logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚಳಿಗಾಲದಲ್ಲಿ ನವಜಾತ ಶಿಶುವಿನ ಆರೈಕೆ ಹೇಗೆ.? ಪೋಷಕರಿಗೆ ಇಲ್ಲಿದೆ ಮಹತ್ವದ ಕಿವಿಮಾತು

ಚಳಿಗಾಲದಲ್ಲಿ ನವಜಾತ ಶಿಶುವಿನ ಆರೈಕೆ ಹೇಗೆ.? ಪೋಷಕರಿಗೆ ಇಲ್ಲಿದೆ ಮಹತ್ವದ ಕಿವಿಮಾತು

Dec 13, 2023 07:15 AM IST

ಮನೆಗೊಂದು ಪುಟ್ಟ ಕಂದಮ್ಮನ ಆಗಮನವಾದಾಗ ಸಂತೋಷದ ಜೊತೆಯಲ್ಲಿ ಭಯ ಕೂಡ ಹೆಚ್ಚಿರುತ್ತದೆ. ಮಗುವಿನ ಆರೋಗ್ಯ ಕೆಟ್ಟರೆ ಎಂಬ ಚಿಂತೆ ಮಗ್ಗುಲಲ್ಲೇ ಇರುತ್ತದೆ. ಚಳಿಗಾಲದಲ್ಲಿ ಮಗುವಿನ ಆರೋಗ್ಯ ಇನ್ನಷ್ಟು ಸೂಕ್ಷ್ಮವಾಗಿ ಇರುವುದರಿಂದ ಈ ಋತುಮಾನದಲ್ಲಿ ನಿಮ್ಮ ಕಂದಮ್ಮನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದಕ್ಕೆ ಇಲ್ಲಿದೆ ಟಿಪ್ಸ್​

  • ಮನೆಗೊಂದು ಪುಟ್ಟ ಕಂದಮ್ಮನ ಆಗಮನವಾದಾಗ ಸಂತೋಷದ ಜೊತೆಯಲ್ಲಿ ಭಯ ಕೂಡ ಹೆಚ್ಚಿರುತ್ತದೆ. ಮಗುವಿನ ಆರೋಗ್ಯ ಕೆಟ್ಟರೆ ಎಂಬ ಚಿಂತೆ ಮಗ್ಗುಲಲ್ಲೇ ಇರುತ್ತದೆ. ಚಳಿಗಾಲದಲ್ಲಿ ಮಗುವಿನ ಆರೋಗ್ಯ ಇನ್ನಷ್ಟು ಸೂಕ್ಷ್ಮವಾಗಿ ಇರುವುದರಿಂದ ಈ ಋತುಮಾನದಲ್ಲಿ ನಿಮ್ಮ ಕಂದಮ್ಮನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದಕ್ಕೆ ಇಲ್ಲಿದೆ ಟಿಪ್ಸ್​
ಮೊದಲ ಬಾರಿಗೆ ಪೋಷಕರಾಗಿ ಬಡ್ತಿ ಪಡೆದಾಗ ಸಂತಸದ ಜೊತೆಯಲ್ಲಿ ಜವಾಬ್ದಾರಿಗಳ ಮೂಟೆಯೇ ಹೆಗಲ ಮೇಲೇರಿ ಬಿಡುತ್ತದೆ . ಈಗಂತೂ ಚಳಿಗಾಲದ ಸಮಯವಾಗಿರೋದ್ರಿಂದ ಪುಟ್ಟ ಕಂದಮ್ಮಗಳ ಆರೋಗ್ಯದ ಕಡೆಗೆ ಎಷ್ಟು ಜಾಗರೂಕತೆ ವಹಿಸಿದರೂ ಸಹ ಅದು ಕಡಿಮೆ ಎಂದೇ ಎನಿಸುತ್ತದೆ. ಚಳಿಗಾಲದ ಹವಾಮಾನಕ್ಕೆ ಹೊಂದಿಕೊಳ್ಳಲು ಅಗ ತಾನೆ ಜನಿಸಿದ ಮಕ್ಕಳಿಗೆ ತುಸು ಕಷ್ಟವಾಗುತ್ತದೆ. ಆದರೆ ಪೋಷಕರಾಗಿ ನೀವು ಕೆಲವೊಂದು ಸುರಕ್ಷತಾ ಕ್ರಮಗಳನ್ನು ಸರಿಯಾದ ಸಮಯಕ್ಕೆ ಕೈಗೊಂಡಲ್ಲಿ ಚಳಿಗಾಲದಲ್ಲಿಯೂ ಮಕ್ಕಳ ಆರೋಗ್ಯಕ್ಕೆ ಯಾವುದೇ ರೀತಿ ಹಾನಿಯುಂಟಾಗದಂತೆ ನೋಡಿಕೊಳ್ಳಬಹುದಾಗಿದೆ. 
