logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದರ್ಶನ್ ತೂಗುದೀಪ ಕೇಸ್; ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕಂಡುಬಂದ 10 ಜೀವನ ಪಾಠಗಳು

ದರ್ಶನ್ ತೂಗುದೀಪ ಕೇಸ್; ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕಂಡುಬಂದ 10 ಜೀವನ ಪಾಠಗಳು

Jun 24, 2024 07:00 AM IST

ದರ್ಶನ್ ತೂಗುದೀಪ ಕೇಸ್; ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಬಹಳ ಸಂಚಲನ ಮೂಡಿಸಿದ ಹೈಪ್ರೊಫೈಲ್ ಕೇಸ್‌. ಇದರಲ್ಲಿ ನಟ ದರ್ಶನ್ ತೂಗುದೀಪ ಸೇರಿ 17 ಆರೋಪಿಗಳು ಜೈಲು ಸೇರಿದರು. ಈ ಪ್ರಕರಣದಲ್ಲಿ  ಕಂಡುಬಂದ 10 ಜೀವನ ಪಾಠಗಳ ಕಡೆಗೊಂದು ನೋಟ.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಆರೋಪಿಗಳಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ, ಅವರ ಗೆಳತಿ ಪವಿತ್ರಾ ಗೌಡ ಮತ್ತು ಸಂಗಡಿಗರು ಈಗ ವಿಚಾರಣಾಧೀನ ಕೈದಿಗಳಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆದು ಕೋರ್ಟ್ ತೀರ್ಪು ನೀಡಿದ ಮೇಲಷ್ಟೆ ಅಪರಾಧಿಗಳು ಯಾರೆಂಬುದು ಘೋಷಣೆ ಆಗಲಿದೆ. ಆದರೆ, ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಸಿಗುವ 10 ಜೀವನ ಪಾಠಗಳಿವು. (ಸಾಂಕೇತಿಕ ಚಿತ್ರ)
(1 / 11)

1) ಮೂರನೆಯವರ ವೈಯಕ್ತಿಕ ಬದುಕಿನಲ್ಲಿ ಹಸ್ತಕ್ಷೇಪ ಮಾಡಬಾರದು. ಸೊಂಟದ ಕೆಳಗಿನ ಮಾತುಗಳನ್ನಾಡಿದರೆ, ಕೃತ್ಯವೆಸಗಿದರೆ ಅದು ಪ್ರಾಣಕ್ಕೇ ಸಂಚಕಾರ ಉಂಟುಮಾಡಬಹುದು.
(2 / 11)
1) ಮೂರನೆಯವರ ವೈಯಕ್ತಿಕ ಬದುಕಿನಲ್ಲಿ ಹಸ್ತಕ್ಷೇಪ ಮಾಡಬಾರದು. ಸೊಂಟದ ಕೆಳಗಿನ ಮಾತುಗಳನ್ನಾಡಿದರೆ, ಕೃತ್ಯವೆಸಗಿದರೆ ಅದು ಪ್ರಾಣಕ್ಕೇ ಸಂಚಕಾರ ಉಂಟುಮಾಡಬಹುದು.
2) ವಿವಾಹಿತರಾದ ಬಳಿಕ ಪುರುಷನೇ ಆಗಲಿ, ಸ್ತ್ರೀಯೇ ಆಗಲಿ ದಾಂಪತ್ಯದ ಚೌಕಟ್ಟು ಮೀರಿ ಹೋಗಬಾರದು. ಮೀರಿ ಹೋದರೆ ಸಂಕಟ ಅನುಭವಿಸುವವರು ಮಗ/ಮಗಳು, ಅಪ್ಪ, ಅಮ್ಮ ಮತ್ತು ಪರಿವಾರದವರು. ದಾಂಪತ್ಯ ಸುಖಕ್ಕೆ ಸುಖ ಸಂಸಾರದ ಸೂತ್ರ ಅನುಸರಿಸಬೇಕು.
