logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Hassan News: ಬರೋಬ್ಬರಿ 125 ಕೆಜಿ ಜೋಳದ ಚೀಲ ಹೊತ್ತು ಶ್ರವಣಬೆಳಗೊಳದ ವಿಂಧ್ಯಗಿರಿ ಹತ್ತಿದ ಯುವಕ; ಫೋಟೋ ನೋಡಿ

Hassan News: ಬರೋಬ್ಬರಿ 125 ಕೆಜಿ ಜೋಳದ ಚೀಲ ಹೊತ್ತು ಶ್ರವಣಬೆಳಗೊಳದ ವಿಂಧ್ಯಗಿರಿ ಹತ್ತಿದ ಯುವಕ; ಫೋಟೋ ನೋಡಿ

Jul 10, 2023 07:27 PM IST

Shravanabelagola: ಇದು ಭಕ್ತಿಯ ಶಕ್ತಿಯೋ, ದೈಹಿಕ ಶಕ್ತಿಯೋ ಗೊತ್ತಿಲ್ಲ. ವಿಶ್ವಪ್ರಸಿದ್ಧ ಪ್ರವಾಸಿ ತಾಣ ಶ್ರವಣಬೆಳಗೊಳದಲ್ಲಿ ಭಗವಾನ್ ಬಾಹುಬಲಿ ನೆಲೆಸಿರುವ ವಿಂಧ್ಯಗಿರಿಯನ್ನು‌ ಹತ್ತಲು ಆರೋಗ್ಯವಂತರಿಗೇ ಏದುಸಿರು ಬರುತ್ತದೆ. ಆದರೆ, ಯುವಕನೊಬ್ಬ ಮಣಭಾರದ ಜೋಳದ ಚೀಲ ಹೊತ್ತು ವಿಂಧ್ಯಗಿರಿಯನ್ನು ಕೇವಲ 41 ನಿಮಿಷಗಳಲ್ಲಿ ಹತ್ತಿದ್ದಾರೆ.

  • Shravanabelagola: ಇದು ಭಕ್ತಿಯ ಶಕ್ತಿಯೋ, ದೈಹಿಕ ಶಕ್ತಿಯೋ ಗೊತ್ತಿಲ್ಲ. ವಿಶ್ವಪ್ರಸಿದ್ಧ ಪ್ರವಾಸಿ ತಾಣ ಶ್ರವಣಬೆಳಗೊಳದಲ್ಲಿ ಭಗವಾನ್ ಬಾಹುಬಲಿ ನೆಲೆಸಿರುವ ವಿಂಧ್ಯಗಿರಿಯನ್ನು‌ ಹತ್ತಲು ಆರೋಗ್ಯವಂತರಿಗೇ ಏದುಸಿರು ಬರುತ್ತದೆ. ಆದರೆ, ಯುವಕನೊಬ್ಬ ಮಣಭಾರದ ಜೋಳದ ಚೀಲ ಹೊತ್ತು ವಿಂಧ್ಯಗಿರಿಯನ್ನು ಕೇವಲ 41 ನಿಮಿಷಗಳಲ್ಲಿ ಹತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಹುನ್ನೂರು ಗ್ರಾಮದ ಹನುಮಂತ ಪರಸಪ್ಪ ಸರಪಳಿ ಎಂಬ‌ ಯುವಕ ಬರೋಬ್ಬರಿ 125 ಕೆಜಿ ತೂಕದ ಜೋಳದ ಚೀಲ ಹೊತ್ತು ವಿಂಧ್ಯಗಿರಿ ತುದಿಗೆ ಏರುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
(1 / 5)

ಭಾರವಾದ ಚೀಲ ಹೊತ್ತು ಯಶಸ್ವಿಯಾಗಿ ಬೆಟ್ಟ ಏರಿ ಸೈ ಎನಿಸಿಕೊಂಡ ಸಾಹಸಿ ಸಾಧನೆಗೆ ಅನೇಕ ಕಡೆಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿವೆ.
(2 / 5)

ಸುಮಾರು 700 ಮೀಟರ್ ಎತ್ತರದಲ್ಲಿ ನೆಲೆಸಿರುವ ಐತಿಹಾಸಿಕ ಶ್ರವಣಬೆಳಗೊಳ ಗೊಮ್ಮಟೇಶ್ವರನ ದರ್ಶನ ಪಡೆಯಲು ಬರಿಗೈಯಲ್ಲಿ ಹೋಗುವುದಕ್ಕೆ ಕಷ್ಟ ಪಡುತ್ತಿರುವ ಈ ಸಂದರ್ಭದಲ್ಲಿ, 125 ಕೆಜಿ ಭಾರಹೊತ್ತು ಬೆಟ್ಟ ಹತ್ತಿರುವುದು ಸಾಧನೆಯೇ ಸರಿ ಎಂಬುದು ಅನೇಕರ ಮಾತಾಗಿದೆ.
(3 / 5)

ವಿಂಧ್ಯಗಿರಿ ಬೆಟ್ಟವನ್ನು ಕೇವಲ 41 ನಿಮಿಷಗಳಲ್ಲಿ ಹತ್ತುವ ಮೂಲಕ ತಮ್ಮ ಶಕ್ತಿ ಸಾಮರ್ಥ್ಯ ಏನೆಂದು ಸಾಬೀತು ಮಾಡಿದ್ದಾರೆ. ಬೆಟ್ಟ ಏರಿದ ಬಳಿಕ ಬಾಹುಬಲಿಯ ಪದತಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. 
(4 / 5)

ಅಸಾಧ್ಯವಾದುದನ್ನು ಸಾಧ್ಯವಾಗಿಸಿ 125 ಕೆಜಿ ತೂಕದ ಜೋಳದ ಮೂಟೆ ಹೊತ್ತು ಬೆಟ್ಟ ಹತ್ತಿದ ಹನುಮಂತನಿಗೆ ಗೊಮ್ಮಟೇಶ್ವರ ಸಮಿತಿಯಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.
(5 / 5)

    ಹಂಚಿಕೊಳ್ಳಲು ಲೇಖನಗಳು