logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Stock Market: ಷೇರು ಹೂಡಿಕೆದಾರರೇ ಗಮನಿಸಿ, ಜನವರಿಯಲ್ಲಿ ಶೇ 50ಕ್ಕಿಂತ ಹೆಚ್ಚು ಲಾಭ ಗಳಿಸಿದ ಷೇರುಗಳ ವಿವರ ಇಲ್ಲಿದೆ

Stock Market: ಷೇರು ಹೂಡಿಕೆದಾರರೇ ಗಮನಿಸಿ, ಜನವರಿಯಲ್ಲಿ ಶೇ 50ಕ್ಕಿಂತ ಹೆಚ್ಚು ಲಾಭ ಗಳಿಸಿದ ಷೇರುಗಳ ವಿವರ ಇಲ್ಲಿದೆ

Jan 24, 2024 11:33 AM IST

2024ರ ಆರಂಭದಿಂದಲೂ, ಭಾರತದ ಷೇರುಪೇಟೆಯಲ್ಲಿ ಏರಿಳಿತ ಸಾಮಾನ್ಯವಾಗಿದೆ. ಒಂದೆಡೆ ಸಾರ್ವಕಾಲಿಕ ಎತ್ತರವನ್ನು ತಲುಪುತ್ತಿದ್ದರೆ, ಇನ್ನೊಂದೆಡೆ ಪಾತಾಳಕ್ಕೆ ಬೀಳುತ್ತಿದೆ. ಈ ಏರಿಳಿತಗಳ ಹೊರತಾಗಿಯೂ, ಈ 6 ಷೇರುಗಳು ಈ ಜನವರಿಯಲ್ಲಿ ಇದುವರೆಗೆ ಶೇ 50 ಕ್ಕಿಂತ ಹೆಚ್ಚು ಲಾಭ ಗಳಿಸಿವೆ. ಆ ಕಂಪನಿಗಳ ವಿವರ ಇಲ್ಲಿದೆ.

Salasar Techno Engineering: ಸಲಾಸರ್ ಟೆಕ್ನೋ ಎಂಜಿನಿಯರಿಂಗ್ ಕಂಪನಿ ಷೇರುಗಳು ಕಳೆದ ವರ್ಷ ಡಿಸೆಂಬರ್‌ನಲ್ಲಿ ಶೇ 31 ಹಾಗೂ ನವೆಂಬರ್‌ನಲ್ಲಿ ಶೇ 11.3ರಷ್ಟು ಗಳಿಕೆ ಕಂಡಿದ್ದವು. ಈ ವರ್ಷ ಇಲ್ಲಿಯವರೆಗೆ ಸುಮಾರು ಶೇ 64 ರಷ್ಟು ಏರಿಕೆಯಾಗಿದೆ. ಕಳೆದ ವರ್ಷದಲ್ಲಿ ಶೇ 89 ಪ್ರತಿಶತದಷ್ಟು ಮುಂದುವರೆದಿದೆ. ಜನವರಿ 23, 2024 ರಂದು ತನ್ನ ದಾಖಲೆಯ ಎತ್ತರ ಅಂದರೆ ರೂ. 112.40 ಕ್ಕೆ ತಲುಪಿದೆ. ಸಲಾಸರ್ ಟೆಕ್ನೋ ಇಂಜಿನಿಯರಿಂಗ್ ಉಕ್ಕಿನ ಉತ್ಪನ್ನಗಳನ್ನು ತಯಾರಿಸುವ ಕಂಪನಿಯಾಗಿದೆ.
(1 / 6)
Salasar Techno Engineering: ಸಲಾಸರ್ ಟೆಕ್ನೋ ಎಂಜಿನಿಯರಿಂಗ್ ಕಂಪನಿ ಷೇರುಗಳು ಕಳೆದ ವರ್ಷ ಡಿಸೆಂಬರ್‌ನಲ್ಲಿ ಶೇ 31 ಹಾಗೂ ನವೆಂಬರ್‌ನಲ್ಲಿ ಶೇ 11.3ರಷ್ಟು ಗಳಿಕೆ ಕಂಡಿದ್ದವು. ಈ ವರ್ಷ ಇಲ್ಲಿಯವರೆಗೆ ಸುಮಾರು ಶೇ 64 ರಷ್ಟು ಏರಿಕೆಯಾಗಿದೆ. ಕಳೆದ ವರ್ಷದಲ್ಲಿ ಶೇ 89 ಪ್ರತಿಶತದಷ್ಟು ಮುಂದುವರೆದಿದೆ. ಜನವರಿ 23, 2024 ರಂದು ತನ್ನ ದಾಖಲೆಯ ಎತ್ತರ ಅಂದರೆ ರೂ. 112.40 ಕ್ಕೆ ತಲುಪಿದೆ. ಸಲಾಸರ್ ಟೆಕ್ನೋ ಇಂಜಿನಿಯರಿಂಗ್ ಉಕ್ಕಿನ ಉತ್ಪನ್ನಗಳನ್ನು ತಯಾರಿಸುವ ಕಂಪನಿಯಾಗಿದೆ.(AP)
Global Surfaces: ಕಳೆದ ವರ್ಷ ಡಿಸೆಂಬರ್‌ನಲ್ಲಿ ಗ್ಲೋಬಲ್ ಸರ್ಫೇಸಸ್‌ ಷೇರುಗಳು ಶೇ 12.5 ಕುಸಿದವು. ಆದರೆ ಈ ವರ್ಷ ಇಲ್ಲಿಯವರೆಗೆ ಸ್ಟಾಕ್ ಶೇ 63ರಷ್ಟು ಗಳಿಕೆ ಕಂಡಿವೆ. ಜನವರಿ 20, 2024 ರಂದು ಕಂಪನಿಯ ಷೇರು ಮೌಲ್ಯ ರೂ. 321, ಗ್ಲೋಬಲ್ ಸರ್ಫೇಸಸ್ ಲಿಮಿಟೆಡ್ ನೈಸರ್ಗಿಕ ಕಲ್ಲುಗಳ ಗಣಿಗಾರಿಕೆ ಮತ್ತು ರಫ್ತಿನಂತಹ ಕೆಲಸದಲ್ಲಿ ತೊಡಗಿಕೊಂಡಿದೆ
(2 / 6)

