logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆಳ್ಳಂ ಬೆಳ್ಳಗೆ ಈ ರೀತಿಯ ಆಹಾರಗಳನ್ನು ಎಷ್ಟೇ ಹಸಿವಿದ್ರೂ ಸೇವಿಸಬೇಡಿ; ಹೊಟ್ಟೆ ತುಂಬುವ ಬದಲಿಗೆ ಆರೋಗ್ಯ ಹಾಳಾಗಬಹುದು

ಬೆಳ್ಳಂ ಬೆಳ್ಳಗೆ ಈ ರೀತಿಯ ಆಹಾರಗಳನ್ನು ಎಷ್ಟೇ ಹಸಿವಿದ್ರೂ ಸೇವಿಸಬೇಡಿ; ಹೊಟ್ಟೆ ತುಂಬುವ ಬದಲಿಗೆ ಆರೋಗ್ಯ ಹಾಳಾಗಬಹುದು

Nov 18, 2023 07:15 AM IST

ಎಷ್ಟೋ ಜನರಿಗೆ ಬೆಳಗ್ಗೆ ಎದ್ದ ಕೂಡಲೇ ಏನಾದರೂ ತಿನ್ನಬೇಕೆನಿಸುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಏನು ತಿನ್ನಬಾರದು? ಏನು ತಿನ್ನಬಹುದು? ಎಂಬ ಅರಿವು ಅವರಿಗೆ ಇರುವುದಿಲ್ಲ. ಆದ್ದರಿಂದ ಅಡುಗೆ ಮನೆಯಲ್ಲಿ ದೊರೆಯುವ ತಿಂಡಿಗಳು ಅಥವಾ ತಮ್ಮಿಷ್ಟದ ತಿಂಡಿಗಳನ್ನು ಸೇವಿಸುತ್ತಾರೆ.

ಆದರೆ ಯಾವುದೇ ಕಾರಣಕ್ಕೂ ನೀವು ಬೆಳ್ಳಂ ಬೆಳಗ್ಗೆ ಕೆಲವೊಂದು ಫುಡ್‌ಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ. ಏಕೆಂದರೆ ನೀವು ಖಾಲಿ ಹೊಟ್ಟೆಯಲ್ಲಿರುವುದರಿಂದ ಈ ರೀತಿಯ ಫುಡ್‌ಗಳು ನಿಮ್ಮ ಆರೋಗ್ಯವನ್ನು ಕೆಡಿಸಬಹುದು.  
(1 / 7)
ಆದರೆ ಯಾವುದೇ ಕಾರಣಕ್ಕೂ ನೀವು ಬೆಳ್ಳಂ ಬೆಳಗ್ಗೆ ಕೆಲವೊಂದು ಫುಡ್‌ಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ. ಏಕೆಂದರೆ ನೀವು ಖಾಲಿ ಹೊಟ್ಟೆಯಲ್ಲಿರುವುದರಿಂದ ಈ ರೀತಿಯ ಫುಡ್‌ಗಳು ನಿಮ್ಮ ಆರೋಗ್ಯವನ್ನು ಕೆಡಿಸಬಹುದು.  (PC: Unsplash)
ಎಣ್ಣೆಯಲ್ಲಿ ಕರಿದ ತಿಂಡಿಗಳು: ಖಾಲಿ ಹೊಟ್ಟೆಯಲ್ಲಿ ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಸೇವಿಸುವುದು ಬಹಳ ಅಪಾಯಕಾರಿ. ಅದರಲ್ಲೂ ಬೇಸಿಗೆಯಲ್ಲಿ  ಈ ರೀತಿಯ ಆಹಾರವನ್ನು ಎಂದಿಗೂ ಸೇವಿಸಬಾರದು. ಇಂಥ ಆಹಾರಗಳು ನಿಮ್ಮ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟು ಮಾಡುತ್ತದೆ.  
(2 / 7)

ಸಿಹಿ ಅಂಶವಿರುವ ಫುಡ್‌ಗಳು: ಅಧಿಕ ಸಕ್ಕರೆ ಅಂಶವಿರುವ ಆಹಾರಗಳು ನಿಮ್ಮ ಹೊಟ್ಟೆಯನ್ನು ಫ್ರಕ್ಟೋಸ್‌ನಿಂದ ತುಂಬಿಸುತ್ತದೆ.  ಸಕ್ಕರೆಯು ದೇಹದ ಖಾಲಿ ಹೊಟ್ಟೆಯನ್ನು ಪ್ರವೇಶಿಸಿದಾಗ, ಇನ್ಸುಲಿನ್ ವಿಭಾಗವು ಕಠಿಣವಾಗುತ್ತದೆ. ಹೀಗಾಗಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ನಿರ್ವಹಿಸುವುದು ಕಷ್ಟವಾಗುತ್ತದೆ.
(3 / 7)

