logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ʻಹೆತ್ತ ಮಕ್ಕಳನ್ನ ಸಾಕಲಿಲ್ಲ, ಫೀಸು ಕಟ್ಟಿ ಓದಿಸಲಿಲ್ಲʼ; ಅಪ್ಪನ ಗಂಭೀರ ಆರೋಪಗಳಿಗೆ ಚೈತ್ರಾ ಕುಂದಾಪುರ ಪ್ರತ್ಯುತ್ತರ

ʻಹೆತ್ತ ಮಕ್ಕಳನ್ನ ಸಾಕಲಿಲ್ಲ, ಫೀಸು ಕಟ್ಟಿ ಓದಿಸಲಿಲ್ಲʼ; ಅಪ್ಪನ ಗಂಭೀರ ಆರೋಪಗಳಿಗೆ ಚೈತ್ರಾ ಕುಂದಾಪುರ ಪ್ರತ್ಯುತ್ತರ

Published May 15, 2025 06:03 PM IST

ಚೈತ್ರಾ ಕುಂದಾಪುರ ಬಗ್ಗೆ ಅವರ ತಂದೆ ಬಾಲಕೃಷ್ಣ ನಾಯ್ಕ್‌ ಸಾಕಷ್ಟು ಆರೋಪ ಮಾಡಿದ್ದಾರೆ. "ಈ ಪಾಪಿಗೆ ನಾನು ಯಾವತ್ತೂ ಕ್ಷಮೆ ಕೊಡುವುದಿಲ್ಲ. ಅವಳು ಕ್ರಿಮಿ ಇದ್ದ ಹಾಗೆ. ದೇಶಕ್ಕೆ ಮಾರಕ. ನನಗೆ ಒಂದು ತುತ್ತು ಅನ್ನ ಹಾಕುತ್ತಿಲ್ಲ. ಕೋಟಿ ಕೋಟಿ ಹಣವನ್ನೂ ವಂಚಿಸಿದ್ದಾಳೆʼ ಎಂದೂ ಆರೋಪಿದ್ದಾರೆ. ಅಪ್ಪನ ಈ ಆರೋಪಗಳಿಗೆ ಅವರೇ ಸೋಷಿಯಲ್‌ ಮೀಡಿಯಾದಲ್ಲಿ ಉತ್ತರ ನೀಡಿದ್ದಾರೆ.

