logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bengaluru News: ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ದಂಡ ಪಾವತಿಸಿ; ಮನೆಗೇ ಬಂದು ಬಿಡುತ್ತೆ ಬೆಂಗಳೂರು ಸಂಚಾರ ಪೊಲೀಸರ ನೋಟಿಸ್

Bengaluru News: ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ದಂಡ ಪಾವತಿಸಿ; ಮನೆಗೇ ಬಂದು ಬಿಡುತ್ತೆ ಬೆಂಗಳೂರು ಸಂಚಾರ ಪೊಲೀಸರ ನೋಟಿಸ್

Mar 02, 2024 02:33 PM IST

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇನ್ನು ಸಂಚಾರ ನಿಯಮ ಉಲ್ಲಂಘಿಸಿದರೆ ಮನೆಗೇ ಬಂದು ಬಿಡಲಿದೆ ಬೆಂಗಳೂರು ಸಂಚಾರ ಪೊಲೀಸರ ನೋಟಿಸ್. ಆ ನೋಟಿಸ್‌ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ದಂಡ ಪಾವತಿಸಿದರೆ ಆಯಿತು!

ಬೆಂಗಳೂರು ನಗರ ಸಂಚಾರ ಪೊಲೀಸರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ವ್ಯವಸ್ಥೆಯೊಂದಿಗೆ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಮನೆಗೆ ಹೈಟೆಕ್ ನೋಟಿಸ್ ಕಳುಹಿಸಲಿದ್ದಾರೆ. ಇದು ನಿನ್ನೆ (ಮಾ.1)ಯಿಂದ ಜಾರಿಗೆ ಬಂದಿದೆ.
(1 / 6)

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರು ಇನ್ನು ಎಚ್ಚರದಿಂದ ಇರಬೇಕು. ಕಾರಣ ಇಷ್ಟೇ. ಎಲ್ಲೆಡೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಕ್ಯಾಮೆರಾಗಳಿದ್ದು, ಉಲ್ಲಂಘನೆ ದಾಖಲಾದ ಕೂಡಲೇ ಅದರ ಮಾಹಿತಿಯನ್ನು ಕೇಂದ್ರಕ್ಕೆ ಒದಗಿಸಲಿದೆ. ಅಲ್ಲಿಂದ ದಂಡ ಪಾವತಿಸುವಂತೆ ಸೂಚಿಸಿ ಹೈಟೆಕ್ ನೋಟಿಸ್ ನೇರ ಮನೆಗೇ ಬರಲಿದೆ.
(2 / 6)

ಇನ್‌ಲ್ಯಾಂಡ್ ಲೆಟರ್‌ನಲ್ಲಿ ಈ ಹೈಟೆಕ್ ನೋಟಿಸ್ ಸಂಚಾರ ನಿಯಮ ಉಲ್ಲಂಘಕರ ಮನೆಗೆ ತಲುಪಲಿದ್ದು, ಅದರಲ್ಲಿ ಕ್ಯೂಆರ್ ಕೋಡ್ ಕೂಡ ಇರಲಿದೆ. ಹೀಗಾಗಿ ಮನೆಯಿಂದಲೇ ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡಿ ದಂಡ ಪಾವತಿ ಮಾಡಿ ಎಂಬುದು ಬೆಂಗಳೂರು ಸಂಚಾರ ಪೊಲೀಸರ ಹೊಸ ಮಂತ್ರವಾಗಿದೆ. 
(3 / 6)

ಸುದ್ದಿ ಫಟಾಫಟ್‌ ಅಪ್‌ಡೇಟ್‌ ಆಗುತ್ತೆ, ಖುಷಿ ಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೇ ಓದಿ ಸುಮ್ಮನಾಗಲ್ಲ, ನಿಮ್ಮವರಿಗೂ ಶೇರ್‌ ಮಾಡ್ತೀರಿ. 
(4 / 6)

ಬೆಂಗಳೂರು ಸಂಚಾರ ಪೊಲೀಸರು ಕಳುಹಿಸುವ ನೋಟಿಸ್‌ನಲ್ಲಿ ಉಲ್ಲಂಘನೆ ವಿವರ ಇರುತ್ತದೆ. ಅದರಲ್ಲಿ ನೋಟಿಸ್ ಸಂಖ್ಯೆ, ಉಲ್ಲಂಘನೆಯ ದಿನಾಂಕ, ಸಮಯ, ಸ್ಥಳ ಮತ್ತು ರೀತಿಯ ವಿವರ ಇರುತ್ತದೆ. ಅದರ ಪಕ್ಕದಲ್ಲೇ ಉಲ್ಲಂಘನೆಯ ವೀಕ್ಷಣೆಗೆ ಮತ್ತು ದಂಡ ಪಾವತಿಗೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದಕ್ಕೂ ಅವಕಾಶ ನೀಡಲಾಗಿದೆ. 
(5 / 6)

ಈ ನೋಟಿಸ್‌ನ ಕೆಳಭಾಗದಲ್ಲಿ ಮೋಟಾರು ವಾಹನ ಕಾಯ್ದೆಯ ಯಾವ ನಿಯಮ ಉಲ್ಲಂಘನೆಯಾಗಿದೆ ಎಂಬುದು ನಮೂದಾಗಿರುತ್ತದೆ. ಅದೇ ರೀತಿ, ಪಾವತಿಸಬೇಕಾದ ದಂಡದ ಮೊತ್ತ, ನೋಟಿಸ್ ದಿನಾಂಕ, ವಾಹನ ನೋಂದಣಿ ಸಂಖ್ಯೆ ಕೂಡ ಇರುತ್ತದೆ. 
(6 / 6)

    ಹಂಚಿಕೊಳ್ಳಲು ಲೇಖನಗಳು