logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೃಷ್ಣಜನ್ಮಾಷ್ಟಮಿಯಂದು ತಯಾರಿಸಬಹುದಾದ ವಿಶೇಷ ತಿಂಡಿಗಳು; ಈ ತಿನಿಸುಗಳನ್ನು ನೈವೇದ್ಯಕ್ಕೆ ಇರಿಸಿ ಗೋಪಿಲೋಲನನ್ನು ಮೆಚ್ಚಿಸಿ

ಕೃಷ್ಣಜನ್ಮಾಷ್ಟಮಿಯಂದು ತಯಾರಿಸಬಹುದಾದ ವಿಶೇಷ ತಿಂಡಿಗಳು; ಈ ತಿನಿಸುಗಳನ್ನು ನೈವೇದ್ಯಕ್ಕೆ ಇರಿಸಿ ಗೋಪಿಲೋಲನನ್ನು ಮೆಚ್ಚಿಸಿ

Aug 24, 2024 01:01 PM IST

ನಾಡಿನೆಲ್ಲೆಡೆ ಕೃಷ್ಣಜನ್ಮಾಷ್ಟಮಿ ಸಂಭ್ರಮ ಕಳೆಗಟ್ಟಿದೆ. ಭಾರತದದ್ಯಾಂತ ಹಲವು ಪ್ರದೇಶಗಳಲ್ಲಿ ಶ್ರೀಕೃಷ್ಣ ಹುಟ್ಟಿದ ದಿನವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಈ ದಿನ ಗೋಪಿಲೋಲನಿಗೆ ಇಷ್ಟವಾದ ಖಾದ್ಯಗಳನ್ನ ತಯಾರಿಸಿ ನೈವೇದ್ಯ ಮಾಡುವುದು ವಾಡಿಕೆ. ಈ ಬಾರಿ ಕೃಷ್ಣ ಜನ್ಮಾಷ್ಟಮಿಗೆ ಈ ತಿನಿಸುಗಳನ್ನು ತಯಾರಿಸಿ ಮಧುಸೂಧನನ ಮೆಚ್ಚುಗೆಗೆ ಪಾತ್ರರಾಗಿ.

  • ನಾಡಿನೆಲ್ಲೆಡೆ ಕೃಷ್ಣಜನ್ಮಾಷ್ಟಮಿ ಸಂಭ್ರಮ ಕಳೆಗಟ್ಟಿದೆ. ಭಾರತದದ್ಯಾಂತ ಹಲವು ಪ್ರದೇಶಗಳಲ್ಲಿ ಶ್ರೀಕೃಷ್ಣ ಹುಟ್ಟಿದ ದಿನವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಈ ದಿನ ಗೋಪಿಲೋಲನಿಗೆ ಇಷ್ಟವಾದ ಖಾದ್ಯಗಳನ್ನ ತಯಾರಿಸಿ ನೈವೇದ್ಯ ಮಾಡುವುದು ವಾಡಿಕೆ. ಈ ಬಾರಿ ಕೃಷ್ಣ ಜನ್ಮಾಷ್ಟಮಿಗೆ ಈ ತಿನಿಸುಗಳನ್ನು ತಯಾರಿಸಿ ಮಧುಸೂಧನನ ಮೆಚ್ಚುಗೆಗೆ ಪಾತ್ರರಾಗಿ.
ಕೃಷ್ಣ ಜನ್ಮಾಷ್ಟಮಿ ಎಂದರೆ ಶ್ರೀಕೃಷ್ಣ ಹುಟ್ಟಿದ ದಿನ. ಈ ದಿನ ಜಗತ್ತಿನಾದ್ಯಂತ ಇರುವ ಕೃಷ್ಣ ಭಕ್ತರು ಬಾಲಗೋಪಾಲನನ್ನ ಭಜಿಸಿ ಪೂಜಿಸುತ್ತಾರೆ. ಕೃಷ್ಣನ ಸನ್ನಿಧಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಮನೆ ಮನಗಳಲ್ಲೂ ಕಷ್ಣನ ಜಪ ಮಾಡಲಾಗುತ್ತದೆ. ಈ ದಿನದಂದು ಕೃಷ್ಣನಿಗೆ ಇಷ್ಟವಾದ ಬೆಣ್ಣೆಯ ಜೊತೆಗೆ ವಿವಿಧ ತಿನಿಸುಗಳನ್ನು ನೈವೇದ್ಯ ಮಾಡಲಾಗುತ್ತದೆ. ಚಕ್ಕುಲಿ, ಉಂಡೆ, ಪಾಯಸದಂತಹ ವಿವಿಧ ತಿನಿಸುಗಳನ್ನು ತಯಾರಿಸಲಾಗುತ್ತದೆ. ನಾಳೆ (ಆಗಸ್ಟ್ 24) ಕೃಷ್ಣ ಜನ್ಮಾಷ್ಟಮಿಯಿದ್ದು ರಾಧಾವಲ್ಲಭನಿಗಾಗಿ ಈ ತಿನಿಸುಗಳನ್ನು ತಯಾರಿಸಬಹುದು ನೋಡಿ.
(1 / 10)

