logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Jackfruit Benefits: ಹಲಸಿನ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕಿದೆ ಹಲವು ಪ್ರಯೋಜನ; ನಿತ್ಯ ಸೇವನೆಯಿಂದ ಎಷ್ಟೆಲ್ಲಾ ಅನುಕೂಲಗಳಿವೆ ನೋಡಿ

Jackfruit Benefits: ಹಲಸಿನ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕಿದೆ ಹಲವು ಪ್ರಯೋಜನ; ನಿತ್ಯ ಸೇವನೆಯಿಂದ ಎಷ್ಟೆಲ್ಲಾ ಅನುಕೂಲಗಳಿವೆ ನೋಡಿ

Jan 09, 2024 08:17 PM IST

Jackfruit Health Benefits: ಬೇಸಿಗೆಕಾಲದ ಅಂತ್ಯ ಮಳೆಗಾಲದ ಆರಂಭದಲ್ಲಿ ಹಲಸಿನ ಹಣ್ಣಿನ ಘಮ ಎಲ್ಲೆಲ್ಲೂ ಹರಡಿರುತ್ತದೆ. ಆದರೆ ಹಲಸಿನ ಹಣ್ಣು ಆರೋಗ್ಯ ಉತ್ತಮವಲ್ಲ ಎಂಬುದನ್ನೇ ನಾವು ಕೇಳಿಕೊಂಡು ಬಂದಿದ್ದೇವೆ. ಹಲವರು ತಿನ್ನಲು ಆಸೆ ಇದ್ದರೂ ಆರೋಗ್ಯ ಸಮಸ್ಯೆಗೆ ಹೆದರಿ ಹಿಂದೇಟು ಹಾಕುತ್ತಾರೆ. ಆದರೆ ಇದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ.

