logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Chandrayaan 3: ಚಂದ್ರಯಾನ 3; ಚಂದ್ರನ ಸನಿಹದಲ್ಲಿ ವಿಕ್ರಮ್ ಲ್ಯಾಂಡರ್; ಫೋಟೋಸ್

Chandrayaan 3: ಚಂದ್ರಯಾನ 3; ಚಂದ್ರನ ಸನಿಹದಲ್ಲಿ ವಿಕ್ರಮ್ ಲ್ಯಾಂಡರ್; ಫೋಟೋಸ್

Jan 09, 2024 07:30 PM IST

ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಉಡಾವಣೆ ಮಾಡಿದ್ದ ಚಂದ್ರಯಾನ 3 ಮಿಷನ್ ತನ್ನ ಪ್ರಮುಖ ಮೈಲಿಗಲ್ಲಿನ ಸಮೀಪಕ್ಕೆ ಬಂದಿದೆ. ವಿಕ್ರಮ್ ಲ್ಯಾಂಡರ್ ಆಗಸ್ಟ್ 23ರ ಬುಧವಾರ ಚಂದ್ರನ ಮೇಲೆ ಇಳಿಯಲು ತಯಾರಿ ನಡೆಸುತ್ತಿದ್ದರೆ, ಇಸ್ರೋ ಅಂತಿಮ ಡಿ-ಬೂಸ್ಟಿಂಗ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಉಡಾವಣೆ ಮಾಡಿದ್ದ ಚಂದ್ರಯಾನ 3 ಮಿಷನ್ ತನ್ನ ಪ್ರಮುಖ ಮೈಲಿಗಲ್ಲಿನ ಸಮೀಪಕ್ಕೆ ಬಂದಿದೆ. ವಿಕ್ರಮ್ ಲ್ಯಾಂಡರ್ ಆಗಸ್ಟ್ 23ರ ಬುಧವಾರ ಚಂದ್ರನ ಮೇಲೆ ಇಳಿಯಲು ತಯಾರಿ ನಡೆಸುತ್ತಿದ್ದರೆ, ಇಸ್ರೋ ಅಂತಿಮ ಡಿ-ಬೂಸ್ಟಿಂಗ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ವಿಕರ್ಮ್ ಲ್ಯಾಂಡರ್ ಡಿ-ಬೂಸ್ಟಿಂಗ್‌ನೊಂದಿಗೆ ಕಕ್ಷೆಯನ್ನು ಕಡಿಮೆ ಮಾಡುತ್ತಿದೆ. ಅಂತಿಮ ಡಿ-ಬೂಸ್ಟಿಂಗ್ ನಂತರ ಪ್ರಕ್ರಿಯೆಯ ನಂತರ ಲ್ಯಾಂಡರ್ 25km x 134km ಕಕ್ಷೆಯನ್ನು ಪ್ರವೇಶಿಸಿದೆ. ವಿಕ್ರಮ್ ಲ್ಯಾಂಡರ್ ಇಲ್ಲಿಂದ ಸಾಫ್ಟ್ ಲ್ಯಾಂಡಿಂಗ್ ಪ್ರಯತ್ನ ಮಾಡಲಿದೆ. 
(1 / 5)
ವಿಕರ್ಮ್ ಲ್ಯಾಂಡರ್ ಡಿ-ಬೂಸ್ಟಿಂಗ್‌ನೊಂದಿಗೆ ಕಕ್ಷೆಯನ್ನು ಕಡಿಮೆ ಮಾಡುತ್ತಿದೆ. ಅಂತಿಮ ಡಿ-ಬೂಸ್ಟಿಂಗ್ ನಂತರ ಪ್ರಕ್ರಿಯೆಯ ನಂತರ ಲ್ಯಾಂಡರ್ 25km x 134km ಕಕ್ಷೆಯನ್ನು ಪ್ರವೇಶಿಸಿದೆ. ವಿಕ್ರಮ್ ಲ್ಯಾಂಡರ್ ಇಲ್ಲಿಂದ ಸಾಫ್ಟ್ ಲ್ಯಾಂಡಿಂಗ್ ಪ್ರಯತ್ನ ಮಾಡಲಿದೆ. (PTI)
ಲ್ಯಾಂಡಿಂಗ್ ವೇಳೆ ವಿಫಲವಾಗಿದ್ದ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ವಿನ್ಯಾಸವನ್ನೇ ಈ ಬಾರಿಯೂ ಬಳಸಲಾಗಿದೆ ಎಂದು ಭಾರತೀಯ ಬಾಹ್ಯಕಾಶ ಸಂಶೋಧನೆ ಸಂಸ್ಥೆ ಹೇಳಿದೆ. ಆದರೆ ಈ ಬಾರಿ ವಿಫಲವಾಗದ ರೀತಿಯಲ್ಲಿ ಮಿಷನ್‌ ಅನ್ನು ಸಿದ್ದಪಡಿಸಿರುವುದಾಗಿ ಸ್ಪಷ್ಟಪಡಿಸಿದೆ. 
(2 / 5)
ಲ್ಯಾಂಡಿಂಗ್ ವೇಳೆ ವಿಫಲವಾಗಿದ್ದ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ವಿನ್ಯಾಸವನ್ನೇ ಈ ಬಾರಿಯೂ ಬಳಸಲಾಗಿದೆ ಎಂದು ಭಾರತೀಯ ಬಾಹ್ಯಕಾಶ ಸಂಶೋಧನೆ ಸಂಸ್ಥೆ ಹೇಳಿದೆ. ಆದರೆ ಈ ಬಾರಿ ವಿಫಲವಾಗದ ರೀತಿಯಲ್ಲಿ ಮಿಷನ್‌ ಅನ್ನು ಸಿದ್ದಪಡಿಸಿರುವುದಾಗಿ ಸ್ಪಷ್ಟಪಡಿಸಿದೆ. (PTI)
