logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಯತ್ನಾಳ್‌ಗೆ ಬಿಜೆಪಿಯಲ್ಲಿ ಉಚ್ಚಾಟನೆ ಹೊಸದೇನೂ ಅಲ್ಲ, ಮೂರನೇ ಬಾರಿಗೆ ಹೊರ ಹಾಕಿದ ಕಮಲ ಪಕ್ಷ; ಆಗ ಯಡಿಯೂರಪ್ಪ ವಿರುದ್ದ, ಈಗ ವಿಜಯೇಂದ್ರ

ಯತ್ನಾಳ್‌ಗೆ ಬಿಜೆಪಿಯಲ್ಲಿ ಉಚ್ಚಾಟನೆ ಹೊಸದೇನೂ ಅಲ್ಲ, ಮೂರನೇ ಬಾರಿಗೆ ಹೊರ ಹಾಕಿದ ಕಮಲ ಪಕ್ಷ; ಆಗ ಯಡಿಯೂರಪ್ಪ ವಿರುದ್ದ, ಈಗ ವಿಜಯೇಂದ್ರ

Published Mar 26, 2025 07:43 PM IST

ಬಿಜೆಪಿಯ ಹಿರಿಯ ನಾಯಕ ಯತ್ನಾಳ್‌ ಅವರು ಬಿಜೆಪಿಯಿಂದ ಮೂರನೇ ಬಾರಿಗೆ ಉಚ್ಚಾಟನೆಗೊಂಡಿದ್ದಾರೆ. ಹಿಂದೆ ಯಡಿಯೂರಪ್ಪ ಅವರ ವಿರುದ್ದ ಸವಾರಿ ಸಾರಿ ಪಕ್ಷದಿಂದ ಹೊರ ಹಾಕಲ್ಪಟ್ಟರೆ, ಈಗ ವಿಜಯೇಂದ್ರ ವಿರುದ್ದ ಸಮರ ಸಾರಿ ಶಿಸ್ತುಕ್ರಮ ಎದುರಿಸಿದ್ದಾರೆ.

