logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಷೇರುಪೇಟೆಯಲ್ಲಿ ಮಾರಾಟದ ಭರಾಟೆ ಕರಗಿದ ಕೆನರಾ ಬ್ಯಾಂಕ್ ಷೇರು ಮೌಲ್ಯ, ವಿಭಜನೆಯ ನಂತರದ ವಹಿವಾಟಿನಲ್ಲಿ ಒಂದೇ ದಿನ ಶೇ 4 ರಷ್ಟು ಕುಸಿತ

ಷೇರುಪೇಟೆಯಲ್ಲಿ ಮಾರಾಟದ ಭರಾಟೆ ಕರಗಿದ ಕೆನರಾ ಬ್ಯಾಂಕ್ ಷೇರು ಮೌಲ್ಯ, ವಿಭಜನೆಯ ನಂತರದ ವಹಿವಾಟಿನಲ್ಲಿ ಒಂದೇ ದಿನ ಶೇ 4 ರಷ್ಟು ಕುಸಿತ

May 16, 2024 05:47 PM IST

ಮುಂಬಯಿ ಷೇರುಪೇಟೆಯಲ್ಲಿ ನಿನ್ನೆ, ಇಂದು ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್ ಷೇರು ದರ (Canara Bank Share Price) ದ್ದೇ ಕಾರುಬಾರು. ಷೇರುಪೇಟೆಯಲ್ಲಿ ಮಾರಾಟದ ಭರಾಟೆ ಕರಗಿದ ಕೆನರಾ ಬ್ಯಾಂಕ್ ಷೇರು ಮೌಲ್ಯ. ವಿಭಜನೆಯ ನಂತರದ ವಹಿವಾಟಿನಲ್ಲಿ ಒಂದೇ ದಿನ ಶೇ 4 ರಷ್ಟು ಕುಸಿತ ಕಂಡಿದ್ದು, ಇದರ ವಿವರ ಇಲ್ಲಿದೆ.

ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ನ ಷೇರು ವಿಭಜನೆಯಾದ ಕಾರಣ ಒಂದು ಷೇರು ಇದ್ದವರ ಬಳಿ 5 ಷೇರುಗಳಾಗಿದ್ದವು. ಇದು ನಿನ್ನೆ (ಮೇ 15) ಅನ್ವಯವಾಗಿದ್ದು, ಕೆನರಾ ಬ್ಯಾಂಕ್ ಷೇರು ದರ (Canara Bank Share Price) ಶೇಕಡ 5 ಏರಿಕೆಯಾಗಿತ್ತು. ಆದರೆ, ಇಂದು ಮಾರುಕಟ್ಟೆಯ ನೆಗೆಟಿವ್ ಸೆಂಟಿಮೆಂಟ್ ಕಾರಣ ಕೆನರಾ ಬ್ಯಾಂಕ್ ಷೇರುಗಳು ಮಾರಾಟ ಹೆಚ್ಚಾಗಿದ್ದವು. 
(1 / 8)

ಮುಂಬಯಿ ಷೇರುಪೇಟೆಯಲ್ಲಿ ನಿನ್ನೆ (ಮೇ 15) 119 ರೂಪಾಯಿ ತನಕ ಹೋಗಿದ್ದ ಕೆನರಾ ಬ್ಯಾಂಕ್ ಷೇರು ದರ (Canara Bank Share Price) ಇಂದು (ಮೇ 16) ಶೇಕಡ 4.41 ಇಳಿಕೆಯಾಗಿ 113.75 ರೂಪಾಯಿ ಆಗಿದೆ.  ನಿನ್ನೆ (ಮೇ 15)  ಷೇರುಪೇಟೆ ವಹಿವಾಟು ಶುರುವಾದಾಗ ಕೆನರಾ ಬ್ಯಾಂಕ್ ಷೇರು ದರ 115.8 ರೂಪಾಯಿಯಲ್ಲಿ ವಹಿವಾಟು ಶುರುಮಾಡಿತ್ತು. ಇಂಟ್ರಾ ಡೇ ವಹಿವಾಟಿನಲ್ಲಿ 119.60 ರೂಪಾಯಿ ಗರಿಷ್ಠ ಮಟ್ಟ ಮತ್ತು 115.8 ರೂಪಾಯಿ ಕನಿಷ್ಠ ಮಟ್ಟದಲ್ಲಿ ವಹಿವಾಟು ನಡೆಸಿ ಗಮನಸೆಳೆದಿತ್ತು. 
(2 / 8)

