logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Virender Sehwag: ಇಂಡೋ ಪಾಕ್ ವಿಶ್ವಕಪ್ ಪಂದ್ಯದ ವೇಳೆ ಅಖ್ತರ್ ಜೊತೆ ಜಗಳಕ್ಕೆ ಸಿದ್ಧ; ವೇಳಾಪಟ್ಟಿ ಪ್ರಕಟ ಬೆನ್ನಲ್ಲೇ ಕಾಲೆಳೆದ ಸೆಹ್ವಾಗ್

Virender Sehwag: ಇಂಡೋ ಪಾಕ್ ವಿಶ್ವಕಪ್ ಪಂದ್ಯದ ವೇಳೆ ಅಖ್ತರ್ ಜೊತೆ ಜಗಳಕ್ಕೆ ಸಿದ್ಧ; ವೇಳಾಪಟ್ಟಿ ಪ್ರಕಟ ಬೆನ್ನಲ್ಲೇ ಕಾಲೆಳೆದ ಸೆಹ್ವಾಗ್

Jan 09, 2024 08:05 PM IST

Virender Sehwag:  ಭಾರತದಲ್ಲಿ ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಇಂದು ವೇಳಾಪಟ್ಟಿ ಪ್ರಕಟಗೊಂಡಿದೆ. ಈ ನಡುವೆ ಭಾರತ ಹಾಗೂ ಪಾಕಿಸ್ತಾನ ಪಂದ್ಯದತ್ತ ಅಭಿಮಾನಿಗಳ ಕುತೂಹಲ ಹೆಚ್ಚಿದೆ. ವೇಳಾಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆ ರೋಚಕ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ.

  • Virender Sehwag:  ಭಾರತದಲ್ಲಿ ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಇಂದು ವೇಳಾಪಟ್ಟಿ ಪ್ರಕಟಗೊಂಡಿದೆ. ಈ ನಡುವೆ ಭಾರತ ಹಾಗೂ ಪಾಕಿಸ್ತಾನ ಪಂದ್ಯದತ್ತ ಅಭಿಮಾನಿಗಳ ಕುತೂಹಲ ಹೆಚ್ಚಿದೆ. ವೇಳಾಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆ ರೋಚಕ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್‌ನ ಕದನಕ್ಕೆ ಇನ್ನೂ ಸುಮಾರು ನೂರು ದಿನಗಳಿವೆ. ಅದಾಗಲೇ, ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪಾಕ್‌ ತಂಡದ ಕಾಲೆಳೆದಿದ್ದಾರೆ. ಪಾಕಿಸ್ತಾನದ ವಿರುದ್ಧ ಭಾರತದ ಗೆಲುವು ನಿಶ್ಚಿತ ಎಂದು ಅವರು ಹೇಳಿದ್ದಾರೆ.
(1 / 8)
ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್‌ನ ಕದನಕ್ಕೆ ಇನ್ನೂ ಸುಮಾರು ನೂರು ದಿನಗಳಿವೆ. ಅದಾಗಲೇ, ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪಾಕ್‌ ತಂಡದ ಕಾಲೆಳೆದಿದ್ದಾರೆ. ಪಾಕಿಸ್ತಾನದ ವಿರುದ್ಧ ಭಾರತದ ಗೆಲುವು ನಿಶ್ಚಿತ ಎಂದು ಅವರು ಹೇಳಿದ್ದಾರೆ.(Getty Images)
ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡಿದ ಎಲ್ಲಾಏಳು ಪಂದ್ಯಗಳಲ್ಲಿ ಗೆದ್ದಿರುವ ಭಾರತವು, ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಇದುವರೆಗೂ ಏಕದಿನ ವಿಶ್ವಕಪ್ ಪಂದ್ಯವನ್ನು ಸೋತಿಲ್ಲ. ಆದರೆ, ಕಳೆದ ಎರಡು ವರ್ಷಗಳಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ ಪ್ರಬಲದ ಪ್ರದರರ್ಶನ ನೀಡಿದ್ದಾರೆ. ಈ ನಡುವೆ ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯಕ್ಕೂ ಮುಂಚೆ ಸೆಹ್ವಾಗ್‌ ಹೇಳಿಕೆ ಕುತೂಹಲ ಮೂಡಿಸಿದೆ.
(2 / 8)

