲ್ಲಿದೆ. ಆದರೆ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುಲ್ಲಿ ಲಂಕಾ ತಂಡ ಭಾರತಕ್ಕಿಂತ ಉತ್ತಮವಾಗಿದೆ. 1986, 1997, 2004, 2008, 2014 ಮತ್ತು 2022ರಲ್ಲಿ ಲಂಕಾ ಏಷ್ಯಾಕಪ್ ಗೆದ್ದಿದೆ. ಆದರೆ ಇನ್ನೂ ಆರು ಬಾರಿ ಫೈನಲ್ ತಲುಪಿದೆ. ಅಂದರೆ ಶ್ರೀಲಂಕಾ ದೇಶವು 12 ಬಾರಿ ಏಷ್ಯಾಕಪ್ ಫೈನಲ್‌ನಲ್ಲಿ ಆಡಿದೆ. ಒಟ್ಟು 15 ಏಷ್ಯಾಕಪ್‌ಗಳಲ್ಲಿ ಮೂರು ಬಾರಿ ಮಾತ್ರ ಶ್ರೀಲಂಕಾ ಫೈನಲ್‌ ಪ್ರವೇಶಿಸಲು ವಿಫಲವಾಗಿತ್ತು. ಅದರಲ್ಲಿ ಒಂದು ಬಾರಿ ತಂಡ ಟೂರ್ನಿಯಲ್ಲಿ ಆಡಿರಲಿಲ್ಲ.
(3 / 6)

ಭಾರತ ತಂಡವು ಒಟ್ಟು 10 ಬಾರಿ ಏಷ್ಯಾಕಪ್ ಫೈನಲ್‌ನಲ್ಲಿ ಆಡಿದೆ. ಅದರಲ್ಲಿ ಏಳು ಬಾರಿ ಗೆದ್ದಿದೆ. ಈ ವಿಷಯದಲ್ಲಿ ಶ್ರೀಲಂಕಾಕ್ಕಿಂತ ಭಾರತದ ದಾಖಲೆಯೇ ಉತ್ತಮವಾಗಿದೆ. ಫೈನಲ್‌ನಲ್ಲಿ ಭಾರತದ ಗೆಲುವಿನ ಪ್ರಮಾಣ ಶೇಕಡಾ 70. ಅತ್ತ ಶ್ರೀಲಂಕಾ 12 ಫೈನಲ್‌ಗಳಲ್ಲಿ ಆರು ಗೆಲುವು ಮತ್ತು ಆರು ಸೋಲುಗಳನ್ನು ಕಂಡಿದೆ. ಹೀಗಾಗಿ ಲಂಕಾದ ಗೆಲುವಿನ ಪ್ರಮಾಣ 50 ಶೇಕಡಾ.
(4 / 6)

ಅತ್ತ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಉತ್ತಮ ಪ್ರದರ್ಶನ ನೀಡಲಿಲ್ಲ. ತಂಡವು ಒಟ್ಟು ಎರಡು ಬಾರಿ ಟ್ರೋಫಿ ಗೆದ್ದಿದೆ. ಐದು ಬಾರಿ ಫೈನಲ್ ತಲುಪಿ ಮೂರು ಬಾರಿ ಸೋತಿದೆ. ತಂಡವು 2000 ಮತ್ತು 2012ರಲ್ಲಿ ಟ್ರೋಫಿ ಗೆದ್ದಿತ್ತು. 1986, 2014 ಮತ್ತು 2022ರಲ್ಲಿ ಫೈನಲ್‌ನಲ್ಲಿ ನಿರಾಸೆ ಅನುಭವಿಸಿತು.
(5 / 6)

ಏಷ್ಯಾಕಪ್‌ನಲ್ಲಿ ಬಾಂಗ್ಲಾದೇಶವು ಮೂರು ಬಾರಿ ಫೈನಲ್‌ಗೆ ತಲುಪಿದೆ. ಆದರೆ ಒಮ್ಮೆಯೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಕಳೆದ ಐದು ಏಷ್ಯಾಕಪ್ ಟೂರ್ನಿಗಳಲ್ಲಿ ತಂಡ ಮೂರು ಬಾರಿ ಫೈನಲ್ ತಲುಪಿರುವುದು ಗಮನಾರ್ಹ. ಬಾಂಗ್ಲಾದೇಶ 2012, 2016 ಮತ್ತು 2018ರಲ್ಲಿ ಫೈನಲ್‌ನಲ್ಲಿ ಸೋತಿತ್ತು. ಅದರಲ್ಲಿ ಎರಡು ಬಾರಿ ಭಾರತದ ವಿರುದ್ಧವೇ  ಸೋಲಿಗೆ ಶರಣಾಗಿದೆ.
(6 / 6)

    ಹಂಚಿಕೊಳ್ಳಲು ಲೇಖನಗಳು