logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್​ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ; ಈ ಮೈಲಿಗಲ್ಲು ತಲುಪಿದ ವಿಶ್ವದ ಮೊದಲ ಆಟಗಾರ

ಐಪಿಎಲ್​ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ; ಈ ಮೈಲಿಗಲ್ಲು ತಲುಪಿದ ವಿಶ್ವದ ಮೊದಲ ಆಟಗಾರ

Apr 26, 2024 06:27 AM IST

Virat Kohli Record: ಸನ್​​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಸ್ಟಾರ್​ ಬ್ಯಾಟರ್ ವಿರಾಟ್ ಕೊಹ್ಲಿ ಅವರು 51 ರನ್ ಸಿಡಿಸಿ ಐಪಿಎಲ್​ನಲ್ಲಿ 400 ರನ್​ಗಳ ಗಡಿ ದಾಟಿದರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

Virat Kohli Record: ಸನ್​​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಸ್ಟಾರ್​ ಬ್ಯಾಟರ್ ವಿರಾಟ್ ಕೊಹ್ಲಿ ಅವರು 51 ರನ್ ಸಿಡಿಸಿ ಐಪಿಎಲ್​ನಲ್ಲಿ 400 ರನ್​ಗಳ ಗಡಿ ದಾಟಿದರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವು ಸಾಧಿಸಿದೆ. 35 ರನ್​ಗಳ ಗೆಲುವು ದಾಖಲಿಸಿದ ಆರ್​ಸಿಬಿ ಸತತ ಸೋಲುಗಳ ನಂತರ ಜಯದ ಹಾದಿಗೆ ಮರಳಿದೆ. ಈ ಪಂದ್ಯ ಗೆಲುವಿನ ಜೊತೆಗೆ ವಿರಾಟ್ ಕೊಹ್ಲಿಯೂ ವಿಶೇಷ ದಾಖಲೆ ನಿರ್ಮಿಸಿದ್ದಾರೆ.
(1 / 5)
ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವು ಸಾಧಿಸಿದೆ. 35 ರನ್​ಗಳ ಗೆಲುವು ದಾಖಲಿಸಿದ ಆರ್​ಸಿಬಿ ಸತತ ಸೋಲುಗಳ ನಂತರ ಜಯದ ಹಾದಿಗೆ ಮರಳಿದೆ. ಈ ಪಂದ್ಯ ಗೆಲುವಿನ ಜೊತೆಗೆ ವಿರಾಟ್ ಕೊಹ್ಲಿಯೂ ವಿಶೇಷ ದಾಖಲೆ ನಿರ್ಮಿಸಿದ್ದಾರೆ.(AP)
ಆರ್​ಸಿಬಿ ಸ್ಟಾರ್ ಬ್ಯಾಟರ್ ಮತ್ತು ಆರಂಭಿಕ ಆಟಗಾರ ಕೊಹ್ಲಿ ಈ ಆವೃತ್ತಿಯಲ್ಲಿ ಮತ್ತೊಂದು ಅರ್ಧಶತಕ ಸಿಡಿಸಿದರು. 43 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 51 ರನ್ ಗಳಿಸಿದ ವಿರಾಟ್, ಈ ಋತುವಿನಲ್ಲಿ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರಿಸಿ ಆರೆಂಜ್ ಕ್ಯಾಪ್ ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ. 9 ಪಂದ್ಯಗಳಲ್ಲಿ 430 ರನ್ ಬಾರಿಸಿದ್ದಾರೆ.
(2 / 5)
ಆರ್​ಸಿಬಿ ಸ್ಟಾರ್ ಬ್ಯಾಟರ್ ಮತ್ತು ಆರಂಭಿಕ ಆಟಗಾರ ಕೊಹ್ಲಿ ಈ ಆವೃತ್ತಿಯಲ್ಲಿ ಮತ್ತೊಂದು ಅರ್ಧಶತಕ ಸಿಡಿಸಿದರು. 43 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 51 ರನ್ ಗಳಿಸಿದ ವಿರಾಟ್, ಈ ಋತುವಿನಲ್ಲಿ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರಿಸಿ ಆರೆಂಜ್ ಕ್ಯಾಪ್ ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ. 9 ಪಂದ್ಯಗಳಲ್ಲಿ 430 ರನ್ ಬಾರಿಸಿದ್ದಾರೆ.(PTI)
