logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tigers Around Mysuru: ಮೈಸೂರು ಸಮೀಪವೇ ಕಾಣಿಸಿಕೊಂಡ 3 ಹುಲಿ ಗುಂಪು: ಅರಣ್ಯ ಇಲಾಖೆ ಕಾರ್ಯಾಚರಣೆ ಚುರುಕು

Tigers around Mysuru: ಮೈಸೂರು ಸಮೀಪವೇ ಕಾಣಿಸಿಕೊಂಡ 3 ಹುಲಿ ಗುಂಪು: ಅರಣ್ಯ ಇಲಾಖೆ ಕಾರ್ಯಾಚರಣೆ ಚುರುಕು

Dec 01, 2023 07:00 AM IST

ಮೈಸೂರಿನಿಂದ ಹತ್ತು ಕಿ.ಮಿ. ದೂರದಲ್ಲಿರುವ ಕಡಕೊಳ ಕೈಗಾರಿಕಾ ಪ್ರದೇಶ ಸಮೀಪದಲ್ಲಿಯೇ ಮೂರು ಹುಲಿಗಳು ಕಾಣಿಸಿಕೊಂಡಿದೆ. ಕೆಲವರು ಹುಲಿ ಕಂಡು ಅರಣ್ಯ ಇಲಾಖೆ ಮಾಹಿತಿ( Forest Department) ನೀಡಿದ್ದು, ಸಿಸಿಕ್ಯಾಮರಾ ಅಳವಡಿಸಿದಾಗ ಹುಲಿ ಚಲನ ವಲನ ಪತ್ತೆಯಾಗಿದೆ. ಹುಲಿ ಸೆರೆಗೆ ಅರಣ್ಯ ಇಲಾಖೆ ಮೂರು ಬೋನು ಇರಿಸಿ ಕ್ಯಾಮರಾ ಅಳವಡಿಸಿದೆ. ಹೀಗಿದೆ ಹುಲಿ ಕಾರ್ಯಾಚರಣೆ ನೋಟ.

  • ಮೈಸೂರಿನಿಂದ ಹತ್ತು ಕಿ.ಮಿ. ದೂರದಲ್ಲಿರುವ ಕಡಕೊಳ ಕೈಗಾರಿಕಾ ಪ್ರದೇಶ ಸಮೀಪದಲ್ಲಿಯೇ ಮೂರು ಹುಲಿಗಳು ಕಾಣಿಸಿಕೊಂಡಿದೆ. ಕೆಲವರು ಹುಲಿ ಕಂಡು ಅರಣ್ಯ ಇಲಾಖೆ ಮಾಹಿತಿ( Forest Department) ನೀಡಿದ್ದು, ಸಿಸಿಕ್ಯಾಮರಾ ಅಳವಡಿಸಿದಾಗ ಹುಲಿ ಚಲನ ವಲನ ಪತ್ತೆಯಾಗಿದೆ. ಹುಲಿ ಸೆರೆಗೆ ಅರಣ್ಯ ಇಲಾಖೆ ಮೂರು ಬೋನು ಇರಿಸಿ ಕ್ಯಾಮರಾ ಅಳವಡಿಸಿದೆ. ಹೀಗಿದೆ ಹುಲಿ ಕಾರ್ಯಾಚರಣೆ ನೋಟ.
ಮೈಸೂರು ಹೊರ ವಲಯದ ಕಡಕೊಳ ಬಳಿಯ ಟಿವಿಎಸ್‌ ಕಂಪೆನಿ ಫ್ಯಾಕ್ಟರಿ ಸಮೀಪದಲ್ಲಿಯೇ ಹುಲಿಗಳು ಕಾಣಿಸಿಕೊಂಡ ಮಾಹಿತಿ ನಂತರ ಅರಣ್ಯ ಇಲಾಖೆ ಗಸ್ತು ಹೆಚ್ಚಿಸಲಾಗಿದೆ.
(1 / 8)

ಹುಲಿ ಸಂಚರಿಸಿರುವುದನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯರ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಸಿಬ್ಬಂದಿ ಹೆಜ್ಜೆ ಗುರುತುಗಳನ್ನು ವೀಕ್ಷಿಸಿದರು.
(2 / 8)

ಹುಲಿ ಇದೇ ಮಾರ್ಗವಾಗಿ ಸಂಚರಿಸಿದೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಮಾಹಿತಿ ಕಲೆ ಹಾಕಲು ಅರಣ್ಯ ಇಲಾಖೆ ಸಿಬ್ಬಂದಿ ಎರಡು ದಿನದಿಂದ ನಿರಂತರ ಕಾರ್ಯಾಚರಣೆ ಕೈಗೊಂಡಿದ್ದಾರೆ.
(3 / 8)

ಹುಲಿಗಳ ಚಲನವಲನ ಪತ್ತೆಗೆ ಅತ್ಯಾಧುನಿಕ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹುಲಿಗಳು ಈ ಭಾಗದಲ್ಲಿ ಸಂಚರಿಸುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
(4 / 8)

ಹುಲಿಗಳನ್ನು ಸೆರೆ ಹಿಡಿಯಲು ದೊಡ್ಡನಾದ ಬೋನುಗಳನ್ನು ಹಸಿರು ಪ್ರದೇಶದ ನಡುವೆ ಇರಿಸಲಾಗಿದೆ. 
(5 / 8)

ಹುಲಿಯನ್ನು ಸೆರೆ ಹಿಡಿಯಲು ಮೂರು ಕಡೆ ಬೋನುಗಳನ್ನು ಇರಿಸಲಾಗಿದೆ. ಅದರಲ್ಲೂ ಮೂರು ಬೇರೆ ಬೇರೆ ಕಡೆ ಬೋನುಗಳನ್ನಿರಿಸಿ ಸಿಬ್ಬಂದಿಯೂ ಆ ಭಾಗದಲ್ಲಿ ಗಸ್ತು ತಿರುಗುತ್ತಿದ್ದಾರೆ.
(6 / 8)

ಮೈಸೂರು ಸಮೀಪವೇ ಹುಲಿ ಇರುವ ಮಾಹಿತಿ ಇರುವುದರಿಂದ ಮೈಸೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ.ಮಾಲತಿ ಪ್ರಿಯ, ಡಿಸಿಎಫ್‌ ಬಸವರಾಜು ಹಾಗು ಸಿಬ್ಬಂದಿ ಕಾರ್ಯಾಚರಣೆ ಕೈಗೊಳ್ಳುವ ಕುರಿತು ಸಿಬ್ಬಂದಿಗೆ ಸೂಚನೆ ನೀಡಿದರು.
(7 / 8)

ಹುಲಿ ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿರುವುದರಿಂದ ಕಡಕೊಳ ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು. ಟಿವಿಎಸ್‌ ಕಂಪೆನಿ ಉದ್ಯೈೋಗಿಗಳು ನೋಡಿಕೊಂಡು ಮನೆಗೆ ತೆರಳಬೇಕು ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಸೂಚಿಸಿದರು.
(8 / 8)

    ಹಂಚಿಕೊಳ್ಳಲು ಲೇಖನಗಳು