ಚೈತ್ರಾ ಕುಂದಾಪುರ ಬಗ್ಗೆ ಅವರ ತಂದೆ ಬಾಲಕೃಷ್ಣ ನಾಯ್ಕ್‌ ಸಾಕಷ್ಟು ಆರೋಪ ಮಾಡಿದ್ದಾರೆ. "ಈ ಪಾಪಿಗೆ ನಾನು ಯಾವತ್ತೂ ಕ್ಷಮೆ ಕೊಡುವುದಿಲ್ಲ. ಅವಳು ಕ್ರಿಮಿ ಇದ್ದ ಹಾಗೆ. ದೇಶಕ್ಕೆ ಮಾರಕ. ನನಗೆ ಒಂದು ತುತ್ತು ಅನ್ನ ಹಾಕುತ್ತಿಲ್ಲ. ಕೋಟಿ ಕೋಟಿ ಹಣವನ್ನೂ ವಂಚಿಸಿದ್ದಾಳೆʼ ಎಂದೂ ಆರೋಪಿದ್ದಾರೆ. ಅಪ್ಪನ ಈ ಆರೋಪಗಳಿಗೆ ಅವರೇ ಸೋಷಿಯಲ್‌ ಮೀಡಿಯಾದಲ್ಲಿ ಉತ್ತರ ನೀಡಿದ್ದಾರೆ.
ಚೈತ್ರಾ ಕುಂದಾಪುರ ಅವರ ತಂದೆ ಬಾಲಕೃಷ್ಣ ನಾಯ್ಕ್‌, ಮಗಳ ಬಗ್ಗೆ ಸರಣಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. "ಗೋವಿಂದ ಪೂಜಾರಿ ಹಗರಣದಲ್ಲಿ ಕೋಟಿ ಕೋಟಿ ಹಣ ಹೊಡೆದಿದ್ದಾಳೆ. ಆ ಹಣವನ್ನು ಡಿವೈಡ್‌ ಮಾಡಿ, ಕುಟುಂಬದವರ ಹೆಸರಿಗೆ, ಪಡ್ಡೆ ಹುಡುಗರ ಹೆಸರಲ್ಲಿ ಇಡಿಸಿದ್ದಾಳೆ. ಅದೇ ಡಿಪಾಸಿಟ್‌ ಹಣದ ಮೇಲೆ ಸಾಲ ಪಡೆದು, ಆ ಸಾಲದಿಂದ ಬರುವ ಬಡ್ಡಿಯಲ್ಲಿ ವಂಚನೆ ಮಾಡಿ ತಿಂತಿದ್ದಾಳೆ" ಎಂದಿದ್ದಾರೆ.
(1 / 6)
ಚೈತ್ರಾ ಕುಂದಾಪುರ ಅವರ ತಂದೆ ಬಾಲಕೃಷ್ಣ ನಾಯ್ಕ್‌, ಮಗಳ ಬಗ್ಗೆ ಸರಣಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. "ಗೋವಿಂದ ಪೂಜಾರಿ ಹಗರಣದಲ್ಲಿ ಕೋಟಿ ಕೋಟಿ ಹಣ ಹೊಡೆದಿದ್ದಾ...
ಮತ್ತಷ್ಟು ಓದು
"ದೇಶಕ್ಕೆ ಇವಳು ಮಾದಕ. ಇವಳು ನನ್ನ ಮಗಳು ಅಂತ ಹೇಳೋಕೆ ನನಗೆ ನಾಚಿಕೆ ಆಗುತ್ತಿದೆ. ಇಂಥವರಿಗೆ ಜನ ಸಪೋರ್ಟ್‌ ಮಾಡ್ತಾರಲ್ಲ ಅದೇ ದುರಂತ. ಸುಳ್ಳು ಹೇಳಿಕೆಗೂ ಮನ್ನಣೆ ಕೊಡಬಾರದು. ಸೈನಿಕರಿಗೆ ದುಡ್ಡು ಕೊಡ್ತೀನಿ ಎಂದಿದ್ದಾಳೆ. ಸ್ವಂತ ದುಡ್ಡು, ದುಡಿದ ದುಡ್ಡು ಕೊಟ್ಟಿದ್ದರೆ ನನಗೆ ಸಂತೋಷವಿತ್ತು. ಯಾರದೋ ತಲೆ ಒಡೆದು ಕೊಟ್ಟರೆ ಅದು ಸರೀನಾ?"
(2 / 6)
"ದೇಶಕ್ಕೆ ಇವಳು ಮಾದಕ. ಇವಳು ನನ್ನ ಮಗಳು ಅಂತ ಹೇಳೋಕೆ ನನಗೆ ನಾಚಿಕೆ ಆಗುತ್ತಿದೆ. ಇಂಥವರಿಗೆ ಜನ ಸಪೋರ್ಟ್‌ ಮಾಡ್ತಾರಲ್ಲ ಅದೇ ದುರಂತ. ಸುಳ್ಳು ಹೇಳಿಕೆಗೂ ಮನ್ನಣೆ ...
ಮತ್ತಷ್ಟು ಓದು
"ಈ ಮದುವೆಗೆ ನನ್ನ ಒಪ್ಪಿಗೆ ಇಲ್ಲ. ಯಾಕೆಂದ್ರ ಅವನೂ ಕಳ್ಳ. ಇವಳು ಕಳ್ಳಿ. ಕಳ್ಳರು ಕಳ್ಳರೇ ಮದುವೆ ಆಗಿದ್ದಾರೆ. ಯಾರ ತಲೆ ಹೊಡೆಯಬೇಕು ಅನ್ನೋದೆ ಇವರ ಉದ್ದೇಶ. ಯಾವ ಕುಟುಂಬದಲ್ಲಿಯೂ ಇಂಥ ಹೆಣ್ಣು ಮಗಳು ಹುಟ್ಟಬಾರದು. ಇವಳು ಹೇಳುವುದೆಲ್ಲವೂ ಸುಳ್ಳೆ. ನಾಚಿಕೆ ಬಿಟ್ಟ ಹೆಣ್ಣಿಗೆ, ತಂದೆಗೆ ಒಂದು ತುತ್ತು ಅನ್ನ ಹಾಕುವ ಯೋಗ್ಯತೆಯೂ ಇಲ್ಲ" ಎಂದೂ ಬಾಲಕೃಷ್ಣ ಆರೋಪ ಮಾಡಿದ್ದಾರೆ.
