logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  France Riot: ಫ್ರಾನ್ಸ್‌ನಲ್ಲಿ ಗಲಭೆ ನಿಲ್ಲಿಸುವಂತೆ ಹತ್ಯೆಯಾದ ಬಾಲಕನ ಅಜ್ಜಿಯ ಮನವಿ; 700ಕ್ಕೂ ಹೆಚ್ಚು ಮಂದಿಯ ಬಂಧನ Photos

France riot: ಫ್ರಾನ್ಸ್‌ನಲ್ಲಿ ಗಲಭೆ ನಿಲ್ಲಿಸುವಂತೆ ಹತ್ಯೆಯಾದ ಬಾಲಕನ ಅಜ್ಜಿಯ ಮನವಿ; 700ಕ್ಕೂ ಹೆಚ್ಚು ಮಂದಿಯ ಬಂಧನ PHOTOS

Jan 09, 2024 08:01 PM IST

Nahel death: ಫ್ರಾನ್ಸ್‌ನಲ್ಲಿ ಪೊಲೀಸರ ಗುಂಡಿಗೆ 17 ವರ್ಷದ ಹುಡುಗ ಬಲಿಯಾದ ಬಳಿಕ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯು ಹಿಂಸಾತ್ಮಕ ರೂಪ ಪಡೆದುಕೊಂಡಿದ್ದು, ಆ ಬಾಲಕನ ಅಜ್ಜಿಯೇ ಗಲಭೆ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.