  • ಬಿಜೆಪಿಯ ಹಿರಿಯ ನಾಯಕ ಯತ್ನಾಳ್‌ ಅವರು ಬಿಜೆಪಿಯಿಂದ ಮೂರನೇ ಬಾರಿಗೆ ಉಚ್ಚಾಟನೆಗೊಂಡಿದ್ದಾರೆ. ಹಿಂದೆ ಯಡಿಯೂರಪ್ಪ ಅವರ ವಿರುದ್ದ ಸವಾರಿ ಸಾರಿ ಪಕ್ಷದಿಂದ ಹೊರ ಹಾಕಲ್ಪಟ್ಟರೆ, ಈಗ ವಿಜಯೇಂದ್ರ ವಿರುದ್ದ ಸಮರ ಸಾರಿ ಶಿಸ್ತುಕ್ರಮ ಎದುರಿಸಿದ್ದಾರೆ.
ಕರ್ನಾಟಕ ಬಿಜೆಪಿಯಲ್ಲಿ ಫೈರ್‌ ಬ್ರಾಂಡ್‌ ರಾಜಕಾರಣಿ ಎಂದೇ ಹೆಸರಾದ ವಿಜಯಪುರ ಶಾಸಕಬಸನಗೌಡ ಪಾಟೀಲ್‌ ಯತ್ನಾಳ್‌ ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದಾರೆ.
(1 / 7)
ಕರ್ನಾಟಕ ಬಿಜೆಪಿಯಲ್ಲಿ ಫೈರ್‌ ಬ್ರಾಂಡ್‌ ರಾಜಕಾರಣಿ ಎಂದೇ ಹೆಸರಾದ ವಿಜಯಪುರ ಶಾಸಕಬಸನಗೌಡ ಪಾಟೀಲ್‌ ಯತ್ನಾಳ್‌ ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದಾರೆ.
ಬಿಜೆಪಿಯಲ್ಲಿಯೇ ಮೂರೂವರೆ ದಶಕದಿಂದ ಇದ್ದರೂ ಆಗಾಗ ಬಂಡಾಯದ ಸಮರ ಸಾರುತ್ತಲೇ ಇರುವುದರಿಂದ ಪಕ್ಷದಿಂದ ಹೊರ ಹಾಕಲ್ಪಟ್ಟಿದ್ದಾರೆ.
(2 / 7)
ಬಿಜೆಪಿಯಲ್ಲಿಯೇ ಮೂರೂವರೆ ದಶಕದಿಂದ ಇದ್ದರೂ ಆಗಾಗ ಬಂಡಾಯದ ಸಮರ ಸಾರುತ್ತಲೇ ಇರುವುದರಿಂದ ಪಕ್ಷದಿಂದ ಹೊರ ಹಾಕಲ್ಪಟ್ಟಿದ್ದಾರೆ.
ವಿಜಯಪುರ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿರುವ ಯತ್ನಾಳ್‌, ಸಂಸದರಾಗಿ ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದರು. ವಿಧಾನಪರಿಷತ್‌ ಸದಸ್ಯ ಕೂಡ ಆಗಿದ್ದರು.
(3 / 7)
ವಿಜಯಪುರ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿರುವ ಯತ್ನಾಳ್‌, ಸಂಸದರಾಗಿ ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದರು. ವಿಧಾನಪರಿಷತ್‌ ಸದಸ್ಯ ಕೂಡ ಆಗಿದ್ದರು.
ವಿಧಾನಸಭೆ ಚುನಾವಣೆಗೆ ಟಿಕೆಟ್‌ ಸಿಗದೇ ಪಕ್ಷದ ವಿರುದ್ದ ಬಂಡೆದ್ದಿರಿಂದ ಅವರನ್ನು ಮೊದಲ ಬಾರಿಗೆ ಉಚ್ಚಾಟನೆ ಮಾಡಲಾಗಿತ್ತು.
(4 / 7)
ವಿಧಾನಸಭೆ ಚುನಾವಣೆಗೆ ಟಿಕೆಟ್‌ ಸಿಗದೇ ಪಕ್ಷದ ವಿರುದ್ದ ಬಂಡೆದ್ದಿರಿಂದ ಅವರನ್ನು ಮೊದಲ ಬಾರಿಗೆ ಉಚ್ಚಾಟನೆ ಮಾಡಲಾಗಿತ್ತು.
ಜೆಡಿಎಸ್‌ ಸೇರಿ ಮತ್ತೆ ಪಕ್ಷಕ್ಕೆ ಮರಳಿದ ಅವರು ಎರಡನೇ ಬಾರಿ ವಿಧಾನಪರಿಷತ್‌ ಚುನಾವಣೆಗೆ ಬಂಡಾಯವಾಗಿ ಸ್ಪರ್ಧಿಸಿದ್ದಾಗಲೂ ಉಚ್ಚಾಟನೆಗೊಂಡಿದ್ದರು.
(5 / 7)
ಜೆಡಿಎಸ್‌ ಸೇರಿ ಮತ್ತೆ ಪಕ್ಷಕ್ಕೆ ಮರಳಿದ ಅವರು ಎರಡನೇ ಬಾರಿ ವಿಧಾನಪರಿಷತ್‌ ಚುನಾವಣೆಗೆ ಬಂಡಾಯವಾಗಿ ಸ್ಪರ್ಧಿಸಿದ್ದಾಗಲೂ ಉಚ್ಚಾಟನೆಗೊಂಡಿದ್ದರು.
ಏಳು ವರ್ಷದ ಹಿಂದೆ ಮತ್ತೆ ಪಕ್ಷಕ್ಕೆ ಮರಳಿ ಈಗ ಸತತ ಎರಡನೇ ಬಾರಿ ವಿಜಯಪುರ ಕ್ಷೇತ್ರದಿಂದ ವಿಧಾನಸಭೆಯನ್ನು ಯತ್ನಾಳ್‌ ಪ್ರವೇಶಿಸಿದ್ದಾರೆ.
(6 / 7)
ಏಳು ವರ್ಷದ ಹಿಂದೆ ಮತ್ತೆ ಪಕ್ಷಕ್ಕೆ ಮರಳಿ ಈಗ ಸತತ ಎರಡನೇ ಬಾರಿ ವಿಜಯಪುರ ಕ್ಷೇತ್ರದಿಂದ ವಿಧಾನಸಭೆಯನ್ನು ಯತ್ನಾಳ್‌ ಪ್ರವೇಶಿಸಿದ್ದಾರೆ.
ಹಿಂದೆಲ್ಲಾ ಯಡಿಯೂರಪ್ಪ ಅವರ ವಿರುದ್ದ ಬಂಡೆದ್ದ ಯತ್ನಾಳ ಈಗ ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಜತೆ ಸಂಘರ್ಷಕ್ಕೆ ಇಳಿದವರು ಯತ್ನಾಳ್‌. ಕೇಂದ್ರದ ನಾಯಕರನ್ನು ಭೇಟಿ ಮಾಡಿ ವಿವರಣೆ ನೀಡಿದರೂ ಪಕ್ಷ ಅವರನ್ನು ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದೆ.
(7 / 7)
ಹಿಂದೆಲ್ಲಾ ಯಡಿಯೂರಪ್ಪ ಅವರ ವಿರುದ್ದ ಬಂಡೆದ್ದ ಯತ್ನಾಳ ಈಗ ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಜತೆ ಸಂಘರ್ಷಕ್ಕೆ ಇಳಿದವರು ಯತ್ನಾಳ್‌. ಕೇಂದ್ರದ ನಾಯಕರನ್ನು ಭೇಟಿ ...
ಮತ್ತಷ್ಟು ಓದು

    ಹಂಚಿಕೊಳ್ಳಲು ಲೇಖನಗಳು