logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Beauty Tips: ಗಾಜಿನಂತೆ ಹೊಳೆಯುವ ಅಂದದ ತ್ವಚೆ ನಿಮ್ಮದಾಗಬೇಕೇ; ಇಲ್ಲಿದೆ ಕೊರಿಯನ್‌ ಬ್ಯೂಟಿ ಸೀಕ್ರೆಟ್‌; ಅನುಸರಿಸಿ, ಅಂದ ಹೆಚ್ಚಿಸಿಕೊಳ್ಳಿ

Beauty Tips: ಗಾಜಿನಂತೆ ಹೊಳೆಯುವ ಅಂದದ ತ್ವಚೆ ನಿಮ್ಮದಾಗಬೇಕೇ; ಇಲ್ಲಿದೆ ಕೊರಿಯನ್‌ ಬ್ಯೂಟಿ ಸೀಕ್ರೆಟ್‌; ಅನುಸರಿಸಿ, ಅಂದ ಹೆಚ್ಚಿಸಿಕೊಳ್ಳಿ

Jan 09, 2024 08:09 PM IST

Korean Beauty Secrets: ಕೊರಿಯನ್ನರ ಅಂದವನ್ನು ನೋಡಿದಾಗ ವಾವ್‌, ನಮಗೂ ಇಂತಹ ಸೌಂದರ್ಯ, ಗಾಜಿನಂತೆ ಹೊಳೆಯುವ ತ್ವಚೆ ಯಾಕಿಲ್ಲ ಎಂದು ಅನ್ನಿಸುವುದು ಸಹಜ. ಕೊರಿಯನ್ನರಂತೆ ಹೊಳಪಿನ, ಅಂದದ ತ್ವಚೆ ನಿಮ್ಮದಾಗಬೇಕು ಎಂದರೆ ಈ ಸೌಂದರ್ಯ ಸಲಹೆಗಳನ್ನು ಪಾಲಿಸಿ, ಅಂದ ಹೆಚ್ಚಿಸಿಕೊಳ್ಳಿ.

  • Korean Beauty Secrets: ಕೊರಿಯನ್ನರ ಅಂದವನ್ನು ನೋಡಿದಾಗ ವಾವ್‌, ನಮಗೂ ಇಂತಹ ಸೌಂದರ್ಯ, ಗಾಜಿನಂತೆ ಹೊಳೆಯುವ ತ್ವಚೆ ಯಾಕಿಲ್ಲ ಎಂದು ಅನ್ನಿಸುವುದು ಸಹಜ. ಕೊರಿಯನ್ನರಂತೆ ಹೊಳಪಿನ, ಅಂದದ ತ್ವಚೆ ನಿಮ್ಮದಾಗಬೇಕು ಎಂದರೆ ಈ ಸೌಂದರ್ಯ ಸಲಹೆಗಳನ್ನು ಪಾಲಿಸಿ, ಅಂದ ಹೆಚ್ಚಿಸಿಕೊಳ್ಳಿ.
ವಯಸ್ಸಾದಂತೆ ಚರ್ಮ ಕಳೆಗುಂದುವುದು, ನೆರಿಗೆ ಮೂಡುವುದು, ಸುಕ್ಕು ಕಾಣಿಸುವುದು ಸಹಜ. ವಯಸ್ಸಿನ ಲಕ್ಷಣಗಳು ದೇಹದೊಂದಿಗೆ ಮುಖ, ಚರ್ಮದ ಮೇಲೂ ಕಾಣಿಸಲು ಆರಂಭವಾಗುತ್ತದೆ. ಆದರೆ ಅದನ್ನು ನಿವಾರಿಸಲು ತ್ವಚೆಯ ಆರೈಕೆಯ ಮೇಲೆ ಗಮನ ನೀಡಬೇಕು. 
(1 / 8)

ತ್ವಚೆಯನ್ನು ಸದಾ ಯೌವನದಲ್ಲಿ ಇರುವಂತೆ ಇರಿಸಲು ಕೊರಿಯನ್ನರ ಬ್ಯೂಟಿ ಸಲಹೆಗಳನ್ನು ಅನುಸರಿಸಬಹುದು. ಆ ಮೂಲಕ ಗಾಜಿನಂತೆ ಹೊಳೆಯುವ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು. ಆದರೆ ಈ ಸಲಹೆಗಳನ್ನು ಅನುಸರಿಸಲು ಮರೆಯದಿರಿ. 
(2 / 8)

