logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  2023ರಲ್ಲಿ ಅತಿ ಹೆಚ್ಚು ಟೆಸ್ಟ್ ರನ್; ಕಾಂಗರೂಗಳ ಪ್ರಾಬಲ್ಯ, ಅಗ್ರ 10ರಲ್ಲಿ ಏಕೈಕ ಭಾರತೀಯ

2023ರಲ್ಲಿ ಅತಿ ಹೆಚ್ಚು ಟೆಸ್ಟ್ ರನ್; ಕಾಂಗರೂಗಳ ಪ್ರಾಬಲ್ಯ, ಅಗ್ರ 10ರಲ್ಲಿ ಏಕೈಕ ಭಾರತೀಯ

Jan 01, 2024 08:30 PM IST

Most Test Runs In 2023: 2023ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಂಚಿದವರು ಯಾರು? ಯಾರು ಹೆಚ್ಚು ರನ್ ಗಳಿಸಿದರು? ಅಗ್ರ ಹತ್ತು ಆಟಗಾರರ ಪಟ್ಟಿ ಇಲ್ಲಿದೆ.

  • Most Test Runs In 2023: 2023ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಂಚಿದವರು ಯಾರು? ಯಾರು ಹೆಚ್ಚು ರನ್ ಗಳಿಸಿದರು? ಅಗ್ರ ಹತ್ತು ಆಟಗಾರರ ಪಟ್ಟಿ ಇಲ್ಲಿದೆ.
ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ 2023ರಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಕಲೆಹಾಕಿದ್ದಾರೆ. ಅವರು 24 ಇನ್ನಿಂಗ್ಸ್‌ಗಳಲ್ಲಿ 1210 ರನ್ ಗಳಿಸಿದ್ದಾರೆ. 2023ರಲ್ಲಿ ಟೆಸ್ಟ್‌ನಲ್ಲಿ 1000ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಕ್ರಿಕೆಟಿಗ ಖವಾಜಾ. ಅವರು 3 ಶತಕ ಮತ್ತು 6 ಅರ್ಧ ಶತಕಗಳನ್ನು ಗಳಿಸಿದ್ದಾರೆ.
(1 / 11)
ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ 2023ರಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಕಲೆಹಾಕಿದ್ದಾರೆ. ಅವರು 24 ಇನ್ನಿಂಗ್ಸ್‌ಗಳಲ್ಲಿ 1210 ರನ್ ಗಳಿಸಿದ್ದಾರೆ. 2023ರಲ್ಲಿ ಟೆಸ್ಟ್‌ನಲ್ಲಿ 1000ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಕ್ರಿಕೆಟಿಗ ಖವಾಜಾ. ಅವರು 3 ಶತಕ ಮತ್ತು 6 ಅರ್ಧ ಶತಕಗಳನ್ನು ಗಳಿಸಿದ್ದಾರೆ.(AFP)
ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 2023ರಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು 24 ಇನ್ನಿಂಗ್ಸ್‌ಗಳಲ್ಲಿ 929 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ ಮತ್ತು 3 ಅರ್ಧ ಶತಕಗಳು ಸೇರಿವೆ.
(2 / 11)
ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 2023ರಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು 24 ಇನ್ನಿಂಗ್ಸ್‌ಗಳಲ್ಲಿ 929 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ ಮತ್ತು 3 ಅರ್ಧ ಶತಕಗಳು ಸೇರಿವೆ.(AFP)
ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಆಸೀಸ್‌ನ ಮತ್ತೊಬ್ಬ ಆಟಗಾರ ಟ್ರಾವಿಸ್ ಹೆಡ್ ಇದ್ದಾರೆ. ಅವರು 2023ರಲ್ಲಿ 23 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 919 ರನ್ ಗಳಿಸಿದರು. ಹೆಡ್ 1 ಶತಕ ಮತ್ತು 5 ಅರ್ಧ ಶತಕ ಸಿಡಿಸಿದ್ದಾರೆ.
