logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಡುಗೆಎಣ್ಣೆ ಬಳಸದೆ ತಯಾರಿಸಬಹುದಾದ ಬಾಯಲ್ಲಿ ನೀರೂರಿಸುವ 10 ಬಗೆ ಬಗೆಯ ಖಾದ್ಯಗಳಿವು

ಅಡುಗೆಎಣ್ಣೆ ಬಳಸದೆ ತಯಾರಿಸಬಹುದಾದ ಬಾಯಲ್ಲಿ ನೀರೂರಿಸುವ 10 ಬಗೆ ಬಗೆಯ ಖಾದ್ಯಗಳಿವು

Sep 21, 2023 04:39 PM IST

ಎಣ್ಣೆಯಲ್ಲಿ ಕರಿದ ಪದಾರ್ಥಗಳು ನಾಸಿಕವನ್ನು ಅರಳಿಸುವ ಜೊತೆಗೆ ಜಿಹ್ವ ಚಾಪಲ್ಯವನ್ನೂ ತಣಿಸುತ್ತವೆ. ಆದರೆ ಕರಿದ ಪದಾರ್ಥಗಳು ಆರೋಗ್ಯ ಕೆಡಿಸುವ ಜೊತೆಗೆ ತೂಕ ಹೆಚ್ಚಳಕ್ಕೂ ಕಾರಣವಾಗುತ್ತವೆ. ಹಾಗಂತ ತಿನ್ನದೇ ಇರಲು ಸಾಧ್ಯವಿಲ್ಲ. ನಾವು ನಿಮಗಾಗಿ ಎಣ್ಣೆ ಬಳಸದೇ ತಯಾರಿಸಬಹುದಾದ 10 ರುಚಿಕರ ಖಾದ್ಯಗಳ ಬಗ್ಗೆ ಇಲ್ಲಿ ತಿಳಿಸಿದ್ದೇವೆ. ಇವುಗಳಲ್ಲಿ ಕೆಲವು ಆರೋಗ್ಯಕ್ಕೂ ಉತ್ತಮ.

  • ಎಣ್ಣೆಯಲ್ಲಿ ಕರಿದ ಪದಾರ್ಥಗಳು ನಾಸಿಕವನ್ನು ಅರಳಿಸುವ ಜೊತೆಗೆ ಜಿಹ್ವ ಚಾಪಲ್ಯವನ್ನೂ ತಣಿಸುತ್ತವೆ. ಆದರೆ ಕರಿದ ಪದಾರ್ಥಗಳು ಆರೋಗ್ಯ ಕೆಡಿಸುವ ಜೊತೆಗೆ ತೂಕ ಹೆಚ್ಚಳಕ್ಕೂ ಕಾರಣವಾಗುತ್ತವೆ. ಹಾಗಂತ ತಿನ್ನದೇ ಇರಲು ಸಾಧ್ಯವಿಲ್ಲ. ನಾವು ನಿಮಗಾಗಿ ಎಣ್ಣೆ ಬಳಸದೇ ತಯಾರಿಸಬಹುದಾದ 10 ರುಚಿಕರ ಖಾದ್ಯಗಳ ಬಗ್ಗೆ ಇಲ್ಲಿ ತಿಳಿಸಿದ್ದೇವೆ. ಇವುಗಳಲ್ಲಿ ಕೆಲವು ಆರೋಗ್ಯಕ್ಕೂ ಉತ್ತಮ.
ರುಚಿಕರವಾದ ಬಗೆ ಬಗೆ ಆಹಾರಗಳನ್ನು ಸೇವಿಸಬೇಕು ಎಂದು ಎಲ್ಲರೂ ಬಯಸುವುದು ಸಹಜ. ಆದರೆ ಬಾಯಿಗೆ ರುಚಿಸಿದ್ದನ್ನೆಲ್ಲಾ ತಿಂದರೆ ದೇಹ ತೂಕ ಹೆಚ್ಚುವುದು ಪಕ್ಕಾ. ಹಾಗಂತ ಚಿಂತಿಸುವ ಅಗತ್ಯವಿಲ್ಲ. ಒಂದು ಹನಿಯೂ ಎಣ್ಣೆ ಸೋಕಿಸದೇ ತಯಾರಿಸುವ ತಿನಿಸುಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ. ಇವು ನಿಮ್ಮ ನಾಲಿಗೆಗೆ ರುಚಿಸುವುದರಲ್ಲಿ ಎರಡು ಮಾತಿಲ್ಲ. ಹಾಗಾದರೆ ಎಣ್ಣೆ ಇಲ್ಲದೆ ತಯಾರಿಸಬಹುದಾದ ಖಾದ್ಯಗಳು ಯಾವುವು ನೋಡಿ. 
(1 / 10)