ಚಂದ್ರಯಾನ್ 3 ಮಿಷನ್ ಯಶಸ್ವಿಯಾದರೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್‌ನಲ್ಲಿ ಭಾರತ ಇತಿಹಾಸ ನಿರ್ಮಿಸಲಾಗಿದೆ. ಅಲ್ಲದೆ, ಈ ಸಾಧನೆ ಮಾಡಿದ ನಾಲ್ಕೇ ದೇಶ ಎಂಬ ದಾಖಲೆಯನ್ನು ಬರೆಯಲಿದೆ. ಅಮೆರಿಕ, ರಷ್ಯಾ ಹಾಗೂ ಚೀನಾ ಈಗಾಗಲೇ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಗಿವೆ.
(3 / 5)
ಚಂದ್ರಯಾನ್ 3 ಮಿಷನ್ ಯಶಸ್ವಿಯಾದರೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್‌ನಲ್ಲಿ ಭಾರತ ಇತಿಹಾಸ ನಿರ್ಮಿಸಲಾಗಿದೆ. ಅಲ್ಲದೆ, ಈ ಸಾಧನೆ ಮಾಡಿದ ನಾಲ್ಕೇ ದೇಶ ಎಂಬ ದಾಖಲೆಯನ್ನು ಬರೆಯಲಿದೆ. ಅಮೆರಿಕ, ರಷ್ಯಾ ಹಾಗೂ ಚೀನಾ ಈಗಾಗಲೇ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಗಿವೆ.(ISRO)
ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆದ ನಂತರ ವಿಕ್ರಮ್ ಲ್ಯಾಂಡರ್‌ನಿಂದ ಪ್ರಗ್ಯಾನ್ ರೋವರ್ ಹೊರ ಬರುತ್ತದೆ. ಇದು ಚಂದ್ರನ ಮೇಲ್ಮೈಯಲ್ಲಿ 14 ದಿನಗಳವರೆಗೆ ಇರುತ್ತದೆ. ಮೇಲ್ಮೈ ಉದ್ದಕ್ಕೂ ನೀರಿನ ಕುರುಹಗಳನ್ನು ಪತ್ತೆಹಚ್ಚುವ ಕೆಲಸ ಮಾಡುತ್ತದೆ.
(4 / 5)
ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆದ ನಂತರ ವಿಕ್ರಮ್ ಲ್ಯಾಂಡರ್‌ನಿಂದ ಪ್ರಗ್ಯಾನ್ ರೋವರ್ ಹೊರ ಬರುತ್ತದೆ. ಇದು ಚಂದ್ರನ ಮೇಲ್ಮೈಯಲ್ಲಿ 14 ದಿನಗಳವರೆಗೆ ಇರುತ್ತದೆ. ಮೇಲ್ಮೈ ಉದ್ದಕ್ಕೂ ನೀರಿನ ಕುರುಹಗಳನ್ನು ಪತ್ತೆಹಚ್ಚುವ ಕೆಲಸ ಮಾಡುತ್ತದೆ.( REUTERS)
ಜುಲೈ 14 ರಂದು ಭಾರತೀಯ ಬಾಹ್ಯಕಾಶ ಸಂಸ್ಥೆ-ಇಸ್ರೋ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಚಂದ್ರಯಾನ-3 ಅನ್ನು ಉಡಾವಣೆ ಮಾಡಿತ್ತು. ಆಗಸ್ಟ್ 5 ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು. ಆಗಸ್ಟ್ 23 ರಂದು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. 
(5 / 5)
ಜುಲೈ 14 ರಂದು ಭಾರತೀಯ ಬಾಹ್ಯಕಾಶ ಸಂಸ್ಥೆ-ಇಸ್ರೋ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಚಂದ್ರಯಾನ-3 ಅನ್ನು ಉಡಾವಣೆ ಮಾಡಿತ್ತು. ಆಗಸ್ಟ್ 5 ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು. ಆಗಸ್ಟ್ 23 ರಂದು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. (HT_PRINT)

    ಹಂಚಿಕೊಳ್ಳಲು ಲೇಖನಗಳು