logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Photo: ಸಿಎಸ್‌ಕೆ ನಾಯಕನಾಗಿ ಎಂಎಸ್‌ ಧೋನಿ ಗೆದ್ದ ಆ ಐದು ಕಪ್‌ಗಳು; ಅದೃಷ್ಟದ ನಾಯಕನಿಗೆ ಸರಿಸಾಟಿ ಯಾರು?

Photo: ಸಿಎಸ್‌ಕೆ ನಾಯಕನಾಗಿ ಎಂಎಸ್‌ ಧೋನಿ ಗೆದ್ದ ಆ ಐದು ಕಪ್‌ಗಳು; ಅದೃಷ್ಟದ ನಾಯಕನಿಗೆ ಸರಿಸಾಟಿ ಯಾರು?

Mar 22, 2024 01:47 PM IST

MS Dhoni: ಭಾರತ ಕ್ರಿಕೆಟ್‌ ತಂಡ ಹಾಗೂ ಸಿಎಸ್‌ಕೆ ಕಂಡ ಧೀಮಂತ ನಾಯಕ ಎಂಎಸ್ ಧೋನಿ. ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ಅವರು ಋತುರಾಜ್ ಗಾಯಕ್ವಾಡ್‌ಗೆ ಹಸ್ತಾಂತರಿಸಿದ್ದಾರೆ. ಹಳದಿ ಆರ್ಮಿಯನ್ನು ದಾಖಲೆಯ 5 ಬಾರಿ ಚಾಂಪಿಯನ್‌ ಪಟ್ಟಕ್ಕೇರಿಸಿರುವ ಮಾಹಿಯ ಆ ಐದು ಟ್ರೋಫಿ ಸಂಭ್ರಮವನ್ನು ಮೆಲುಕು ಹಾಕೋಣ. 

  • MS Dhoni: ಭಾರತ ಕ್ರಿಕೆಟ್‌ ತಂಡ ಹಾಗೂ ಸಿಎಸ್‌ಕೆ ಕಂಡ ಧೀಮಂತ ನಾಯಕ ಎಂಎಸ್ ಧೋನಿ. ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ಅವರು ಋತುರಾಜ್ ಗಾಯಕ್ವಾಡ್‌ಗೆ ಹಸ್ತಾಂತರಿಸಿದ್ದಾರೆ. ಹಳದಿ ಆರ್ಮಿಯನ್ನು ದಾಖಲೆಯ 5 ಬಾರಿ ಚಾಂಪಿಯನ್‌ ಪಟ್ಟಕ್ಕೇರಿಸಿರುವ ಮಾಹಿಯ ಆ ಐದು ಟ್ರೋಫಿ ಸಂಭ್ರಮವನ್ನು ಮೆಲುಕು ಹಾಕೋಣ. 
ಐಪಿಎಲ್‌ನಲ್ಲಿ ಅತ್ಯಂತ ಬಲಿಷ್ಠ, ಯಶಸ್ವಿ ಹಾಗೂ ಡೇಂಜರಸ್‌ ತಂಡವಾಗಿ ಸಿಎಸ್‌ಕೆ ತನ್ನದೇ ಆದ ಛಾಪು ಮೂಡಿಸಿದೆ. ಪ್ರತಿ ಋತುವಿನಲ್ಲಿಯೂ ತಂಡವನ್ನು ಮುನ್ನಡೆಸಿ ಯಶಸ್ಸಿನ ಉತ್ತುಂಗಕ್ಕೇರಿಸಿದ ಕೀರ್ತಿ ಧೋನಿ ಅವರದ್ದು. 2008ರಲ್ಲಿ ಐಪಿಎಲ್‌ ಉದ್ಘಾಟನಾ ಋತುವಿನ ಫೈನಲ್ ತಲುಪಿದ್ದ ಸಿಎಸ್‌ಕೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತಿತ್ತು. ಆ ಬಳಿಕ 2010ರಲ್ಲಿ ಮೊದಲ ಟ್ರೋಫಿ ಗೆಲ್ಲುವ ಮೂಲಕ ಯಶಸ್ಸಿನ ಅಭಿಯಾನ ಆರಂಭಿಸಿತು.