(3 / 11)
2) ವಿವಾಹಿತರಾದ ಬಳಿಕ ಪುರುಷನೇ ಆಗಲಿ, ಸ್ತ್ರೀಯೇ ಆಗಲಿ ದಾಂಪತ್ಯದ ಚೌಕಟ್ಟು ಮೀರಿ ಹೋಗಬಾರದು. ಮೀರಿ ಹೋದರೆ ಸಂಕಟ ಅನುಭವಿಸುವವರು ಮಗ/ಮಗಳು, ಅಪ್ಪ, ಅಮ್ಮ ಮತ್ತು ಪರಿವಾರದವರು. ದಾಂಪತ್ಯ ಸುಖಕ್ಕೆ ಸುಖ ಸಂಸಾರದ ಸೂತ್ರ ಅನುಸರಿಸಬೇಕು.(canva)
3) ಮನೆ ಊಟ ಹೇಗೆಯೇ ಇರಲಿ, ಮನೆ ಊಟ ಮನೆ ಊಟವೇ. ಅದುವೇ ಸುರಕ್ಷಿತ. ಅನಿವಾರ್ಯಕ್ಕಷ್ಟೇ ಹೋಟೆಲ್ ಊಟ. ಅದು ಸುರಕ್ಷಿತವಲ್ಲ. ಆರೋಗ್ಯಕ್ಕೂ ಒಳ್ಳೆಯದಲ್ಲ.
(4 / 11)
3) ಮನೆ ಊಟ ಹೇಗೆಯೇ ಇರಲಿ, ಮನೆ ಊಟ ಮನೆ ಊಟವೇ. ಅದುವೇ ಸುರಕ್ಷಿತ. ಅನಿವಾರ್ಯಕ್ಕಷ್ಟೇ ಹೋಟೆಲ್ ಊಟ. ಅದು ಸುರಕ್ಷಿತವಲ್ಲ. ಆರೋಗ್ಯಕ್ಕೂ ಒಳ್ಳೆಯದಲ್ಲ.(canva)
4) ಸೆಲೆಬ್ರಿಟಿ ಬದುಕಿಗೆ ಆಸೆಪಟ್ಟು ಅಡ್ಡದಾರಿ ಹಿಡಿದರೆ ಯಶಸ್ಸು ಸಿಗದು. ಪರಿಶ್ರಮ ಪಡಬೇಕು. ನಿಯತ್ತಾಗಿ ದುಡಿಯಬೇಕು. ದುಡಿಮೆಯಲ್ಲಿ ಸ್ಥಿರತೆ ಇರಬೇಕು. ತಡವಾದರೂ ಯಶಸ್ಸು ಸಿಕ್ಕೇ ಸಿಗುತ್ತದೆ. 
(5 / 11)
4) ಸೆಲೆಬ್ರಿಟಿ ಬದುಕಿಗೆ ಆಸೆಪಟ್ಟು ಅಡ್ಡದಾರಿ ಹಿಡಿದರೆ ಯಶಸ್ಸು ಸಿಗದು. ಪರಿಶ್ರಮ ಪಡಬೇಕು. ನಿಯತ್ತಾಗಿ ದುಡಿಯಬೇಕು. ದುಡಿಮೆಯಲ್ಲಿ ಸ್ಥಿರತೆ ಇರಬೇಕು. ತಡವಾದರೂ ಯಶಸ್ಸು ಸಿಕ್ಕೇ ಸಿಗುತ್ತದೆ. (canva)
5) ಸೆಲೆಬ್ರಿಟಿ ಅಥವಾ ತಾರಾಪಟ್ಟ ಅಥವಾ ಸ್ಟಾರ್‌ ಆಗಿಬಿಟ್ಟರೆ ಅದೊಂದು ರೀತಿ ಉತ್ತುಂಗ. ಅದನ್ನು ಉಳಿಸಿಕೊಳ್ಳುವುದೇ ಸಾಹಸ. ಅಹಂಕಾರದಿಂದ ಮೆರೆದರೆ, ಅಥವಾ ಸುತ್ತಮುತ್ತ ಜೊತೆಗೇ ಇರುವವರ ಪ್ರಭಾವಕ್ಕೆ ಒಳಗಾಗಿ ಮೈಮರೆತರೆ, ವಿವೇಚನೆ ಇಲ್ಲದೆ ವರ್ತಿಸಿದರೆ ಆಗ ಬೀದಿಗೆ ತಂದು ನಿಲ್ಲಿಸುತ್ತೆ ಬದುಕು. 
