logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Eye Health: ಕಣ್ಣಿನ ಆರೋಗ್ಯಕ್ಕೆ ಬೇಕು ಮಾವು, ಬಾದಾಮಿ, ಗೋಡಂಬಿ; ಇನ್ನೂ ಏನೇನು ತಿನ್ನಬೇಕು ನೋಡಿ

Eye Health: ಕಣ್ಣಿನ ಆರೋಗ್ಯಕ್ಕೆ ಬೇಕು ಮಾವು, ಬಾದಾಮಿ, ಗೋಡಂಬಿ; ಇನ್ನೂ ಏನೇನು ತಿನ್ನಬೇಕು ನೋಡಿ

May 18, 2023 12:50 PM IST

ಮನುಷ್ಯನ ದೇಹದ ಅಂಗಾಂಗಗಳಲ್ಲಿ ಕಣ್ಣು ಪ್ರಮುಖ ಅಂಗ. ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಸೂಕ್ತ ಆಹಾರ ಸೇವಿಸುವುದು ಅವಶ್ಯ. ʼವಿಟಮಿನ್‌ ಎʼ ಯಿಂದ ಒಮೆಗಾ 3 ಕೊಬ್ಬಿನಾಮ್ಲದವರೆಗೆ ಪೋಷಕಾಂಶಯುಕ್ತ ಹಣ್ಣು, ತರಕಾರಿ, ಆಹಾರ ಪದಾರ್ಥಗಳು ಕಣ್ಣಿನ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತವೆ. ಹಾಗಾದರೆ ಕಣ್ಣಿಗೆ ಆರೋಗ್ಯ ಸುಧಾರಣೆಗೆ ಏನು ತಿನ್ನಬೇಕು ನೋಡಿ. 