(1 / 6)
ಐಪಿಎಲ್‌ನಲ್ಲಿ ಅತ್ಯಂತ ಬಲಿಷ್ಠ, ಯಶಸ್ವಿ ಹಾಗೂ ಡೇಂಜರಸ್‌ ತಂಡವಾಗಿ ಸಿಎಸ್‌ಕೆ ತನ್ನದೇ ಆದ ಛಾಪು ಮೂಡಿಸಿದೆ. ಪ್ರತಿ ಋತುವಿನಲ್ಲಿಯೂ ತಂಡವನ್ನು ಮುನ್ನಡೆಸಿ ಯಶಸ್ಸಿನ ಉತ್ತುಂಗಕ್ಕೇರಿಸಿದ ಕೀರ್ತಿ ಧೋನಿ ಅವರದ್ದು. 2008ರಲ್ಲಿ ಐಪಿಎಲ್‌ ಉದ್ಘಾಟನಾ ಋತುವಿನ ಫೈನಲ್ ತಲುಪಿದ್ದ ಸಿಎಸ್‌ಕೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತಿತ್ತು. ಆ ಬಳಿಕ 2010ರಲ್ಲಿ ಮೊದಲ ಟ್ರೋಫಿ ಗೆಲ್ಲುವ ಮೂಲಕ ಯಶಸ್ಸಿನ ಅಭಿಯಾನ ಆರಂಭಿಸಿತು.(BCCI)
ಮುಂದಿನ ವರ್ಷ, ಅಂದರೆ 2011ರಲ್ಲಿ ತಮ್ಮ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡಿತು. ಧೋನಿ ಮತ್ತು ರೋಹಿತ್ ಶರ್ಮಾ ಸತತ ವರ್ಷಗಳಲ್ಲಿ ಐಪಿಎಲ್ ಗೆದ್ದ ಇಬ್ಬರು ನಾಯಕರಾಗಿದ್ದಾರೆ.
(2 / 6)
ಮುಂದಿನ ವರ್ಷ, ಅಂದರೆ 2011ರಲ್ಲಿ ತಮ್ಮ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡಿತು. ಧೋನಿ ಮತ್ತು ರೋಹಿತ್ ಶರ್ಮಾ ಸತತ ವರ್ಷಗಳಲ್ಲಿ ಐಪಿಎಲ್ ಗೆದ್ದ ಇಬ್ಬರು ನಾಯಕರಾಗಿದ್ದಾರೆ.(BCCI)
ಸತತ ಎರಡು ಕಪ್‌ ಗೆಲುವಿನ ಬಳಿಕ, ನಂತರದ ಕಪ್‌ ಗೆಲ್ಲಲು ತಂಡವು 6 ವರ್ಷ ಕಾಯಬೇಕಾಯ್ತು. ಈ ನಡುವೆ ಮೂರು ಬಾರಿ ಫೈನಲ್‌ ಪ್ರವೇಶಿಸಿ ಸೋತ ತಂಡವು, 2012 ಮತ್ತು 2013ರಲ್ಲಿ ಕಪ್‌ ಗೆಲ್ಲು ಸಾಧ್ಯವಾಗಲಿಲ್ಲ.