  • Jackfruit Health Benefits: ಬೇಸಿಗೆಕಾಲದ ಅಂತ್ಯ ಮಳೆಗಾಲದ ಆರಂಭದಲ್ಲಿ ಹಲಸಿನ ಹಣ್ಣಿನ ಘಮ ಎಲ್ಲೆಲ್ಲೂ ಹರಡಿರುತ್ತದೆ. ಆದರೆ ಹಲಸಿನ ಹಣ್ಣು ಆರೋಗ್ಯ ಉತ್ತಮವಲ್ಲ ಎಂಬುದನ್ನೇ ನಾವು ಕೇಳಿಕೊಂಡು ಬಂದಿದ್ದೇವೆ. ಹಲವರು ತಿನ್ನಲು ಆಸೆ ಇದ್ದರೂ ಆರೋಗ್ಯ ಸಮಸ್ಯೆಗೆ ಹೆದರಿ ಹಿಂದೇಟು ಹಾಕುತ್ತಾರೆ. ಆದರೆ ಇದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ.
ಹಲಸಿನ ಹಣ್ಣನ್ನು ಹಾಗೆ ತಿನ್ನುವುದಕ್ಕಿಂತ ಇದರಿಂದ ಬೇರೆ ಬೇರೆ ರೀತಿಯ ಖಾದ್ಯಗಳನ್ನು ತಯಾರಿಸಿ ತಿನ್ನಬಹುದು. ಇದರಿಂದ ಕಡುಬು ತಯಾರಿಸಿ ತಿನ್ನಬಹುದು. ಹಲಸಿನ ಹಪ್ಪಳವೂ ತಿನ್ನಲು ಚೆನ್ನಾಗಿರುತ್ತದೆ. ಇದರ ನಂಜಿನಂಶದ ಕಾರಣ ಇದನ್ನು ತಿನ್ನಲು ಜನ ಹಿಂದೇಟು ಹಾಕುತ್ತಾರೆ. ಆದರೆ ಹಲಸಿನ ಹಣ್ಣಿನಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ. ದೇಹಕ್ಕೆ ಅಗತ್ಯವಿರುವ ವಿಟಮಿನ್ ಸಿ, ವಿಟಮಿನ್ ಎ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಸತು, ಥಯಾಮಿನ್ ಮುಂತಾದ ಪೋಷಕಾಂಶಗಳು ಹಪ್ಪಳದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಬನ್ನಿ ಈ ಹಣ್ಣನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.
(1 / 8)
ಹಲಸಿನ ಹಣ್ಣನ್ನು ಹಾಗೆ ತಿನ್ನುವುದಕ್ಕಿಂತ ಇದರಿಂದ ಬೇರೆ ಬೇರೆ ರೀತಿಯ ಖಾದ್ಯಗಳನ್ನು ತಯಾರಿಸಿ ತಿನ್ನಬಹುದು. ಇದರಿಂದ ಕಡುಬು ತಯಾರಿಸಿ ತಿನ್ನಬಹುದು. ಹಲಸಿನ ಹಪ್ಪಳವೂ ತಿನ್ನಲು ಚೆನ್ನಾಗಿರುತ್ತದೆ. ಇದರ ನಂಜಿನಂಶದ ಕಾರಣ ಇದನ್ನು ತಿನ್ನಲು ಜನ ಹಿಂದೇಟು ಹಾಕುತ್ತಾರೆ. ಆದರೆ ಹಲಸಿನ ಹಣ್ಣಿನಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ. ದೇಹಕ್ಕೆ ಅಗತ್ಯವಿರುವ ವಿಟಮಿನ್ ಸಿ, ವಿಟಮಿನ್ ಎ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಸತು, ಥಯಾಮಿನ್ ಮುಂತಾದ ಪೋಷಕಾಂಶಗಳು ಹಪ್ಪಳದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಬನ್ನಿ ಈ ಹಣ್ಣನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.(unsplash)
ಜೀರ್ಣಕ್ರಿಯೆ: ಹಲಸಿನ ಹಣ್ಣಿನಲ್ಲಿ ನಾರಿನಾಂಶ ಸಮೃದ್ಧವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಆದರೆ ಈ ಹಣ್ಣಿನಲ್ಲಿ ಸ್ವಾಭಾವಿಕವಾಗಿ ಉಷ್ಣಕಾರಿ ಗುಣವಿರುವುದರಿಂದ ಬಿಸಿಲಿನ ವಾತಾವರಣದಲ್ಲಿ ಮಿತವಾಗಿ ತಿನ್ನಲು ಮರೆಯದಿರಿ.
(2 / 8)
ಜೀರ್ಣಕ್ರಿಯೆ: ಹಲಸಿನ ಹಣ್ಣಿನಲ್ಲಿ ನಾರಿನಾಂಶ ಸಮೃದ್ಧವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಆದರೆ ಈ ಹಣ್ಣಿನಲ್ಲಿ ಸ್ವಾಭಾವಿಕವಾಗಿ ಉಷ್ಣಕಾರಿ ಗುಣವಿರುವುದರಿಂದ ಬಿಸಿಲಿನ ವಾತಾವರಣದಲ್ಲಿ ಮಿತವಾಗಿ ತಿನ್ನಲು ಮರೆಯದಿರಿ.(unsplash)