ಚಕ್ಕುಲಿ: ಶ್ರೀಕೃಷ್ಣನಿಗೆ ಚಕ್ಕುಲಿ ಎಂದರೆ ಬಹಳ ಅಚ್ಚುಮೆಚ್ಚು. ಕೃಷ್ಣಜನ್ಮಾಷ್ಟಮಿಯಂದು ತಪ್ಪದೇ ಚಕ್ಕುಲಿ ತಯಾರಿಸಿ ನೈವೇದ್ಯ ಮಾಡಲಾಗುತ್ತದೆ. ನೀವು ಜನ್ಮಾಷ್ಟಮಿಗೆ ದಿಢೀರನೆ ತಯಾರಾಗುವ ಈ ಉದ್ದಿನಬೇಳೆ ಚಕ್ಕುಲಿ ತಯಾರಿಸಬಹುದು. ಇದಕ್ಕೆ ಉದ್ದಿನಬೇಳೆ – 1ಕಪ್‌, ಜೀರಿಗೆ – 2 ಚಮಚ, ಎಳ್ಳು – 2 ಟೇಬಲ್ ಚಮಚ, ಹುರಿಗಡಲೆ – ಅರ್ಧ ಕಪ್‌, ಅಕ್ಕಿಹಿಟ್ಟು – 3ಕಪ್‌, ಅರಿಸಿನ – ಅರ್ಧ ಟೀ ಚಮಚ, ಉಪ್ಪು – ರುಚಿಗೆ, ಬೆಣ್ಣೆ – 2 ಚಮಚ, ಕರಿಯಲು ಎಣ್ಣೆ ಇಷ್ಟು ಸಾಮಗ್ರಿಗಳು ಬೇಕು. ಇದನ್ನು ತಯಾರಿಸಲು ಉದ್ದಿನಬೇಳೆಯನ್ನು ಬಾಣಲೆಗೆ ಹಾಕಿ ಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಬೇಕು. ಜೀರಿಗೆ ಸ್ವಲ್ಪ ಬಿಸಿ ಮಾಡಿ. ಎಳ್ಳು ಕೂಡ ಚಿಟಪಟ ಎನ್ನುವವರೆಗೆ ಹುರಿದುಕೊಳ್ಳಿ. ಹುರಿದಿಟ್ಟುಕೊಂಡು ಉದ್ದನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಂಡು ಜರಡಿ ಹಿಡಿಯಿರಿ. ಹುರಿಗಡಲೆ, ಜೀರಿಗೆಯನ್ನು ಪುಡಿ ಮಾಡಿ ಜರಡಿ ಹಿಡಿಯಿರಿ. ನಂತರ ಅಕ್ಕಿಹಿಟ್ಟು, ಅರಿಸಿನ, ಹುರಿದ ಎಳ್ಳು, ಉಪ್ಪನ್ನು ಹಾಕಿ ಮಿಶ್ರಣ ಮಾಡಿ. ಈ ಎಲ್ಲವನ್ನೂ ಮಿಶ್ರಣ ಮಾಡಿ ಆ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ಬಿಸಿ ನೀರು ಸೇರಿಸುತ್ತಾ ಹಿಟ್ಟನ್ನು ಕಲೆಸಿಕೊಳ್ಳಿ. ಹಿಟ್ಟು ಮೃದುವಾಗಿರಬೇಕು. ಇದನ್ನು ಚಕ್ಕುಲಿ ಒರಳಿಗೆ ಹಾಕಿ, ಕಾಯಲು ಇಟ್ಟುಕೊಂಡ ಎಣ್ಣೆಗೆ ಬಿಡಿ. ಚಕ್ಕುಲಿಯನ್ನು ಎರಡೂ ಬದಿಯಲ್ಲಿ ಬಣ್ಣ ಬದಲಾಗುವವರೆಗೆ ಕಾಯಿಸಿದರೆ ಗರಿಗರಿಯಾಗಿರುತ್ತದೆ. 
(2 / 10)