(1 / 8)
ಮೊದಲ ಬಾರಿಗೆ ಪೋಷಕರಾಗಿ ಬಡ್ತಿ ಪಡೆದಾಗ ಸಂತಸದ ಜೊತೆಯಲ್ಲಿ ಜವಾಬ್ದಾರಿಗಳ ಮೂಟೆಯೇ ಹೆಗಲ ಮೇಲೇರಿ ಬಿಡುತ್ತದೆ . ಈಗಂತೂ ಚಳಿಗಾಲದ ಸಮಯವಾಗಿರೋದ್ರಿಂದ ಪುಟ್ಟ ಕಂದಮ್ಮಗಳ ಆರೋಗ್ಯದ ಕಡೆಗೆ ಎಷ್ಟು ಜಾಗರೂಕತೆ ವಹಿಸಿದರೂ ಸಹ ಅದು ಕಡಿಮೆ ಎಂದೇ ಎನಿಸುತ್ತದೆ. ಚಳಿಗಾಲದ ಹವಾಮಾನಕ್ಕೆ ಹೊಂದಿಕೊಳ್ಳಲು ಅಗ ತಾನೆ ಜನಿಸಿದ ಮಕ್ಕಳಿಗೆ ತುಸು ಕಷ್ಟವಾಗುತ್ತದೆ. ಆದರೆ ಪೋಷಕರಾಗಿ ನೀವು ಕೆಲವೊಂದು ಸುರಕ್ಷತಾ ಕ್ರಮಗಳನ್ನು ಸರಿಯಾದ ಸಮಯಕ್ಕೆ ಕೈಗೊಂಡಲ್ಲಿ ಚಳಿಗಾಲದಲ್ಲಿಯೂ ಮಕ್ಕಳ ಆರೋಗ್ಯಕ್ಕೆ ಯಾವುದೇ ರೀತಿ ಹಾನಿಯುಂಟಾಗದಂತೆ ನೋಡಿಕೊಳ್ಳಬಹುದಾಗಿದೆ. (Unsplash)
ಸ್ವಚ್ಛತೆ ನಿಮ್ಮ ಮೊದಲ ಆದ್ಯತೆಯಾಗಿರಲಿ : ಮಗುವಿನ ಆರೋಗ್ಯ ಸರಿಯಾಗಿ ಇರಬೇಕು ಎಂದರೆ ಸ್ವಚ್ಛತೆ ಕಡೆಗೆ ಗಮನ ನೀಡುವುದು ಮುಖ್ಯವಾದ ಸಂಗರಿಯಾಗಿದೆ. ಪ್ರತಿ ಬಾರಿಯೂ ಮಗುವನ್ನು ಎತ್ತಿಕೊಳ್ಳುವ ಅಥವಾ ಸ್ಪರ್ಶಿಸುವ ಮುನ್ನ ಚೆನ್ನಾಗಿ ಕೈತೊಳೆದುಕೊಳ್ಳಲೇಬೇಕು. 
