logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತದ ಮಹಿಳಾ ಕ್ರಿಕೆಟರ್ಸ್​ಗೆ ಶುಭ ಸುದ್ದಿ; ವನಿತೆಯರಿಗೂ ಶುರುವಾಗಲಿದೆ ರಣಜಿ ಟ್ರೋಫಿ ಮಾದರಿಯ ಟೂರ್ನಿ

ಭಾರತದ ಮಹಿಳಾ ಕ್ರಿಕೆಟರ್ಸ್​ಗೆ ಶುಭ ಸುದ್ದಿ; ವನಿತೆಯರಿಗೂ ಶುರುವಾಗಲಿದೆ ರಣಜಿ ಟ್ರೋಫಿ ಮಾದರಿಯ ಟೂರ್ನಿ

Jan 14, 2024 10:39 AM IST

Women Ranji Trophy: ಮಹಿಳಾ ಕ್ರಿಕೆಟ್​ ಬೆಳೆಸುವ ಮತ್ತು ಉತ್ತೇಜಿಸುವ ಸಲುವಾಗಿ ಮಹಿಳೆಯರಿಗೆ ರಣಜಿ ಟ್ರೋಫಿ ಮಾದರಿಯ ಕೆಂಪು ಚೆಂಡಿನ ಟೂರ್ನಿ ಆಯೋಜನೆಗೆ ಬಿಸಿಸಿಐ ಸಿದ್ಧತೆ ನಡೆಸುತ್ತಿದೆ.

