logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೂದಲಿನ ಸರ್ವ ಸಮಸ್ಯೆಗೂ ಶುಂಠಿರಸವೇ ಮದ್ದು; ಕೂದಲು ಉದುರುವುದು, ತಲೆಹೊಟ್ಟು ನಿವಾರಣೆಗೆ ಶುಂಠಿಯನ್ನು ಹೀಗೆ ಬಳಸಿ

ಕೂದಲಿನ ಸರ್ವ ಸಮಸ್ಯೆಗೂ ಶುಂಠಿರಸವೇ ಮದ್ದು; ಕೂದಲು ಉದುರುವುದು, ತಲೆಹೊಟ್ಟು ನಿವಾರಣೆಗೆ ಶುಂಠಿಯನ್ನು ಹೀಗೆ ಬಳಸಿ

Feb 06, 2024 03:08 PM IST

Ginger Juice For Hair Fall : ಕೂದಲಿನ ವಿಚಾರಕ್ಕೆ ಬಂದ್ರೆ ತಲೆಹೊಟ್ಟು, ಬಾಲನೆರೆ, ಕೂದಲು ಉದುರುವುದು ಇಂತಹ ಹಲವು ಸಮಸ್ಯೆಗಳು ಕಾಡುವುದು ಸಹಜ. ಇದಕ್ಕಾಗಿ ನೀವು ಚಿಂತಿಸಬೇಕಿಲ್ಲ. ಅಡುಗೆಮನೆಯಲ್ಲಿ ಶುಂಠಿ ಇದ್ರೆ ಸಾಕು ನಿಮ್ಮೆಲ್ಲಾ ಕೂದಲಿನ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದು.

ಕೂದಲು ಉದುರುವುದು ಇತ್ತೀಚಿನ ದಿನಗಳಲ್ಲಿ ಹಲವರು ಎದುರಿಸುತ್ತಿರುವ ಸಮಸ್ಯೆ. ಬೆಳಿಗ್ಗೆ ಎದ್ದಾಗ ದಿಂಬಿನ ಮೇಲೆ, ಮನೆ ತುಂಬಾ ಕೂದಲು ಹಾರಾಡುತ್ತಿರುತ್ತದೆ. ಇದರಿಂದ ಸಿಟ್ಟು, ಬೇಸರ ಕಾಡುವುದು ಸಹಜ. ಅದರಲ್ಲೂ ಕಾಲಗಳ ಬದಲಾವಣೆಯಿಂದ ಕೂದಲು ಉದುರುವುದು ಹೆಚ್ಚುತ್ತದೆ. ಆದರೆ ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೂ ಶುಂಠಿಯೇ ಮದ್ದು. 
(1 / 6)

ಶುಂಠಿ ರಸವು ಕೂದಲಿನ ಬೆಳವಣಿಗೆಯಿಂದ ಆರೈಕೆಗೆ ಬಹಳ ಉಪಯುಕ್ತವಾಗಿದೆ. ತಲೆಹೊಟ್ಟು ಹೋಗಲಾಡಿಸಲು, ಬಾಲನೆರೆ ತಡೆಯಲು ಶುಂಠಿ ರಸವನ್ನು ಬಳಸಬಹುದು. ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶುಂಠಿ ರಸವನ್ನು ಹೇಗೆ ಬಳಸುವುದು ಎಂಬುದನ್ನು ತಿಳಿಯಿರಿ.
(2 / 6)

ತಲೆಹೊಟ್ಟು ನಿವಾರಣೆಗೆ ಶುಂಠಿ ರಸ: ಶುಂಠಿಯ ರಸವು ತಲೆಹೊಟ್ಟಿಗೆ ಮಾತ್ರವಲ್ಲ, ನೆತ್ತಿಯ ತುರಿಕೆಗೂ ಒಳ್ಳೆಯದು. 2 ಚಮಚ ಶುಂಠಿ ರಸವನ್ನು ಮೂರು ಚಮಚ ಎಳ್ಳೆಣ್ಣೆ ಅಥವಾ ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ಇದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ. ಇದನ್ನು ಕೂದಲಿನ ಬುಡಕ್ಕೆ ಹಚ್ಚಿ.  
(3 / 6)