(2 / 8)
ಸ್ವಚ್ಛತೆ ನಿಮ್ಮ ಮೊದಲ ಆದ್ಯತೆಯಾಗಿರಲಿ : ಮಗುವಿನ ಆರೋಗ್ಯ ಸರಿಯಾಗಿ ಇರಬೇಕು ಎಂದರೆ ಸ್ವಚ್ಛತೆ ಕಡೆಗೆ ಗಮನ ನೀಡುವುದು ಮುಖ್ಯವಾದ ಸಂಗರಿಯಾಗಿದೆ. ಪ್ರತಿ ಬಾರಿಯೂ ಮಗುವನ್ನು ಎತ್ತಿಕೊಳ್ಳುವ ಅಥವಾ ಸ್ಪರ್ಶಿಸುವ ಮುನ್ನ ಚೆನ್ನಾಗಿ ಕೈತೊಳೆದುಕೊಳ್ಳಲೇಬೇಕು. (Unsplash)
ನೈರ್ಮಲ್ಯವನ್ನು ಕಾಪಾಡಿಕೊಳ್ಳಿ: ಶುಚಿತ್ವ ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ, ವಿಶೇಷವಾಗಿ ನಿಮ್ಮ ಮಗುವಿಗೆ ನೀವು ಸಂಪರ್ಕದ ಮೊದಲ ಬಿಂದು ಎಂದು ಪರಿಗಣಿಸಿ. ಪದೇ ಪದೇ ನಿಮ್ಮ ಕೈಗಳನ್ನು ತೊಳೆದುಕೊಳ್ಳಲು ಮತ್ತು ನಿಮ್ಮ ಮಗುವಿಗೆ ನೀವು ಪ್ರತಿ ಬಾರಿ ಶುಚಿಗೊಳಿಸುವ ಬಗ್ಗೆ ಶ್ರದ್ಧೆಯಿಂದಿರಿ.
(3 / 8)
ನೈರ್ಮಲ್ಯವನ್ನು ಕಾಪಾಡಿಕೊಳ್ಳಿ: ಶುಚಿತ್ವ ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ, ವಿಶೇಷವಾಗಿ ನಿಮ್ಮ ಮಗುವಿಗೆ ನೀವು ಸಂಪರ್ಕದ ಮೊದಲ ಬಿಂದು ಎಂದು ಪರಿಗಣಿಸಿ. ಪದೇ ಪದೇ ನಿಮ್ಮ ಕೈಗಳನ್ನು ತೊಳೆದುಕೊಳ್ಳಲು ಮತ್ತು ನಿಮ್ಮ ಮಗುವಿಗೆ ನೀವು ಪ್ರತಿ ಬಾರಿ ಶುಚಿಗೊಳಿಸುವ ಬಗ್ಗೆ ಶ್ರದ್ಧೆಯಿಂದಿರಿ.(Unsplash)
ಶುಷ್ಕ ಚರ್ಮದ ಕಡೆ ಗಮನವಿರಲಿ : ಚಳಿಗಾಲದಲ್ಲಿ ಚರ್ಮ ಶುಷ್ಕವಾಗಿ ಬಿಡುತ್ತದೆ. ಅದರಲ್ಲೂ ನವಜಾತ ಶಿಶುಗಳ ಚರ್ಮ ಅತೀ ಸೂಕ್ಷ್ಮವಾಗಿರೋದ್ರಿಂದ ಬಹುಬೇಗನೆ ಅದು ಒಣಗಿ ಬಿಡುತ್ತದೆ. ಹೀಗಾಗಿ ಮಗುವಿನ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಮಾಯಶ್ಚೂರೈಸರ್​ ಬಳಕೆ ಮಾಡಬೇಕು. 
(4 / 8)
ಶುಷ್ಕ ಚರ್ಮದ ಕಡೆ ಗಮನವಿರಲಿ : ಚಳಿಗಾಲದಲ್ಲಿ ಚರ್ಮ ಶುಷ್ಕವಾಗಿ ಬಿಡುತ್ತದೆ. ಅದರಲ್ಲೂ ನವಜಾತ ಶಿಶುಗಳ ಚರ್ಮ ಅತೀ ಸೂಕ್ಷ್ಮವಾಗಿರೋದ್ರಿಂದ ಬಹುಬೇಗನೆ ಅದು ಒಣಗಿ ಬಿಡುತ್ತದೆ. ಹೀಗಾಗಿ ಮಗುವಿನ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಮಾಯಶ್ಚೂರೈಸರ್​ ಬಳಕೆ ಮಾಡಬೇಕು. (Unsplash)
ಮಗುವಿನ ಉಡುಪನ್ನು ಕಡೆಗಣಿಸುವಂತಿಲ್ಲ : ಚಳಿಗಾಲದಲ್ಲಿ ಮಕ್ಕಳಿಗೆ ಬೆಚ್ಚನೆಯ ಅನುಭವವನ್ನು ನೀವು ನೀಡಬೇಕು. ಹೀಗಾಗಿ ಮಕ್ಕಳಿಗೆ ಮೊದಲು ಬಾಡಿಸೂಟ್​ ಹಾಕಿ ಬಳಿಕ ಪ್ಯಾಂಟ್​ ಮತ್ತು ಉದ್ದ ಕೈಗಳ ಜಾಕೆಟ್​ನ್ನು ಹಾಕಿ. ಮಕ್ಕಳಿಗೆ ಕ್ಯಾಪ್​ ಹಾಗೂ ಕೈಗವಸುಗಳು ಮತ್ತು ಸಾಕ್ಸ್​ ಹಾಕಲು ಮರೆಯಬೇಡಿ. ಹತ್ತಿ ಹಾಗೂ ಮಸ್ಲಿನ್​ನಂತಹ ಬಟ್ಟೆಗಳನ್ನೇ ಹೆಚ್ಚಾಗಿ ಬಳಕೆ ಮಾಡಿ. 
