Karavali Utsava: ಬೆಂಗಳೂರಲ್ಲಿ ಕಡಲೂರ ಕಲರವ; ಹುಲಿಕುಣಿತ, ಯಕ್ಷಗಾನ, ಆಹಾ ಫಿಶ್‌ಫ್ರೈ ಪುಳಿಮುಂಚಿ ಚಿಕನ್ ಸುಕ್ಕ, ಇಲ್ಲಿದೆ ಚಿತ್ರನೋಟ
Feb 26, 2024 12:41 PM IST
ಬೆಂಗಳೂರಿನ ಜೆಪಿ ನಗರದ ಆರ್‌ಬಿಐ ಲೇಔಟ್ ಬಿಬಿಎಂಪಿ ಮೈದಾನದಲ್ಲಿ ನಿನ್ನೆ (ಫೆ.25) ಕರಾವಳಿ ಉತ್ಸವದ ಸೊಬಗು ಕಳೆಗಟ್ಟಿತ್ತು. ಹುಲಿ ವೇಷ ಕುಣಿತ, ಯಕ್ಷಗಾನ, ಕೋಳಿ ಅಂಕ, ಹೋಳಿ ಕುಣಿತ, ಕಂಗೋಲು ಕುಣಿತದಂತಹ ಕರಾವಳಿ ಕಲಾ ಸಂಸ್ಕೃತಿಯ ಜೊತೆಗೆ ವಿವಿಧ ಆಟೋಟ ಸ್ಪರ್ಧೆಗಳು ಗಮನ ಸೆಳೆದವು. ಕರಾವಳಿ ಭಾಗದ ಆಹಾರ ವೈವಿಧ್ಯಗಳು ನೆರೆದವರ ನಾಲಿಗೆ ಚಪಲ ತಣಿಸಿದವು.
- ಬೆಂಗಳೂರಿನ ಜೆಪಿ ನಗರದ ಆರ್‌ಬಿಐ ಲೇಔಟ್ ಬಿಬಿಎಂಪಿ ಮೈದಾನದಲ್ಲಿ ನಿನ್ನೆ (ಫೆ.25) ಕರಾವಳಿ ಉತ್ಸವದ ಸೊಬಗು ಕಳೆಗಟ್ಟಿತ್ತು. ಹುಲಿ ವೇಷ ಕುಣಿತ, ಯಕ್ಷಗಾನ, ಕೋಳಿ ಅಂಕ, ಹೋಳಿ ಕುಣಿತ, ಕಂಗೋಲು ಕುಣಿತದಂತಹ ಕರಾವಳಿ ಕಲಾ ಸಂಸ್ಕೃತಿಯ ಜೊತೆಗೆ ವಿವಿಧ ಆಟೋಟ ಸ್ಪರ್ಧೆಗಳು ಗಮನ ಸೆಳೆದವು. ಕರಾವಳಿ ಭಾಗದ ಆಹಾರ ವೈವಿಧ್ಯಗಳು ನೆರೆದವರ ನಾಲಿಗೆ ಚಪಲ ತಣಿಸಿದವು.