logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mangalore News: ಗೂಗಲ್‌ ನಂಬಿ ಕರಾವಳಿಯಲ್ಲಿ ದಾರಿ ತಪ್ಪಿದ ಲಾರಿ, ಇಳಿಜಾರ ಹಾದಿಯಲ್ಲಿ ಪರದಾಟ, ಹೀಗಿತ್ತು ನೋಟ

Mangalore News: ಗೂಗಲ್‌ ನಂಬಿ ಕರಾವಳಿಯಲ್ಲಿ ದಾರಿ ತಪ್ಪಿದ ಲಾರಿ, ಇಳಿಜಾರ ಹಾದಿಯಲ್ಲಿ ಪರದಾಟ, ಹೀಗಿತ್ತು ನೋಟ

Jun 27, 2024 02:08 PM IST

ಗೂಗಲ್‌ ಮ್ಯಾಪ್‌ ಆಧರಿಸಿ ಅನ್ಯದಾರಿಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಹೊರಟ ಬೃಹತ್‌ ಟ್ಯಾಂಕರ್‌  ತಿರುವಿನಲ್ಲಿ ಸಿಲುಕಿ ಪರದಾಡಿತು. ಇದರಿಂದ ವಾಹನಗಳ ಮಾರ್ಗವನ್ನೂ ಬದಲಾಯಿಸಬೇಕಾಯಿತು. ಹೀಗಿತ್ತು ಲಾರಿ ಸಂಕಟದ ನೋಟ.ಚಿತ್ರ- ಮಾಹಿತಿ: ಹರೀಶ ಮಾಂಬಾಡಿ, ಮಂಗಳೂರು

  • ಗೂಗಲ್‌ ಮ್ಯಾಪ್‌ ಆಧರಿಸಿ ಅನ್ಯದಾರಿಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಹೊರಟ ಬೃಹತ್‌ ಟ್ಯಾಂಕರ್‌  ತಿರುವಿನಲ್ಲಿ ಸಿಲುಕಿ ಪರದಾಡಿತು. ಇದರಿಂದ ವಾಹನಗಳ ಮಾರ್ಗವನ್ನೂ ಬದಲಾಯಿಸಬೇಕಾಯಿತು. ಹೀಗಿತ್ತು ಲಾರಿ ಸಂಕಟದ ನೋಟ.
  • ಚಿತ್ರ- ಮಾಹಿತಿ: ಹರೀಶ ಮಾಂಬಾಡಿ, ಮಂಗಳೂರು
 ಬೆಂಗಳೂರು ಭಾಗದಿಂದ ಆಗಮಿಸುವ ಕಂಟೈನರ್ ಲಾರಿಯೊಂದು, ಉಪ್ಪಿನಂಗಡಿ ಯಿಂದ ಸರಪಾಡಿ ಮಣಿಹಳ್ಳ ರಸ್ತೆ ಯಲ್ಲಿ ಆಗಮಿಸಿ, ಅಲ್ಲಿಪಾದೆ ಸಮೀಪದ ಅಣೇಜ ತಿರುವಿನಲ್ಲಿ ಸಿಲುಕಿಹಾಕಿಕೊಂಡ ಘಟನೆ ನಡೆದಿದೆ.
(1 / 7)

ಬಿಜಾಪುರ ಮೂಲದ ಲಾರಿಯು ಬೆಂಗಳೂರು ಮಂಗಳೂರು ಹೆದ್ದಾರಿಯಲ್ಲಿ ಆಗಮಿಸಿ,ಉಪ್ಪಿನಂಗಡಿ ಬಳಿ ತಿರುವಿನಲ್ಲಿ ಸಿಲುಕಿಕೊಂಡಿದೆ. 
(2 / 7)

ಮಂಗಳೂರು ತೆರಳಲು ಚಾಲಕ ಗೂಗಲ್ ಮೇಪ್ ಹಾಕಿದ ಸಂದರ್ಭ ಆತನಿಗೆ ಉಪ್ಪಿನಂಗಡಿ ಅಜಿಲಮೊಗರು ಮಣಿಹಳ್ಳ ರಸ್ತೆಯ ಮೂಲಕ ಸಾಗಿ,ಮಂಗಳೂರಿಗೆ ತೆರಳಲು ಸೂಚಿಸಿದೆ.
(3 / 7)

ಪ್ರಸ್ತುತ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಗೂಗಲ್ ಮೇಪ್ ಈ ರಸ್ತೆಯನ್ನು ಸೂಚಿಸುತ್ತಿದೆ.ಆದರೆ ಈ ರಸ್ತೆಯು ಘನವಾಹನ ಸಾಗಾಟಕ್ಕೆ ಸೂಕ್ತವಾಗಿಲ್ಲ
(4 / 7)

ಅಣೇಜದಲ್ಲಿ ಅಪಾಯಕಾರಿ ತಿರುವು ಇರುವುದರಿಂದ ಒಂದೇ ಬಾರಿಗೆ ವಾಹನ ತಿರುವು ಪಡೆದು ಕೊಳ್ಳುವುದಿಲ್ಲ.ಎರಡು ಮೂರು ಬಾರಿ ಹಿಂದೆ ಮುಂದೆ ಚಲಿಸಿ ತಿರುಗಿಸಲು ಇನ್ನಿಲ್ಲದ ಪ್ರಯಾಸ ಪಟ್ಟರು,
(5 / 7)

.ಪ್ರಸ್ತುತ ಈ ಲಾರಿಯು ಮುಂದೆ ಹೋಗಿದ್ದು,ಆದರೆ ಹಿಂದೆ ಬರಲು ಸಾಧ್ಯವಾಗಿಲ್ಲ. ಇದರಿಂದ  ಈಭಾಗದಲ್ಲಿ ಸಂಚಾರಕ್ಕೆ ಅಡಚಣೆಯೂ ಆಗಿದೆ.
(6 / 7)

ಲಾರಿ ತಿರುವಿನಲ್ಲಿ ಸಿಲುಕಿದ್ದರಿಂದ ವಾಹನಗಳು  ಸರಪಾಡಿ ಬಿಸಿರೋಡು ಸಂಚರಿಸುವ ಬಸ್ ಗಳು ಪರ್ಯಾಯ ರಸ್ತೆಯಲ್ಲಿ ಸಂಚರಿಸಿದ್ದು, ಹೀಗಾಗಿ ಸರಪಾಡಿ ಮಣಿನಾಲ್ಕೂರು ಗ್ರಾಮದ ಗ್ರಾಮಸ್ಥರು ತೊಂದರೆ ಅನುಭವಿಸಬೇಕಾಯಿತು. 
(7 / 7)

    ಹಂಚಿಕೊಳ್ಳಲು ಲೇಖನಗಳು