logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Diy Cleaning Hacks: ಈ ಕ್ಲೀನಿಂಗ್ ಹ್ಯಾಕ್‌ ನಿಮಗೆ ಗೊತ್ತಿದ್ದರೆ ಮನೆ ಸ್ವಚ್ಛವಾಗಿಡಲು ಹೆಚ್ಚು ಶ್ರಮ ಬೇಡ

DIY Cleaning Hacks: ಈ ಕ್ಲೀನಿಂಗ್ ಹ್ಯಾಕ್‌ ನಿಮಗೆ ಗೊತ್ತಿದ್ದರೆ ಮನೆ ಸ್ವಚ್ಛವಾಗಿಡಲು ಹೆಚ್ಚು ಶ್ರಮ ಬೇಡ

Jan 29, 2023 09:39 PM IST

DIY Cleaning Hacks: ಸ್ವಚ್ಛ ಮತ್ತು ಅಚ್ಚುಕಟ್ಟಾದ ಮನೆಯು ಪ್ರಶಾಂತತೆಯ ಭಾವವನ್ನು ನೀಡುತ್ತದೆ. ಅಂತಹ ಮನೆಯಲ್ಲಿ ಸದಾ ಶಾಂತಿಯ ವಾತಾವರಣ ಇರುತ್ತದೆ. ಮನೆಯನ್ನು ಸದಾ ಅಚ್ಚುಕಟ್ಟಾಗಿ ಹಾಗೂ ಸುಂದರವಾಗಿರುವಂತೆ ಸ್ವಚ್ಛತೆಯಿಂದ ಇಟ್ಟುಕೊಳ್ಳುವುದು ಸುಲಭದ ಕೆಲಸವೇನಲ್ಲ. ಇದಕ್ಕೆ ಶ್ರಮ ಹಾಗೂ ಸಮಯ ವಿನಿಯೋಗಿಸಬೇಕಾಗುತ್ತದೆ. ಇಲ್ಲಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ನಿಮಗಾಗಿ ಕೆಲವು ಸಲಹೆಗಳಿವೆ.

DIY Cleaning Hacks: ಸ್ವಚ್ಛ ಮತ್ತು ಅಚ್ಚುಕಟ್ಟಾದ ಮನೆಯು ಪ್ರಶಾಂತತೆಯ ಭಾವವನ್ನು ನೀಡುತ್ತದೆ. ಅಂತಹ ಮನೆಯಲ್ಲಿ ಸದಾ ಶಾಂತಿಯ ವಾತಾವರಣ ಇರುತ್ತದೆ. ಮನೆಯನ್ನು ಸದಾ ಅಚ್ಚುಕಟ್ಟಾಗಿ ಹಾಗೂ ಸುಂದರವಾಗಿರುವಂತೆ ಸ್ವಚ್ಛತೆಯಿಂದ ಇಟ್ಟುಕೊಳ್ಳುವುದು ಸುಲಭದ ಕೆಲಸವೇನಲ್ಲ. ಇದಕ್ಕೆ ಶ್ರಮ ಹಾಗೂ ಸಮಯ ವಿನಿಯೋಗಿಸಬೇಕಾಗುತ್ತದೆ. ಇಲ್ಲಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ನಿಮಗಾಗಿ ಕೆಲವು ಸಲಹೆಗಳಿವೆ.
ನಿರಂತರವಾಗಿ ಮನೆಯ ಧೂಳು ತೆಗೆಯುವುದು, ಶುಚಿಗೊಳಿಸುವುದು ಮತ್ತು ಒರೆಸುವುದರಿಂದ ನಿಮಗೆ ಸುಸ್ತಾಗಬಹುದು. ಆದರೆ, ಶುಚಿಗೊಳಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ಕೆಲವು ಸಲಹೆಗಳಿವೆ. ಕೆಲವು ಸರಳ ಹ್ಯಾಕ್‌ಗಳೊಂದಿಗೆ ನೀವು ಅದನ್ನು ಸಲೀಸಾಗಿ ಸ್ವಚ್ಛಗೊಳಿಸಬಹುದು. ನೀವು ಕಚೇರಿಗೆ ಹೋಗುವವರಾಗಿರಲಿ ಅಥವಾ ಮನೆಯಲ್ಲಿರಲಿ, ಈ ಕ್ಲೀನಿಂಗ್ ಹ್ಯಾಕ್‌ಗಳು ನಿಮ್ಮ ಜೀವನವನ್ನು ಸುಲಭಗೊಳಿಸುತ್ತದೆ.