  • ಮನುಷ್ಯನ ದೇಹದ ಅಂಗಾಂಗಗಳಲ್ಲಿ ಕಣ್ಣು ಪ್ರಮುಖ ಅಂಗ. ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಸೂಕ್ತ ಆಹಾರ ಸೇವಿಸುವುದು ಅವಶ್ಯ. ʼವಿಟಮಿನ್‌ ಎʼ ಯಿಂದ ಒಮೆಗಾ 3 ಕೊಬ್ಬಿನಾಮ್ಲದವರೆಗೆ ಪೋಷಕಾಂಶಯುಕ್ತ ಹಣ್ಣು, ತರಕಾರಿ, ಆಹಾರ ಪದಾರ್ಥಗಳು ಕಣ್ಣಿನ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತವೆ. ಹಾಗಾದರೆ ಕಣ್ಣಿಗೆ ಆರೋಗ್ಯ ಸುಧಾರಣೆಗೆ ಏನು ತಿನ್ನಬೇಕು ನೋಡಿ. 
ಕಣ್ಣು ಮನುಷ್ಯ ದೇಹದ ಅತಿ ಪ್ರಮುಖ ಹಾಗೂ ಸೂಕ್ಮ ಅಂಗ. ಆದರೆ ಕೆಲವೊಮ್ಮೆ ಕಣ್ಣಿನಲ್ಲಿ ತುರಿಕೆ, ಕೆಂಪಾಗುವುದು ಹಾಗೂ ಕಿರಿಕಿರಿಯಂತಹ ಸಮಸ್ಯೆಗಳು ಕಾಣಿಸಬಹುದು. ಮಾಲಿನ್ಯದಿಂದ ಅಪೌಷ್ಟಿಕತೆವರೆಗೆ ಈ ಸಮಸ್ಯೆಗಳಿಗೆ ಕಾರಣಗಳು ಹಲವಿರುತ್ತದೆ. ಈ ಸಮಸ್ಯೆಗಳ ಬಗ್ಗೆ ಮಾತನಾಡಿರುವ ಪೌಷ್ಟಿಕ ತಜ್ಞೆ ಅಂಜಲಿ ಮುಖರ್ಜಿ ʼಕಣ್ಣು ಸೂಕ್ಷ್ಮ ಅಂಗವಾದ ಕಾರಣ ಸೂಕ್ತ ವೈದ್ಯರ ಸಲಹೆ ಪಡೆಯುವುದು ಅವಶ್ಯ, ಇದರೊಂದಿಗೆ ಆರೋಗ್ಯಕರ ಆಹಾರ ಸೇವನೆಯೂ ಬಹಳ ಮುಖ್ಯವಾಗುತ್ತದೆ. ದೇಹದ ಇತರ ಭಾಗಗಳಂತೆ ಕಣ್ಣಿನ ಆರೋಗ್ಯಕ್ಕೂ ಪೌಷ್ಟಿಕ ಆಹಾರ ಸೇವನೆ ಬಹಳ ಅವಶ್ಯʼ ಎನ್ನುತ್ತಾರೆ. ಇದರೊಂದಿಗೆ ಕಣ್ಣಿನ ಆರೋಗ್ಯ ಸುಧಾರಣೆಗೆ ಯಾವ ರೀತಿ ಆಹಾರಗಳನ್ನು ಸೇವಿಸಬೇಕು ಎಂಬುದನ್ನು ಅವರು ಇಲ್ಲಿ ತಿಳಿಸಿದ್ದಾರೆ.  
(1 / 6)
ಕಣ್ಣು ಮನುಷ್ಯ ದೇಹದ ಅತಿ ಪ್ರಮುಖ ಹಾಗೂ ಸೂಕ್ಮ ಅಂಗ. ಆದರೆ ಕೆಲವೊಮ್ಮೆ ಕಣ್ಣಿನಲ್ಲಿ ತುರಿಕೆ, ಕೆಂಪಾಗುವುದು ಹಾಗೂ ಕಿರಿಕಿರಿಯಂತಹ ಸಮಸ್ಯೆಗಳು ಕಾಣಿಸಬಹುದು. ಮಾಲಿನ್ಯದಿಂದ ಅಪೌಷ್ಟಿಕತೆವರೆಗೆ ಈ ಸಮಸ್ಯೆಗಳಿಗೆ ಕಾರಣಗಳು ಹಲವಿರುತ್ತದೆ. ಈ ಸಮಸ್ಯೆಗಳ ಬಗ್ಗೆ ಮಾತನಾಡಿರುವ ಪೌಷ್ಟಿಕ ತಜ್ಞೆ ಅಂಜಲಿ ಮುಖರ್ಜಿ ʼಕಣ್ಣು ಸೂಕ್ಷ್ಮ ಅಂಗವಾದ ಕಾರಣ ಸೂಕ್ತ ವೈದ್ಯರ ಸಲಹೆ ಪಡೆಯುವುದು ಅವಶ್ಯ, ಇದರೊಂದಿಗೆ ಆರೋಗ್ಯಕರ ಆಹಾರ ಸೇವನೆಯೂ ಬಹಳ ಮುಖ್ಯವಾಗುತ್ತದೆ. ದೇಹದ ಇತರ ಭಾಗಗಳಂತೆ ಕಣ್ಣಿನ ಆರೋಗ್ಯಕ್ಕೂ ಪೌಷ್ಟಿಕ ಆಹಾರ ಸೇವನೆ ಬಹಳ ಅವಶ್ಯʼ ಎನ್ನುತ್ತಾರೆ. ಇದರೊಂದಿಗೆ ಕಣ್ಣಿನ ಆರೋಗ್ಯ ಸುಧಾರಣೆಗೆ ಯಾವ ರೀತಿ ಆಹಾರಗಳನ್ನು ಸೇವಿಸಬೇಕು ಎಂಬುದನ್ನು ಅವರು ಇಲ್ಲಿ ತಿಳಿಸಿದ್ದಾರೆ.  (Unsplash)
ವಿಟಮಿನ್‌ ಎ: ಕಣ್ಣಿನ ಆರೋಗ್ಯಕ್ಕೆ ವಿಟಮಿನ್‌ ಎ ಅಂಶ ಬಹಳ ಮುಖ್ಯ. ಹಾಗಾಗಿ ಈ ಅಂಶವಿರುವ ಹಣ್ಣು, ತರಕಾರಿಗಳ ಸೇವನೆಗೆ ಒತ್ತು ನೀಡಬೇಕು. ಮಾವಿನಹಣ್ಣು, ಪಪ್ಪಾಯ, ಹಾಲು ಹಾಗೂ ಕ್ರೀಮ್‌ ಸೇವನೆಯು ಕಣ್ಣಿನ ಆರೋಗ್ಯಕ್ಕೆ ಉತ್ತಮ. 
