logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಡುಗೆ ಮನೆಯಲ್ಲಿ ಚಪಾತಿ ರೋಲ್ ಮಾಡಲು ಅಥವಾ ಇನ್ಯಾವುದಕ್ಕಾದರೂ ಅಲ್ಯೂಮಿನಿಯಂ ಪೇಪರ್ ಯೂಸ್‌ ಮಾಡ್ತೀರಾ? ಮೊದಲು ಇದನ್ನು ತಿಳಿದುಕೊಳ್ಳಿ

ಅಡುಗೆ ಮನೆಯಲ್ಲಿ ಚಪಾತಿ ರೋಲ್ ಮಾಡಲು ಅಥವಾ ಇನ್ಯಾವುದಕ್ಕಾದರೂ ಅಲ್ಯೂಮಿನಿಯಂ ಪೇಪರ್ ಯೂಸ್‌ ಮಾಡ್ತೀರಾ? ಮೊದಲು ಇದನ್ನು ತಿಳಿದುಕೊಳ್ಳಿ

Oct 02, 2024 12:35 PM IST

ಆಹಾರ ಬಿಸಿಯಾಗಿರಲು ಎಂದು ಕೆಲವರು ಅಲ್ಯೂಮಿನಿಯಂ ಪೇಪರ್ ಬಳಕೆ ಮಾಡುತ್ತಾರೆ. ಚಪಾತಿ ರೋಲ್ ಮಾಡುವಾಗ ಅಥವಾ ಇನ್ಯಾವುದೇ ತಿಂಡಿಗಳನ್ನು ಪ್ಯಾಕ್ ಮಾಡುವಾಗ ಇದರ ಬಳಕೆ ಹೆಚ್ಚಾಗಿದೆ. ಆದರೆ ಅಲ್ಯೂಮಿನಿಯಂ ಪೇಪರ್ ಬಳಕೆ ಮಾಡಿದರೆ ಏನಾಗುತ್ತದೆ ಎಂಬುದನ್ನು ನೀವು ಮೊದಲು ತಿಳಿದುಕೊಳ್ಳಬೇಕು.

  • ಆಹಾರ ಬಿಸಿಯಾಗಿರಲು ಎಂದು ಕೆಲವರು ಅಲ್ಯೂಮಿನಿಯಂ ಪೇಪರ್ ಬಳಕೆ ಮಾಡುತ್ತಾರೆ. ಚಪಾತಿ ರೋಲ್ ಮಾಡುವಾಗ ಅಥವಾ ಇನ್ಯಾವುದೇ ತಿಂಡಿಗಳನ್ನು ಪ್ಯಾಕ್ ಮಾಡುವಾಗ ಇದರ ಬಳಕೆ ಹೆಚ್ಚಾಗಿದೆ. ಆದರೆ ಅಲ್ಯೂಮಿನಿಯಂ ಪೇಪರ್ ಬಳಕೆ ಮಾಡಿದರೆ ಏನಾಗುತ್ತದೆ ಎಂಬುದನ್ನು ನೀವು ಮೊದಲು ತಿಳಿದುಕೊಳ್ಳಬೇಕು.
ಆಹಾರವನ್ನು ಬಿಸಿಯಾಗಿ ಇಡಬೇಕು ಎನ್ನುವ ಉದ್ದೇಶದಿಂದ ನೀವುದನ್ನು ಬಳಕೆ ಮಾಡುತ್ತಿದ್ದರೆ, ಆಹಾರವನ್ನು ಮೈಕ್ರೊವೇವ್‌ನಲ್ಲಿ ಇಡುವಾಗಲೂ ಅಲ್ಯೂಮಿನಿಯಂ ಪೇಪರ್ ಬಳಕೆ ಮಾಡುವುದು ತಪ್ಪು. 
(1 / 7)

ಇನ್ನು ಕೆಲವು ಹುಳಿಯಾದ ರಸ ಹೊಂದಿರುವ ಆಹಾರ, ಉದಾಹರಣೆಗೆ ಟೊಮೆಟೊ ಬಾತ್‌, ಚಿತ್ರಾನ್ನ ಅಥವಾ ಹುಣಸೆ ಹಣ್ಣು ಉಪಯೋಗಿಸಿದ ಪದಾರ್ಥ ಇವುಗಳನ್ನು ಅಲ್ಯೂಮಿನಿಯಂ ಪೇಪರ್‌ನಿಂದ ಪ್ಯಾಕ್ ಮಾಡಬೇಡಿ. ಇದರಲ್ಲಿರುವ ಹುಳಿ ಅಂಶ ಅಲ್ಯೂಮಿನಿಯಂ ಪೇಪರ್‌ನೊಂದಿಗೆ ಸೇರಿ ವಿಷಕಾರಿಯಾಗಬಹುದು.
(2 / 7)

ನೀವು ಕೇಕ್ ಮಾಡಲು ಬಯಸಿದರೆ ಓವನ್ ಬಳಕೆ ಮಾಡುವಾಗ ಕೇಕ್‌ ಮಿಶ್ರಣವನ್ನು ಅಲ್ಯುಮಿನಿಯಂ ಪೇಪರ್‌ನಲ್ಲಿ ಹಾಕಿ ನಂತರ ಅದನ್ನು ಬೇಯಿಸಬೇಡಿ. ಇದು ನಿಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. 
(3 / 7)

ನೀವು ಏನನ್ನಾದರು ತಾಜಾ ಇಟ್ಟುಕೊಳ್ಳಬೇಕು ಎಂದು ಬಯಸಿದರೆ ಅದಕ್ಕೆ ಅಲ್ಯುಮಿನಿಯಂ ಪೇಪರ್ ಯೂಸ್ ಮಾಡಬಹುದು. ಯಾಕೆಂದರೆ ಇದು ತೇವಾಂಶ ಇಲ್ಲದಂತೆ ನೋಡಿಕೊಳ್ಳುತ್ತದೆ. ಆದರೆ ಬಿಸಿ ಮಾಡಬಾರದು. 
(4 / 7)

ಒಮ್ಮೆ ಬಳಸಿದ ಪೇಪರ್‌ಅನ್ನೇ ಮತ್ತೆ ಮತ್ತೆ ಬಳಕೆ ಮಾಡುವುದು ಸರಿ ಅಲ್ಲ. 
(5 / 7)
ಒಮ್ಮೆ ಬಳಸಿದ ಪೇಪರ್‌ಅನ್ನೇ ಮತ್ತೆ ಮತ್ತೆ ಬಳಕೆ ಮಾಡುವುದು ಸರಿ ಅಲ್ಲ. 
ನೀವು ಚಪಾತಿಯನ್ನು ರೋಲ್ ಮಾಡಿದ್ದೀರಿ ಎಂದಾದರೆ ತುಂಬಾ ಸಮಯದವರೆಗೆ ಅದನ್ನು ಹಾಗೇ ಬಿಟ್ಟು ನಂತರ ತಿನ್ನುವುದು ಸರಿ ಅಲ್ಲ. 
(6 / 7)

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನೀವು ಅಲ್ಯೂಮಿನಿಯಂ ಪೇಪರ್ ಬಳಕೆ ಮಾಡಿ. ಇಲ್ಲವಾದರೆ ನಿಮ್ಮ ಆರೋಗ್ಯ ಕೈ ಕೊಡಲು ಇದೂ ಒಂದು ಕಾರಣ ಆಗಬಹುದು.
(7 / 7)

    ಹಂಚಿಕೊಳ್ಳಲು ಲೇಖನಗಳು