logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Best Bird Sanctuaries: ಭಾರತದ ಅತ್ಯುತ್ತಮ ಪಕ್ಷಿಧಾಮಗಳು: ಕರ್ನಾಟಕದ ಯಾವ ಪಕ್ಷಿಧಾಮ ಈ ಪ್ರಮುಖ ಪಟ್ಟಿಯಲ್ಲಿದೆ

Best Bird Sanctuaries: ಭಾರತದ ಅತ್ಯುತ್ತಮ ಪಕ್ಷಿಧಾಮಗಳು: ಕರ್ನಾಟಕದ ಯಾವ ಪಕ್ಷಿಧಾಮ ಈ ಪ್ರಮುಖ ಪಟ್ಟಿಯಲ್ಲಿದೆ

Jan 06, 2024 06:00 PM IST

Bird Sancturies ಪಕ್ಷಿಗಳು ಪರಿಸರದ ರಾಯಭಾರಿಗಳು. ಪರಿಸರದಲ್ಲಿ ಬದಲಾವಣೆಯಾದರೂ ಅದನ್ನು ಪಕ್ಷಿಗಳು ಗುರುತಿಸುತ್ತವೆ. ಚಳಿಗಾಲ ಬಂದರೆ ಅವುಗಳ ಸಂತಾನದ ಕ್ಷಣ. ಇದಕ್ಕಾಗಿ ಸಾವಿರಾರು ಕಿ.ಮಿ ದೂರ ಕ್ರಮಿಸಿ ಬಂದು ಕುಟುಂಬದ ಕುಡಿಗಳೊಂದಿಗೆ ಹೋಗುತ್ತವೆ. ಭಾರತದಲ್ಲಿ ಇಂತಹ ಹಲವು ತಾಣಗಳು ಪಕ್ಷಿಧಾಮಗಳಾಗಿ ರೂಪುಗೊಂಡಿದೆ. ಭಾರತದ ಟಾಪ್‌ 10 ಪಕ್ಷಿಧಾಮಗಳ ನೋಟ ಇಲ್ಲಿದೆ. 

  • Bird Sancturies ಪಕ್ಷಿಗಳು ಪರಿಸರದ ರಾಯಭಾರಿಗಳು. ಪರಿಸರದಲ್ಲಿ ಬದಲಾವಣೆಯಾದರೂ ಅದನ್ನು ಪಕ್ಷಿಗಳು ಗುರುತಿಸುತ್ತವೆ. ಚಳಿಗಾಲ ಬಂದರೆ ಅವುಗಳ ಸಂತಾನದ ಕ್ಷಣ. ಇದಕ್ಕಾಗಿ ಸಾವಿರಾರು ಕಿ.ಮಿ ದೂರ ಕ್ರಮಿಸಿ ಬಂದು ಕುಟುಂಬದ ಕುಡಿಗಳೊಂದಿಗೆ ಹೋಗುತ್ತವೆ. ಭಾರತದಲ್ಲಿ ಇಂತಹ ಹಲವು ತಾಣಗಳು ಪಕ್ಷಿಧಾಮಗಳಾಗಿ ರೂಪುಗೊಂಡಿದೆ. ಭಾರತದ ಟಾಪ್‌ 10 ಪಕ್ಷಿಧಾಮಗಳ ನೋಟ ಇಲ್ಲಿದೆ. 
ರಾಜಸ್ಥಾನದ ಕಿಯೋಲ್‌ ದಿಯೋ ಘಾನ ರಾಷ್ಟ್ರೀಯ ಉದ್ಯಾನ//ಹಿಂದೆ ಭರತ್‌ ಪುರ ಸಂಸ್ಥಾನದ ಖಾಸಗಿ ಬೇಟೆ  ತಾಣವಾಗಿದ್ದ ಸ್ಥಳವೀಗ ರಾಷ್ಟೀಯ ಉದ್ಯಾನ. ಈ ಪ್ರದೇಶದಲ್ಲಿನ ಶಿವನ ದೊಡ್ಡ ದೇಗುಲದ ಕಾರಣಕ್ಕೆ ಇದಕ್ಕೆ ಕಿಯೋಲ್‌ ದಿಯೋ ಉದ್ಯಾನ(Keoladeo Ghana National Park, Rajasthan) ಎಂದೇ ಹೆಸರಿಡಲಾಗಿದೆ. ಇಲ್ಲಿನ ಜಲತಾಣಗಳು ಚೆನ್ನಾಗಿರುವ ಕಾರಣಕ್ಕೆ ಹಕ್ಕಿಗಳು ಸುರಕ್ಷಿತ ತಾಣವೆಂದು ಇಲ್ಲಿಗೆ ಬರುತ್ತವೆ. ಸಾರಸ್‌ ಕ್ರೇನ್‌, ಬ್ಲಾಕ್‌ ನೆಕ್‌ ಸ್ಟಾರ್ಕ್‌, ಪೆಲಿಕಲ್‌, ಸ್ಪೂನ್‌ ಬಿಲ್‌, ಈಗಲ್‌ ಓಲ್‌  
(1 / 10)