17ನೇ ಆವೃತ್ತಿಯ ಐಪಿಎಲ್​ನಲ್ಲಿ 400 ರನ್​ಗಳ ಗಡಿ ದಾಟುತ್ತಿದ್ದಂತೆ ಕೊಹ್ಲಿ ಮತ್ತೊಂದು ಅಪರೂಪದ ದಾಖಲೆಯನ್ನು ನಿರ್ಮಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 10 ಆವೃತ್ತಿಗಳಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಪಿಎಲ್​ನಲ್ಲಿ ಆಡಿದ 17 ಸೀಸನ್​​​ಗಳ ಪೈಕಿ ಕೊಹ್ಲಿ 10 ಸೀಸನ್​​ಗಳಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ.
(3 / 5)
17ನೇ ಆವೃತ್ತಿಯ ಐಪಿಎಲ್​ನಲ್ಲಿ 400 ರನ್​ಗಳ ಗಡಿ ದಾಟುತ್ತಿದ್ದಂತೆ ಕೊಹ್ಲಿ ಮತ್ತೊಂದು ಅಪರೂಪದ ದಾಖಲೆಯನ್ನು ನಿರ್ಮಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 10 ಆವೃತ್ತಿಗಳಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಪಿಎಲ್​ನಲ್ಲಿ ಆಡಿದ 17 ಸೀಸನ್​​​ಗಳ ಪೈಕಿ ಕೊಹ್ಲಿ 10 ಸೀಸನ್​​ಗಳಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ.(AP)
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್​ಸಿಬಿ 7 ವಿಕೆಟ್ ನಷ್ಟಕ್ಕೆ 206 ರನ್ ಪೇರಿಸಿತು. ಆರ್​​ಸಿಬಿ ಬ್ಯಾಟರ್​ ರಜತ್ ಪಾಟೀದಾರ್ 19 ಎಸೆತಗಳಲ್ಲಿ  50 ರನ್ ಬಾರಿಸಿ ದಾಖಲೆ ಬರೆದರು. ಇದು ಐಪಿಎಲ್ ಇತಿಹಾಸದಲ್ಲಿ ಆರ್​ಸಿಬಿ ದಾಖಲಾದ ಎರಡನೇ ವೇಗದ ಅರ್ಧಶತಕವಾಗಿದೆ.
(4 / 5)
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್​ಸಿಬಿ 7 ವಿಕೆಟ್ ನಷ್ಟಕ್ಕೆ 206 ರನ್ ಪೇರಿಸಿತು. ಆರ್​​ಸಿಬಿ ಬ್ಯಾಟರ್​ ರಜತ್ ಪಾಟೀದಾರ್ 19 ಎಸೆತಗಳಲ್ಲಿ  50 ರನ್ ಬಾರಿಸಿ ದಾಖಲೆ ಬರೆದರು. ಇದು ಐಪಿಎಲ್ ಇತಿಹಾಸದಲ್ಲಿ ಆರ್​ಸಿಬಿ ದಾಖಲಾದ ಎರಡನೇ ವೇಗದ ಅರ್ಧಶತಕವಾಗಿದೆ.(AP)
ಸನ್​​ರೈಸರ್ಸ್ ಹೈದರಾಬಾದ್ 207 ರನ್ ಬೆನ್ನಟ್ಟಿದ್ದರೂ 171 ರನ್​ಗಳಿಗೆ ಆಟ ಮುಗಿಸಿತು. ಇದರಿಂದ 35 ರನ್​ಗಳ ಅಂತರದಿಂದ ಆರ್​ಸಿಬಿ ಗೆದ್ದಿತು. ಇದು ಟೂರ್ನಿಯಲ್ಲಿ ಸಿಕ್ಕ 2ನೇ ಗೆಲುವಾಗಿದೆ.
(5 / 5)
ಸನ್​​ರೈಸರ್ಸ್ ಹೈದರಾಬಾದ್ 207 ರನ್ ಬೆನ್ನಟ್ಟಿದ್ದರೂ 171 ರನ್​ಗಳಿಗೆ ಆಟ ಮುಗಿಸಿತು. ಇದರಿಂದ 35 ರನ್​ಗಳ ಅಂತರದಿಂದ ಆರ್​ಸಿಬಿ ಗೆದ್ದಿತು. ಇದು ಟೂರ್ನಿಯಲ್ಲಿ ಸಿಕ್ಕ 2ನೇ ಗೆಲುವಾಗಿದೆ.(AP)

    ಹಂಚಿಕೊಳ್ಳಲು ಲೇಖನಗಳು