ಅವಲಕ್ಕಿ ಉಂಡೆ: ಅವಲಕ್ಕಿ ಉಂಡೆ ಕೂಡ ಶ್ರೀಕೃಷ್ಣನಿಗೆ ಅಚ್ಚುಮೆಚ್ಚು. ಇದನ್ನು ತಯಾರಿಸಲು ಗಟ್ಟಿ ಅವಲಕ್ಕಿ – 2ಕಪ್‌, ಬೆಲ್ಲದ ಪುಡಿ – ಮುಕ್ಕಾಲು ಕಪ್‌, ಒಣಕೊಬ್ಬರಿ ತುರಿ – ಅರ್ಧ ಕಪ್‌, ಏಲಕ್ಕಿ ಪುಡಿ ಕಾಲು ಚಮಚ, ಕತ್ತರಿಸಿದ ಗೋಡಂಬಿ – 10, ಕತ್ತರಿಸಿದ ಬಾದಾಮಿ – 10, ದ್ರಾಕ್ಷಿ – 10, ತುಪ್ಪ – ನಾಲ್ಕು ಟೇಬಲ್ ಚಮಚ. ಇದನ್ನು ತಯಾರಿಸುವ ವಿಧಾನ: ಅವಲಕ್ಕಿಯನ್ನು ಬಾಣಲೆಯಲ್ಲಿ ಹಾಕಿ ಸಣ್ಣ ಉರಿಯಲ್ಲಿ ಗರಿಗರಿಯಾಗುವವರೆಗೆ ಹುರಿದುಕೊಳ್ಳಿ. ಬಳಿಕ ಆರಲು ಬಿಡಿ. ಇದು ಸಂಪೂರ್ಣ ತಣ್ಣದಾಗ ಮೇಲೆ ಮಿಕ್ಸಿಯಲ್ಲಿ ರವೆ ರೀತಿ ತರಿತರಿಯಾಗಿ ಪುಡಿ ಮಾಡಿಕೊಟ್ಟುಕೊಳ್ಳಿ. ಇದಕ್ಕೆ ಬೆಲ್ಲ, ಒಣಕೊಬ್ಬರಿ ಮತ್ತು ಏಲಕ್ಕಿ ಪುಡಿ ಸೇರಿಸಿ ಇನ್ನೊಂದು ಸುತ್ತು ತಿರುಗಿಸಿಕೊಳ್ಳಿ. ಬಾಣಲಿಯಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿ, ಬಾದಾಮಿ ಚಿಕ್ಕದಾಗಿ ಕತ್ತರಿಸಿ ಹಾಕಿ. ನಂತರ ಒಣದ್ರಾಕ್ಷಿ ಬಣ್ಣ ಬದಲಾಗುವವರೆಗೆ ಹುರಿಯಿರಿ. ಇದನ್ನು ಮೊದಲೇ ಮಾಡಿಟ್ಟುಕೊಂಡ ಪುಡಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ನಿಮಗೆ ಬೇಕಾದ ಗಾತ್ರಕ್ಕೆ ಉಂಡೆ ಮಾಡಿ. 
(3 / 10)