ಕೇರಳದ ತಟ್ಟೆಕಾಡು ಸಲೀಂ ಆಲಿ ಪಕ್ಷಿಧಾಮ//ಕೇರಳದ ಪಶ್ಚಿಮಘಟ್ಟಗಳ ಸಾಲಿಗೆ ಬರುವ ಎರ್ನಾಕುಲಂ ಜಿಲ್ಲೆಯ ತಟ್ಟೆಕಾಡು ಪಕ್ಷಿಧಾಮವನ್ನು(Salim Ali Bird Sanctuary, Thattekad, Kerala) ಮೊದಲು ಗುರುತಿಸಿದವರು  ಪಕ್ಷಿ ಪಿತಾಮಜ ಡಾ.ಸಲೀಂ ಆಲಿ. ಇಲ್ಲಿನ ಅರಣ್ಯ ಪ್ರದೇಶ ಹತ್ತಾರು ಜಾತಿಯ ಹಕ್ಕಿಗಳಿಗೆ ತಾಣವೂ ಆಗಿ ಮಾರ್ಪಟ್ಟಿದೆ. ಆನಂತರ ಇದನ್ನು ಅಭಿವೃದ್ದಿಪಡಿಸಿ ಕೇರಳದ ಪ್ರಮುಖ ಪಕ್ಷಿಧಾಮವಾಗಿ ರೂಪಿಸಲಾಗಿದೆ. ಇಲ್ಲಿ ಮಲಬಾರ್‌ ಹಾರ್ನ್‌ ಬಿಲ್‌.. ಶ್ರೀಲಂಕಾತದ ಫ್ರಾಗ್‌,ಮೌತ್‌, ಬ್ಲಾಕ್‌ ಬಾಝಾ, ಬಾರ್ಬೆಟ್‌ ಸಹಿತ ಹಲವು ಹಕ್ಕಿಗಳು ಪ್ರತಿ ವರ್ಷ ಇಲ್ಲಿಗೆ ಬರುತ್ತವೆ. ಅರಣ್ಯ ಇಲಾಖೆಯೇ ರೂಪಿಸಿರುವ ಹೋಂಸ್ಟೇಗಳಲ್ಲಿ ಉಳಿಯುವ ಜತೆಗೆ ಪಕ್ಷಿಧಾಮದಲ್ಲಿ ವಿಹಾರ ಮಾಡಲು ಅವಕಾಶವಿದೆ.
(2 / 10)

ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನ//ಅಸ್ಸಾಂನ ಕಾಜಿರಂಗ ಉದ್ಯಾನವನ(Kaziranga National Park, Assam) ಘೇಂಡಾಗಳಿಗೆ ಹೆಸರುವಾಸಿಯಾದದ್ದು.ಇದರೊಟ್ಟಿಗೆ ಹತ್ತಾರು ಜಾತಿಯ ಹಕ್ಕಿಗಳು ಇಲ್ಲಿ ಕಂಡು ಬರುತ್ತವೆ. ಸಮೀಕ್ಷೆ ಪ್ರಕಾರ ಕಾಜಿರಂಗದಲ್ಲಿ 470  ಬಗಯ ಪಕ್ಷಿಗಳನ್ನು ಗುರುತಿಸಲಾಗಿದೆ. ಇಲ್ಲಿನ ದಟ್ಟಾರಣ್ಯದ ಜತೆಗೆ ಹುಲ್ಲುಗಾವಲುಗಳು, ನದಿ ತೀರಗಳು ಹಕ್ಕಿಗಳನ್ನು ಆಕರ್ಷಿಸುತ್ತವೆ. ಬೆಂಗಾಲ ಫ್ಲೋರಿಕನ್‌, ಫಿಶ್‌ ಈಗಲ್‌, ಸ್ವಾಂಪ್‌ ಫ್ರಾನ್‌ಕೋಲಿನ್‌ ಇಲ್ಲಿ ಕಂಡು ಬರುವ ವಿಶೇಷ ಹಕ್ಕಿಗಳು.
(3 / 10)

ಉತ್ತರ ಖಂಡದ ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನ//ಉತ್ತರ ಖಂಡ ರಾಜ್ಯದ ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನ ಹಕ್ಕಿಗಳಿಂದಲೂ ಹೆಸರುವಾಸಿ. ಇಲ್ಲಿ 580 ಬಗೆಯ ಹಕ್ಕಿಗಳಿರುವನ್ನು ಪತ್ತೆ ಮಾಡಲಾಗಿದೆ. ಇಲ್ಲಿ ಹುಲ್ಲುಗಾವಲಿನ ವಾತಾವರಣ ಇರುವ ಕಾರಣದಿಂದಲೂ ಹಕ್ಕಿಗಳು ಹೆಚ್ಚು ಸಂಖ್ಯೆಯಲ್ಲಿ ಜಿಮ್‌ ಕಾರ್ಬೆಟ್‌ ಉದ್ಯಾನ ಆಶ್ರಯಿಸಿವೆ. ಇಲ್ಲಿನ ಧಿಕಾಲ ಹುಲ್ಲುಗಾವಲು, ರಾಮಗಂಗಾ ನದಿ ತೀರ ಹಕ್ಕಿಗಳ ನೆಚ್ಚಿನ ತಾಣ, ಐಬಿಸ್‌ಬಿಲ್‌(Ibisbill), ಹಿಮಾಲಯನ್‌ ಕೆಂಪುಗಂಟಲ ಚಟಕ(Himalayan Rubythroat) , ವಾಲ್ಕೀಪರ್‌( Wallcreeper) ಇಲ್ಲಿ ಕಂಡು ಬರುವ ಪ್ರಮು ಹಕ್ಕಿಗಳು
(4 / 10)