IRFC: ಡಿಸೆಂಬರ್‌ನಲ್ಲಿ ಈ ಕಂಪನಿಯ ಷೇರು ಶೇ 12.5 ​​ಕುಸಿಯಿತು. ಈ ರೈಲ್ವೇ ಸ್ಟಾಕ್ ಜನವರಿ 2024ರಲ್ಲಿ ಶೇ 63 ಕ್ಕಿಂತ ಹೆಚ್ಚು ಗಳಿಸಿದೆ. ಜನವರಿ 23, 2024 ರಂದು ಸ್ಟಾಕ್ ತನ್ನ ದಾಖಲೆಯ ಎತ್ತರವನ್ನು ರೂ. 192.80 ಮುಟ್ಟಿದೆ. ಮಾರ್ಚ್ 28, 2023 ರಂದು, ಈ ಷೇರು ಮೌಲ್ಯವು ರೂ. 25.40ಕ್ಕೆ ತಲುಪಿತ್ತು. ಅಂದರೆ 52 ವಾರಗಳಲ್ಲೇ ಅತಿ ಕನಿಷ್ಠ ಮಟ್ಟಕ್ಕೆ ತಲುಪಿತ್ತು. ಇದೀಗ ಇದರ ಷೇರು ಮೌಲ್ಯ ಮತ್ತೆ ಪುಟಿದೆದ್ದಿದೆ. ಇಲ್ಲಿಯವರೆಗೆ ಶೇ 65ರಷ್ಟು ಹೆಚ್ಚಾಗಿದೆ. ಈ ಕಂಪನಿಯು ರೈಲ್ವೆ ಯೋಜನೆಗಳಿಗೆ ಹಣಕಾಸು ಒದಗಿಸುತ್ತದೆ. ಕಳೆದ ವಾರ ಅದರ ಮಾರುಕಟ್ಟೆ ಬಂಡವಾಳೀಕರಣವು ಮೊದಲ ಬಾರಿಗೆ ರೂ. 2 ಲಕ್ಷ ಕೋಟಿ ದಾಟಿದೆ. 
(3 / 6)

RVNL: ಡಿಸೆಂಬರ್‌ನಲ್ಲಿ ಆರ್‌ವಿಎನ್‌ಎಲ್‌ (ರೈಲ್ ವಿಕಾಸ್ ನಿಗಮ್ ಲಿಮಿಟೆಡ್) ಷೇರು ಶೇ 10.5 ಗಳಿಸಿತು. ಈ ಜನವರಿಯಲ್ಲಿ ಇಲ್ಲಿಯವರೆಗೆ ರೈಲ್ವೆ ಸ್ಟಾಕ್ ಶೇ 59 ಗಳಿಸಿದೆ. ಕಳೆದ 1 ವರ್ಷದಲ್ಲಿ ಇದು ಶೇ 317 ಕ್ಕಿಂತ ಹೆಚ್ಚು ಗಳಿಸಿದೆ. ಜನವರಿ 23, 2024 ರಂದು ಸ್ಟಾಕ್ ತನ್ನ ದಾಖಲೆಯ ಎತ್ತರವನ್ನು ರೂ. 345.50 ಮುಟ್ಟಿದೆ. ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ರೈಲು ಮೂಲಸೌಕರ್ಯ ಯೋಜನೆಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ.
(4 / 6)

