logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bjp Vijay Sankalpa Yatra: ಬಿಜೆಪಿ ರಥ ಹೇಗಿದೆ? ಇಂಟೀರಿಯರ್ಸ್‌ ಮತ್ತು ಎಕ್ಸ್‌ಟೀರಿಯರ್‌ ಲುಕ್‌; ಇಲ್ಲಿದೆ ಫೋಟೋಸ್‌ ಮತ್ತು ಫೀಚರ್ಸ್‌ ವಿವರ

BJP vijay sankalpa yatra: ಬಿಜೆಪಿ ರಥ ಹೇಗಿದೆ? ಇಂಟೀರಿಯರ್ಸ್‌ ಮತ್ತು ಎಕ್ಸ್‌ಟೀರಿಯರ್‌ ಲುಕ್‌; ಇಲ್ಲಿದೆ ಫೋಟೋಸ್‌ ಮತ್ತು ಫೀಚರ್ಸ್‌ ವಿವರ

Feb 27, 2023 06:49 PM IST

BJP vijay sankalpa yatra: ಬಿಜೆಪಿಯ 4 ರಥಗಳು ಒಟ್ಟು 4 ಕೋಟಿ ಜನರನ್ನು ತಲುಪುವ ಉದ್ದೇಶ ಹೊಂದಿದೆ. ಪಕ್ಷ ಬಹುಮತ ಪಡೆಯಲು ಇದು ಪೂರಕ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ತಿಳಿಸಿದರು. ಇದರ ಜತೆಗೆ ಈ ರಥಗಳ ವಿಶೇಷತೆಯನ್ನು ಅವರು ವಿವರಿಸಿದ್ದು ಹೀಗೆ..

ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಮುನ್ನ ರಾಜ್ಯದ 224 ಕ್ಷೇತ್ರ ತಲುಪುವುದಕ್ಕೆ ಬಿಜೆಪಿಯ 4 ರಥಗಳು ಸಿದ್ಧವಾಗಿವೆ. ಹೊಸೂರು ರಸ್ತೆ ಬಳಿಯ ಲಾಲ್‍ಬಾಗ್ ಹತ್ತಿರ ಇರುವ ಎಸ್.ಎಂ. ಕಣ್ಣಪ್ಪ ಆಟೋಮೊಬೈಲ್ಸ್”ನಲ್ಲಿ ಇಂದು ಬಿಜೆಪಿ ವಿಜಯಸಂಕಲ್ಪ ಯಾತ್ರೆಯ 4 ರಥಗಳ ವೀಕ್ಷಣೆಯ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.‌ ರವಿ ಕುಮಾರ್‌, ಈ ರಥಗಳ ವಿಶೇಷತೆಗಳ ವಿವರ ನೀಡಿದರು. 
(1 / 4)

ಪ್ರಕಾಶ್ ರೋಡ್‍ಲೈನ್ಸ್‍ನವರು 4 ರಥಗಳ ಲೈಲ್ಯಾಂಡ್ ಚಾಸಿಯನ್ನು ನಿರ್ಮಿಸುತ್ತಿದ್ದಾರೆ. ಪ್ರತಿ ರಥವು 30 ಅಡಿ ಉದ್ದ, 8 ಅಡಿ ಅಗಲದ್ದಾಗಿದೆ. ರಥದಲ್ಲಿ ನಿಂತು ಭಾಷಣ ಮಾಡಲು ಸುಂದರ ಕೆನೊಪಿ ರಚಿಸಿದ್ದೇವೆ. 4 ಮೊಬೈಲ್ ಚಾರ್ಜರ್‍ಗಳು, ರೋಡ್ ಷೋಗೆ ಪೂರಕ ಮೈಕ್ ವ್ಯವಸ್ಥೆ ಇದ್ದು, ಸುಮಾರು ಒಂದು ಕಿಮೀ ದೂರಕ್ಕೆ ಕೇಳಿಸುವಷ್ಟು ಪ್ರಬಲವಾಗಿದೆ. ಕೆನೊಪಿ ಮೇಲೆ 4 ಬಿಗ್ ಹಾರನ್ ಇದೆ ಎಂದು ರವಿ ಕುಮಾರ್‌ ವಿವರಿಸಿದರು.
(2 / 4)

ಬಸ್ ಒಳಗಡೆ 7 ಸೀಟುಗಳಿವೆ. ಹೋಂ ಥಿಯೇಟರ್ ಇದೆ. 32 ಇಂಚಿನ ಟಿವಿ, ಚಾಲಕನ ಜತೆ ಮಾತನಾಡಲು ಇಂಟರ್‌ಕಾಮ್‌ ವ್ಯವಸ್ಥೆ ಇದೆ. ಜನರೇಟರ್ ಇದೆ. ಆಡಿಯೋ ಸಿಸ್ಟಂ, ಕ್ಯಾಮೆರಾ, ಹೊರಮುಖವಾಗಿ ಎಲ್‍ಇಡಿ ಡಿಸ್‍ಪ್ಲೇ ಇದೆ ಎಂದು ರವಿ ಕುಮಾರ್‌ ವಿವರ ನೀಡಿದರು.
(3 / 4)

ಹರೀಶ್ ಮತ್ತು ಗಣೇಶ್ ಅವರು ರಥ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಚುನಾವಣಾ ಗೀತೆ, ಭಾಷಣ ಕೇಳಿಸುವುದಲ್ಲದೆ, 5 ಸಾವಿರ ಜನರಿಗೆ ಬಸ್‍ನಿಂದ ಭಾಷಣ ಮಾಡುವ ವ್ಯವಸ್ಥೆ ಒಳಗೊಂಡಿದೆ. ಯಾತ್ರೆ ಯಶಸ್ವಿಗೆ ಮುಂಚಿತವಾಗಿಯೇ 4 ಸಪೋರ್ಟ್ ವಾಹನ ತೆರಳಲಿದೆ. ಅದು ಕೂಡ ಬ್ರ್ಯಾಂಡೆಡ್ ಆಗಿದೆ. ಮಾಧ್ಯಮದವರು ವಿಡಿಯೋ, ಫೋಟೋ ತೆಗೆಯಲು ಅನುಕೂಲ ಮಾಡಿಕೊಡಲು 4 ಮೀಡಿಯಾ ವೆಹಿಕಲ್ ಇರುತ್ತದೆ ಎಂದು ರವಿ ಕುಮಾರ್‌ ವಿವರಿಸಿದರು.
(4 / 4)

    ಹಂಚಿಕೊಳ್ಳಲು ಲೇಖನಗಳು