logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅತಿ ಹೆಚ್ಚು ರನ್‌,‌ ಯಶಸ್ವಿ ಚೇಸಿಂಗ್ ಬಳಿಕ ಮತ್ತೊಂದು ರೆಕಾರ್ಡ್;‌ ಐಪಿಎಲ್‌ 2024ರಲ್ಲಿ ಸಿಡಿದವು ದಾಖಲೆಯ ಸಿಕ್ಸರ್‌ಗಳು

ಅತಿ ಹೆಚ್ಚು ರನ್‌,‌ ಯಶಸ್ವಿ ಚೇಸಿಂಗ್ ಬಳಿಕ ಮತ್ತೊಂದು ರೆಕಾರ್ಡ್;‌ ಐಪಿಎಲ್‌ 2024ರಲ್ಲಿ ಸಿಡಿದವು ದಾಖಲೆಯ ಸಿಕ್ಸರ್‌ಗಳು

May 15, 2024 03:23 PM IST

ಹಲವು ವಿಶೇಷ ದಾಖಲೆಗಳಿಗೆ ಸಾಕ್ಷಿಯಾದ ಐಪಿಎಲ್ 17ನೇ ಆವೃತ್ತಿಯಲ್ಲಿ, ಮತ್ತೊಂದು ದಾಖಲೆ ನಿರ್ಮಾಣವಾಗಿದೆ. ಒಂದರ ನಂತರ ಒಂದರಂತೆ ಟಿ20 ಕ್ರಿಕೆಟ್‌ನಲ್ಲಿ ಹಲವು ಹಳೆಯ ದಾಖಲೆಗಳನ್ನು ಬ್ರೇಕ್‌ ಮಾಡಿದ ಆವೃತ್ತಿಯಲ್ಲಿ ಈ ಬಾರಿ ಅತಿ ಹೆಚ್ಚು ಸಿಕ್ಸರ್‌ಗಳು ಸಿಡಿದಿವೆ. ಇದರೊಂದಿಗೆ ಐಪಿಎಲ್‌ನ ಹಳೆಯ ದಾಖಲೆ ಬ್ರೇಕ್‌ ಆಗಿದೆ.