ಪಶ್ಚಿಮ ಬಂಗಾಲದ ಸುಂದರ್‌ ಬನ//ಪಶ್ಚಿಮ ಬಂಗಾದಲ್ಲಿ ಮ್ಯಾಂಗ್ರೋವ್‌ ಅರಣ್ಯ ಪ್ರದೇಶಗಳು ಹಚ್ಚು. ಸುಂದರ್‌ಬನ್‌ ರಾಷ್ಟ್ರೀಯ ಉದ್ಯಾನ (Sundarbans National Park, West Bengal)ಕೂಡ ಇದರ ಭಾಗ. ಇಲ್ಲಿ ರಾಯಲ್‌ ಬೆಂಗಾಲ್‌ ಹುಲಿಗಳ ಸಂಖ್ಯೆ ಹೆಚ್ಚು. ಇವುಗಳೊಟ್ಟಿಗೆ ಹತ್ತಾರು ಬಗೆಯ ಪಕ್ಷಿಗಳು ಸುಂದರ್‌ಬನ್‌ಗೆ ಅತಿಥಿಗಳಾಗಿ ಬರುತ್ತವೆ. ಇದರಲ್ಲಿ ಬ್ರೌನ್‌ ವಿಂಗ್ಡ್‌ ಕಿಂಗ್‌ ಫಿಶರ್‌, ಬ್ಲಾಕ್‌ ಕ್ಯಾಪ್ಡ್‌  ಕಿಂಗ್‌ ಫಿಶರ್‌, ಕೊಲಾರೆಡ್‌ ಕಿಂಗ್‌ ಫಿಷರ್‌ ಪ್ರಮುಖವಾದವು. ilfli 248 ಜಾತಿಯ ಹಕ್ಕಿಗಳನ್ನು ಗುರುತಿಸಲಾಗಿದೆ. ಕೋಲ್ಕತ್ತಾದಿಂದ ಸುಂದರ್‌ಬನ್‌ಗೆ ಮೂರು ಗಂಟೆಯ ಪ್ರಯಾಣ. ಇಲ್ಲಿಗೆ ಬಸ್‌ ಸೇವೆಯೂ ಚೆನ್ನಾಗಿದೆ. 
(5 / 10)

ಗುಜರಾತ್‌ನ  ನಲ್‌ ಸರೋವರ ಪಕ್ಷಿಧಾಮ//ಗುಜರಾತ್‌ ಅತೀ ದೊಡ್ಡ ಜೌಗು ಪ್ರದೇಶದ ಪಕ್ಷಿಧಾಮವಿದು(Nal Sarovar Bird Sanctuary, Gujarat) . ನಳಂದ ಸರೋವರದ ಹಿನ್ನೆಲೆಯಲ್ಲಿ ಪಕ್ಷಿಗಳು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತವೆ. ಅಹಮದಾಬಾದ್‌ ನಗರದಿಂದ ಸ್ವಲ್ಪವೇ ದೂರವಿರುವ ಪಕ್ಷಿಧಾಮಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪಕ್ಷಿಗಳು ಬಂದು ಹೋಗುತ್ತವೆ. ಅದರಲ್ಲೂ ಚಳಿಗಾಲದಲ್ಲಿ ಈ ಸಂಖ್ಯೆ ಅಧಿಕ. ಇಲ್ಲಿ ಗ್ರೇಟರ್‌ ಫ್ಲಿಮಿಂಗೋ, ಇಂಡಿಯನ್‌ ಸ್ಕಿಮ್ಮರ್‌, ಪೈಡ್‌ ಅವೆಕಾಟ್‌, ಕಾಮನ್‌ ಕ್ರೇನ್‌ ಹಕ್ಕಿಗಳು ಕಾಣ ಸಿಗುತ್ತವೆ.
(6 / 10)