  • Women Ranji Trophy: ಮಹಿಳಾ ಕ್ರಿಕೆಟ್​ ಬೆಳೆಸುವ ಮತ್ತು ಉತ್ತೇಜಿಸುವ ಸಲುವಾಗಿ ಮಹಿಳೆಯರಿಗೆ ರಣಜಿ ಟ್ರೋಫಿ ಮಾದರಿಯ ಕೆಂಪು ಚೆಂಡಿನ ಟೂರ್ನಿ ಆಯೋಜನೆಗೆ ಬಿಸಿಸಿಐ ಸಿದ್ಧತೆ ನಡೆಸುತ್ತಿದೆ.
ಇತ್ತೀಚೆಗೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ವಿರುದ್ಧ ನಡೆದ ಏಕೈಕ ಟೆಸ್ಟ್​ ಪಂದ್ಯಗಳಲ್ಲಿ ಅತ್ಯುದ್ಭತ ಪ್ರದರ್ಶನ ನೀಡಿದ ಭಾರತ ವನಿತೆಯರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಕ್ರಿಕೆಟ್ ಪ್ರಿಯರಿಂದಲೂ ಉತ್ತಮ ಬೆಂಬಲವೂ ಸಿಕ್ಕಿದೆ.
(1 / 7)
ಇತ್ತೀಚೆಗೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ವಿರುದ್ಧ ನಡೆದ ಏಕೈಕ ಟೆಸ್ಟ್​ ಪಂದ್ಯಗಳಲ್ಲಿ ಅತ್ಯುದ್ಭತ ಪ್ರದರ್ಶನ ನೀಡಿದ ಭಾರತ ವನಿತೆಯರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಕ್ರಿಕೆಟ್ ಪ್ರಿಯರಿಂದಲೂ ಉತ್ತಮ ಬೆಂಬಲವೂ ಸಿಕ್ಕಿದೆ.(BCCI Women-X)
ಹಾಗಾಗಿ ಮಹಿಳಾ ಕ್ರಿಕೆಟ್​ ಬೆಳೆಸುವ ಮತ್ತು ಉತ್ತೇಜಿಸುವ ಸಲುವಾಗಿ ಮಹಿಳೆಯರಿಗಾಗಿ ರಣಜಿ ಟ್ರೋಫಿ ಮಾದರಿಯ ಕೆಂಪು ಚೆಂಡಿನ ಟೂರ್ನಿ ಆಯೋಜನೆಗೆ ಬಿಸಿಸಿಐ ಸಿದ್ಧತೆ ನಡೆಸುತ್ತಿದೆ. ಮಾಧ್ಯಮಗಳು ವರದಿ ಮಾಡಿದ್ದು, ಖಚಿತ ಮೂಲಗಳನ್ನು ಉಲ್ಲೇಖಿಸಿವೆ.
(2 / 7)
ಹಾಗಾಗಿ ಮಹಿಳಾ ಕ್ರಿಕೆಟ್​ ಬೆಳೆಸುವ ಮತ್ತು ಉತ್ತೇಜಿಸುವ ಸಲುವಾಗಿ ಮಹಿಳೆಯರಿಗಾಗಿ ರಣಜಿ ಟ್ರೋಫಿ ಮಾದರಿಯ ಕೆಂಪು ಚೆಂಡಿನ ಟೂರ್ನಿ ಆಯೋಜನೆಗೆ ಬಿಸಿಸಿಐ ಸಿದ್ಧತೆ ನಡೆಸುತ್ತಿದೆ. ಮಾಧ್ಯಮಗಳು ವರದಿ ಮಾಡಿದ್ದು, ಖಚಿತ ಮೂಲಗಳನ್ನು ಉಲ್ಲೇಖಿಸಿವೆ.(AP)
6 ವರ್ಷಗಳ ಅಂದರೆ 2018ರ ಬಳಿಕ ಮಾರ್ಚ್-ಏಪ್ರಿಲ್​​ನಲ್ಲಿ ಮಹಿಳೆಯರಿಗೆ ಪ್ರಥಮ ದರ್ಜೆ ಕ್ರಿಕೆಟ್​ ಆವೃತ್ತಿಯನ್ನು ಪ್ರಾರಂಭಿಸಲು ಬಿಸಿಸಿಐ ನಿರ್ಧರಿಸಿದೆ. ಫೆಬ್ರವರಿ 22ರಿಂದ ಬೆಂಗಳೂರು ಮತ್ತು ದೆಹಲಿಯಲ್ಲಿ ಮಹಿಳಾ ಪ್ರೀಮಿಯರ್ ಲೀಗ್​ 2ನೇ ಆವೃತ್ತಿ ಆಯೋಜಿಸಲು ಬಿಸಿಸಿಐ ಸಿದ್ಧತೆ ನಡೆಸಿದೆ. ಬಳಿಕ ರಣಜಿ ಟ್ರೋಫಿ ಮಾದರಿ ಟೂರ್ನಿ ಆರಂಭಿಸಲು ಸಿದ್ಧತೆ ನಡೆಸಿದೆ.
(3 / 7)
6 ವರ್ಷಗಳ ಅಂದರೆ 2018ರ ಬಳಿಕ ಮಾರ್ಚ್-ಏಪ್ರಿಲ್​​ನಲ್ಲಿ ಮಹಿಳೆಯರಿಗೆ ಪ್ರಥಮ ದರ್ಜೆ ಕ್ರಿಕೆಟ್​ ಆವೃತ್ತಿಯನ್ನು ಪ್ರಾರಂಭಿಸಲು ಬಿಸಿಸಿಐ ನಿರ್ಧರಿಸಿದೆ. ಫೆಬ್ರವರಿ 22ರಿಂದ ಬೆಂಗಳೂರು ಮತ್ತು ದೆಹಲಿಯಲ್ಲಿ ಮಹಿಳಾ ಪ್ರೀಮಿಯರ್ ಲೀಗ್​ 2ನೇ ಆವೃತ್ತಿ ಆಯೋಜಿಸಲು ಬಿಸಿಸಿಐ ಸಿದ್ಧತೆ ನಡೆಸಿದೆ. ಬಳಿಕ ರಣಜಿ ಟ್ರೋಫಿ ಮಾದರಿ ಟೂರ್ನಿ ಆರಂಭಿಸಲು ಸಿದ್ಧತೆ ನಡೆಸಿದೆ.(AFP)