(1 / 6)
ನಿರಂತರವಾಗಿ ಮನೆಯ ಧೂಳು ತೆಗೆಯುವುದು, ಶುಚಿಗೊಳಿಸುವುದು ಮತ್ತು ಒರೆಸುವುದರಿಂದ ನಿಮಗೆ ಸುಸ್ತಾಗಬಹುದು. ಆದರೆ, ಶುಚಿಗೊಳಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ಕೆಲವು ಸಲಹೆಗಳಿವೆ. ಕೆಲವು ಸರಳ ಹ್ಯಾಕ್‌ಗಳೊಂದಿಗೆ ನೀವು ಅದನ್ನು ಸಲೀಸಾಗಿ ಸ್ವಚ್ಛಗೊಳಿಸಬಹುದು. ನೀವು ಕಚೇರಿಗೆ ಹೋಗುವವರಾಗಿರಲಿ ಅಥವಾ ಮನೆಯಲ್ಲಿರಲಿ, ಈ ಕ್ಲೀನಿಂಗ್ ಹ್ಯಾಕ್‌ಗಳು ನಿಮ್ಮ ಜೀವನವನ್ನು ಸುಲಭಗೊಳಿಸುತ್ತದೆ.(Unsplash)
ನಿಂಬೆ ರಸ ಮತ್ತು ಅಡುಗೆ ಸೋಡಾವನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ಅದನ್ನು ಸಿಂಕ್‌ಗೆ ಸುರಿಯಿರಿ. 5 ನಿಮಿಷ ಬಿಟ್ಟು ಬಿಸಿ ನೀರನ್ನು ಸುರಿಯಿರಿ. ತಿಂಗಳಿಗೊಮ್ಮೆ ಈ ಹ್ಯಾಕ್ ಅನ್ನು ಪುನರಾವರ್ತಿಸುವುದರಿಂದ ಡ್ರೈನ್ ಮುಚ್ಚಿಹೋಗದಂತೆ ತಡೆಯಬಹುದು. ಅಲ್ಲದೆ ಡ್ರೈನ್ ತಾಜಾ ವಾಸನೆಯನ್ನು ನೀಡುತ್ತದೆ.
(2 / 6)
ನಿಂಬೆ ರಸ ಮತ್ತು ಅಡುಗೆ ಸೋಡಾವನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ಅದನ್ನು ಸಿಂಕ್‌ಗೆ ಸುರಿಯಿರಿ. 5 ನಿಮಿಷ ಬಿಟ್ಟು ಬಿಸಿ ನೀರನ್ನು ಸುರಿಯಿರಿ. ತಿಂಗಳಿಗೊಮ್ಮೆ ಈ ಹ್ಯಾಕ್ ಅನ್ನು ಪುನರಾವರ್ತಿಸುವುದರಿಂದ ಡ್ರೈನ್ ಮುಚ್ಚಿಹೋಗದಂತೆ ತಡೆಯಬಹುದು. ಅಲ್ಲದೆ ಡ್ರೈನ್ ತಾಜಾ ವಾಸನೆಯನ್ನು ನೀಡುತ್ತದೆ.(Pinterest)
ಹೊಳೆಯುವ ಓವನ್‌ಗಾಗಿ ವಿನೆಗರ್ ಮತ್ತು ಅಡಿಗೆ ಸೋಡಾ: ವಿನೆಗರ್ ಮತ್ತು ಅಡಿಗೆ ಸೋಡಾದ ಸಮಾನ ಭಾಗಗಳ ಮಿಶ್ರಣವನ್ನು ಅದನ್ನು ಓವನ್‌ ಮೇಲೆ ಹರಡಿ. 30 ನಿಮಿಷಗಳ ಕಾಲ ಬಿಟ್ಟು, ನಂತರ ಒದ್ದೆ ಬಟ್ಟೆಯಿಂದ ಸ್ಕ್ರಬ್ ಮಾಡಿ ಒರೆಸಿ. ತಿಂಗಳಿಗೊಮ್ಮೆ ಈ ಹ್ಯಾಕ್ ಅನ್ನು ಪುನರಾವರ್ತಿಸಬಹುದು.