(3 / 6)
ಸತತ ಎರಡು ಕಪ್‌ ಗೆಲುವಿನ ಬಳಿಕ, ನಂತರದ ಕಪ್‌ ಗೆಲ್ಲಲು ತಂಡವು 6 ವರ್ಷ ಕಾಯಬೇಕಾಯ್ತು. ಈ ನಡುವೆ ಮೂರು ಬಾರಿ ಫೈನಲ್‌ ಪ್ರವೇಶಿಸಿ ಸೋತ ತಂಡವು, 2012 ಮತ್ತು 2013ರಲ್ಲಿ ಕಪ್‌ ಗೆಲ್ಲು ಸಾಧ್ಯವಾಗಲಿಲ್ಲ.(BCCI)
2014ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಎರಡನೇ ಕ್ವಾಲಿಫೈಯರ್‌ನಲ್ಲಿ ಸೋತಿದ್ದ ಸಿಎಸ್‌ಕೆ, ನಾಲ್ಕು ವರ್ಷಗಳ ಬಳಿಕ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಮುಂದಿನ ಋತುವಿನಲ್ಲಿ ಎರಡನೇ ಕ್ವಾಲಿಫೈಯರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತಿತು. 2016 ಮತ್ತು 2017ರಲ್ಲಿ ಎರಡು ವರ್ಷಗಳ ಕಾಲ ಅಮಾನತು ಶಿಕ್ಷೆಗೆ ಒಳಗಾದ ತಂಡ, 2018ರಲ್ಲಿ ಧೋನಿ ನಾಯಕತ್ವದೊಂದಿಗೆ ಮತ್ತೆ ಮರಳಿತು. ಅದೇ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎಂಟು ವಿಕೆಟ್ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದಿತು.
(4 / 6)
2014ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಎರಡನೇ ಕ್ವಾಲಿಫೈಯರ್‌ನಲ್ಲಿ ಸೋತಿದ್ದ ಸಿಎಸ್‌ಕೆ, ನಾಲ್ಕು ವರ್ಷಗಳ ಬಳಿಕ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಮುಂದಿನ ಋತುವಿನಲ್ಲಿ ಎರಡನೇ ಕ್ವಾಲಿಫೈಯರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತಿತು. 2016 ಮತ್ತು 2017ರಲ್ಲಿ ಎರಡು ವರ್ಷಗಳ ಕಾಲ ಅಮಾನತು ಶಿಕ್ಷೆಗೆ ಒಳಗಾದ ತಂಡ, 2018ರಲ್ಲಿ ಧೋನಿ ನಾಯಕತ್ವದೊಂದಿಗೆ ಮತ್ತೆ ಮರಳಿತು. ಅದೇ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎಂಟು ವಿಕೆಟ್ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದಿತು.(BCCI)
2021ರ ಫೈನಲ್‌ನಲ್ಲಿ ಕೆಕೆಆರ್ ತಂಡವನ್ನು ಸೋಲಿಸುವ ಮೂಲಕ ತಮ್ಮ ಪ್ರಶಸ್ತಿಗಳ ಸಂಖ್ಯೆಯನ್ನು ನಾಲ್ಕಕ್ಕೆ ಏರಿಸಿತು. ಮುಂದಿನ ಋತುವಿನಲ್ಲಿ ಮೊದಲ ಬಾರಿಗೆ ನಾಯಕ ಸ್ಥಾನದಿಂದ ಕೆಳಗಿಳಿದ ಧೋನಿ, ರವೀಂದ್ರ ಜಡೇಜಾಗೆ ಅಧಿಕಾರ ಹಸ್ತಾಂತರಿಸಿದರು. ಆ ತಂತ್ರ ತಂಡಕ್ಕೆ ಯಶಸ್ಸು ತಂದುಕೊಡಲಿಲ್ಲ. ಜಡೇಜಾ ನಾಯಕತ್ವದಲ್ಲಿ ಆಡಿದ ಎಂಟು ಪಂದ್ಯಗಳಲ್ಲಿ ಆರರಲ್ಲಿ ಸೋತಿದ್ದರಿಂದ, ಧೋನಿ ಮತ್ತೆ ನಾಯಕತ್ವ ವಹಿಸಿಕೊಂಡರು. ಆ ವರ್ಷ ಸಿಎಸ್‌ಕೆ ಲೀಗ್ ಹಂತದಲ್ಲೇ ನಿರ್ಗಮಿಸಿತು.