ರಕ್ತವನ್ನು ಹೆಚ್ಚಿಸುತ್ತದೆ: ಹಲಸಿನ ಹಣ್ಣಿನಲ್ಲಿ ಕಬ್ಬಿಣಾಂಶವಿದೆ. ಇದು ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಲಸಿನ ಹಣ್ಣು ತಿನ್ನುವುದರಿಂದ ರಕ್ತಹೀನತೆಯನ್ನು ತಡೆಯಬಹುದು. 
(3 / 8)
ರಕ್ತವನ್ನು ಹೆಚ್ಚಿಸುತ್ತದೆ: ಹಲಸಿನ ಹಣ್ಣಿನಲ್ಲಿ ಕಬ್ಬಿಣಾಂಶವಿದೆ. ಇದು ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಲಸಿನ ಹಣ್ಣು ತಿನ್ನುವುದರಿಂದ ರಕ್ತಹೀನತೆಯನ್ನು ತಡೆಯಬಹುದು. (freepik)
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ: ಹಲಸಿನ ಹಣ್ಣಿನಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಯೋಜನಕಾರಿಯಾಗಿದೆ. ಇದು ಹೃದಯವನ್ನು ಸಹ ಆರೋಗ್ಯವಾಗಿಡುತ್ತದೆ.
(4 / 8)
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ: ಹಲಸಿನ ಹಣ್ಣಿನಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಯೋಜನಕಾರಿಯಾಗಿದೆ. ಇದು ಹೃದಯವನ್ನು ಸಹ ಆರೋಗ್ಯವಾಗಿಡುತ್ತದೆ.(unsplash)
ಹಾರ್ಮೋನ್ ಅಸಮತೋಲನ: ಹಲಸಿನ ಹಣ್ಣಿನಲ್ಲಿರುವ ಖನಿಜಾಂಶಗಳು ದೇಹದಲ್ಲಿನ ಹಾರ್ಮೋನ್ ಏರುಪೇರುಗಳನ್ನು ಸಮತೋಲನದಲ್ಲಿಡುವಲ್ಲಿ ಪರಿಣಾಮಕಾರಿ.
(5 / 8)
ಹಾರ್ಮೋನ್ ಅಸಮತೋಲನ: ಹಲಸಿನ ಹಣ್ಣಿನಲ್ಲಿರುವ ಖನಿಜಾಂಶಗಳು ದೇಹದಲ್ಲಿನ ಹಾರ್ಮೋನ್ ಏರುಪೇರುಗಳನ್ನು ಸಮತೋಲನದಲ್ಲಿಡುವಲ್ಲಿ ಪರಿಣಾಮಕಾರಿ.(unsplash)
ಮೂಳೆಗಳನ್ನು ಬಲಪಡಿಸುತ್ತದೆ: ಇದರಲ್ಲಿ ಕ್ಯಾಲ್ಸಿಯಂ ಕೂಡ ಸಮೃದ್ಧವಾಗಿದೆ, ಇದು ಮೂಳೆಗಳ ಸಾಂಧ್ರತೆ ಹೆಚ್ಚಲು ಬಹಳ ಮುಖ್ಯವಾಗಿದೆ.
(6 / 8)
ಮೂಳೆಗಳನ್ನು ಬಲಪಡಿಸುತ್ತದೆ: ಇದರಲ್ಲಿ ಕ್ಯಾಲ್ಸಿಯಂ ಕೂಡ ಸಮೃದ್ಧವಾಗಿದೆ, ಇದು ಮೂಳೆಗಳ ಸಾಂಧ್ರತೆ ಹೆಚ್ಚಲು ಬಹಳ ಮುಖ್ಯವಾಗಿದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಹಲಸಿನ ಹಣ್ಣಿನಲ್ಲಿರುವ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನ ನೀಡುತ್ತದೆ. 
(7 / 8)
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಹಲಸಿನ ಹಣ್ಣಿನಲ್ಲಿರುವ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನ ನೀಡುತ್ತದೆ. (unsplash)
ಕಣ್ಣುಗಳಿಗೆ ಒಳ್ಳೆಯದು: ಹಲಸಿನ ಹಣ್ಣಿನಲ್ಲಿ ವಿಟಮಿನ್ ಎ ಹೇರಳವಾಗಿರುವುದರಿಂದ, ಅವುಗಳನ್ನು ಸೇವಿಸುವುದರಿಂದ ದೃಷ್ಟಿ ಸುಧಾರಿಸುತ್ತದೆ ಮತ್ತು ಇತರ ಕಣ್ಣಿನ ಸಂಬಂಧಿತ ಸಮಸ್ಯೆಗಳನ್ನು ತಡೆಯುತ್ತದೆ.
(8 / 8)
ಕಣ್ಣುಗಳಿಗೆ ಒಳ್ಳೆಯದು: ಹಲಸಿನ ಹಣ್ಣಿನಲ್ಲಿ ವಿಟಮಿನ್ ಎ ಹೇರಳವಾಗಿರುವುದರಿಂದ, ಅವುಗಳನ್ನು ಸೇವಿಸುವುದರಿಂದ ದೃಷ್ಟಿ ಸುಧಾರಿಸುತ್ತದೆ ಮತ್ತು ಇತರ ಕಣ್ಣಿನ ಸಂಬಂಧಿತ ಸಮಸ್ಯೆಗಳನ್ನು ತಡೆಯುತ್ತದೆ.

    ಹಂಚಿಕೊಳ್ಳಲು ಲೇಖನಗಳು