"ಭಾರತ ಮತ್ತು ಪಾಕಿಸ್ತಾನ ಪಂದ್ಯದ ಮೇಲೆ ಎಲ್ಲರ ಗಮನ ಕೇಂದ್ರೀಕರಿಸಲಿದೆ ಎಂದು ಎಲ್ಲರಿಗೂ ತಿಳಿದಿದೆ. ಆ ಪಂದ್ಯದ ಸಮಯದಲ್ಲಿ ನಾನು ಶೋಯೆಬ್ ಅಖ್ತರ್ ಅವರೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಜಗಳಕ್ಕೆ ಸಿದ್ಧನಿದ್ದೇನೆ. ಭಾರತ ಇದುವರೆಗೂ ಪಾಕ್‌ ವಿರುದ್ದ ವಿಶ್ವಕಪ್ ಸೋತಿಲ್ಲ ಎಂದು ದಾಖಲೆ ಹೇಳುತ್ತದೆ. ನಾವು 7-0 ಮುನ್ನಡೆಯಲ್ಲಿದ್ದೇವೆ. ಅದರಲ್ಲಿ ಒಮ್ಮೆ ಮಾತ್ರ ಚೇಸ್ ಮಾಡಿದ್ದೇವೆ. ಇಲ್ಲದಿದ್ದರೆ, ಪ್ರತಿ ಬಾರಿಯೂ ಭಾರತ ಮೊದಲು ಬ್ಯಾಟಿಂಗ್ ಮಾಡಿ ಭರ್ಜರಿ ಮೊತ್ತ ಕಲೆ ಹಾಕಿದೆ” ಎಂದು ಸೆಹ್ವಾಗ್ ಮಂಗಳವಾರ ಮುಂಬೈನಲ್ಲಿ ನಡೆದ ವಿಶ್ವಕಪ್ ಕಾರ್ಯಕ್ರಮದ ವೇಳೆ ಹೇಳಿದ್ದಾರೆ.
(3 / 8)

ಅಕ್ಟೋಬರ್ 15ರಂದು ಫಲಿತಾಂಶ ಏನಾಗುತ್ತದೆ ಎಂದು ನನಗೆ ಖಚಿತವಿಲ್ಲ. ಆದರೆ ಒತ್ತಡವನ್ನು ಉತ್ತಮವಾಗಿ ನಿಭಾಯಿಸುವ ತಂಡವು ಗೆಲ್ಲುತ್ತದೆ ಎಂದು ಸೆಹ್ವಾಗ್‌ ನುಡಿದಿದ್ದಾರೆ.
(4 / 8)

"ಭಾರತವು ಒತ್ತಡವನ್ನು ನಿಭಾಯಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ಭಾರತವು ಗೆಲ್ಲುತ್ತದೆ. ಆದರೆ ಪಾಕಿಸ್ತಾನವು ಭಾರತದ ವಿರುದ್ಧ ಇದುವರೆಗೂ ಗೆಲ್ಲದ ಕಾರಣ, ಅವರಿಗೆ ಹೆಚ್ಚಿನ ಹೊರೆ ಇದೆ. 1990ರ ದಶಕದಲ್ಲಿ ಅವರು ಒತ್ತಡವನ್ನು ನಿಭಾಯಿಸುವಲ್ಲಿ ಉತ್ತಮವಾಗಿದ್ದರು. ಆದರೆ 2000ದ ನಂತರ ಭಾರತ ತಂಡ ಉತ್ತಮವಾಗಿದೆ. ಟೀಮ್‌ ಇಂಡಿಯಾದ ಯಾವುದೇ ಆಟಗಾರ ಒತ್ತಡ ಅನುಭವಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಸೆಹ್ವಾಗ್ ಹೇಳಿದ್ದಾರೆ.
(5 / 8)

2011ರ ವಿಶ್ವಕಪ್‌ನಲ್ಲಿ ಭಾರತ ಸೇರಿದಂತೆ, ಆ ಬಳಿಕ 2015 ಹಾಗೂ 2019ರಲ್ಲಿ ಆತಿಥ್ಯ ವಹಿಸಿದ ದೇಶಗಳೇ ವಿಶ್ವಕಪ್‌ ಗೆದ್ದಿದೆ. ಹೀಗಾಗಿ ಈ ವರ್ಷ ಮತ್ತೆ ಭಾರತವೇ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡವಾಗಿದೆ.
(6 / 8)

ಆತಿಥೇಯ ಭಾರತವು 2023ರ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಭಿಯಾನ ಆರಂಭಿಸಲಿದೆ. ಅಕ್ಟೋಬರ್ 8ರಂದು ಚೆನ್ನೈನಲ್ಲಿ ಭಾರತದ ಮೊದಲ ಪಂದ್ಯ ನಡೆಯಲಿದೆ. ಅಕ್ಟೋಬರ್ 15ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಬ್ಲಾಕ್ ಬಸ್ಟರ್ ಪಂದ್ಯ ನಡೆಯಲಿದೆ. 
(7 / 8)

ಈ ವರ್ಷದ ಏಕದಿನ ವಿಶ್ವಕಪ್ ಅಕ್ಟೋಬರ್ 5ರಂದು ಆರಂಭವಾಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮೊದಲ ಪಂದ್ಯದಲ್ಲಿ‌ ಮುಖಾಮುಖಿಯಾಗಲಿವೆ.
(8 / 8)

    ಹಂಚಿಕೊಳ್ಳಲು ಲೇಖನಗಳು