ಯೋಗರ್ಟ್‌/ಮೊಸರು: ಈ ರೀತಿಯ ಆಹಾರದಲ್ಲಿ ಪ್ರೋಬಯಾಟಿಕ್ ಕ್ಯಾಲ್ಸಿಯಂ ಹೊಂದಿದೆ. ಇದು ನಿಮ್ಮ ಹಲ್ಲುಗಳು ಮತ್ತು ನಿಮ್ಮ ಇಡೀ ದೇಹದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.  ಖಾಲಿ ಹೊಟ್ಟೆಯಲ್ಲಿ ಮೊಸರನ್ನು ಸೇವಿಸಿದಾಗ, ನಿಮ್ಮ ಹೊಟ್ಟೆಯ ಆಮ್ಲವು ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ. ಜೊತೆಗೆ ಆಮ್ಲೀಯತೆ ಕಾಡಬಹುದು. ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ಮೊಸರನ್ನು ಸೇವಿಸಬೇಡಿ. 
(4 / 7)

ಕಾಫಿ: ಬೆಳಗ್ಗೆ ಎದ್ದ ಕೂಡಲೇ ಒಂದು ಕಪ್‌ ಕಾಫಿ ಕುಡಿದರೆ ಫ್ರೆಶ್‌ ಎನಿಸುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು ಕೆಟ್ಟ ಅಭ್ಯಾಸ. ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸಿದಾಗ ಅದು ಹೈಡ್ರೋಕ್ಲೋರಿಕ್ ಆಮ್ಲದ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಆಮ್ಲೀಯತೆ, ಜಠರದ ಉರಿತ, ಉಬ್ಬುವಿಕೆ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಒಂದು ದೊಡ್ಡ ಲೋಟದಲ್ಲಿ ನೀರು ಕುಡಿದು ನಂತರ ಕಾಫಿ ಸೇವಿಸಿ.  
(5 / 7)

ಖಾರವಾದ ಆಹಾರಗಳು: ಖಾಲಿ ಹೊಟ್ಟೆಯಲ್ಲಿ ಮಸಾಲೆಯುಕ್ತ ಆಹಾರವನ್ನು ಕೂಡಾ ಸೇವಿಸಬಾರದು. ಈ ರೀತಿಯ ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಇದು ಬಹಳಷ್ಟು ನೋವನ್ನು ಉಂಟುಮಾಡುತ್ತದೆ.  ನಿಮ್ಮ ಹೊಟ್ಟೆಯ ಒಳಪದರವನ್ನು ಹಾನಿಗೊಳಿಸಬಹುದು, ಇದು ಅಸ್ವಸ್ಥತೆಯನ್ನು ಉಂಟುಮಾಡಬಹುದು. ಜೀರ್ಣಕ್ರಿಯೆ ಸಮಸ್ಯೆಗಳನ್ನು ಕೂಡಾ ಉಂಟು ಮಾಡಬಹುದು.
(6 / 7)

ಸಿಟ್ರಸ್‌ ಫುಡ್‌ಗಳು: ಹುಳಿ ಅಂಶ ಇರುವ ಹಣ್ಣುಗಳು ಅಥವಾ ಇನ್ನಿತರ ಆಹಾರ ಪದಾರ್ಥಗಳನ್ನು ಎಷ್ಟೇ ಹಸಿವಿದ್ದರೂ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ. ಈ ರೀತಿಯ ಹಣ್ಣುಗಳನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಗ್ಯಾಸ್‌ ಉತ್ಪಾದನೆ ಹೆಚ್ಚುತ್ತದೆ. ಜೊತೆಗೆ ಎದೆಯುರಿ ಹಾಗೂ ಇನ್ನಿತರ ಸಮಸ್ಯೆಗಳು ಉಲ್ಬಣಿಸಬಹುದು. 
(7 / 7)

    ಹಂಚಿಕೊಳ್ಳಲು ಲೇಖನಗಳು