(2 / 6)
ವಿಟಮಿನ್‌ ಎ: ಕಣ್ಣಿನ ಆರೋಗ್ಯಕ್ಕೆ ವಿಟಮಿನ್‌ ಎ ಅಂಶ ಬಹಳ ಮುಖ್ಯ. ಹಾಗಾಗಿ ಈ ಅಂಶವಿರುವ ಹಣ್ಣು, ತರಕಾರಿಗಳ ಸೇವನೆಗೆ ಒತ್ತು ನೀಡಬೇಕು. ಮಾವಿನಹಣ್ಣು, ಪಪ್ಪಾಯ, ಹಾಲು ಹಾಗೂ ಕ್ರೀಮ್‌ ಸೇವನೆಯು ಕಣ್ಣಿನ ಆರೋಗ್ಯಕ್ಕೆ ಉತ್ತಮ. (Unsplash)
ವಿಟಮಿನ್‌ ಬಿ 2: ರಿಬೋಫ್ಲಾವಿನ್ ಅಥವಾ ವಿಟಮಿನ್ ಬಿ 2 ಕೂಡ ಕಣ್ಣಿಗೆ ಅವಶ್ಯ. ಸೋಯಾಬೀನ್, ಪನೀರ್‌ನಿಂದ ಬೇಳೆಕಾಳುಗಳು, ಕೋಸುಗಡ್ಡೆಯವರೆಗೆ ಇವು ವಿಟಮಿನ್ ಬಿ 2 ಅಂಶ ಇರುವ ನೈಸರ್ಗಿಕ ಮೂಲಗಳಾಗಿವೆ.
(3 / 6)
ವಿಟಮಿನ್‌ ಬಿ 2: ರಿಬೋಫ್ಲಾವಿನ್ ಅಥವಾ ವಿಟಮಿನ್ ಬಿ 2 ಕೂಡ ಕಣ್ಣಿಗೆ ಅವಶ್ಯ. ಸೋಯಾಬೀನ್, ಪನೀರ್‌ನಿಂದ ಬೇಳೆಕಾಳುಗಳು, ಕೋಸುಗಡ್ಡೆಯವರೆಗೆ ಇವು ವಿಟಮಿನ್ ಬಿ 2 ಅಂಶ ಇರುವ ನೈಸರ್ಗಿಕ ಮೂಲಗಳಾಗಿವೆ.(Unsplash)
ಕ್ಯಾಲ್ಸಿಯಂ: ಬಾದಾಮಿ, ವಾಲ್‌ನಟ್‌, ರಾಜ್ಮಾ, ಬಾಜ್ರಿ ಹಾಗೂ ಓಟ್ಸ್‌ ಇವುಗಳಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾಗಿದ್ದು ಇವುಗಳ ನಿರಂತರ ಸೇವನೆ ಕಣ್ಣಿನ ಆರೋಗ್ಯಕ್ಕೆ ಬಹಳ ಅವಶ್ಯ. 
(4 / 6)
ಕ್ಯಾಲ್ಸಿಯಂ: ಬಾದಾಮಿ, ವಾಲ್‌ನಟ್‌, ರಾಜ್ಮಾ, ಬಾಜ್ರಿ ಹಾಗೂ ಓಟ್ಸ್‌ ಇವುಗಳಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾಗಿದ್ದು ಇವುಗಳ ನಿರಂತರ ಸೇವನೆ ಕಣ್ಣಿನ ಆರೋಗ್ಯಕ್ಕೆ ಬಹಳ ಅವಶ್ಯ. (Unsplash)
ವಿಟಮಿನ್‌ ಇ: ಸೊಪ್ಪು ತರಕಾರಿಗಳು, ಗೋಧಿ ಹಾಗೂ ಗೋಡಂಬಿಯಲ್ಲಿ ವಿಟಮಿನ್‌ ಇ ಅಂಶ ಸಮೃದ್ಧವಾಗಿದೆ. ಇದನ್ನು ಪ್ರತಿನಿತ್ಯದ ಆಹಾರದೊಂದಿಗೆ ಸೇವಿಸುವ ಅಭ್ಯಾಸ ರೂಡಿಸಿಕೊಳ್ಳುವುದು ಉತ್ತಮ. 
(5 / 6)
ವಿಟಮಿನ್‌ ಇ: ಸೊಪ್ಪು ತರಕಾರಿಗಳು, ಗೋಧಿ ಹಾಗೂ ಗೋಡಂಬಿಯಲ್ಲಿ ವಿಟಮಿನ್‌ ಇ ಅಂಶ ಸಮೃದ್ಧವಾಗಿದೆ. ಇದನ್ನು ಪ್ರತಿನಿತ್ಯದ ಆಹಾರದೊಂದಿಗೆ ಸೇವಿಸುವ ಅಭ್ಯಾಸ ರೂಡಿಸಿಕೊಳ್ಳುವುದು ಉತ್ತಮ. (Unsplash)
ಒಮೆಗಾ 3 ಕೊಬ್ಬಿನಾಮ್ಲಗಳು: ಒಮೆಗಾ 3 ಕೊಬ್ಬಿನಾಮ್ಲಗಳಿಂದ ತುಂಬಿರುವ ಕಾಡ್‌ ಲಿವರ್‌ ಎಣ್ಣೆಯ ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. 
(6 / 6)
ಒಮೆಗಾ 3 ಕೊಬ್ಬಿನಾಮ್ಲಗಳು: ಒಮೆಗಾ 3 ಕೊಬ್ಬಿನಾಮ್ಲಗಳಿಂದ ತುಂಬಿರುವ ಕಾಡ್‌ ಲಿವರ್‌ ಎಣ್ಣೆಯ ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. (Unsplash)

    ಹಂಚಿಕೊಳ್ಳಲು ಲೇಖನಗಳು