logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rahul Gandhi: ಕರ್ನಾಟಕ ಚುನಾವಣೆ: ಕೂಡಲಸಂಗಮದಲ್ಲಿ 'ಕೈ' ನಾಯಕ ರಾಹುಲ್ ಗಾಂಧಿ; ಬಸವಣ್ಣ ಪ್ರತಿಮೆಗೆ ನಮನ, ಸಂಗಮನಾಥ ದೇವರಿಗೆ ವಿಶೇಷ ಪೂಜೆ

Rahul Gandhi: ಕರ್ನಾಟಕ ಚುನಾವಣೆ: ಕೂಡಲಸಂಗಮದಲ್ಲಿ 'ಕೈ' ನಾಯಕ ರಾಹುಲ್ ಗಾಂಧಿ; ಬಸವಣ್ಣ ಪ್ರತಿಮೆಗೆ ನಮನ, ಸಂಗಮನಾಥ ದೇವರಿಗೆ ವಿಶೇಷ ಪೂಜೆ

Apr 23, 2023 04:50 PM IST

ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ಭಾಗವಹಿಸಿ ಬಸವಣ್ಣನ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಇದಕ್ಕೂ ಮುನ್ನ ಅವರು ಐಕ್ಯ ಸ್ಥಳ ಹಾಗೂ ಸಂಗಮನಾಥನ ದರ್ಶನ ಪಡೆದರು.

ಬಸವಣ್ಣ ಅವರ ಐಕ್ಯ ಸ್ಥಳ ಹಾಗೂ ಸಂಗಮನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
(1 / 10)
ಬಸವಣ್ಣ ಅವರ ಐಕ್ಯ ಸ್ಥಳ ಹಾಗೂ ಸಂಗಮನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ರಾಹುಲ್ ಗಾಂಧಿ ಅವರು ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಈ ವೇಳೆ ಎಂಬಿ ಪಾಟೀಲ್, ಕೆಸಿ ವೇಣುಗೋಪಾಲ್ ಇದ್ದರು.
(2 / 10)

ಐಕ್ಯ ಸ್ಥಳ ಹಾಗೂ ಸಂಗಮನಾಥ ದೇವಾಲಯದಲ್ಲಿ ವಿಶೇಷ ಪೂಜೆ ಬಳಿಕ ರಾಹುಲ್ ಗಾಂಧಿ ಅವರು ಬಸವಣ್ಣ ಜಯಂತಿಯ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(3 / 10)

ತ್ರಿವೇಣಿ ಸಂಗಮದಲ್ಲಿರುವ ಐಕ್ಯ ಸ್ಥಳ ರಾಹುಲ್ ಗಾಂಧಿ ಅವರು ಬಸವಣ್ಣ ಅವರ ಆಚಾರ, ವಿಚಾರ ಹಾಗೂ ಬದಲಾವಣೆಗಳ ಬಗ್ಗೆ ಮಾತನಾಡಿದರು.
(4 / 10)

ಸ್ವಾಮೀಜಿಗಳು ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದರು.
(5 / 10)
ಸ್ವಾಮೀಜಿಗಳು ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದರು.
ಎಂಬಿ ಪಾಟೀಲ್ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ರಾಹುಲ್ ಗಾಂಧಿ ಅವರಿಗೆ ಸಾಥ್ ನೀಡಿದರು.
(6 / 10)

ಬಸವಣ್ಣನವರು ನಮಗೆ ಯಾವತ್ತೂ ಹೆದರಬೇಡಿ, ಸತ್ಯದ ಮಾರ್ಗದಲ್ಲಿ ಸಾಗಿ, ಎಲ್ಲರನ್ನು ಗೌರವಿಸಿ ಎಂದು ಮಾರ್ಗದರ್ಶನ ನೀಡಿದ್ದಾರೆ. ಈ ವಿಚಾರವಾಗಿ ಅನೇಕರು ಮಾತನಾಡುತ್ತಾರೆ. ಆದರೆ ಕೆಲವರು ಮಾತ್ರ ಅದನ್ನು ಪಾಲಿಸುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
(7 / 10)

ಸಮಾಜದ ಮುಂದೆ ಸತ್ಯ ನುಡಿಯುವುದು ಸುಲಭದ ವಿಚಾರವಲ್ಲ. ಇಂದು ನಾವು ಬಸವಣ್ಣನವರ ಮುಂದೆ ಹೂ ಇಡುತ್ತಿದ್ದೇವೆ. ಆದರೆ ಇವರು ಜೀವಂತವಾಗಿದ್ದಾಗ ಸತ್ಯ ನುಡಿದಿದ್ದರೆ ಅವರ ಮೇಲೆ ದಾಳಿ ಮಾಡಲಾಗುತ್ತಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
(8 / 10)

ರಾಹುಲ್ ಗಾಂಧಿ ಹಣೆಗೆ ವಿಭೂತಿ ಇಟ್ಟುಕೊಂಡಾಗ ಕಂಡುಬಂದಿದ್ದು ಹೀಗೆ.
(9 / 10)
ರಾಹುಲ್ ಗಾಂಧಿ ಹಣೆಗೆ ವಿಭೂತಿ ಇಟ್ಟುಕೊಂಡಾಗ ಕಂಡುಬಂದಿದ್ದು ಹೀಗೆ.
ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ಭಾಗವಹಿಸಿ ಬಸವಣ್ಣನ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಲಿಂಗಾಯತ ಸಮುದಾಯದ ವಿವಿಧ ಸ್ವಾಮೀಜಿಗಳು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಹಾಗೂ ಮತ್ತಿತರ ನಾಯಕರು ಉಪಸ್ಥಿತರಿದ್ದರು.
(10 / 10)

    ಹಂಚಿಕೊಳ್ಳಲು ಲೇಖನಗಳು