logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  West Indues Vs India 3rd T20i: ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲಲೇಬೇಕಾಗಿದ್ದ 3ನೇ ಟಿ20 ಪಂದ್ಯ ಹೇಗಿತ್ತು? ಫೋಟೋಸ್

West Indues vs India 3rd T20I: ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲಲೇಬೇಕಾಗಿದ್ದ 3ನೇ ಟಿ20 ಪಂದ್ಯ ಹೇಗಿತ್ತು? ಫೋಟೋಸ್

Jan 09, 2024 07:35 PM IST

ಸೂರ್ಯಕುಮಾರ್ ಯಾದವ್ ಮತ್ತು ಯುವ ಪ್ರತಿಭೆ ತಿಲಕ್ ವರ್ಮಾ ಅವರ ಜವಾಬ್ದಾರಿಯುತ ಆಟದ ನೆರವಿನಿಂದಾಗಿ ವಿಂಡೀಸ್ ವಿರುದ್ಧ ಟೀಂ ಇಂಡಿಯಾ 3ನೇ ಟಿ20ಯಲ್ಲಿ 7 ವಿಕೆಟ್‌ಗಳ ಜಯ ಸಾಧಿಸಿದೆ. ಪಂದ್ಯದ ಪ್ರಮುಖ ಕ್ಷಣಗಳ ಫೋಟೋಸ್ ಇಲ್ಲಿವೆ.