ಕರ್ನಾಟಕದ ರಂಗನತಿಟ್ಟು ಪಕ್ಷಿಧಾಮ//ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕಾವೇರಿ ತೀರದ ರಂಗನತಿಟ್ಟು ಪಕ್ಷಿಧಾಮ(Ranganathittu Bird Sanctuary, Karnataka) ಕರ್ನಾಟಕದ ಅತಿ ದೊಡ್ಡ ಪಕ್ಷಿಧಾಮಗಳಲ್ಲಿ ಒಂದು. ಮೈಸೂರಿಗೆ ಹತ್ತಿರದಲ್ಲಿದ್ದು, ಕರ್ನಾಟಕ ಅರಣ್ಯ ಇಲಾಖೆಯ  ನಿರ್ವಹಣೆಯಲ್ಲಿರುವ ಈ ಪಕ್ಷಿಧಾಮವನ್ನು ಮೊದಲು ಗುರುತಿಸಿದರು ಡಾ.ಸಲೀಂ ಆಲಿ ಆವರೇ. 1940ರಲ್ಲಿ ಗುರುತಿಸಿದ ನಂತರ ಮೈಸೂರು ಮಹಾರಾಜರ ಪ್ರೋತ್ಸಾಹದಿಂದ ಪಕ್ಷಿಧಾಮವಾಗಿ ಬೆಳೆದು ಈಗ ವಿಶಾಲವಾಗಿದೆ. ಪ್ರತಿ ವರ್ಷ ಸಾವಿರಾರು ಹಕ್ಕಿಗಳು ಇಲ್ಲಿಗ ಬರುತ್ತವೆ. ಪೇಂಟೆಡ್‌ ಸ್ಟಾರ್ಕ್‌, ಇಂಡಿಯನ್‌ ರಿವರ್‌ ಟರ್ನ್‌, ಸ್ಪಾಟೆಡ್‌ ಬಿಲ್ಡ್‌ ಪೆಲಿಕಾನ್‌, ಸ್ಟ್ರೀಕ್‌ ಥ್ರೋಟೆಡ್‌ ಸ್ವಾಲೋ ಪ್ರಮುಖ  ಹಕ್ಕಿಗಳು. ಇಲ್ಲಿ ಬೋಟಿಂಗ್‌ ಸಹಿತ ಪ್ರವಾಸಿಗರಿಗೆ ನಾನಾ ಸೌಲಭ್ಯಗಳಿವೆ.  
(7 / 10)

ಲಡಾಖ್‌ ಹೆಮಿಷ್‌ ರಾಷ್ಟ್ರೀಯ ಉದ್ಯಾನ//ಭಾರತದ ತುತ್ತ ತುದಿಯಲ್ಲಿರುವ, ಕೇಂದ್ರಾಡಳಿತ ಪ್ರದೇಶವಾಗಿ ಮಾರ್ಪಟ್ಟಿರುವ ಲಡಾಖ್‌ನ ಹೆಮಿಸ್‌ ರಾಷ್ಟ್ರೀಯ ಉದ್ಯಾನ ಹತ್ತಾರು ಬಗೆಯ ಹಕ್ಕಿಗಳ ಆಶ್ರಯ ದಾಣ. ಸುಮಾರು 4,400 ಚದರ ಕಿ.ಮಿ ವ್ಯಾಪ್ತಿಯಲ್ಲಿ ಹಂಚಿಹೋಗಿರುವ ಹೆಮಿಷ್‌ ರಾಷ್ಟ್ರೀಯ ಉದ್ಯಾನ (Hemis National Park, Ladakh) ರಾಷ್ಟ್ರೀಯ ಉದ್ಯಾನವು ಲೆಹ್‌ನಿಂದ ಹತ್ತು. ಕಿ.ಮಿ. ದೂರದಲ್ಲಿದೆ. ಚಳಿಗಾಲ ಹಾಗೂ ಬೇಸಿಗೆಗೆ ಮುನ್ನ ಸಹಸ್ರಾರು ಹಕ್ಕಿಗಳು ಇಲ್ಲಿಗೆ ಬರುತ್ತಿವೆ. ವಿಶೇಷ ಹಿಮ  ಟಿಟ್ಟಿಭ, ಪಾರಿವಾಳ, ಹಿಮಾಲಯನ್‌ ಸ್ನೋಕಾಕ್‌ ಹಕ್ಕಿಗಳೇ ಹೆಚ್ಚು ಕಂಡು ಬರುತ್ತವೆ. 
(8 / 10)