ಕೂದಲು ಉದುರುವ ಸಮಸ್ಯೆಗೂ ಶುಂಠಿ ಉಪಯಕ್ತ. ಇದರಲ್ಲಿರುವ ವಿವಿಧ ರೀತಿಯ ಖನಿಜಗಳು, ಜೀವಸತ್ವಗಳು ಮತ್ತು ಕೊಬ್ಬಿನಾಮ್ಲಗಳು ಕೂದಲಿನ ಬೇರುಗಳನ್ನು ಬಲಪಡಿಸುತ್ತವೆ. ಕೂದಲಿನ ಕಿರುಚೀಲಗಳು ಸದೃಢವಾಗಲು ಇದು ಸಹಾಯ ಮಾಡುತ್ತದೆ. ಕೂದಲು ತೇವಾಂಶ ಕಳೆದುಕೊಂಡರೂ ಮತ್ತೆ ಸುಂದರವಾಗಿ ಕಾಣಲು ಶುಂಠಿ ರಸ ಸಹಕಾರಿ. ಕೂದಲಿನ ಗುಣಮಟ್ಟವನ್ನು ಸುಧಾರಿಸುವ ಮೂಲಕ ಉದ್ದವಾದ, ದಪ್ಪ ಕೂದಲು ಪಡೆಯಲು ಶುಂಠಿ ಪ್ರಯೋಜನಕಾರಿಯಾಗಿದೆ. 
(4 / 6)
ಕೂದಲು ಉದುರುವ ಸಮಸ್ಯೆಗೂ ಶುಂಠಿ ಉಪಯಕ್ತ. ಇದರಲ್ಲಿರುವ ವಿವಿಧ ರೀತಿಯ ಖನಿಜಗಳು, ಜೀವಸತ್ವಗಳು ಮತ್ತು ಕೊಬ್ಬಿನಾಮ್ಲಗಳು ಕೂದಲಿನ ಬೇರುಗಳನ್ನು ಬಲಪಡಿಸುತ್ತವೆ. ಕೂದಲಿನ ಕಿರುಚೀಲಗಳು ಸದೃಢವಾಗಲು ಇದು ಸಹಾಯ ಮಾಡುತ್ತದೆ. ಕೂದಲು ತೇವಾಂಶ ಕಳೆದುಕೊಂಡರೂ ಮತ್ತೆ ಸುಂದರವಾಗಿ ಕಾಣಲು ಶುಂಠಿ ರಸ ಸಹಕಾರಿ. ಕೂದಲಿನ ಗುಣಮಟ್ಟವನ್ನು ಸುಧಾರಿಸುವ ಮೂಲಕ ಉದ್ದವಾದ, ದಪ್ಪ ಕೂದಲು ಪಡೆಯಲು ಶುಂಠಿ ಪ್ರಯೋಜನಕಾರಿಯಾಗಿದೆ. (Freepik)
ಕೂದಲು ಸೀಳುವ ಸಮಸ್ಯೆಗೂ ಶುಂಠಿರಸವನ್ನು ಬಳಸಬಹುದು. ತೆಂಗಿನೆಣ್ಣೆಯೊಂದಿಗೆ ಶುಂಠಿಯ ರಸವನ್ನು ಮಿಶ್ರಣ ಮಾಡಿ ಮತ್ತು 30 ನಿಮಿಷಗಳ ಕಾಲ ಇರಿಸಿ. ನಂತರ, ಅದನ್ನು ಕೂದಲಿಗೆ ಹಚ್ಚಿ, ಒಣಗಿದ ಮೇಲೆ ತಲೆಸ್ನಾನ ಮಾಡಿ. ಇದರಿಂದ ಕೂದಲು ಸೀಳುವ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. 
(5 / 6)

ಆಗಾಗ ತಲೆಸ್ನಾನ ಮಾಡದೇ ಇರುವುದು ಕೂಡ ಕೂದಲಿನ ಸಮಸ್ಯೆಗೆ ಕಾರಣವಾಗಬಹುದು. ಶುಂಠಿ ರಸವು ಕೂದಲಿಗೆ ಕಂಡೀಷನರ್‌ ರೂಪದಲ್ಲೂ ಕೆಲಸ ಮಾಡುತ್ತದೆ. ಈರುಳ್ಳಿ ರಸ ಹಾಗೂ ಶುಂಠಿ ರಸವನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚುವುದರಿಂದ ಕೂದಲು ನಯವಾಗುತ್ತದೆ. ಈರುಳ್ಳಿ ಹಾಗೂ ಶುಂಠಿಯನ್ನು ನುಣ್ಣಗೆ ರುಚ್ಚಿ, ಆ ಮಿಶ್ರಣದ ರಸ ಹಿಂಡಿ ತೆಗೆದು ಅದಕ್ಕೆ ನಿಂಬೆರಸ ಸೇರಿಸಿ, ಕುದಿಸಿ... ಇದನ್ನು ಕೂದಲಿಗೆ ಹಚ್ಚಿ, ರಾತ್ರಿಯಿಡೀ ಹಾಗೆ ಇಟ್ಟು ಬೆಳಿಗ್ಗೆ ಶಾಂಪೂವಿನಿಂದ ತಲೆಸ್ನಾನ ಮಾಡಿ. ಇದರಿಂದ ಕೂದಲು ಉದುರುವುದು, ತಲೆಹೊಟ್ಟು ಸೇರಿದಂತೆ ಹಲವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. 
(6 / 6)

    ಹಂಚಿಕೊಳ್ಳಲು ಲೇಖನಗಳು