ಕೋಡುಬಳೆ: ಕೃಷ್ಣಜನ್ಮಾಷ್ಟಮಿಯಂದು ಕೋಡುಬಳೆಯನ್ನು ಕೂಡ ನೈವೇದ್ಯಕ್ಕೆ ಇಡಲಾಗುತ್ತದೆ. ಕೋಡಬಳೆ ತಯಾರಿಸಲು ಚಿರೋಟಿ ರವೆ, ಮೈದಾ, ಅಕ್ಕಿ ಹಿಟ್ಟು, ಹುರಿಗಡಲೆ, ಒಣಕೊಬ್ಬರಿ ತುರಿ, ಅಜ್ವಾನ, ಇಂಗು, ಅಚ್ಚ ಖಾರದಪುಡಿ, ಉಪ್ಪು, ಕರಿಬೇವು, ಬೆಣ್ಣೆ, ನೀರು, ಎಣ್ಣೆ ಇವಿಷ್ಟು ಸಾಮಗ್ರಿಗಳು ಬೇಕು. ಇದನ್ನು ತಯಾರಿಸಲು ಚಿರೋಟಿ ರವೆ, ಮೈದಾ ಹಾಗೂ ಅಕ್ಕಿಹಿಟ್ಟು ಇವಿಷ್ಟನ್ನೂ ಬೆಚ್ಚಗಾಗುವವರೆಗೆ ಹುರಿದುಕೊಳ್ಳಿ. ಹುರಿಗಡಲೆ, ಒಣಕೊಬ್ಬರಿ, ಅಜ್ವಾನಾ, ಇಂಗು, ಅಚ್ಚಖಾರದಪುಡಿ, ಉಪ್ಪು, ಕರಿಬೇವು ಇವುಗಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಬಾಣಲೆಗೆ ಹಿಟ್ಟು ಹಾಗೂ ಪುಡಿ ಮಾಡಿಟ್ಟುಕೊಂಡ ಸಾಮಗ್ರ ಸೇರಿಸಿ. ಈ ಮಿಶ್ರಣಕ್ಕೆ ಬೆಣ್ಣೆ ಹಾಕಿ ಚೆನ್ನಾಗಿ ಕಲೆಸಿ. ಬಳಿಕ ಹಿಟ್ಟಿಗೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಗಟ್ಟಿಯಾಗಿ ಕಲೆಸಿಕೊಳ್ಳಿ. ಗಟ್ಟಿಯಾಗಿರುವ ಹಿಟ್ಟು ಮೃದುವಾಗುವವರೆಗೆ 10 ನಿಮಿಷ ನಾದಿಕೊಳ್ಳಿ. ನಾದಿಕೊಂಡ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆ ಮಾಡಿ ಅದರಿಂದ ಬಳೆಯಾಕಾರ ಮಾಡಿಕೊಳ್ಳಿ. ಈ ಕೋಡುಬಳೆಯನ್ನು ಬಿಸಿಯಾದ ಎಣ್ಣೆಗೆ ಹಾಕಿ ಕರಿಯಿರಿ. 
(4 / 10)

ಅಕ್ಕಿ ಪಾಯಸ: ಅಕ್ಕಿ, ತೆಂಗಿನಕಾಯಿ, ಬೆಲ್ಲ, ತುಪ್ಪ, ಗೋಡಂಬಿ, ಲವಂಗ ತಯಾರಿಸುವ ವಿಧಾನ: ಪಾತ್ರೆಯಲ್ಲಿ ಕುದಿಯುತ್ತಿರುವ ನೀರಿಗೆ ಒಂದು ಕಪ್ ಅಕ್ಕಿ ಹಾಕಿ ಬೇಯಲು ಬಿಡಿ, ಇನ್ನೊಂದು ಕಡೆ ತೆಂಗಿನತುರಿಯನ್ನು ರುಬ್ಬಿಕೊಂಡು ಕಾಯಿ ಹಾಲು ತಯಾರಿಸಿಕೊಳ್ಳಿ. ಅಕ್ಕಿ ಚೆನ್ನಾಗಿ ಬೆಂದು ಅನ್ನವಾದ ಮೇಲೆ ಕಾಯಿ ಹಾಲು ಸೇರಿಸಿ ಕುದಿಸಿ. ಈಗ ತುರಿದಿಟ್ಟುಕೊಂಡ ಬೆಲ್ಲವನ್ನು ಅದೇ ‍ಪಾತ್ರೆಗೆ ಹಾಕಿ. ನಂತರ 10 ನಿಮಿಷ ಕುದಿಸಿ. ಅದಕ್ಕೆ ತುಪ್ಪದಲ್ಲಿ ಹುರಿದುಕೊಂಡ ದ್ರಾಕ್ಷಿ, ಗೋಡಂಬಿ ಸೇರಿಸಿ. ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ ಮಿಶ್ರಣ ಮಾಡಿ. 
(5 / 10)