ಮಹಿಳೆಯರ ರಣಜಿ ಪಂದ್ಯಗಳು 3 ದಿನಕ್ಕೆ ನಡೆಯಲಿವೆ. ಸಮಯದ ಮಿತಿಯಿಂದ ಆರಂಭದಲ್ಲಿ ವಲಯ ಸ್ವರೂಪದಿಂದ ಆರಂಭಿಸಲು ಚಿಂತಿಸುತ್ತಿದ್ದು, ಟೂರ್ನಿ ಮಾರ್ಚ್-ಏಪ್ರಿಲ್​​ನಲ್ಲಿ ಅಂತ್ಯಗೊಳ್ಳಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
(4 / 7)
ಮಹಿಳೆಯರ ರಣಜಿ ಪಂದ್ಯಗಳು 3 ದಿನಕ್ಕೆ ನಡೆಯಲಿವೆ. ಸಮಯದ ಮಿತಿಯಿಂದ ಆರಂಭದಲ್ಲಿ ವಲಯ ಸ್ವರೂಪದಿಂದ ಆರಂಭಿಸಲು ಚಿಂತಿಸುತ್ತಿದ್ದು, ಟೂರ್ನಿ ಮಾರ್ಚ್-ಏಪ್ರಿಲ್​​ನಲ್ಲಿ ಅಂತ್ಯಗೊಳ್ಳಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.(BCCI Women-X)
ಮಹಿಳೆಯರಿಗೆ ಪ್ರಥಮ ದರ್ಜೆ ಕ್ರಿಕೆಟ್​ ಆರಂಭಿಸುವ ಉತ್ತಮ ಸಮಯ ಇದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮಹಿಳಾ ಕ್ರಿಕೆಟ್​​ನಲ್ಲಿ ದೇಶೀಯ ಕ್ರಿಕೆಟ್ ಟೂರ್ನಿ ಬಹಳ ಮುಖ್ಯ ಎಂದು ಭಾರತದ ಮಾಜಿ ಆಟಗಾರ್ತಿ ಡಯಾನಾ ಎಡುಲ್ಜಿ ಹಿಂದೆ ಹೇಳಿದ್ದರು.
(5 / 7)
ಮಹಿಳೆಯರಿಗೆ ಪ್ರಥಮ ದರ್ಜೆ ಕ್ರಿಕೆಟ್​ ಆರಂಭಿಸುವ ಉತ್ತಮ ಸಮಯ ಇದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮಹಿಳಾ ಕ್ರಿಕೆಟ್​​ನಲ್ಲಿ ದೇಶೀಯ ಕ್ರಿಕೆಟ್ ಟೂರ್ನಿ ಬಹಳ ಮುಖ್ಯ ಎಂದು ಭಾರತದ ಮಾಜಿ ಆಟಗಾರ್ತಿ ಡಯಾನಾ ಎಡುಲ್ಜಿ ಹಿಂದೆ ಹೇಳಿದ್ದರು.(BCCI Women-X)
ಮಹಿಳಾ ಕ್ರಿಕೆಟ್​ ಬೆಳೆಸಲು ಮತ್ತು ಕೌಶಲವನ್ನು ಹೆಚ್ಚಿಸಿಕೊಳ್ಳಲು ದೇಶೀಯ ಕ್ರಿಕೆಟ್​ ಬಹಳ ಮುಖ್ಯ. ಮೂರು ಅಥವಾ ನಾಲ್ಕು ದಿನಗಳ ಕಾಲ ಪಂದ್ಯ ಆಯೋಜಿಸುವುದು ಉತ್ತಮ ಎಂದು ಎಡುಲ್ಜಿ ಇಂಡಿಯನ್ ಎಕ್​​ಪ್ರೆಸ್​ಗೆ ತಿಳಿಸಿದ್ದರು. 
(6 / 7)
ಮಹಿಳಾ ಕ್ರಿಕೆಟ್​ ಬೆಳೆಸಲು ಮತ್ತು ಕೌಶಲವನ್ನು ಹೆಚ್ಚಿಸಿಕೊಳ್ಳಲು ದೇಶೀಯ ಕ್ರಿಕೆಟ್​ ಬಹಳ ಮುಖ್ಯ. ಮೂರು ಅಥವಾ ನಾಲ್ಕು ದಿನಗಳ ಕಾಲ ಪಂದ್ಯ ಆಯೋಜಿಸುವುದು ಉತ್ತಮ ಎಂದು ಎಡುಲ್ಜಿ ಇಂಡಿಯನ್ ಎಕ್​​ಪ್ರೆಸ್​ಗೆ ತಿಳಿಸಿದ್ದರು. (BCCI Women-X)
ಈ ದೇಶೀಯ ಕ್ರಿಕೆಟ್​​ನಲ್ಲಿ ಹೆಚ್ಚೆಚ್ಚು ಆಡುವ ಆಟಗಾರ್ತಿಯರು ಮನೋಧರ್ಮ ಬೆಳೆಸಿಕೊಳ್ಳಲಿದ್ದಾರೆ. ಟಿ20 ಕ್ರಿಕೆಟ್​​ನಲ್ಲಿ ಅದಕ್ಕೆ ಅವಕಾಶ ಇರುವುದಿಲ್ಲ ಎಂದು ಎಡುಲ್ಜಿ ತಿಳಿಸಿದ್ದರು.
(7 / 7)
ಈ ದೇಶೀಯ ಕ್ರಿಕೆಟ್​​ನಲ್ಲಿ ಹೆಚ್ಚೆಚ್ಚು ಆಡುವ ಆಟಗಾರ್ತಿಯರು ಮನೋಧರ್ಮ ಬೆಳೆಸಿಕೊಳ್ಳಲಿದ್ದಾರೆ. ಟಿ20 ಕ್ರಿಕೆಟ್​​ನಲ್ಲಿ ಅದಕ್ಕೆ ಅವಕಾಶ ಇರುವುದಿಲ್ಲ ಎಂದು ಎಡುಲ್ಜಿ ತಿಳಿಸಿದ್ದರು.(AFP)

    ಹಂಚಿಕೊಳ್ಳಲು ಲೇಖನಗಳು