ಸೂರ್ಯಕುಮಾರ್ ಯಾದವ್ ಮತ್ತು ಯುವ ಪ್ರತಿಭೆ ತಿಲಕ್ ವರ್ಮಾ ಅವರ ಜವಾಬ್ದಾರಿಯುತ ಆಟದ ನೆರವಿನಿಂದಾಗಿ ವಿಂಡೀಸ್ ವಿರುದ್ಧ ಟೀಂ ಇಂಡಿಯಾ 3ನೇ ಟಿ20ಯಲ್ಲಿ 7 ವಿಕೆಟ್‌ಗಳ ಜಯ ಸಾಧಿಸಿದೆ. ಪಂದ್ಯದ ಪ್ರಮುಖ ಕ್ಷಣಗಳ ಫೋಟೋಸ್ ಇಲ್ಲಿವೆ.
ಮಂಗಳವಾರ (ಆಗಸ್ಟ್ 8) ಗಯಾನಾದಲ್ಲಿ ನಡೆದ ವಿಂಡೀಸ್‌ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ಮಾಡಿದ್ದಾರೆ. ಕೇವಲ 44 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್‌ಗಳು ಸೇರಿ 83 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಗೆಲುವು ಪಡೆದು 5 ಪಂದ್ಯಗಳ ಸರಣಿಯಲ್ಲಿ 1-2 ಅಂತರವನ್ನು ಕಾಯ್ದುಕೊಂಡಿದೆ. ಹಿಂದಿನ ಎರಡು ಪಂದ್ಯಗಳನ್ನು ಭಾರತ ಸೋತಿತ್ತು.
(1 / 5)
ಮಂಗಳವಾರ (ಆಗಸ್ಟ್ 8) ಗಯಾನಾದಲ್ಲಿ ನಡೆದ ವಿಂಡೀಸ್‌ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ಮಾಡಿದ್ದಾರೆ. ಕೇವಲ 44 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್‌ಗಳು ಸೇರಿ 83 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಗೆಲುವು ಪಡೆದು 5 ಪಂದ್ಯಗಳ ಸರಣಿಯಲ್ಲಿ 1-2 ಅಂತರವನ್ನು ಕಾಯ್ದುಕೊಂಡಿದೆ. ಹಿಂದಿನ ಎರಡು ಪಂದ್ಯಗಳನ್ನು ಭಾರತ ಸೋತಿತ್ತು.(AFP)
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್‌ಗೆ 12 ಓವರ್‌ಗಳು ಸ್ಪಿನ್ ದಾಳಿಯನ್ನ ಎದುರಿಸಿತು. ಕುಲ್ದೀಪ್ ಯಾದವ್ ಪ್ರಮುಖ 3 ವಿಕೆಟ್ ಪಡೆದರು. 
(2 / 5)
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್‌ಗೆ 12 ಓವರ್‌ಗಳು ಸ್ಪಿನ್ ದಾಳಿಯನ್ನ ಎದುರಿಸಿತು. ಕುಲ್ದೀಪ್ ಯಾದವ್ ಪ್ರಮುಖ 3 ವಿಕೆಟ್ ಪಡೆದರು. (AP)
ವೆಸ್ಟ್ ಇಂಡೀಸ್ ಪರ ನಾಯಕ ರೋವ್‌ಮನ್ ಪೊವೆಲ್ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಕೊನೆಯಲ್ಲಿ ಸಿಡಿದ ಅವರ 19 ಎಸೆತಗಳಿಂದ 40 ರನ್ ಬಾರಿಸಿದರು. ಇದರಲ್ಲಿ 1 ಬೌಂಡರಿ 3 ಸಿಕ್ಸರ್‌ಗಳಿದ್ದವು. ಅಂತಿಮವಾಗಿ ವಿಂಡೀಸ್ 5 ವಿಕೆಟ್‌ ಕಳೆದುಕೊಂಡು 159 ರನ್ ಗಳಿಸಿತ್ತು. ಭಾರತ ಸುಲಭವಾಗಿ ಈ ಗುರಿನ್ನು ಮುಟ್ಟಿತು.
(3 / 5)
ವೆಸ್ಟ್ ಇಂಡೀಸ್ ಪರ ನಾಯಕ ರೋವ್‌ಮನ್ ಪೊವೆಲ್ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಕೊನೆಯಲ್ಲಿ ಸಿಡಿದ ಅವರ 19 ಎಸೆತಗಳಿಂದ 40 ರನ್ ಬಾರಿಸಿದರು. ಇದರಲ್ಲಿ 1 ಬೌಂಡರಿ 3 ಸಿಕ್ಸರ್‌ಗಳಿದ್ದವು. ಅಂತಿಮವಾಗಿ ವಿಂಡೀಸ್ 5 ವಿಕೆಟ್‌ ಕಳೆದುಕೊಂಡು 159 ರನ್ ಗಳಿಸಿತ್ತು. ಭಾರತ ಸುಲಭವಾಗಿ ಈ ಗುರಿನ್ನು ಮುಟ್ಟಿತು.(AP)
ವಿಂಡೀಸ್ ನೀಡಿದ್ದ 160 ರನ್‌ಗಳ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಗಿತ್ತು. ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ವಿಕೆಟ್ ಬೇಗ ಕಳೆದುಕೊಳ್ಳಬೇಕಾಯಿತು. ನಂತರ ಬ್ಯಾಟಿಂಗ್‌ಗೆ ಬಂದ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಪಂದ್ಯದ ದಿಕ್ಕನ್ನೇ ಬದಲಿಸಿದರು. 
(4 / 5)
ವಿಂಡೀಸ್ ನೀಡಿದ್ದ 160 ರನ್‌ಗಳ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಗಿತ್ತು. ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ವಿಕೆಟ್ ಬೇಗ ಕಳೆದುಕೊಳ್ಳಬೇಕಾಯಿತು. ನಂತರ ಬ್ಯಾಟಿಂಗ್‌ಗೆ ಬಂದ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಪಂದ್ಯದ ದಿಕ್ಕನ್ನೇ ಬದಲಿಸಿದರು. (AP)
ಸೂರ್ಯಕುಮಾರ್ ಯಾದವ್ 83 ರನ್ ಗಳಿಸಿ ಔಟಾದ ಬಳಿಕವೂ ತಿಲಕ್ ವರ್ಮಾ ಲೀಲಾಜಾಲವಾಗಿ ಬ್ಯಾಟ್ ಬೀಸಿದರು. ಅಂತಿವಾಗಿ 37 ಎಸೆತಗಳಿಂದ 4 ಬೌಂಡರಿ, 1 ಸಿಕ್ಸರ್ ಸೇರಿ 49 ರನ್ ಗಳಿಸಿ 1 ರನ್‌ನಿಂದ ಅರ್ಧ ಶತಕ ವಂಚಿತರಾದರು. ಹಾರ್ದಿಕ್ ಪಾಂಡ್ಯ ಗೆಲುವಿನ ಸಿಕ್ಸ್ ಬಾರಿಸಿದರು.
(5 / 5)
ಸೂರ್ಯಕುಮಾರ್ ಯಾದವ್ 83 ರನ್ ಗಳಿಸಿ ಔಟಾದ ಬಳಿಕವೂ ತಿಲಕ್ ವರ್ಮಾ ಲೀಲಾಜಾಲವಾಗಿ ಬ್ಯಾಟ್ ಬೀಸಿದರು. ಅಂತಿವಾಗಿ 37 ಎಸೆತಗಳಿಂದ 4 ಬೌಂಡರಿ, 1 ಸಿಕ್ಸರ್ ಸೇರಿ 49 ರನ್ ಗಳಿಸಿ 1 ರನ್‌ನಿಂದ ಅರ್ಧ ಶತಕ ವಂಚಿತರಾದರು. ಹಾರ್ದಿಕ್ ಪಾಂಡ್ಯ ಗೆಲುವಿನ ಸಿಕ್ಸ್ ಬಾರಿಸಿದರು.(AFP)

    ಹಂಚಿಕೊಳ್ಳಲು ಲೇಖನಗಳು