(3 / 11)
ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಆಸೀಸ್‌ನ ಮತ್ತೊಬ್ಬ ಆಟಗಾರ ಟ್ರಾವಿಸ್ ಹೆಡ್ ಇದ್ದಾರೆ. ಅವರು 2023ರಲ್ಲಿ 23 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 919 ರನ್ ಗಳಿಸಿದರು. ಹೆಡ್ 1 ಶತಕ ಮತ್ತು 5 ಅರ್ಧ ಶತಕ ಸಿಡಿಸಿದ್ದಾರೆ.(AFP)
ಆಸ್ಟ್ರೇಲಿಯಾದ ಮಾರ್ನಸ್ ಲ್ಯಾಬುಶೆನ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು 25 ಇನ್ನಿಂಗ್ಸ್‌ಗಳಲ್ಲಿ 803 ರನ್ ಗಳಿಸಿದ್ದಾರೆ. ಲ್ಯಾಬುಶೆನ್ 2023ರಲ್ಲಿ 1 ಟೆಸ್ಟ್ ಶತಕ ಗಳಿಸಿದ್ದಾರೆ. ಉಳಿದಂತೆ 4 ಅರ್ಧಶತಕ ಸಿಡಿಸಿದ್ದಾರೆ.
(4 / 11)
ಆಸ್ಟ್ರೇಲಿಯಾದ ಮಾರ್ನಸ್ ಲ್ಯಾಬುಶೆನ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು 25 ಇನ್ನಿಂಗ್ಸ್‌ಗಳಲ್ಲಿ 803 ರನ್ ಗಳಿಸಿದ್ದಾರೆ. ಲ್ಯಾಬುಶೆನ್ 2023ರಲ್ಲಿ 1 ಟೆಸ್ಟ್ ಶತಕ ಗಳಿಸಿದ್ದಾರೆ. ಉಳಿದಂತೆ 4 ಅರ್ಧಶತಕ ಸಿಡಿಸಿದ್ದಾರೆ.(AP)
ಇಂಗ್ಲೆಂಡ್‌ನ ಜೋ ರೂಟ್ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಅವರು 2023ರಲ್ಲಿ 14 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 787 ರನ್ ಗಳಿಸಿದರು. 2 ಶತಕ ಹಾಗೂ 5 ಅರ್ಧ ಶತಕ ಬಾರಿಸಿದ್ದಾರೆ.
(5 / 11)
ಇಂಗ್ಲೆಂಡ್‌ನ ಜೋ ರೂಟ್ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಅವರು 2023ರಲ್ಲಿ 14 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 787 ರನ್ ಗಳಿಸಿದರು. 2 ಶತಕ ಹಾಗೂ 5 ಅರ್ಧ ಶತಕ ಬಾರಿಸಿದ್ದಾರೆ.(Reuters)
ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಅವರು 2023ರಲ್ಲಿ 14 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 701 ರನ್ ಗಳಿಸಿದರು. 1 ಶತಕ ಮತ್ತು 6 ಅರ್ಧ ಶತಕ ಗಳಿಸಿದ್ದಾರೆ.
(6 / 11)
ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಅವರು 2023ರಲ್ಲಿ 14 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 701 ರನ್ ಗಳಿಸಿದರು. 1 ಶತಕ ಮತ್ತು 6 ಅರ್ಧ ಶತಕ ಗಳಿಸಿದ್ದಾರೆ.(Reuters)
ನ್ಯೂಜಿಲ್ಯಾಂಡ್‌ನ ಕೇನ್ ವಿಲಿಯಮ್ಸನ್ ಈ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಅವರು 2023 ರಲ್ಲಿ 13 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 695 ರನ್ ಗಳಿಸಿದ್ದಾರೆ. ಕಿವೀಸ್ ಸ್ಟಾರ್ 4 ಶತಕ ಸಿಡಿಸಿದ್ದಾರೆ.
(7 / 11)