(6 / 11)
5) ಸೆಲೆಬ್ರಿಟಿ ಅಥವಾ ತಾರಾಪಟ್ಟ ಅಥವಾ ಸ್ಟಾರ್‌ ಆಗಿಬಿಟ್ಟರೆ ಅದೊಂದು ರೀತಿ ಉತ್ತುಂಗ. ಅದನ್ನು ಉಳಿಸಿಕೊಳ್ಳುವುದೇ ಸಾಹಸ. ಅಹಂಕಾರದಿಂದ ಮೆರೆದರೆ, ಅಥವಾ ಸುತ್ತಮುತ್ತ ಜೊತೆಗೇ ಇರುವವರ ಪ್ರಭಾವಕ್ಕೆ ಒಳಗಾಗಿ ಮೈಮರೆತರೆ, ವಿವೇಚನೆ ಇಲ್ಲದೆ ವರ್ತಿಸಿದರೆ ಆಗ ಬೀದಿಗೆ ತಂದು ನಿಲ್ಲಿಸುತ್ತೆ ಬದುಕು. (canva)
6) ಸೆಲೆಬ್ರಿಟಿ ಸ್ಟೇಟಸ್ ಬಂದ ಕೂಡಲೇ ಜೊತೆಯಾಗುವವರ ಮೇಲೆ ನಿಗಾ ಇರಬೇಕು. ವೈಯಕ್ತಿಕ ಬದುಕು, ಹಳೆಯ ಸ್ನೇಹಿತರು, ಬಂಧು ಮಿತ್ರರು ದೂರಾಗದಂತೆ ನೋಡಿಕೊಳ್ಳಬೇಕು.  
(7 / 11)
6) ಸೆಲೆಬ್ರಿಟಿ ಸ್ಟೇಟಸ್ ಬಂದ ಕೂಡಲೇ ಜೊತೆಯಾಗುವವರ ಮೇಲೆ ನಿಗಾ ಇರಬೇಕು. ವೈಯಕ್ತಿಕ ಬದುಕು, ಹಳೆಯ ಸ್ನೇಹಿತರು, ಬಂಧು ಮಿತ್ರರು ದೂರಾಗದಂತೆ ನೋಡಿಕೊಳ್ಳಬೇಕು.  (canva)
7) ಮದ್ಯಪಾನ ಮಾಡಿ ಅಮಲೇರಿದಾಗ ಮಾತ್ರ ಬರುವ ಎಲ್ಲಿಲ್ಲದ ಧೈರ್ಯ, ಅಮಲು ಇಳಿದಾಗ ಇರಲ್ಲ. ಇಲಿ ಹುಲಿಯಾಗಲು ಸಾಧ್ಯವಿಲ್ಲ. ಅಂತೆಯೇ ಮನುಷ್ಯ ಮನುಷ್ಯನಾಗಿಯೇ ಇರಬೇಕು. ಎಲ್ಲವೂ ಇತಿಮಿತಿಯಲ್ಲಿದ್ದರೆ ಚೆನ್ನ.
(8 / 11)
7) ಮದ್ಯಪಾನ ಮಾಡಿ ಅಮಲೇರಿದಾಗ ಮಾತ್ರ ಬರುವ ಎಲ್ಲಿಲ್ಲದ ಧೈರ್ಯ, ಅಮಲು ಇಳಿದಾಗ ಇರಲ್ಲ. ಇಲಿ ಹುಲಿಯಾಗಲು ಸಾಧ್ಯವಿಲ್ಲ. ಅಂತೆಯೇ ಮನುಷ್ಯ ಮನುಷ್ಯನಾಗಿಯೇ ಇರಬೇಕು. ಎಲ್ಲವೂ ಇತಿಮಿತಿಯಲ್ಲಿದ್ದರೆ ಚೆನ್ನ.(canva)
8) ಸ್ವಾರ್ಥ ಸಾಧಕರು ಮತ್ತು ಹೊಗಳುಭಟರ ನಡುವೆ ಮೈಮರೆತರೆ ಅಪಾಯಕಟ್ಟಿಟ್ಟ ಬುತ್ತಿ. ಸುತ್ತಮುತ್ತ ಪ್ರಚೋದಕರು ಇರುತ್ತಾರೆ. ಪ್ರಚೋದನೆಗೆ ಒಳಗಾಗದೇ ಇದ್ದರೆ ಬದುಕು ಸುಂದರ.