ಪಂಚಾಮೃತ: ಹಿಂದೂ ಧರ್ಮದಲ್ಲಿ ಪಂಚಾಮೃತ ವಿಶೇಷ. ಬಹುತೇಕ ಎಲ್ಲಾ ಪೂಜೆ, ಪುನಸ್ಕಾರಗಳಲ್ಲೂ ಪಂಚಾಮೃತವನ್ನು ನೈವೇದ್ಯಕ್ಕೆ ಇಡಲಾಗುತ್ತದೆ. ಇದನ್ನು ತಯಾರಿಸಲು 1 ಕಪ್ ಮೊಸರು, ಹಾಲು 1 ಕಪ್‌, ತುಪ್ಪ 1 ಚಮಚ, ಜೇನುತುಪ್ಪ 1 ಚಮಚ, ಒಣಹಣ್ಣುಗಳು, ತುಳಸಿ ಎಲೆ ಇವಿಷ್ಟು ಸಾಮಗ್ರಿಗಳು ಬೇಕು. ಈ ಎಲ್ಲವನ್ನೂ ಪಾತ್ರೆಯೊಂದರಲ್ಲಿ ಹಾಕಿ ಮಿಶ್ರಣ ಮಾಡಿ ಪಂಚಾಮೃತ ಸವಿಯಲು ಸಿದ್ಧ. 
(6 / 10)

ಬೇಸನ್ ಲಡ್ಡು: ಕೃಷ್ಣಜನ್ಮಾಷ್ಟಮಿಯಂದು ಬೇಸನ್ ಲಡ್ಡುವನ್ನು ಕೂಡ ನೈವೇದ್ಯಕ್ಕೆ ಇಡಬಹುದು. ಇದು ಸುಲಭವಾಗಿ ತಯಾರಿಸಬಹುದಾದ ಖಾದ್ಯವಾಗಿದೆ. ಕಡಲೆಹಿಟ್ಟು, ತುಪ್ಪ, ಸಕ್ಕರೆ ಸೇರಿಸಿ ತಯಾರಿಸುವ ಈ ವಿಶೇಷ ಖಾದ್ಯವನ್ನು ಬಾಲಗೋಪಾಲ ಜನ್ಮದಿನಕ್ಕೆ ವಿಶೇಷವನ್ನಾಗಿಸಬಹುದು. 
(7 / 10)

ಅವಲಕ್ಕಿ ಒಗ್ಗರಣೆ: ಶ್ರೀಕೃಷ್ಣನಿಗೆ ಅವಲಕ್ಕಿ ಅಚ್ಚುಮೆಚ್ಚು. ಜನ್ಮಷ್ಟಮಿಯಂದು ವಿಶೇಷವಾಗಿ ಅವಲಕ್ಕಿಯಿಂದ ತಯಾರಿಸಬಹುದಾದ ಖಾದ್ಯಗಳನ್ನು ಮಾಡಬಹುದು. ಅವಲಕ್ಕಿ ಒಗ್ಗರಣೆ ಕೂಡ ನೈವೇದ್ಯಕ್ಕೆ ಇಡಬಹುದಾದದ ರೆಸಿಪಿ. 
(8 / 10)

ತಂಬಿಟ್ಟು: ದಕ್ಷಿಣ ಭಾರತದಲ್ಲಿ ಕೃಷ್ಣಜನ್ಮಾಷ್ಟಮಿಯಂದು ತಂಬಿಟ್ಟು ತಯಾರಿಸಿ ದೇವರಿಗೆ ನೈವೇದ್ಯ ಮಾಡುವ ಅಭ್ಯಾಸವಿದೆ. ಅಕ್ಕಿ, ಹುರಿಗಡಲೆ, ಶೇಂಗಾ, ತೆಂಗಿನತುರಿ, ಬೆಲ್ಲ, ನೀರು, ಏಲಕ್ಕಿ ಈ ಎಲ್ಲವನ್ನೂ ಸೇರಿಸಿ ತಂಬಿಟ್ಟು ತಯಾರಿಸಲಾಗುತ್ತದೆ. ಇದು ಕೂಡ ಸುಲಭವಾಗಿ ತಯಾರಿಸಬಹುದಾದ ಖಾದ್ಯವಾಗಿದೆ. 
(9 / 10)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
(10 / 10)

    ಹಂಚಿಕೊಳ್ಳಲು ಲೇಖನಗಳು