(3 / 6)
"ಈ ಮದುವೆಗೆ ನನ್ನ ಒಪ್ಪಿಗೆ ಇಲ್ಲ. ಯಾಕೆಂದ್ರ ಅವನೂ ಕಳ್ಳ. ಇವಳು ಕಳ್ಳಿ. ಕಳ್ಳರು ಕಳ್ಳರೇ ಮದುವೆ ಆಗಿದ್ದಾರೆ. ಯಾರ ತಲೆ ಹೊಡೆಯಬೇಕು ಅನ್ನೋದೆ ಇವರ ಉದ್ದೇಶ. ಯಾವ ...
ಮತ್ತಷ್ಟು ಓದು
ಇದೀಗ ಅಪ್ಪನ ಸರಣಿ ಆರೋಪಗಳಿಗೆ ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿಕ್ರಿಯೆ ನೋಡಿರುವ ಚೈತ್ರಾ ಕುಂದಾಪುರ, ಅಪ್ಪನ ಬಗ್ಗೆ ಕೊಂಚ ಕಟುವಾಗಿಯೇ ಮಾತನಾಡಿದ್ದಾರೆ.
(4 / 6)
ಇದೀಗ ಅಪ್ಪನ ಸರಣಿ ಆರೋಪಗಳಿಗೆ ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿಕ್ರಿಯೆ ನೋಡಿರುವ ಚೈತ್ರಾ ಕುಂದಾಪುರ, ಅಪ್ಪನ ಬಗ್ಗೆ ಕೊಂಚ ಕಟುವಾಗಿಯೇ ಮಾತನಾಡಿದ್ದಾರೆ.
"ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು. ಎಂತಹ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು. ಎರಡು ಕ್ವಾಟರ್‌ ನಾನು ಕೊಟ್ರೆ ನನ್ನ ಮಕ್ಕಳು ದೇವರು ಅನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗುತ್ತಾರೆ..." ಎಂದು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ.
(5 / 6)
"ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು. ಎಂತಹ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು. ಎರಡು ಕ್ವಾಟರ್‌ ನಾನು ಕೊಟ್ರೆ ನನ್ನ ಮಕ್ಕಳು ದೇವರು ಅನ್ನು...
ಮತ್ತಷ್ಟು ಓದು
"ಹೆತ್ತ ಮಕ್ಕಳನ್ನ ಸಾಕಲಿಲ್ಲ, ಫೀಸು ಕಟ್ಟಿ ಓದಿಸಲಿಲ್ಲ, ಹೆಣ್ಣುಮಕ್ಕಳ ಜವಾಬ್ದಾರಿ ಹೊತ್ತು ಮದುವೆಯೂ ಮಾಡಲಿಲ್ಲ.. ಕಟ್ಟಿಕೊಂಡ ಹೆಂಡತಿಗೆ ಹೊಡೆದು ಚಿತ್ರ ಹಿಂಸೆ ಮಾಡಿದ್ದು ಬಿಟ್ರೆ ಬೇರೆ ಏನೂ ಇಲ್ಲಾ. ಎಲ್ಲಾ ಮುಗಿದ ಮೇಲೆ ಅಪವಾದ ಹಾಕೋಕೆ ಮಾತ್ರ ತಂದೆ ಎನ್ನುವ ಹೆಸರು... ವಾವ್" ಎಂದಿದ್ದಾರೆ.
(6 / 6)
"ಹೆತ್ತ ಮಕ್ಕಳನ್ನ ಸಾಕಲಿಲ್ಲ, ಫೀಸು ಕಟ್ಟಿ ಓದಿಸಲಿಲ್ಲ, ಹೆಣ್ಣುಮಕ್ಕಳ ಜವಾಬ್ದಾರಿ ಹೊತ್ತು ಮದುವೆಯೂ ಮಾಡಲಿಲ್ಲ.. ಕಟ್ಟಿಕೊಂಡ ಹೆಂಡತಿಗೆ ಹೊಡೆದು ಚಿತ್ರ ಹಿಂಸೆ ಮ...
ಮತ್ತಷ್ಟು ಓದು

    ಹಂಚಿಕೊಳ್ಳಲು ಲೇಖನಗಳು