(5 / 8)
ಮಗುವಿನ ಉಡುಪನ್ನು ಕಡೆಗಣಿಸುವಂತಿಲ್ಲ : ಚಳಿಗಾಲದಲ್ಲಿ ಮಕ್ಕಳಿಗೆ ಬೆಚ್ಚನೆಯ ಅನುಭವವನ್ನು ನೀವು ನೀಡಬೇಕು. ಹೀಗಾಗಿ ಮಕ್ಕಳಿಗೆ ಮೊದಲು ಬಾಡಿಸೂಟ್​ ಹಾಕಿ ಬಳಿಕ ಪ್ಯಾಂಟ್​ ಮತ್ತು ಉದ್ದ ಕೈಗಳ ಜಾಕೆಟ್​ನ್ನು ಹಾಕಿ. ಮಕ್ಕಳಿಗೆ ಕ್ಯಾಪ್​ ಹಾಗೂ ಕೈಗವಸುಗಳು ಮತ್ತು ಸಾಕ್ಸ್​ ಹಾಕಲು ಮರೆಯಬೇಡಿ. ಹತ್ತಿ ಹಾಗೂ ಮಸ್ಲಿನ್​ನಂತಹ ಬಟ್ಟೆಗಳನ್ನೇ ಹೆಚ್ಚಾಗಿ ಬಳಕೆ ಮಾಡಿ. (Unsplash)
ಮನೆಯ ಒಳಗಿನ ತಾಪಮಾನದ ಬಗ್ಗೆ ಲಕ್ಷ್ಯವಿರಲಿ : ಮಕ್ಕಳಿಗೆ ಬೆಚ್ಚನೆಯ ಅನುಭವ ನೀಡಬೇಕು ಅಂತಾ ನೀವು ಮಾಡಿದ ಕಾಳಜಿಯು ಅವರಿಗೆ ಹೆಚ್ಚು ಸೆಖೆ ಉಂಟು ಮಾಡುವಂತೆಯೂ ಇರಬಾರದು. ಇದು ಕೂಡ ಮಕ್ಕಳ ಚರ್ಮದ ಆರೋಗ್ಯವನ್ನು ಕೆಡಿಸಿಬಿಡಬಹುದು. ಮನೆಯ ತಾಪಮಾನ 24°C ನಿಂದ 26°C ರವರೆಗೆ ಇರುವಂತೆ ನೋಡಿಕೊಳ್ಳಿ .
(6 / 8)
ಮನೆಯ ಒಳಗಿನ ತಾಪಮಾನದ ಬಗ್ಗೆ ಲಕ್ಷ್ಯವಿರಲಿ : ಮಕ್ಕಳಿಗೆ ಬೆಚ್ಚನೆಯ ಅನುಭವ ನೀಡಬೇಕು ಅಂತಾ ನೀವು ಮಾಡಿದ ಕಾಳಜಿಯು ಅವರಿಗೆ ಹೆಚ್ಚು ಸೆಖೆ ಉಂಟು ಮಾಡುವಂತೆಯೂ ಇರಬಾರದು. ಇದು ಕೂಡ ಮಕ್ಕಳ ಚರ್ಮದ ಆರೋಗ್ಯವನ್ನು ಕೆಡಿಸಿಬಿಡಬಹುದು. ಮನೆಯ ತಾಪಮಾನ 24°C ನಿಂದ 26°C ರವರೆಗೆ ಇರುವಂತೆ ನೋಡಿಕೊಳ್ಳಿ .(Unsplash)
ಮನೆಯ ಹೊರಗೆ ಹೋಗುವಾಗ ಜಾಗೃತೆಯಿರಲಿ : ಹೊರಗಡೆ ಇದ್ದಾಗ ಮಗುವಿನ ಕೈ ಕಾಲು ನಡಗುತ್ತಿದ್ದರೆ ಅಥವಾ ಕೈ ಕೆಂಪು ಬಣ್ಣಕ್ಕೆ ತಿರುಗಿದರೆ ಕೂಡಲೇ ಮಗುವನ್ನು ಮನೆಯ ಒಳಗೆ ಕರೆದುಕೊಂಡು ಬರುವುದು ಉತ್ತಮ. ಹೊರಗಡೆ ಹೋಗುವಾಗೆಲ್ಲ ಮಕ್ಕಳಿಗೆ ಬೆಚ್ಚನೆಯ ಉಡುಪನ್ನೇ ಹಾಕಿ. ಕಾಲ ಕಾಲಕ್ಕೆ ವೈದ್ಯರ ಜೊತೆ ಮಾತುಕತೆ ನಡೆಸುತ್ತಿರಿ. 