  • ಹಲವು ವಿಶೇಷ ದಾಖಲೆಗಳಿಗೆ ಸಾಕ್ಷಿಯಾದ ಐಪಿಎಲ್ 17ನೇ ಆವೃತ್ತಿಯಲ್ಲಿ, ಮತ್ತೊಂದು ದಾಖಲೆ ನಿರ್ಮಾಣವಾಗಿದೆ. ಒಂದರ ನಂತರ ಒಂದರಂತೆ ಟಿ20 ಕ್ರಿಕೆಟ್‌ನಲ್ಲಿ ಹಲವು ಹಳೆಯ ದಾಖಲೆಗಳನ್ನು ಬ್ರೇಕ್‌ ಮಾಡಿದ ಆವೃತ್ತಿಯಲ್ಲಿ ಈ ಬಾರಿ ಅತಿ ಹೆಚ್ಚು ಸಿಕ್ಸರ್‌ಗಳು ಸಿಡಿದಿವೆ. ಇದರೊಂದಿಗೆ ಐಪಿಎಲ್‌ನ ಹಳೆಯ ದಾಖಲೆ ಬ್ರೇಕ್‌ ಆಗಿದೆ.
ಮೇ 14ರ ಮಂಗಳವಾರ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಜಯ ಸಾಧಿಸಿತು. ಈ ಪಂದ್ಯದಲ್ಲಿ ಒಟ್ಟು 20 ಸಿಕ್ಸರ್‌ಗಳು ಸಿಡಿದವು. ಇದರೊಂದಿಗೆ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು ಸಿಡಿದ ದಾಖಲೆಗೆ ಐಪಿಎಲ್‌ 2024ರ ಆವೃತ್ತಿ ಸಾಕ್ಷಿಯಾಯ್ತು.
(1 / 7)
ಮೇ 14ರ ಮಂಗಳವಾರ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಜಯ ಸಾಧಿಸಿತು. ಈ ಪಂದ್ಯದಲ್ಲಿ ಒಟ್ಟು 20 ಸಿಕ್ಸರ್‌ಗಳು ಸಿಡಿದವು. ಇದರೊಂದಿಗೆ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು ಸಿಡಿದ ದಾಖಲೆಗೆ ಐಪಿಎಲ್‌ 2024ರ ಆವೃತ್ತಿ ಸಾಕ್ಷಿಯಾಯ್ತು.(AFP)
ಡಿಸಿ ಹಾಗೂ ಎಲ್‌ಎಸ್‌ಜಿ ನಡುವಿನ ಪಂದ್ಯದಲ್ಲಿ ಸಿಡಿದ 20 ಸಿಕ್ಸರ್‌ಗಳೊಂದಿಗೆ ಪ್ರಸಕ್ತ ಋತುವಿನಲ್ಲಿ ಒಟ್ಟಾರೆ ಬರೋಬ್ಬರಿ 1125 ಸಿಕ್ಸರ್‌ಗಳು ಸಿಡಿದಂತಾಗಿವೆ. ಇದು ಈವರೆಗೆ ಯಾವುದೇ ಋತುವಿನಲ್ಲಿ ಬಂದ ಅತಿ ಹೆಚ್ಚು ಸಂಖ್ಯೆ. ಪಂದ್ಯಾವಳಿಯಲ್ಲಿ ಇನ್ನೂ ಹಲವು ಪಂದ್ಯಗಳು ನಡೆಯಲಿವೆ. ಅಷ್ಟರಲ್ಲಿ ಸಿಕ್ಸರ್‌ ಸಂಖ್ಯೆ 1200ರ ಗಡಿ ದಾಟಿದರೂ ಅಚ್ಚರಿಯಿಲ್ಲ.
(2 / 7)
ಡಿಸಿ ಹಾಗೂ ಎಲ್‌ಎಸ್‌ಜಿ ನಡುವಿನ ಪಂದ್ಯದಲ್ಲಿ ಸಿಡಿದ 20 ಸಿಕ್ಸರ್‌ಗಳೊಂದಿಗೆ ಪ್ರಸಕ್ತ ಋತುವಿನಲ್ಲಿ ಒಟ್ಟಾರೆ ಬರೋಬ್ಬರಿ 1125 ಸಿಕ್ಸರ್‌ಗಳು ಸಿಡಿದಂತಾಗಿವೆ. ಇದು ಈವರೆಗೆ ಯಾವುದೇ ಋತುವಿನಲ್ಲಿ ಬಂದ ಅತಿ ಹೆಚ್ಚು ಸಂಖ್ಯೆ. ಪಂದ್ಯಾವಳಿಯಲ್ಲಿ ಇನ್ನೂ ಹಲವು ಪಂದ್ಯಗಳು ನಡೆಯಲಿವೆ. ಅಷ್ಟರಲ್ಲಿ ಸಿಕ್ಸರ್‌ ಸಂಖ್ಯೆ 1200ರ ಗಡಿ ದಾಟಿದರೂ ಅಚ್ಚರಿಯಿಲ್ಲ.(AFP)
ಈ ಹಿಂದಿನ, ಅಂದರೆ 2023ರ ಋತುವಿನಲ್ಲಿ 1,124 ಸಿಕ್ಸರ್‌ಗಳು ದಾಖಲಾಗಿದ್ದವು. ಅದಕ್ಕೂ ಹಿಂದೆ 2022ರಲ್ಲಿ 1,062 ಸಿಕ್ಸರ್‌ಗಳು ಸಿಡಿದಿದ್ದವು. ಆದರೆ ಈ ಆವೃತ್ತಿಯು ಎಲ್ಲಾ ಹಳೆಯ ದಾಖಲೆಗಳನ್ನು ಬ್ರೇಕ್‌ ಮಾಡಿದೆ. 
(3 / 7)