  • Nahel death: ಫ್ರಾನ್ಸ್‌ನಲ್ಲಿ ಪೊಲೀಸರ ಗುಂಡಿಗೆ 17 ವರ್ಷದ ಹುಡುಗ ಬಲಿಯಾದ ಬಳಿಕ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯು ಹಿಂಸಾತ್ಮಕ ರೂಪ ಪಡೆದುಕೊಂಡಿದ್ದು, ಆ ಬಾಲಕನ ಅಜ್ಜಿಯೇ ಗಲಭೆ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಫ್ರಾನ್ಸ್‌ನಲ್ಲಿ ಹದಿಹರೆಯದ ಹುಡುಗನೊಬ್ಬನ ಸಾವು ಇಡೀ ದೇಶದಲ್ಲಿ ಕಳೆದ 6 ದಿನಗಳಿಂದ ಉಗ್ರ ಪ್ರತಿಭಟನೆಯನ್ನು ಹುಟ್ಟುಹಾಕಿದೆ. ಪ್ರತಿಭಟನೆ ವೇಳೆ ಕೈಗೆ ಸಿಕ್ಕಸಿಕ್ಕದ್ದನ್ನೆಲ್ಲ ಜನರು ಧ್ವಂಸಮಾಡುತ್ತಿದ್ದಾರೆ.  ಕಟ್ಟಡಗಳಿಗೆ, ಪೊಲೀಸ್​ ವಾಹನಗಳಿಗೆ, ಬಸ್ ಡಿಪೋ, ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಿದ್ದಾರೆ.
(1 / 6)
ಫ್ರಾನ್ಸ್‌ನಲ್ಲಿ ಹದಿಹರೆಯದ ಹುಡುಗನೊಬ್ಬನ ಸಾವು ಇಡೀ ದೇಶದಲ್ಲಿ ಕಳೆದ 6 ದಿನಗಳಿಂದ ಉಗ್ರ ಪ್ರತಿಭಟನೆಯನ್ನು ಹುಟ್ಟುಹಾಕಿದೆ. ಪ್ರತಿಭಟನೆ ವೇಳೆ ಕೈಗೆ ಸಿಕ್ಕಸಿಕ್ಕದ್ದನ್ನೆಲ್ಲ ಜನರು ಧ್ವಂಸಮಾಡುತ್ತಿದ್ದಾರೆ.  ಕಟ್ಟಡಗಳಿಗೆ, ಪೊಲೀಸ್​ ವಾಹನಗಳಿಗೆ, ಬಸ್ ಡಿಪೋ, ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಿದ್ದಾರೆ.(AFP)
ಜೂನ್​ 27 ರಂದು ನಹೆಲ್ ಎಂಬ ಹದಿಹರೆಯದ ಹುಡುಗನನ್ನು ಫ್ರಾನ್ಸ್ ರಾಜಧಾನಿಯಾದ ಪ್ಯಾರಿಸ್​ನ ನಾಂಟೆರ್ರೆ ಎಂಬಲ್ಲಿ ಪೊಲೀಸ್​ ಅಧಿಕಾರಿಯೊಬ್ಬರು ಗುಂಡು ಹಾರಿಸಿ ಹತೈಗೈದಿದ್ದರು. ಟ್ರಾಫಿಕ್​ ಸಿಗ್ನಲ್​ನಲ್ಲಿ ವಾಹನ ನಿಲ್ಲಿಸದ ಕಾರಣ ಆತನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. 
(2 / 6)
ಜೂನ್​ 27 ರಂದು ನಹೆಲ್ ಎಂಬ ಹದಿಹರೆಯದ ಹುಡುಗನನ್ನು ಫ್ರಾನ್ಸ್ ರಾಜಧಾನಿಯಾದ ಪ್ಯಾರಿಸ್​ನ ನಾಂಟೆರ್ರೆ ಎಂಬಲ್ಲಿ ಪೊಲೀಸ್​ ಅಧಿಕಾರಿಯೊಬ್ಬರು ಗುಂಡು ಹಾರಿಸಿ ಹತೈಗೈದಿದ್ದರು. ಟ್ರಾಫಿಕ್​ ಸಿಗ್ನಲ್​ನಲ್ಲಿ ವಾಹನ ನಿಲ್ಲಿಸದ ಕಾರಣ ಆತನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. (AFP)
ಈತನ ಹತ್ಯೆ ಬಳಿಕ ಫ್ರಾನ್ಸ್‌ನಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು, ನಹೆಲ್​ನ ಅಜ್ಜಿ ಇದೀಗ ಗಲಭೆ ನಿಲ್ಲಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. "ಕಿಟಕಿಗಳನ್ನು ಒಡೆದು ಹಾಕಬೇಡಿ, ಶಾಲೆಗಳು ಅಥವಾ ಬಸ್ಸುಗಳ ಮೇಲೆ ದಾಳಿ ಮಾಡಬೇಡಿ.  ಗಲಭೆ ನಿಲ್ಲಿಸಿ" ಎಂದು ಹೇಳಿದ್ದಾರೆ. ಆದರೂ ಪ್ರತಿಭಟನೆಗಳು ಮುಂದುವರೆದಿವೆ. 
(3 / 6)
ಈತನ ಹತ್ಯೆ ಬಳಿಕ ಫ್ರಾನ್ಸ್‌ನಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು, ನಹೆಲ್​ನ ಅಜ್ಜಿ ಇದೀಗ ಗಲಭೆ ನಿಲ್ಲಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. "ಕಿಟಕಿಗಳನ್ನು ಒಡೆದು ಹಾಕಬೇಡಿ, ಶಾಲೆಗಳು ಅಥವಾ ಬಸ್ಸುಗಳ ಮೇಲೆ ದಾಳಿ ಮಾಡಬೇಡಿ.  ಗಲಭೆ ನಿಲ್ಲಿಸಿ" ಎಂದು ಹೇಳಿದ್ದಾರೆ. ಆದರೂ ಪ್ರತಿಭಟನೆಗಳು ಮುಂದುವರೆದಿವೆ. (AFP)
ಇತ್ತ, ಇಂದು ಮುಂಜಾನೆ, ಪ್ಯಾರಿಸ್ ಉಪನಗರವೊಂದರ ಮೇಯರ್ ಅವರ ಮನೆಯ ಮೇಲೆ ದಾಳಿ ನಡೆಸಲಾಗಿದ್ದು, ಮೇಯರ್​ ಪತ್ನಿ ಹಾಗೂ ಅವರ ಮಗ ಘಟನೆಯಲ್ಲಿ ಗಾಯಗೊಂಡಿದ್ದಾರೆ. 
(4 / 6)
ಇತ್ತ, ಇಂದು ಮುಂಜಾನೆ, ಪ್ಯಾರಿಸ್ ಉಪನಗರವೊಂದರ ಮೇಯರ್ ಅವರ ಮನೆಯ ಮೇಲೆ ದಾಳಿ ನಡೆಸಲಾಗಿದ್ದು, ಮೇಯರ್​ ಪತ್ನಿ ಹಾಗೂ ಅವರ ಮಗ ಘಟನೆಯಲ್ಲಿ ಗಾಯಗೊಂಡಿದ್ದಾರೆ. (AFP)
ಇನ್ನು ಗಲಭೆಯಲ್ಲಿ ಭಾಗಿಯಾದ 700ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 50 ಸಾವಿರ ಪೊಲೀಸ್​ ಸಿಬ್ಬಂದಿಯನ್ನು ಪ್ರತಿಭಟನೆ ನಿಯಂತ್ರಿಸಲು ನಿಯೋಜಿಸಲಾಗಿದೆ.  
(5 / 6)
ಇನ್ನು ಗಲಭೆಯಲ್ಲಿ ಭಾಗಿಯಾದ 700ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 50 ಸಾವಿರ ಪೊಲೀಸ್​ ಸಿಬ್ಬಂದಿಯನ್ನು ಪ್ರತಿಭಟನೆ ನಿಯಂತ್ರಿಸಲು ನಿಯೋಜಿಸಲಾಗಿದೆ.  (AFP)
ನಹೆಲ್ ಮೇಲೆ ಗುಂಡು ಹಾರಿಸಿದ ಅಧಿಕಾರಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ. 
(6 / 6)
ನಹೆಲ್ ಮೇಲೆ ಗುಂಡು ಹಾರಿಸಿದ ಅಧಿಕಾರಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ. 

    ಹಂಚಿಕೊಳ್ಳಲು ಲೇಖನಗಳು