(5 / 6)
2021ರ ಫೈನಲ್‌ನಲ್ಲಿ ಕೆಕೆಆರ್ ತಂಡವನ್ನು ಸೋಲಿಸುವ ಮೂಲಕ ತಮ್ಮ ಪ್ರಶಸ್ತಿಗಳ ಸಂಖ್ಯೆಯನ್ನು ನಾಲ್ಕಕ್ಕೆ ಏರಿಸಿತು. ಮುಂದಿನ ಋತುವಿನಲ್ಲಿ ಮೊದಲ ಬಾರಿಗೆ ನಾಯಕ ಸ್ಥಾನದಿಂದ ಕೆಳಗಿಳಿದ ಧೋನಿ, ರವೀಂದ್ರ ಜಡೇಜಾಗೆ ಅಧಿಕಾರ ಹಸ್ತಾಂತರಿಸಿದರು. ಆ ತಂತ್ರ ತಂಡಕ್ಕೆ ಯಶಸ್ಸು ತಂದುಕೊಡಲಿಲ್ಲ. ಜಡೇಜಾ ನಾಯಕತ್ವದಲ್ಲಿ ಆಡಿದ ಎಂಟು ಪಂದ್ಯಗಳಲ್ಲಿ ಆರರಲ್ಲಿ ಸೋತಿದ್ದರಿಂದ, ಧೋನಿ ಮತ್ತೆ ನಾಯಕತ್ವ ವಹಿಸಿಕೊಂಡರು. ಆ ವರ್ಷ ಸಿಎಸ್‌ಕೆ ಲೀಗ್ ಹಂತದಲ್ಲೇ ನಿರ್ಗಮಿಸಿತು.(BCCI)
2023ರಲ್ಲಿ ಮತ್ತೆ ಭರ್ಜರಿಯಾಗಿ ಫೈನಲ್ ಪ್ರವೇಶಿಸಿದ ಸಿಎಸ್‌ಕೆ, ಮತ್ತೊಮ್ಮೆ ಪ್ರಶಸ್ತಿ ಗೆದ್ದಿತು. ತಂಡವನ್ನು ಧೋನಿ ಯಶಸ್ವಿಯಾಗಿ ಟ್ರೋಫಿ ಗೆಲುವಿನತ್ತ ಮುನ್ನಡೆಸಿದರು, ಜಡೇಜಾ ಪಂದ್ಯದ ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದು ರೋಚಕ ಹಣಾಹಣಿಯಾಗಿತ್ತು. ಇದೀಗ ಮಾಹಿ ತಮ್ಮ ನಾಯಕತ್ವವನ್ನು ಯುವ ಆಟಗಾರ ರತುರಾಜ್‌ ಗಾಯಕ್ವಾಡ್‌ಗೆ ನೀಡಿದ್ದಾರೆ. ಮುಂದೆ ಸಿಎಸ್‌ಕೆ ಅದೃಷ್ಟ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.
(6 / 6)
2023ರಲ್ಲಿ ಮತ್ತೆ ಭರ್ಜರಿಯಾಗಿ ಫೈನಲ್ ಪ್ರವೇಶಿಸಿದ ಸಿಎಸ್‌ಕೆ, ಮತ್ತೊಮ್ಮೆ ಪ್ರಶಸ್ತಿ ಗೆದ್ದಿತು. ತಂಡವನ್ನು ಧೋನಿ ಯಶಸ್ವಿಯಾಗಿ ಟ್ರೋಫಿ ಗೆಲುವಿನತ್ತ ಮುನ್ನಡೆಸಿದರು, ಜಡೇಜಾ ಪಂದ್ಯದ ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದು ರೋಚಕ ಹಣಾಹಣಿಯಾಗಿತ್ತು. ಇದೀಗ ಮಾಹಿ ತಮ್ಮ ನಾಯಕತ್ವವನ್ನು ಯುವ ಆಟಗಾರ ರತುರಾಜ್‌ ಗಾಯಕ್ವಾಡ್‌ಗೆ ನೀಡಿದ್ದಾರೆ. ಮುಂದೆ ಸಿಎಸ್‌ಕೆ ಅದೃಷ್ಟ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.(BCCI)

    ಹಂಚಿಕೊಳ್ಳಲು ಲೇಖನಗಳು