ಈ ಹಿಂದಿನ, ಅಂದರೆ 2023ರ ಋತುವಿನಲ್ಲಿ 1,124 ಸಿಕ್ಸರ್‌ಗಳು ದಾಖಲಾಗಿದ್ದವು. ಅದಕ್ಕೂ ಹಿಂದೆ 2022ರಲ್ಲಿ 1,062 ಸಿಕ್ಸರ್‌ಗಳು ಸಿಡಿದಿದ್ದವು. ಆದರೆ ಈ ಆವೃತ್ತಿಯು ಎಲ್ಲಾ ಹಳೆಯ ದಾಖಲೆಗಳನ್ನು ಬ್ರೇಕ್‌ ಮಾಡಿದೆ. (AFP)
ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ, ಒಟ್ಟು 35 ಸಿಕ್ಸರ್‌ಗಳೊಂದಿಗೆ, ಈ ಬಾರಿ ಅಧಿಕ ಸಿಕ್ಸರ್‌ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಆರ್‌ಸಿಬಿಯ ವಿರಾಟ್‌ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
(4 / 7)
ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ, ಒಟ್ಟು 35 ಸಿಕ್ಸರ್‌ಗಳೊಂದಿಗೆ, ಈ ಬಾರಿ ಅಧಿಕ ಸಿಕ್ಸರ್‌ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಆರ್‌ಸಿಬಿಯ ವಿರಾಟ್‌ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ.(AFP)
ವರ್ಷ ಕಳೆದಂತೆ ಐಪಿಎಲ್‌ನಲ್ಲಿನ ಸಿಕ್ಸರ್‌ ಹಾಗೂ ರನ್‌ ಮಳೆ ಹೆಚ್ಚುತ್ತಿದೆ. ಇತ್ತೀಚಿನ ಆವೃತ್ತಿಗಳ ಅಂಕಿ-ಅಂಶಗಳು ಅದಕ್ಕೆ ಸಾಕ್ಷಿಯಾಗಿದೆ.
(5 / 7)
ವರ್ಷ ಕಳೆದಂತೆ ಐಪಿಎಲ್‌ನಲ್ಲಿನ ಸಿಕ್ಸರ್‌ ಹಾಗೂ ರನ್‌ ಮಳೆ ಹೆಚ್ಚುತ್ತಿದೆ. ಇತ್ತೀಚಿನ ಆವೃತ್ತಿಗಳ ಅಂಕಿ-ಅಂಶಗಳು ಅದಕ್ಕೆ ಸಾಕ್ಷಿಯಾಗಿದೆ.(AFP)
ವರ್ಷ ಕಳೆದಂತೆ ಐಪಿಎಲ್‌ನಲ್ಲಿನ ಸಿಕ್ಸರ್‌ ಹಾಗೂ ರನ್‌ ಮಳೆ ಹೆಚ್ಚುತ್ತಿದೆ. ಇತ್ತೀಚಿನ ಆವೃತ್ತಿಗಳ ಅಂಕಿ-ಅಂಶಗಳ ಅದಕ್ಕೆ ಸಾಕ್ಷಿಯಾಗಿದೆ.
(6 / 7)
ವರ್ಷ ಕಳೆದಂತೆ ಐಪಿಎಲ್‌ನಲ್ಲಿನ ಸಿಕ್ಸರ್‌ ಹಾಗೂ ರನ್‌ ಮಳೆ ಹೆಚ್ಚುತ್ತಿದೆ. ಇತ್ತೀಚಿನ ಆವೃತ್ತಿಗಳ ಅಂಕಿ-ಅಂಶಗಳ ಅದಕ್ಕೆ ಸಾಕ್ಷಿಯಾಗಿದೆ.(AFP)
ಈ ಬಾರಿ ಐಪಿಎಲ್‌ ಆವೃತ್ತಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ನೀಡಿದ 262 ರನ್‌ಗಳ ಬೃಹತ್‌ ಗುರಿಯನ್ನು ಪಂಜಾಬ್ ಕಿಂಗ್ಸ್ ಚೇಸಿಂಗ್‌ ಮಾಡಿ ಗೆದ್ದಿತ್ತು. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ಗಳ ಯಶಸ್ವಿ ಚೇಸಿಂಗ್ ಆಗಿದೆ.
(7 / 7)
ಈ ಬಾರಿ ಐಪಿಎಲ್‌ ಆವೃತ್ತಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ನೀಡಿದ 262 ರನ್‌ಗಳ ಬೃಹತ್‌ ಗುರಿಯನ್ನು ಪಂಜಾಬ್ ಕಿಂಗ್ಸ್ ಚೇಸಿಂಗ್‌ ಮಾಡಿ ಗೆದ್ದಿತ್ತು. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ಗಳ ಯಶಸ್ವಿ ಚೇಸಿಂಗ್ ಆಗಿದೆ.(ANI)

    ಹಂಚಿಕೊಳ್ಳಲು ಲೇಖನಗಳು