ನ್ಯೂಜಿಲ್ಯಾಂಡ್‌ನ ಕೇನ್ ವಿಲಿಯಮ್ಸನ್ ಈ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಅವರು 2023 ರಲ್ಲಿ 13 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 695 ರನ್ ಗಳಿಸಿದ್ದಾರೆ. ಕಿವೀಸ್ ಸ್ಟಾರ್ 4 ಶತಕ ಸಿಡಿಸಿದ್ದಾರೆ.(AP)
ಅಗ್ರ ಹತ್ತರಲ್ಲಿರುವ ಭಾರತದ ಏಕೈಕ ಆಟಗಾರ ವಿರಾಟ್ ಕೊಹ್ಲಿ. ಅವರು ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. 2023ರಲ್ಲಿ ಕೊಹ್ಲಿ 12 ಟೆಸ್ಟ್‌ ಇನ್ನಿಂಗ್ಸ್‌ಗಳಲ್ಲಿ 671 ರನ್‌ ಕಲೆಹಾಕಿದ್ದಾರೆ. 2 ಶತಕ ಮತ್ತು 2 ಅರ್ಧಶತಕಗಳನ್ನು ಗಳಿಸಿದ್ದಾರೆ.
(8 / 11)
ಅಗ್ರ ಹತ್ತರಲ್ಲಿರುವ ಭಾರತದ ಏಕೈಕ ಆಟಗಾರ ವಿರಾಟ್ ಕೊಹ್ಲಿ. ಅವರು ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. 2023ರಲ್ಲಿ ಕೊಹ್ಲಿ 12 ಟೆಸ್ಟ್‌ ಇನ್ನಿಂಗ್ಸ್‌ಗಳಲ್ಲಿ 671 ರನ್‌ ಕಲೆಹಾಕಿದ್ದಾರೆ. 2 ಶತಕ ಮತ್ತು 2 ಅರ್ಧಶತಕಗಳನ್ನು ಗಳಿಸಿದ್ದಾರೆ.(PTI)
ಇಂಗ್ಲೆಂಡ್‌ನ ಬೆನ್ ಡಕೆಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಅವರು 2023ರಲ್ಲಿ 15 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 654 ರನ್ ಗಳಿಸಿದ್ದಾರೆ. 1 ಶತಕ ಮತ್ತು 3 ಅರ್ಧ ಶತಕ ಗಳಿಸಿದ್ದಾರೆ.
(9 / 11)
ಇಂಗ್ಲೆಂಡ್‌ನ ಬೆನ್ ಡಕೆಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಅವರು 2023ರಲ್ಲಿ 15 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 654 ರನ್ ಗಳಿಸಿದ್ದಾರೆ. 1 ಶತಕ ಮತ್ತು 3 ಅರ್ಧ ಶತಕ ಗಳಿಸಿದ್ದಾರೆ.(AFP)
ಶ್ರೀಲಂಕಾದ ದಿಮುತ್ ಕರುಣರತ್ನೆ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಅವರು 2023 ರಲ್ಲಿ 10 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 608 ರನ್ ಗಳಿಸಿದ್ದಾರೆ.
(10 / 11)
ಶ್ರೀಲಂಕಾದ ದಿಮುತ್ ಕರುಣರತ್ನೆ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಅವರು 2023 ರಲ್ಲಿ 10 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 608 ರನ್ ಗಳಿಸಿದ್ದಾರೆ.(AFP)
ಪಾಕಿಸ್ತಾನದ ಬಾಬರ್ ಅಜಮ್ 2023ರಲ್ಲಿ 9 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 204 ರನ್ ಗಳಿಸಿದ್ದರು. ಅವರಿಂದ ಶತಕ ಗಳಿಸಲು ಸಾಧ್ಯವಾಗಲಿಲ್ಲ. ಅರ್ಧಶತಕವೂ ಬಂದಿಲ್ಲ. ಹೀಗಾಗಿ ಈ ಪಟ್ಟಿಯಲ್ಲಿ ಬಾಬರ್ 55 ನೇ ಸ್ಥಾನದಲ್ಲಿದ್ದಾರೆ.
(11 / 11)
ಪಾಕಿಸ್ತಾನದ ಬಾಬರ್ ಅಜಮ್ 2023ರಲ್ಲಿ 9 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 204 ರನ್ ಗಳಿಸಿದ್ದರು. ಅವರಿಂದ ಶತಕ ಗಳಿಸಲು ಸಾಧ್ಯವಾಗಲಿಲ್ಲ. ಅರ್ಧಶತಕವೂ ಬಂದಿಲ್ಲ. ಹೀಗಾಗಿ ಈ ಪಟ್ಟಿಯಲ್ಲಿ ಬಾಬರ್ 55 ನೇ ಸ್ಥಾನದಲ್ಲಿದ್ದಾರೆ.(AP)

    ಹಂಚಿಕೊಳ್ಳಲು ಲೇಖನಗಳು