ಕೆನರಾ ಬ್ಯಾಂಕ್ ಷೇರು ದರ (Canara Bank Share Price) ತನ್ನ 52 ವಾರಗಳ ಅವಧಿಯ ಗರಿಷ್ಠ ಮಟ್ಟ 119.60 ರೂಪಾಯಿ ಮತ್ತು ಕನಿಷ್ಠ ಮಟ್ಟ 58.26 ರೂಪಾಯಿ ವಹಿವಾಟಿನೊಂದಿಗೆ ನಿನ್ನೆ 21,588.15 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯ ಹೊಂದಿತ್ತು. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ನಿನ್ನೆ 25,27,693 ಷೇರುಗಳ ವಹಿವಾಟು ನಡೆಯಿತು.
(3 / 8)

ಕೆನರಾ ಬ್ಯಾಂಕ್ ಷೇರು ದರ (Canara Bank Share Price) ದ ಸಿಂಪಲ್ ಮೂವಿಂಗ್ ಎವರೇಜ್‌ ಅಥವಾ ಸರಳ ಚಲನ ಸರಾಸರಿ ಗಮನಿಸುವುದಾದರೆ, 5 ದಿನಗಳಲ್ಲಿ ಅದರ ದರ 110.69 ರೂಪಾಯಿ, 10 ದಿನಗಳ ಅವಧಿಯಲ್ಲಿ 116.23, 20 ದಿನಗಳ ಅವಧಿಯಲ್ಲಿ 118.05, 50 ದಿನಗಳಲ್ಲಿ 116.88, 100 ದಿನಗಳಲ್ಲಿ 107.73, 300 ದಿನಗಳಲ್ಲಿ 90.62 ದಾಖಲಾಗಿರುವುದು ಕಂಡುಬಂದಿದೆ.
(4 / 8)

ಮುಂಬಯಿ ಷೇರುಪೇಟೆಯಲ್ಲಿ ಇಂದು (ಮೇ 16) ವಹಿವಾಟು ಗಮನಿಸುವಾಗ ಕೆನರಾ ಬ್ಯಾಂಕ್ ಷೇರುಗಳ ವಹಿವಾಟು (ಮಾರಾಟ, ಖರೀದಿ) ಮಧ್ಯಾಹ್ನ 2 ಗಂಟೆ ಸುಮಾರಿಗೆ ನಿನ್ನೆಗೆ ಹೋಲಿಸಿದರೆ ಶೇಕಡ 51.49 ಹೆಚ್ಚಾಗಿತ್ತು. ಆ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಷೇರು ದರ (Canara Bank Share Price) 113.2 ರೂಪಾಯಿ ಇತ್ತು. ಅಂದರೆ ಶೇ 4.87 ರಷ್ಟು ಕಡಿಮೆ ಇತ್ತು. 
(5 / 8)

ಕೆನರಾ ಬ್ಯಾಂಕ್‌ನ ಷೇರು ಮುಖ ಬೆಲೆ (Canara Bank Share Face Value) 10 ರೂಪಾಯಿ ಇತ್ತು. ನಿನ್ನೆ ಇದು 5 ಆಗಿ ವಿಭಜನೆಯಾಗಿರುವ ಕಾರಣ ಈಗ ಕೆನರಾ ಬ್ಯಾಂಕ್‌ನ ಷೇರು ಮುಖ ಬೆಲೆ 2 ರೂಪಾಯಿ ಆಗಿದೆ.  ಎಂಎಸ್‌ಸಿಐ ಇಂಡೆಕ್ಸ್‌ಗೆ ಸೇರಿಸಲ್ಪಡುತ್ತಿರುವ 13 ಷೇರುಗಳ ಪೈಕಿ ಕೆನರಾಬ್ಯಾಂಕ್ ಷೇರು ಕೂಡ ಒಂದಾಗಿದ್ದು,  ಮೇ 31 ರಿಂದ ಇದು ಅನ್ವಯವಾಗಲಿದೆ.
(6 / 8)

