logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್‌ ಆಡಲು ಕೆಎಲ್ ರಾಹುಲ್ ಫಿಟ್; ಎಲ್‌ಎಸ್‌ಜಿ ಪರ ಆಡಲು ಕನ್ನಡಿಗ ಸಜ್ಜು, ವಿಕೆಟ್‌ ಕೀಪಿಂಗ್‌ ಮಾಡದಂತೆ ಸಲಹೆ

ಐಪಿಎಲ್‌ ಆಡಲು ಕೆಎಲ್ ರಾಹುಲ್ ಫಿಟ್; ಎಲ್‌ಎಸ್‌ಜಿ ಪರ ಆಡಲು ಕನ್ನಡಿಗ ಸಜ್ಜು, ವಿಕೆಟ್‌ ಕೀಪಿಂಗ್‌ ಮಾಡದಂತೆ ಸಲಹೆ

Mar 18, 2024 08:49 PM IST

ಐಪಿಎಲ್ 2024ರ ಆವೃತ್ತಿಗೂ ಮುಂಚಿತವಾಗಿ ಭಾರತದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್‌ ಅವರನ್ನು ಎನ್‌ಸಿಎ ಫಿಟ್‌ ಎಂದು ಘೋಷಿಸಿದೆ. ಇದರೊಂದಿಗೆ ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಕನ್ನಡಿಗ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.