ರವಾ ಇಡ್ಲಿ: ಭಾರತೀಯ ಉಪಾಹಾರಗಳ ಪೈಕಿ ರವಾ ಇಡ್ಲಿಗೆ ವಿಶೇಷ ಸ್ಥಾನವಿದೆ. ರವೆ, ತರಕಾರಿ, ಸಬ್ಬಿಸ್ಸಿಗೆ ಸೊಪ್ಪು, ಬಟಾಣಿಕಾಳು ಸೇರಿಸಿ ತಯಾರಿಸುವ ರವಾ ಇಡ್ಲಿ ಎಣ್ಣೆಯಿಲ್ಲದೇ ತಯಾರಿಸುವಬಹುದಾದ, ಆರೋಗ್ಯಕ್ಕೂ ಉತ್ತಮ ಎನ್ನಿಸುವ ಖಾದ್ಯವಾಗಿದೆ. 
(2 / 10)

ಕ್ರೀಮಿ ಮ್ಯಾಕ್ರೋನಿ: ಹಾಲಿನಿಂದ ತಯಾರಿಸಬಹುದಾದ ಕ್ರೀಮಿ ಮ್ಯಾಕ್ರೋನಿಗೆ ಎಣ್ಣೆ ಬಳಸುವುದಿಲ್ಲ. ಬೆಳ್ಳುಳ್ಳಿ, ಕಾಳುಮೆಣಸಿನ ಪುಡಿ, ಸೇರಿಸಿ ತಯಾರಿಸುವ ಈ ಮ್ಯಾಕ್ರೋನಿ ಸವಿಯನ್ನು ತಿಂದೇ ನೋಡಬೇಕು. 
(3 / 10)

ಪಾಸ್ತಾ ಸಲಾಡ್‌: ಇತ್ತೀಚಿನ ಮಿಲೇನಿಯಲ್‌ ಜಮಾನದ ಮಂದಿಯ ತಿನಿಸು ಫೇವರಿಟ್‌ ಪಾಸ್ತಾ ಸಲಾಡ್‌. ಪಾಸ್ತಾ ಹಾಗೂ ವಿವಿಧ ಬಗೆಯ ತರಕಾರಿಗಳನ್ನು  ಸೇರಿಸಿ ತಯಾರಿಸಬಹುದಾದ ಈ ಸಲಾಡ್‌ಗೆ ಎಣ್ಣೆಯ ಅವಶ್ಯಕತೆ ಇಲ್ಲ. ಇದಕ್ಕೆ ಮಯೊನೀಸ್‌ ಹಾಗೂ ವಿನೇಗರ್‌ ಸೇರಿಸುವುದರಿಂದ ರುಚಿಯೂ ಚೆನ್ನಾಗಿರುತ್ತದೆ.
(4 / 10)

