logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Plastic Waste: ಕಚೇರಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಲು ಇಲ್ಲಿವೆ ಪರಿಣಾಮಕಾರಿ ಐಡಿಯಾಗಳು

Plastic Waste: ಕಚೇರಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಲು ಇಲ್ಲಿವೆ ಪರಿಣಾಮಕಾರಿ ಐಡಿಯಾಗಳು

Jul 25, 2023 02:31 PM IST

Tips to reduce plastic waste: ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅತ್ಯಗತ್ಯ ಹೆಜ್ಜೆಯಾಗಿದೆ. ವಿದ್ಯಾವಂತರು ಪ್ಲಾಸ್ಟಿಕ್ ಬಳಕೆಯ ಅಪಾಯಗಳ ಬಗ್ಗೆ ತಿಳಿದಿರುತ್ತಾರೆ. ಹೀಗಿರುವಾಗ ಕಚೇರಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಲು ಅವರಿಂದ ಖಂಡಿತ ಸಾಧ್ಯವಿದೆ. ಅವರಿಗಾಗಿ ಇಲ್ಲಿವೆ ಟಿಪ್ಸ್..

  • Tips to reduce plastic waste: ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅತ್ಯಗತ್ಯ ಹೆಜ್ಜೆಯಾಗಿದೆ. ವಿದ್ಯಾವಂತರು ಪ್ಲಾಸ್ಟಿಕ್ ಬಳಕೆಯ ಅಪಾಯಗಳ ಬಗ್ಗೆ ತಿಳಿದಿರುತ್ತಾರೆ. ಹೀಗಿರುವಾಗ ಕಚೇರಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಲು ಅವರಿಂದ ಖಂಡಿತ ಸಾಧ್ಯವಿದೆ. ಅವರಿಗಾಗಿ ಇಲ್ಲಿವೆ ಟಿಪ್ಸ್..
ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬಳಸಿ. ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬದಲಿಗೆ ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಗಳು, ಕಾಫಿ ಕಪ್‌ಗಳನ್ನು ಕಚೇರಿಯಲ್ಲಿ ಬಳಸಿ.  
(1 / 5)

ನಿಮ್ಮ ಕಚೇರಿಗೆ ತಲುಪಿಸುವ ಉತ್ಪನ್ನಗಳು ಮತ್ತು ನಿಮ್ಮ ಕಚೇರಿಯಿಂದ ಸರಬರಾಜು ಆಗುವ ಉತ್ಪನ್ನಗಳನ್ನು ಪ್ಲಾಸ್ಟಿಕ್ ಪ್ಯಾಕೇಜಿಂಗ್ ಮಾಡುವ ಬದಲಾಗಿ ಆದಷ್ಟು ಪರಿಸರ-ಸ್ನೇಹಿ ಪ್ಯಾಕೇಜಿಂಗ್ ಆಯ್ಕೆ ಮಾಡಿ. 
(2 / 5)

ನಿಮ್ಮ ಕಚೇರಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಕುರಿತು ಜಾಗೃತಿ ಮೂಡಿಸಲು ಅಲ್ಲಲ್ಲಿ ಬೋರ್ಡ್​ಗಳನ್ನು ಹಾಕಿ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಸಲಹೆಗಳನ್ನು ಹಂಚಿಕೊಳ್ಳಲು ನಿಮ್ಮ ಉದ್ಯೋಗಿಗಳಿಗೆ ತಿಳಿಸಿ. 
(3 / 5)

ಪ್ಲಾಸ್ಟಿಕ್, ಕಾಗದ, ಗಾಜು ಮತ್ತು ಲೋಹ ಸೇರಿದಂತೆ ವಿವಿಧ ರೀತಿಯ ತ್ಯಾಜ್ಯಗಳಿಗೆ ಪ್ರತ್ಯೇಕ ಡಸ್ಟ್​ಬಿನ್​ ಇಡಿ. ಹೀಗೆ ಮಾಡುವುದರಿಂದ ಮರುಬಳಕೆಯ ವಸ್ತುಗಳನ್ನು ವಿಂಗಡಿಸಲು ಸಹಾಯವಾಗುತ್ತದೆ.  
(4 / 5)

ಕಾಗದದ ಬಳಕೆಯನ್ನು ಕಡಿಮೆ ಮಾಡಲು ಡಿಜಿಟಲ್ ಸಂವಹನ ಮತ್ತು ದಾಖಲಾತಿಯನ್ನು ಪ್ರೋತ್ಸಾಹಿಸಿ. ಇದು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಪರೋಕ್ಷವಾಗಿ ಸಹಾಯ ಮಾಡುತ್ತದೆ, ಏಕೆಂದರೆ ಅನೇಕ ಪೇಪರ್​ ಉತ್ಪನ್ನಗಳನ್ನು ಸಹ ಪ್ಲಾಸ್ಟಿಕ್‌ನಲ್ಲಿ ಪ್ಯಾಕ್ ಮಾಡಲಾಗುತ್ತದೆ.
(5 / 5)

    ಹಂಚಿಕೊಳ್ಳಲು ಲೇಖನಗಳು