(7 / 8)
ಮನೆಯ ಹೊರಗೆ ಹೋಗುವಾಗ ಜಾಗೃತೆಯಿರಲಿ : ಹೊರಗಡೆ ಇದ್ದಾಗ ಮಗುವಿನ ಕೈ ಕಾಲು ನಡಗುತ್ತಿದ್ದರೆ ಅಥವಾ ಕೈ ಕೆಂಪು ಬಣ್ಣಕ್ಕೆ ತಿರುಗಿದರೆ ಕೂಡಲೇ ಮಗುವನ್ನು ಮನೆಯ ಒಳಗೆ ಕರೆದುಕೊಂಡು ಬರುವುದು ಉತ್ತಮ. ಹೊರಗಡೆ ಹೋಗುವಾಗೆಲ್ಲ ಮಕ್ಕಳಿಗೆ ಬೆಚ್ಚನೆಯ ಉಡುಪನ್ನೇ ಹಾಕಿ. ಕಾಲ ಕಾಲಕ್ಕೆ ವೈದ್ಯರ ಜೊತೆ ಮಾತುಕತೆ ನಡೆಸುತ್ತಿರಿ. (Unsplash)
ಎದೆಹಾಲುಣಿಸಿ : ತಾಯಿಯ ಹಾಲು ಅಮೃತ ಸಮಾನ ಎನ್ನುತ್ತಾರೆ. ತಾಯಿಯ ಹಾಲಿನಲ್ಲಿ ಇರುವ ಪೋಷಕಾಂಶಗಳು, ಆಂಟಿಬಾಡಿಗಳು ಮಗುವಿನ ಆರೋಗ್ಯದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಹಾಗೂ ಹೆಚ್ಚು ಕಡಿಮೆ ಎಲ್ಲಾ ಕಾಯಿಲೆಗಳನ್ನು ಹೊಡೆದೋಡಿಸುವ ಸಾಮರ್ಥ್ಯ ಎದೆಹಾಲಿಗೆ ಇರುತ್ತದೆ. ಹೀಗಾಗಿ ಮಗುವಿಗೆ ಕಾಲ ಕಾಲಕ್ಕೆ ಎದೆ ಹಾಲು ನೀಡುತ್ತಿರಿ.
(8 / 8)
ಎದೆಹಾಲುಣಿಸಿ : ತಾಯಿಯ ಹಾಲು ಅಮೃತ ಸಮಾನ ಎನ್ನುತ್ತಾರೆ. ತಾಯಿಯ ಹಾಲಿನಲ್ಲಿ ಇರುವ ಪೋಷಕಾಂಶಗಳು, ಆಂಟಿಬಾಡಿಗಳು ಮಗುವಿನ ಆರೋಗ್ಯದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಹಾಗೂ ಹೆಚ್ಚು ಕಡಿಮೆ ಎಲ್ಲಾ ಕಾಯಿಲೆಗಳನ್ನು ಹೊಡೆದೋಡಿಸುವ ಸಾಮರ್ಥ್ಯ ಎದೆಹಾಲಿಗೆ ಇರುತ್ತದೆ. ಹೀಗಾಗಿ ಮಗುವಿಗೆ ಕಾಲ ಕಾಲಕ್ಕೆ ಎದೆ ಹಾಲು ನೀಡುತ್ತಿರಿ.(Unsplash)

    ಹಂಚಿಕೊಳ್ಳಲು ಲೇಖನಗಳು