ಅರುಣಾಚಲ ಪ್ರದೇಶದ ಈಗಲ್‌ ನೆಸ್ಟ್‌ //ಅರುಣಾಚಲ ಪ್ರದೇಶದಲ್ಲಿರುವ ಈಗಲ್‌ ನೆಸ್ಟ್‌ ( Eaglenest Wildlife Sanctuary, Arunachal Pradesh) ವನ್ಯಧಾಮವೂ ಹಕ್ಕಿಗಳ ತಾಣ. ಈಶಾನ್ಯ ರಾಜ್ಯದ  ಕೆಮೆಂಗ್‌ ಆನೆ ಮೀಸಲು ಪ್ರದೇಶ ವ್ಯಾಪ್ತಿಯಲ್ಲಿ ಬರುವ ಈ ಪಕ್ಷಿಧಾಮವು 1995ರಲ್ಲಿ ಬೆಳಕಿಗೆ ಬಂದಿತು. ಇಲ್ಲಿ ಬಗೆಬಗೆಯ ಪಕ್ಷಿಗಳು ಬದುಕು ಕಂಡುಕೊಂಡಿವೆ. ಬಹಳಷ್ಟು ವಲಸೆ ಹಕ್ಕಿಗಳು ಇಲ್ಲಿಗೆ ಬರುತ್ತವೆ. ಹೊಸ ಹಕ್ಕಿಗಳನ್ನೂ ಗುರುತಿಸಿ ಅವುಗಳಿಗೆ ಸ್ಥಳೀಯ ಹೆಸರನ್ನು ನೀಡಲಾಗಿದೆ. ಇದರಲ್ಲಿ ಬುಗುಲ್‌ ಲಿಚಿಚ್ಲಾ ಎನ್ನುವ ಹಕ್ಕಿ ಪ್ರಮುಖವಾದದ್ದು. ದಟ್ಟಾರಣ್ಯ ಪ್ರದೇಶದ ಸಸ್ಯ ಸಂಪತ್ತಿನ ನಡುವೆ 450  ಬಗೆಯ ಹಕ್ಕಿಗಳನ್ನು ಇಲ್ಲಿ ಗುರುತಿಸಲಾಗಿದೆ. ಇವುಗಳಲ್ಲಿ ಹಾರ್ನ್‌ ಬಿಲ್‌ ಹಕ್ಕಿಗಳ ಸಂಖ್ಯೆಯೇ ಅಧಿಕ. 
(9 / 10)

ಒಡಿಶಾದ ಮಂಗಲ ಜೋಡಿ ಉದ್ಯಾನಒಡಿಶಾದ ಮಂಗಲ ಜೋಡಿ( Mangalajodi Wetlands, Odisha)  ಜೌಗು ಪ್ರದೇಶ ಚಿಲ್ಕಾ ಸರೋವರದಿಂದ ಪಶ್ಚಿಮ ಭಾಗದಲ್ಲಿದೆ. ಇದು ಭಾರತದ ಅತಿ ದೊಡ್ಡ ಸರೋವರ. ಇಲ್ಲಿನ ಜೌಗು ಪ್ರದೇಶಗಳನ್ನೇ ಸಹಸ್ರಾರು ಹಕ್ಕಿಗಳು ತಮ್ಮ ಪ್ರಿಯ ತಾಣ ಮಾಡಿಕೊಂಡಿವೆ. ಒಡಿಶಾದ ಕೋರ್ಡಾ ಜಿಲ್ಲೆಯಲ್ಲಿರುವ ಪಕ್ಷಿಧಾಮದಲ್ಲಿ ಚಳಿಗಾಲದಲ್ಲಿ ಹತ್ತಾರು ಬಗೆಯ ಹಕ್ಕಿಗಳು ದೇಶ ವಿದೇಶದಿಂದ ಆಗಮಿಸುತ್ತವೆ. ಇಲ್ಲಿ ಪರಿಸರ ಪ್ರವಾಸೋದ್ಯಮ ಕೇಂದ್ರವೂ ಇದ್ದು., ಸಫಾರಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರಡ್ಡಿ ಶೆಲ್ಡಕ್, ಗಾಡ್‌ ವಾಲ್‌, ಕಾಮನ್‌ ಟೀಲ್‌, ಗ್ಲಾಸಿ ಐಬಿಸ್‌ ಹಕ್ಕಿಗಳು ಇಲ್ಲಿ ಹೆಚ್ಚು ಕಂಡು ಬರುತ್ತವೆ. 
(10 / 10)

    ಹಂಚಿಕೊಳ್ಳಲು ಲೇಖನಗಳು