(9 / 11)
8) ಸ್ವಾರ್ಥ ಸಾಧಕರು ಮತ್ತು ಹೊಗಳುಭಟರ ನಡುವೆ ಮೈಮರೆತರೆ ಅಪಾಯಕಟ್ಟಿಟ್ಟ ಬುತ್ತಿ. ಸುತ್ತಮುತ್ತ ಪ್ರಚೋದಕರು ಇರುತ್ತಾರೆ. ಪ್ರಚೋದನೆಗೆ ಒಳಗಾಗದೇ ಇದ್ದರೆ ಬದುಕು ಸುಂದರ.(canva)
9) ಗುರುತು ಪರಿಚಯ ಇಲ್ಲದವರು ಹಣದ ಆಮಿಷ ಒಡ್ಡಿ ಕೆಲಸ ಮಾಡುವಂತೆ ಪುಸಲಾಯಿಸಿದಾಗ ಹಿಂದೆ ಮುಂದೆ ನೋಡದೆ ಒಪ್ಪಿಕೊಳ್ಳಬಾರದು. ಒಪ್ಪಿಕೊಂಡರೆ ಸಂಕಷ್ಟಕ್ಕೀಡಾಗುವುದು ಒಪ್ಪಿಕೊಂಡವರಷ್ಟೇ ಅಲ್ಲ, ಅವರ ಮನೆಯವರು ಕೂಡ. 
(10 / 11)
9) ಗುರುತು ಪರಿಚಯ ಇಲ್ಲದವರು ಹಣದ ಆಮಿಷ ಒಡ್ಡಿ ಕೆಲಸ ಮಾಡುವಂತೆ ಪುಸಲಾಯಿಸಿದಾಗ ಹಿಂದೆ ಮುಂದೆ ನೋಡದೆ ಒಪ್ಪಿಕೊಳ್ಳಬಾರದು. ಒಪ್ಪಿಕೊಂಡರೆ ಸಂಕಷ್ಟಕ್ಕೀಡಾಗುವುದು ಒಪ್ಪಿಕೊಂಡವರಷ್ಟೇ ಅಲ್ಲ, ಅವರ ಮನೆಯವರು ಕೂಡ. 
10) ಸಿನಿಮಾ ಬೇರೆ, ಬದುಕು ಬೇರೆ. ಸಿನಿಮಾದಂತೆ ಬದುಕು ಇರುವುದಿಲ್ಲ. ಸಿನಿಮಾ ಕಥೆಗಳಲ್ಲಿ ಹೀರೋ ಅಪರಾಧ ಮಾಡಿಯೂ ತಪ್ಪಿಸಿಕೊಳ್ಳಬಹುದು. ನಿಜ ಜೀವನ ಇರುವುದು ಕಾನೂನುಗಳ ಚೌಕಟ್ಟಿನೊಳಗೆ.
(11 / 11)
10) ಸಿನಿಮಾ ಬೇರೆ, ಬದುಕು ಬೇರೆ. ಸಿನಿಮಾದಂತೆ ಬದುಕು ಇರುವುದಿಲ್ಲ. ಸಿನಿಮಾ ಕಥೆಗಳಲ್ಲಿ ಹೀರೋ ಅಪರಾಧ ಮಾಡಿಯೂ ತಪ್ಪಿಸಿಕೊಳ್ಳಬಹುದು. ನಿಜ ಜೀವನ ಇರುವುದು ಕಾನೂನುಗಳ ಚೌಕಟ್ಟಿನೊಳಗೆ.

    ಹಂಚಿಕೊಳ್ಳಲು ಲೇಖನಗಳು