(3 / 6)
ಹೊಳೆಯುವ ಓವನ್‌ಗಾಗಿ ವಿನೆಗರ್ ಮತ್ತು ಅಡಿಗೆ ಸೋಡಾ: ವಿನೆಗರ್ ಮತ್ತು ಅಡಿಗೆ ಸೋಡಾದ ಸಮಾನ ಭಾಗಗಳ ಮಿಶ್ರಣವನ್ನು ಅದನ್ನು ಓವನ್‌ ಮೇಲೆ ಹರಡಿ. 30 ನಿಮಿಷಗಳ ಕಾಲ ಬಿಟ್ಟು, ನಂತರ ಒದ್ದೆ ಬಟ್ಟೆಯಿಂದ ಸ್ಕ್ರಬ್ ಮಾಡಿ ಒರೆಸಿ. ತಿಂಗಳಿಗೊಮ್ಮೆ ಈ ಹ್ಯಾಕ್ ಅನ್ನು ಪುನರಾವರ್ತಿಸಬಹುದು.(Pinterest)
ಬೆಳ್ಳಿಯ ವಸ್ತುಗಳನ್ನು ಸ್ವಚ್ಛಗೊಳಿಸಲು ಕಾರ್ನ್‌ಫ್ಲೋರ್‌ ಮತ್ತು ನಿಂಬೆ ರಸ: ಸಮಾನ ಪ್ರಮಾಣದಲ್ಲಿ ಕಾರ್ನ್‌ ಫ್ಲೋರ್‌ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ, ಅದಕ್ಕೆ ಮೃದುವಾದ ಬಟ್ಟೆಯನ್ನು ಅದ್ದಿ ಬೆಳ್ಳಿಯ ಪಾತ್ರೆಗಳನ್ನು ಉಜ್ಜಿ ತೊಳೆಯಬೇಕು.
(4 / 6)
ಬೆಳ್ಳಿಯ ವಸ್ತುಗಳನ್ನು ಸ್ವಚ್ಛಗೊಳಿಸಲು ಕಾರ್ನ್‌ಫ್ಲೋರ್‌ ಮತ್ತು ನಿಂಬೆ ರಸ: ಸಮಾನ ಪ್ರಮಾಣದಲ್ಲಿ ಕಾರ್ನ್‌ ಫ್ಲೋರ್‌ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ, ಅದಕ್ಕೆ ಮೃದುವಾದ ಬಟ್ಟೆಯನ್ನು ಅದ್ದಿ ಬೆಳ್ಳಿಯ ಪಾತ್ರೆಗಳನ್ನು ಉಜ್ಜಿ ತೊಳೆಯಬೇಕು.(Pinterest)
ಗೆರೆ ಇಲ್ಲದ ಕಿಟಕಿಗೆ ವಿನೆಗರ್ ಮತ್ತು ನೀರು: ಕಿಟಕಿಯನ್ನು ಸ್ವಚ್ಛಗೊಳಿಸುವ ದ್ರಾವಣಕ್ಕಾಗಿ ವಿನೆಗರ್ ಮತ್ತು ನೀರನ್ನು ಸ್ಪ್ರೇ ಬಾಟಲಿಯಲ್ಲಿ ಬೆರೆಸಬಹುದು. ಕಿಟಕಿಗಳ ಮೇಲೆ ದ್ರಾವಣವನ್ನು ಸಿಂಪಡಿಸಿ ಮತ್ತು ಒಣ ಬಟ್ಟೆಯಿಂದ ಒರೆಸಬೇಕು. ಕಿಟಕಿಯು ಪಳ ಪಳ ಹೊಲೇಯುತ್ತದೆ.