ಹಮ್ಮಸ್‌: ಹಮ್ಮಸ್‌, ಹೌಮಸ್‌, ಹೋಮ್ಮಸ್‌ ಎಂದೂ ಇದನ್ನು ಕರೆಯಲಾಗುತ್ತದೆ. ಇದು ಮಧ್ಯಪ್ರಾಚ್ಯ ದೇಶದ ತಿನಿಸು. ಇದೊಂದು ಖಾರದ ಭಕ್ಷ್ಯ. ಬೇಯಿಸಿದ ಕಾಬೂಲ್‌ ಕಡಲೆಯಿಂದ ತಯಾರಿಸುವ ಈ ತಿನಿಸು ಆರೋಗ್ಯಕ್ಕೂ ಉತ್ತಮ. ಇದಕ್ಕೆ ಅಡುಗೆಎಣ್ಣೆ ಬಳಸುವುದಿಲ್ಲ. 
(5 / 10)

ಕರ್ಡ್‌ ಫಿಶ್‌: ದಹಿ ಫಿಶ್‌ ಎಂದೂ ಕರೆಯುವ ಇದು ಪಾಶ್ಚಾತ್ಯ ಖಾದ್ಯ. ಮೊಸರಿನಲ್ಲಿ ತಯಾರಿಸುವ ಮೀನಿನ ಸಾಂಬಾರ್‌ ಅಂತಲೂ ಕರೆಯಬಹುದು, ಇದನ್ನು ಅನ್ನ, ಚಪಾತಿಯೊಂದಿಗೆ ಸೇವಿಸಬಹುದು. 
(6 / 10)

ಸತ್ತು ಪಾನೀಯ: ಪ್ರತಿನಿತ್ಯ ವರ್ಕೌಟ್‌ ಮಾಡುವವರು ಸತ್ತು ಪಾನೀಯ ಸೇವಿಸುವುದರಿಂದ ದೇಹದ ಚೈತನ್ಯ ಹೆಚ್ಚುತ್ತದೆ. ವ್ಯಾಯಾಮದ ಬಳಿಕ ಇದನ್ನು ಸೇವಿಸುವುದರಿಂದ ದೇಹತೂಕ ಇಳಿಕೆಗೂ ಸಹಕಾರಿ. 
(7 / 10)

ದಹಿ ಚಾಟ್‌: ದಹಿ ಚಾಟ್‌ ಹಲವರ ಫೇವರಿಟ್‌. ಭಿನ್ನ ರುಚಿ ಹೊಂದಿರುವ ದಹಿ ಚಾಟ್‌ಗೆ ಎಣ್ಣೆ ಬಳಸುವುದಿಲ್ಲ. ದಾಳಿಂಬೆ, ಮಾವಿನಕಾಯಿ ತುರಿ, ಹೆಸರುಕಾಳು ಸೇರಿಸಿ ತಯಾರಿಸುವ ಈ ಚಾಟ್‌ ಆರೋಗ್ಯಕ್ಕೂ ಉತ್ತಮ. 
(8 / 10)

ಚನ್ನಾ ಚಾಟ್: ಕಬೂಲ್‌ ಕಡಲೆ, ಮಸಾಲೆ ಪದಾರ್ಥಗಳನ್ನು ಸೇರಿಸಿ ತಯಾರಿಸುವ ಚನ್ನಾ ಚಾಟ್‌ ರೆಸಿಪಿಗೆ ಎಣ್ಣೆ ಬಳಸುವುದಿಲ್ಲ. ಇದು ತೂಕ ಇಳಿಕೆಗೂ ಸಹಕಾರಿ, ರುಚಿಯೂ ಸಖತ್‌ ಆಗಿರುತ್ತದೆ. 
(9 / 10)

ಬ್ರೆಡ್‌ ಸಲಾಡ್‌: ಬ್ರೆಡ್‌ ಸಲಾಡ್‌ ಮಿಶ್ರಣ ಮಾಡಿ ತಯಾರಿಸುವ ಬ್ರೆಡ್‌ ಸಲಾಡ್‌ ಭಿನ್ನ ರುಚಿಯನ್ನು ಹೊಂದಿರುತ್ತದೆ. ಇದಕ್ಕೆ ಯಾವುದೇ ಎಣ್ಣೆಯನ್ನು ಬಳಸುವುದಿಲ್ಲ. 
(10 / 10)

    ಹಂಚಿಕೊಳ್ಳಲು ಲೇಖನಗಳು