ಕೆನರಾ ಬ್ಯಾಂಕ್ ಆಡಳಿತ ಮಂಡಳಿ ಈಕ್ವಿಟಿ ಷೇರುಗಳ ವಿಭಜನೆಯ ಮೂಲಕ ಬಂಡವಾಳ ಹೆಚ್ಚಿಸಲು ತೀರ್ಮಾನಿಸಿತ್ತು. ಚಿಲ್ಲರೆ ಹೂಡಿಕೆದಾರರ ಜಾಲ ವಿಸ್ತರಣೆ ಮತ್ತು ಅವರಿಗೆ ಷೇರುಗಳು ಹೆಚ್ಚು ಲಭ್ಯವಾಗುವಂತೆ ಮಾಡುವುದಕ್ಕಾಗಿ ಈ ತೀರ್ಮಾನವನ್ನು ತೆಗೆದುಕೊಂಡಿತ್ತು. 2024ರ ಮಾರ್ಚ್‌ ತಿಂಗಳಿಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಬ್ಯಾಂಕಿನ ನಿವ್ವಳ ಲಾಭ ಶೇಕಡ 18 ಹೆಚ್ಚಾಗಿದೆ. 2024 ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕೆನರಾ ಬ್ಯಾಂಕ್ 3,174 ಕೋಟಿ ಲಾಭ ಗಳಿಸಿತ್ತು. ಈ ಬಾರಿ 3,757 ಕೋಟಿ ರೂಪಾಯಿ ಲಾಭ ಗಳಿಸಿದೆ. 
(7 / 8)

ಷೇರುದಾರರಿಗೆ ಬ್ಯಾಂಕಿನ ಆಡಳಿತ ಮಂಡಳಿಯುವ 2023-24ನೇ ಸಾಲಿಗೆ ಅನ್ವಯವಾಗುವಂತೆ ಶೇಕಡ 161 ಅಂದರೆ ಪ್ರತಿ ಷೇರಿಗೆ 16.10 ರೂಪಾಯಿ ಡಿವಿಡೆಂಡ್ ‍ಘೋಷಿಸಿತ್ತು. ಕೆನರಾ ಬ್ಯಾಂಕ್‌ನಲ್ಲಿ ಭಾರತ ಸರ್ಕಾರ ಶೇಕಡ 63, ಸಾರ್ವಜನಿಕರು ಶೇಕಡ 37 ಪಾಲುದಾರಿಕೆ ಹೊಂದಿದ್ದಾರೆ.  ಕೆನರಾ ಬ್ಯಾಂಕ್ ಷೇರುಗಳು ಕಳೆದ ಒಂದು ವರ್ಷದ ಅವಧಿಯಲ್ಲಿ ಶೇಕಡ 92 ರಿಟರ್ನ್ಸ್ ಒದಗಿಸಿದೆ. ಅಂದರೆ 100 ರೂಪಾಯಿ ಇದ್ದ ಹೂಡಿಕೆ ಹಣವನ್ನು 192 ಮಾಡಿ ಕೊಟ್ಟಿದೆ. ಪ್ರಸಕ್ತ ವರ್ಷ ಈ ವರೆಗೆ ಶೇಕಡ 33 ಲಾಭ ಗಳಿಸಿಕೊಟ್ಟಿದೆ ಎಂದು ವರದಿಗಳು ಹೇಳಿವೆ.
(8 / 8)

    ಹಂಚಿಕೊಳ್ಳಲು ಲೇಖನಗಳು