(5 / 6)
ಗೆರೆ ಇಲ್ಲದ ಕಿಟಕಿಗೆ ವಿನೆಗರ್ ಮತ್ತು ನೀರು: ಕಿಟಕಿಯನ್ನು ಸ್ವಚ್ಛಗೊಳಿಸುವ ದ್ರಾವಣಕ್ಕಾಗಿ ವಿನೆಗರ್ ಮತ್ತು ನೀರನ್ನು ಸ್ಪ್ರೇ ಬಾಟಲಿಯಲ್ಲಿ ಬೆರೆಸಬಹುದು. ಕಿಟಕಿಗಳ ಮೇಲೆ ದ್ರಾವಣವನ್ನು ಸಿಂಪಡಿಸಿ ಮತ್ತು ಒಣ ಬಟ್ಟೆಯಿಂದ ಒರೆಸಬೇಕು. ಕಿಟಕಿಯು ಪಳ ಪಳ ಹೊಲೇಯುತ್ತದೆ.(Pinterest)
ಕಟಿಂಗ್ ಬೋರ್ಡ್‌ಗಳನ್ನು ಸ್ವಚ್ಛಗೊಳಿಸಲು ಉಪ್ಪು ಮತ್ತು ನಿಂಬೆ ರಸ: ತರಕಾರಿಗಳನ್ನು ಹೆಚ್ಚುವ ಕಟಿಂಗ್‌ ಬೋರ್ಡ್‌ಗಳನ್ನು ಸ್ವಚ್ಛಗೊಳಿಸಲು ಉಪ್ಪು ಮತ್ತು ನಿಂಬೆ ರಸವನ್ನು ಬಳಸಬಹುದು. ಕಟಿಂಗ್ ಬೋರ್ಡ್ ಮೇಲೆ ಉಪ್ಪನ್ನು ಸಿಂಪಡಿಸಿ, ನಿಂಬೆಯ ಹೋಳುಗಳಿಂದ ಅದನ್ನು ಉಜ್ಜಿ. ನಿಂಬೆ ಮತ್ತು ಉಪ್ಪಿನ ಮಿಶ್ರಣದಿಂದ ಸ್ಕ್ರಬ್ ಮಾಡಿದ ಬಳಿಕ ಬಿಸಿ ನೀರಿನಿಂದ ತೊಳೆಯಿರಿ. 
(6 / 6)
ಕಟಿಂಗ್ ಬೋರ್ಡ್‌ಗಳನ್ನು ಸ್ವಚ್ಛಗೊಳಿಸಲು ಉಪ್ಪು ಮತ್ತು ನಿಂಬೆ ರಸ: ತರಕಾರಿಗಳನ್ನು ಹೆಚ್ಚುವ ಕಟಿಂಗ್‌ ಬೋರ್ಡ್‌ಗಳನ್ನು ಸ್ವಚ್ಛಗೊಳಿಸಲು ಉಪ್ಪು ಮತ್ತು ನಿಂಬೆ ರಸವನ್ನು ಬಳಸಬಹುದು. ಕಟಿಂಗ್ ಬೋರ್ಡ್ ಮೇಲೆ ಉಪ್ಪನ್ನು ಸಿಂಪಡಿಸಿ, ನಿಂಬೆಯ ಹೋಳುಗಳಿಂದ ಅದನ್ನು ಉಜ್ಜಿ. ನಿಂಬೆ ಮತ್ತು ಉಪ್ಪಿನ ಮಿಶ್ರಣದಿಂದ ಸ್ಕ್ರಬ್ ಮಾಡಿದ ಬಳಿಕ ಬಿಸಿ ನೀರಿನಿಂದ ತೊಳೆಯಿರಿ. (Pinterest)

    ಹಂಚಿಕೊಳ್ಳಲು ಲೇಖನಗಳು