Oracle Financial Services: ಒರಾಕಲ್ ಫೈನಾನ್ಷಿಯಲ್ ಸರ್ವಿಸಸ್ ಕಳೆದ ಡಿಸೆಂಬರ್‌ನಲ್ಲಿ ಕೇವಲ ಶೇ 5 ಮತ್ತು ನವೆಂಬರ್‌ನಲ್ಲಿ ಶೇ 3.4 ರಷ್ಟು ಮಾತ್ರ ಲಾಭಗಳಿಸಿತ್ತು. ಈ ವರ್ಷ ಇಲ್ಲಿಯವರೆಗೆ ಈ ಕಂಪನಿಯ ಷೇರುಗಳು ಶೇ 54 ಕ್ಕಿಂತ ಹೆಚ್ಚಾಗಿದೆ. ಕಳೆದ 1 ವರ್ಷದಲ್ಲಿ, ಈ ಸ್ಟಾಕ್ ಶೇ 120 ಕ್ಕಿಂತ ಹೆಚ್ಚು ಗಳಿಸಿದೆ. ಜನವರಿ 19, 2024 ರಂದು ಸ್ಟಾಕ್ ತನ್ನ ದಾಖಲೆಯ ಎತ್ತರವನ್ನು ರೂ. 7,173.40 ಮುಟ್ಟಿದೆ. ಒರಾಕಲ್ ಫೈನಾನ್ಷಿಯಲ್ ಸರ್ವಿಸಸ್ ಒಂದು ಸಾಫ್ಟ್‌ವೇರ್ ಕಂಪನಿಯಾಗಿದೆ.
(5 / 6)

Kamdhenu: ಡಿಸೆಂಬರ್‌ನಲ್ಲಿ ಕಾಮಧೇನು ಶೇ 27ರಷ್ಟು ಲಾಭ ದಾಖಲಿಸಿದೆ. ಈ ವರ್ಷ ಇಲ್ಲಿಯವರೆಗಿನ ಒಟ್ಟು ಲಾಭ ಶೇ 55. ಕಳೆದ 1 ವರ್ಷದಲ್ಲಿ, ಈ ಷೇರು ಶೇ 40.5 ಗಳಿಸಿದೆ. ಜನವರಿ 23, 2024 ರಂದು ಸ್ಟಾಕ್ ತನ್ನ ದಾಖಲೆಯ ಗಳಿಕೆ ರೂ. 620.05ಕ್ಕೆ ತಲುಪಿದೆ. ಕಾಮಧೇನು ಲಿಮಿಟೆಡ್ ಥರ್ಮೋ ಮೆಕ್ಯಾನಿಕಲ್ ಟ್ರೀಟ್‌ಮೆಂಟ್ (TMT) ಬಾರ್‌ಗಳು, ಸ್ಟ್ರಕ್ಚರಲ್ ಸ್ಟೀಲ್, ಪೇಂಟ್‌ಗಳು ಮತ್ತು ಸಂಬಂಧಿತ ಉತ್ಪನ್ನಗಳ ತಯಾರಿಕೆ, ಮಾರುಕಟ್ಟೆ, ಬ್ರ್ಯಾಂಡಿಂಗ್ ಮತ್ತು ವಿತರಣೆಯಲ್ಲಿ KAMDHENU ಬ್ರಾಂಡ್ ಹೆಸರಿನಲ್ಲಿ ತೊಡಗಿಸಿಕೊಂಡಿದೆ.
(6 / 6)
Kamdhenu: ಡಿಸೆಂಬರ್‌ನಲ್ಲಿ ಕಾಮಧೇನು ಶೇ 27ರಷ್ಟು ಲಾಭ ದಾಖಲಿಸಿದೆ. ಈ ವರ್ಷ ಇಲ್ಲಿಯವರೆಗಿನ ಒಟ್ಟು ಲಾಭ ಶೇ 55. ಕಳೆದ 1 ವರ್ಷದಲ್ಲಿ, ಈ ಷೇರು ಶೇ 40.5 ಗಳಿಸಿದೆ. ಜನವರಿ 23, 2024 ರಂದು ಸ್ಟಾಕ್ ತನ್ನ ದಾಖಲೆಯ ಗಳಿಕೆ ರೂ. 620.05ಕ್ಕೆ ತಲುಪಿದೆ. ಕಾಮಧೇನು ಲಿಮಿಟೆಡ್ ಥರ್ಮೋ ಮೆಕ್ಯಾನಿಕಲ್ ಟ್ರೀಟ್‌ಮೆಂಟ್ (TMT) ಬಾರ್‌ಗಳು, ಸ್ಟ್ರಕ್ಚರಲ್ ಸ್ಟೀಲ್, ಪೇಂಟ್‌ಗಳು ಮತ್ತು ಸಂಬಂಧಿತ ಉತ್ಪನ್ನಗಳ ತಯಾರಿಕೆ, ಮಾರುಕಟ್ಟೆ, ಬ್ರ್ಯಾಂಡಿಂಗ್ ಮತ್ತು ವಿತರಣೆಯಲ್ಲಿ KAMDHENU ಬ್ರಾಂಡ್ ಹೆಸರಿನಲ್ಲಿ ತೊಡಗಿಸಿಕೊಂಡಿದೆ.(Pixabay)

    ಹಂಚಿಕೊಳ್ಳಲು ಲೇಖನಗಳು