  • ಐಪಿಎಲ್ 2024ರ ಆವೃತ್ತಿಗೂ ಮುಂಚಿತವಾಗಿ ಭಾರತದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್‌ ಅವರನ್ನು ಎನ್‌ಸಿಎ ಫಿಟ್‌ ಎಂದು ಘೋಷಿಸಿದೆ. ಇದರೊಂದಿಗೆ ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಕನ್ನಡಿಗ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.
ಐಪಿಎಲ್‌ನಲ್ಲಿ ಲಕ್ನೋ ತಂಡದ ನಾಯಕನಾಗಿರುವ ರಾಹುಲ್‌, ಕಳೆದ ಆವೃತ್ತಿಯ ಪಂದ್ಯಾವಳಿಯ ವೇಳೆ ಗಾಯಗೊಂಡ ರಾಹುಲ್,‌ ಮಧ್ಯದಲ್ಲಿಯೇ ಟೂರ್ನಿಯಿಂದ ಹೊರಬಿದ್ದರು. 
(1 / 5)
ಐಪಿಎಲ್‌ನಲ್ಲಿ ಲಕ್ನೋ ತಂಡದ ನಾಯಕನಾಗಿರುವ ರಾಹುಲ್‌, ಕಳೆದ ಆವೃತ್ತಿಯ ಪಂದ್ಯಾವಳಿಯ ವೇಳೆ ಗಾಯಗೊಂಡ ರಾಹುಲ್,‌ ಮಧ್ಯದಲ್ಲಿಯೇ ಟೂರ್ನಿಯಿಂದ ಹೊರಬಿದ್ದರು. (REUTERS)
ಕ್ವಾಡ್ರೈಸ್ಪ್ ಗಾಯದ ಕಾರಣ ಇತ್ತೀಚೆಗೆ ಅಂತ್ಯಗೊಂಡ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್‌ ಸರಣಿಯ ಕೊನೆಯ ನಾಲ್ಕು ಟೆಸ್ಟ್ ಪಂದ್ಯಗಳಿಂದಲೂ ರಾಹುಲ್‌ ಹೊರಬಿದ್ದಿದ್ದರು. ಹೀಗಾಗಿ ಎಲ್‌ಎಸ್‌ಜಿ ತಂಡದ ಸೇರಿಕೊಂಡು ಐಪಿಎಲ್‌ ಆಡುವುದು ಗೊಂದಲದಲ್ಲಿತ್ತು.
(2 / 5)
ಕ್ವಾಡ್ರೈಸ್ಪ್ ಗಾಯದ ಕಾರಣ ಇತ್ತೀಚೆಗೆ ಅಂತ್ಯಗೊಂಡ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್‌ ಸರಣಿಯ ಕೊನೆಯ ನಾಲ್ಕು ಟೆಸ್ಟ್ ಪಂದ್ಯಗಳಿಂದಲೂ ರಾಹುಲ್‌ ಹೊರಬಿದ್ದಿದ್ದರು. ಹೀಗಾಗಿ ಎಲ್‌ಎಸ್‌ಜಿ ತಂಡದ ಸೇರಿಕೊಂಡು ಐಪಿಎಲ್‌ ಆಡುವುದು ಗೊಂದಲದಲ್ಲಿತ್ತು.(AFP)
ಸದ್ಯ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಬಿಸಿಸಿಐ ವೈದ್ಯಕೀಯ ತಂಡವು ರಾಹುಲ್ ಅವರನ್ನು ಫಿಟ್ ಎಂದು ಘೋಷಿಸಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ಅವರು ಎಲ್‌ಎಸ್‌ಜಿ ಶಿಬಿರ ಸೇರಿಕೊಳ್ಳಲಿದ್ದಾರೆ.
(3 / 5)
ಸದ್ಯ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಬಿಸಿಸಿಐ ವೈದ್ಯಕೀಯ ತಂಡವು ರಾಹುಲ್ ಅವರನ್ನು ಫಿಟ್ ಎಂದು ಘೋಷಿಸಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ಅವರು ಎಲ್‌ಎಸ್‌ಜಿ ಶಿಬಿರ ಸೇರಿಕೊಳ್ಳಲಿದ್ದಾರೆ.(PTI)
ಫಿಟ್ನೆಸ್ ಕ್ಲಿಯರೆನ್ಸ್ ಮಾಡಿಕೊಂಡರೂ, ಕೆಲವೊಂದು ಷರತ್ತುಗಳು ಅನ್ವಯಿಸುತ್ತವೆ. ಪಂದ್ಯಾವಳಿಯ ಆರಂಭದ ಕೆಲವು ಪಂದ್ಯಗಳಲ್ಲಿ ವಿಕೆಟ್‌ ಕೀಪಿಂಗ್ ಮಾಡಲು ಸಾಧ್ಯವಿಲ್ಲ. ಸಂಪೂರ್ಣ ಫಿಟ್‌ ಆದ ಮೇಲೆ ಕೀಪಿಂಗ್‌ ಮಾಡಬಹುದಾಗಿದೆ.
(4 / 5)
ಫಿಟ್ನೆಸ್ ಕ್ಲಿಯರೆನ್ಸ್ ಮಾಡಿಕೊಂಡರೂ, ಕೆಲವೊಂದು ಷರತ್ತುಗಳು ಅನ್ವಯಿಸುತ್ತವೆ. ಪಂದ್ಯಾವಳಿಯ ಆರಂಭದ ಕೆಲವು ಪಂದ್ಯಗಳಲ್ಲಿ ವಿಕೆಟ್‌ ಕೀಪಿಂಗ್ ಮಾಡಲು ಸಾಧ್ಯವಿಲ್ಲ. ಸಂಪೂರ್ಣ ಫಿಟ್‌ ಆದ ಮೇಲೆ ಕೀಪಿಂಗ್‌ ಮಾಡಬಹುದಾಗಿದೆ.(PTI)
ಅವರು ಫಿಟ್ ಆಗಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಐಪಿಎಲ್ ಆಡಬಹುದು. ಪುನರ್ವಸತಿ ಬಳಿ ಎನ್‌ಸಿಎ ಅವರನ್ನು ಫಿಟ್ ಎಂದು ಘೋಷಿಸಿದೆ. ಆದಾರೆ, ತಕ್ಷಣವೇ ವಿಕೆಟ್ ಕೀಪಿಂಗ್ ಮಾಡದಂತೆ ಅವರಿಗೆ ಸಲಹೆ ನೀಡಲಾಗಿದೆ ಎಂದು ಬಿಸಿಸಿಐ ಮೂಲವನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
(5 / 5)
ಅವರು ಫಿಟ್ ಆಗಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಐಪಿಎಲ್ ಆಡಬಹುದು. ಪುನರ್ವಸತಿ ಬಳಿ ಎನ್‌ಸಿಎ ಅವರನ್ನು ಫಿಟ್ ಎಂದು ಘೋಷಿಸಿದೆ. ಆದಾರೆ, ತಕ್ಷಣವೇ ವಿಕೆಟ್ ಕೀಪಿಂಗ್ ಮಾಡದಂತೆ ಅವರಿಗೆ ಸಲಹೆ ನೀಡಲಾಗಿದೆ ಎಂದು ಬಿಸಿಸಿಐ ಮೂಲವನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.(PTI)

    ಹಂಚಿಕೊಳ್ಳಲು ಲೇಖನಗಳು