ನಿಮ್ಮ ದಿನಚರಿಯಲ್ಲಿ ಚರ್ಮದ ಆರೈಕೆಗಾಗಿ ಒಂದಿಷ್ಟು ಸಮಯ ನೀಡಿ. ಚರ್ಮದ ಗುಣಕ್ಕೆ ಅನುಗುಣವಾಗಿ ನಿಯಮಿತವಾಗಿ ಚರ್ಮದ ಶುದ್ಧೀಕರಣ, ಟೋನಿಂಗ್‌, ಎಕ್ಸ್‌ಫೋಲಿಯೇಷನ್‌ ಮಾಡುವುದನ್ನು ಮರೆಯಬೇಡಿ. ರಾತ್ರಿ ಮಗಲುವ ಮುನ್ನ 15 ನಿಮಿಷಗಳ ಕಾಲ ಚರ್ಮದ ಆರೈಕೆಗೆ ಸಮಯ ನೀಡಿ. ವಾರದಲ್ಲಿ ಒಂದೆರಡು ಬಾರಿ ಸ್ಕ್ರಬಿಂಗ್‌ ಮಾಡಿ. 
(3 / 8)

10 ದಿನಗಳವರೆಗೆ ನಿಯಮಿತವಾಗಿ ಸಾಕಷ್ಟು ನೀರು ಕುಡಿಯಲು ಪ್ರಯತ್ನಿಸಿ. ಕೆಲವು ದಿನಗಳ ನಂತರ ನಿಮ್ಮ ಚರ್ಮದಲ್ಲಿ ವ್ಯತ್ಯಾಸವನ್ನು ನೀವು ಗಮನಿಸಬಹುದು.
(4 / 8)

ಕೊರಿಯನ್ನರು ಸ್ಲಿಮ್ ಆಗಿರಲು ಬಯಸುತ್ತಾರೆ. ಅವರು ವ್ಯಾಯಾಮ ಹಾಗೂ ಯೋಗಾಭ್ಯಾಸಗಳಿಗೆ ಹೆಚ್ಚು ಗಮನ ನೀಡುತ್ತಾರೆ. ವ್ಯಾಯಾಮವು ದೇಹಕ್ಕೆ ಮಾತ್ರವಲ್ಲ, ಚರ್ಮಕ್ಕೂ ಒಳ್ಳೆಯದು. ಇದು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ಚರ್ಮದ ಅಂದವು ಹೆಚ್ಚುತ್ತದೆ. 
(5 / 8)

ಸೌಂದರ್ಯವರ್ಧಕಗಳನ್ನು ಖರೀದಿಸುವಾಗ ಯಾವುದೇ ರಾಜಿ ಮಾಡಿಕೊಳ್ಳಬೇಡಿ. ಕಡಿಮೆ ಬೆಲೆ, ಗುಣಮಟ್ಟದ ಉತ್ಪನ್ನಗಳನ್ನು ಬಳಸದೇ ಇರುವುದು ಉತ್ತಮ. ಇದರೊಂದಿಗೆ ನಿಮ್ಮ ಚರ್ಮಕ್ಕೆ ಹೊಂದುತ್ತದೋ ಇಲ್ಲವೋ ಎಂದು ನೋಡಿಕೊಳ್ಳಿ.
(6 / 8)

ಕೊರಿಯನ್ ಸೌಂದರ್ಯ ವ್ಲೋಗರ್‌ಗಳು ಸಾಮಾನ್ಯವಾಗಿ ಈ ನಿರ್ದಿಷ್ಟ ಉತ್ಪನ್ನಗಳನ್ನು ಹೆಚ್ಚು ಬಳಸುತ್ತಾರೆ. ಇವುಗಳಲ್ಲಿ ವಿಟಮಿನ್‌ ಸಿ ಸೀರಮ್‌ಗಳು, ಫೇಸ್‌ಮಾಸ್ಕ್‌, ಪಿಂಪಲ್‌ ಪ್ಯಾಚ್‌ಗಳು, ಗುಣಮಟ್ಟದ ಟೋನರ್‌ಗಳು ಹಾಗೂ ಸ್ಕ್ರಬರ್‌ಗಳು ಸೇರಿವೆ. ಅವುಗಳನ್ನು ನೀವೂ ಬಳಸಬಹುದು. 
(7 / 8)

ಕೊರಿಯನ್ನರು ಸುಂದರವಾದ ಚರ್ಮವನ್ನು ಹೊಂದಲು ಮತ್ತೊಂದು ಕಾರಣ ಅವರ ಆಹಾರ. ಅವರು ಅನ್ನದೊಂದಿಗೆ ವಿವಿಧ ತರಕಾರಿಗಳನ್ನು ಸೇರಿಸಿ ಬೇಯಿಸುತ್ತಾರೆ. ಸಾಕಷ್ಟು ತರಕಾರಿ ಸೇವನೆಯು ವಿಟಮಿನ್‌ ಹಾಗೂ ಉತ್ಕರ್ಷಣ ನಿರೋಧಕಗಳ ಕೊರತೆ ಕಾಡದಂತೆ ಚರ್ಮವನ್ನು ಕಾಪಾಡುತ್ತದೆ. ಅಲ್ಲದೆ ಇದು ತ್ವಚೆಯ ಹೊಳಪು ಹೆಚ್ಚಿಸಲು ಸಹಕಾರಿ. 
(8 / 8)

    ಹಂಚಿಕೊಳ್ಳಲು ಲೇಖನಗಳು