logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸ್ಟ್ರೈಕ್‌ ರೇಟ್‌ ಹೊಂದಿರುವ ಆಟಗಾರರು; ಅಗ್ರ 5ರಲ್ಲಿಲ್ಲ ಭಾರತೀಯರು

ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸ್ಟ್ರೈಕ್‌ ರೇಟ್‌ ಹೊಂದಿರುವ ಆಟಗಾರರು; ಅಗ್ರ 5ರಲ್ಲಿಲ್ಲ ಭಾರತೀಯರು

May 31, 2024 02:12 PM IST

Highest strike rates: ಒಂಬತ್ತನೇ ಆವೃತ್ತಿಯ ಟಿ20 ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಟೂರ್ನಿಯ ಆರಂಭಕ್ಕೂ ಮೊದಲು, ಟಿ20 ವಿಶ್ವಕಪ್‌ನಲ್ಲಿ ಈವರೆಗೆ ಅತಿ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿದವರು ಯಾರು ಎಂಬುದನ್ನು ನೋಡೋಣ.

  • Highest strike rates: ಒಂಬತ್ತನೇ ಆವೃತ್ತಿಯ ಟಿ20 ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಟೂರ್ನಿಯ ಆರಂಭಕ್ಕೂ ಮೊದಲು, ಟಿ20 ವಿಶ್ವಕಪ್‌ನಲ್ಲಿ ಈವರೆಗೆ ಅತಿ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿದವರು ಯಾರು ಎಂಬುದನ್ನು ನೋಡೋಣ.
ಟಿ20 ವಿಶ್ವಕಪ್‌ನಲ್ಲಿ ಅಧಿಕ ಸ್ಟ್ರೈಕ್ ರೇಟ್ ಕಾಯ್ದುಕೊಂಡವರ ಪಟ್ಟಿಯಲ್ಲಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅಗ್ರಸ್ಥಾನದಲ್ಲಿದ್ದಾರೆ. ಅವರ ಸ್ಟ್ರೈಕ್ ರೇಟ್ 144.48 ಇದೆ. ಟಿ20 ವಿಶ್ವಕಪ್‌ನಲ್ಲಿ ಅತ್ಯಂತ ಕ್ರಿಯಾತ್ಮಕ ಮತ್ತು ವಿನಾಶಕಾರಿ ಬ್ಯಾಟರ್‌ ಆಗಿ ಬಟ್ಲರ್ ಗಮನ ಸೆಳೆದಿದ್ದಾರೆ. ಬಟ್ಲರ್ ಟಿ20 ವಿಶ್ವಕಪ್‌ನಲ್ಲಿ 27 ಪಂದ್ಯಗಳಲ್ಲಿ 799 ರನ್ ಗಳಿಸಿದ್ದಾರೆ.
(1 / 5)
ಟಿ20 ವಿಶ್ವಕಪ್‌ನಲ್ಲಿ ಅಧಿಕ ಸ್ಟ್ರೈಕ್ ರೇಟ್ ಕಾಯ್ದುಕೊಂಡವರ ಪಟ್ಟಿಯಲ್ಲಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅಗ್ರಸ್ಥಾನದಲ್ಲಿದ್ದಾರೆ. ಅವರ ಸ್ಟ್ರೈಕ್ ರೇಟ್ 144.48 ಇದೆ. ಟಿ20 ವಿಶ್ವಕಪ್‌ನಲ್ಲಿ ಅತ್ಯಂತ ಕ್ರಿಯಾತ್ಮಕ ಮತ್ತು ವಿನಾಶಕಾರಿ ಬ್ಯಾಟರ್‌ ಆಗಿ ಬಟ್ಲರ್ ಗಮನ ಸೆಳೆದಿದ್ದಾರೆ. ಬಟ್ಲರ್ ಟಿ20 ವಿಶ್ವಕಪ್‌ನಲ್ಲಿ 27 ಪಂದ್ಯಗಳಲ್ಲಿ 799 ರನ್ ಗಳಿಸಿದ್ದಾರೆ.(AFP)
ಪ್ರಸ್ತುತ ನಿವೃತ್ತರಾಗಿರುವ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಟಿ20 ವಿಶ್ವಕಪ್‌ನಲ್ಲಿ ಪ್ರಭಾವಶಾಲಿ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಡಿವಿಲಿಯರ್ಸ್ 29 ಇನ್ನಿಂಗ್ಸ್‌ಗಳಲ್ಲಿ 51 ಬೌಂಡರಿ ಮತ್ತು 30 ಸಿಕ್ಸರ್‌ಗಳೊಂದಿಗೆ 717 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 143.40 ಆಗಿದೆ.
(2 / 5)

ಕ್ರಿಸ್ ಗೇಲ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರ ಸ್ಟ್ರೈಕ್ ರೇಟ್ 142.75 ಆಗಿದೆ. ವೆಸ್ಟ್ ಇಂಡೀಸ್ ದಿಗ್ಗಜ ಟಿ20 ವಿಶ್ವಕಪ್‌ನಲ್ಲಿ 965 ರನ್ ಬಾರಿಸಿದ್ದಾರೆ.
(3 / 5)
ಕ್ರಿಸ್ ಗೇಲ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರ ಸ್ಟ್ರೈಕ್ ರೇಟ್ 142.75 ಆಗಿದೆ. ವೆಸ್ಟ್ ಇಂಡೀಸ್ ದಿಗ್ಗಜ ಟಿ20 ವಿಶ್ವಕಪ್‌ನಲ್ಲಿ 965 ರನ್ ಬಾರಿಸಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಮಹೇಲಾ ಜಯವರ್ಧನೆ ಹೆಸರಿನಲ್ಲಿದೆ. ಶ್ರೀಲಂಕಾದ ಸ್ಟಾರ್ ಬ್ಯಾಟರ್‌ 1,016 ರನ್ ಗಳಿಸಿದ್ದಾರೆ. ಇವರ ಸ್ಟ್ರೈಕ್‌ ರೇಟ್‌ 134.74 ಆಗಿದ್ದು, ನಾಲ್ಕನೇ ಸ್ಥಾನ ಪಡೆದಿದ್ದಾರೆ.
(4 / 5)
ಟಿ20 ವಿಶ್ವಕಪ್‌ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಮಹೇಲಾ ಜಯವರ್ಧನೆ ಹೆಸರಿನಲ್ಲಿದೆ. ಶ್ರೀಲಂಕಾದ ಸ್ಟಾರ್ ಬ್ಯಾಟರ್‌ 1,016 ರನ್ ಗಳಿಸಿದ್ದಾರೆ. ಇವರ ಸ್ಟ್ರೈಕ್‌ ರೇಟ್‌ 134.74 ಆಗಿದ್ದು, ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಸ್ಟ್ರೈಕ್ ರೇಟ್ ಪ್ರಕಾರ ಜಯವರ್ಧನೆ ಮತ್ತು ಡೇವಿಡ್ ವಾರ್ನರ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ. ವಾರ್ನರ್ 133.22 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ.
(5 / 5)
ಸ್ಟ್ರೈಕ್ ರೇಟ್ ಪ್ರಕಾರ ಜಯವರ್ಧನೆ ಮತ್ತು ಡೇವಿಡ್ ವಾರ್ನರ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ. ವಾರ್ನರ್ 133.22 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು