logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Food Craving: ಯಾರಾದ್ರೂ ಅತಿಯಾಗಿ ತಿಂತಾರೆ ಅಂದ್ರೆ ಅವರ ತಪ್ಪಲ್ಲ, ಅದಕ್ಕೆ ತಿಂಡಿಪೋತರನ್ನಾಗಿಸುವ ಈ 6 ಹಾರ್ಮೋನ್‌ಗಳೇ ಕಾರಣ

Food Craving: ಯಾರಾದ್ರೂ ಅತಿಯಾಗಿ ತಿಂತಾರೆ ಅಂದ್ರೆ ಅವರ ತಪ್ಪಲ್ಲ, ಅದಕ್ಕೆ ತಿಂಡಿಪೋತರನ್ನಾಗಿಸುವ ಈ 6 ಹಾರ್ಮೋನ್‌ಗಳೇ ಕಾರಣ

Feb 08, 2024 04:27 PM IST

ಕೆಲವರಿಗೆ ಹಸಿವು ಹೆಚ್ಚು, ಇನ್ನು ಕೆಲವರು ಅತಿಯಾಗಿ ಸಿಹಿ ತಿನ್ನುತ್ತಾರೆ ಮತ್ತೆ ಕೆಲವರು ಕಡಿಮೆ ತಿಂದರೂ ಅವರಲ್ಲಿ ಕೊಬ್ಬು ಶೇಖರಣೆಗೊಳ್ಳುತ್ತಾ ಹೋಗುತ್ತದೆ. ಇವೆಲ್ಲದಕ್ಕೂ ಈ 6 ಹಾರ್ಮೋನ್‌ಗಳೇ ಕಾರಣ. ನೀವು ತಿಂಡಿಪೋತರೆಂದು ಕರೆಯಿಸಿಕೊಳ್ಳುವಂತೆ ಮಾಡುವ ಇನ್ಸುಲಿನ್‌ ನಿಂದ ಈಸ್ಟ್ರೋಜಿನ್‌ ವರೆಗಿನ 6 ಹಾರ್ಮೋನ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

  • ಕೆಲವರಿಗೆ ಹಸಿವು ಹೆಚ್ಚು, ಇನ್ನು ಕೆಲವರು ಅತಿಯಾಗಿ ಸಿಹಿ ತಿನ್ನುತ್ತಾರೆ ಮತ್ತೆ ಕೆಲವರು ಕಡಿಮೆ ತಿಂದರೂ ಅವರಲ್ಲಿ ಕೊಬ್ಬು ಶೇಖರಣೆಗೊಳ್ಳುತ್ತಾ ಹೋಗುತ್ತದೆ. ಇವೆಲ್ಲದಕ್ಕೂ ಈ 6 ಹಾರ್ಮೋನ್‌ಗಳೇ ಕಾರಣ. ನೀವು ತಿಂಡಿಪೋತರೆಂದು ಕರೆಯಿಸಿಕೊಳ್ಳುವಂತೆ ಮಾಡುವ ಇನ್ಸುಲಿನ್‌ ನಿಂದ ಈಸ್ಟ್ರೋಜಿನ್‌ ವರೆಗಿನ 6 ಹಾರ್ಮೋನ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.
ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಹಾರ್ಮೋನ್‌ಗಳು ಅತ್ಯಗತ್ಯ. ಅವು ದೇಹವು ನಿರ್ದಿಷ್ಟ ಕೆಲಸಗಳನ್ನು ಮಾಡುವಂತೆ ಉತ್ತೇಜಿಸಲು ಸಹಾಯ ಮಾಡುತ್ತವೆ. ಹೊಟ್ಟೆ ಹಸಿವು, ಕಡುಬಯಕೆಗಳು, ದೇಹದಲ್ಲಿ ಕೊಬ್ಬು ಶೇಖರಣೆಗೊಳ್ಳುವುದು ಈ ಎಲ್ಲಾ ಕೆಲಸಗಳನ್ನು ನೋಡಿಕೊಳ್ಳುವುದು ಹಾರ್ಮೋನ್‌ಗಳು ತೂಕ ಹೆಚ್ಚಾಗುವುದು ಅಥವಾ ತೂಕ ಕಳೆದುಕೊಳ್ಳಲು ಆಗದಿರುವುದು ಇವೆಲ್ಲವೂ ನೀವು ತಿನ್ನುವ ಆಹಾರ ಅಥವಾ ಕಡಿಮೆ ವ್ಯಾಯಾಮ ಮಾಡುವುದಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ. ಇದೆಲ್ಲವೂ ಒತ್ತಡ, ನಿದ್ರೆ, ಕುಳಿನ ಆರೋಗ್ಯ, ಜೀನ್‌ಗಳು, ಮಲಿನ ಪರಿಸರ, ಮನಸ್ಸು ಮತ್ತು ದೇಹದ ನಡುವಿನ ಸಂಪರ್ಕ ಹಾಗೂ ಹಾರ್ಮೋನ್‌ಗಳಿಂದಲೂ ಉಂಟಾಗುತ್ತದೆ ಎಂದು ನ್ಯೂಟ್ರೀಷನ್‌ ತಜ್ಞರಾದ ಮರೀನಾ ರೈಟ್‌ ಹೇಳುತ್ತಾರೆ.
(1 / 7)
ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಹಾರ್ಮೋನ್‌ಗಳು ಅತ್ಯಗತ್ಯ. ಅವು ದೇಹವು ನಿರ್ದಿಷ್ಟ ಕೆಲಸಗಳನ್ನು ಮಾಡುವಂತೆ ಉತ್ತೇಜಿಸಲು ಸಹಾಯ ಮಾಡುತ್ತವೆ. ಹೊಟ್ಟೆ ಹಸಿವು, ಕಡುಬಯಕೆಗಳು, ದೇಹದಲ್ಲಿ ಕೊಬ್ಬು ಶೇಖರಣೆಗೊಳ್ಳುವುದು ಈ ಎಲ್ಲಾ ಕೆಲಸಗಳನ್ನು ನೋಡಿಕೊಳ್ಳುವುದು ಹಾರ್ಮೋನ್‌ಗಳು ತೂಕ ಹೆಚ್ಚಾಗುವುದು ಅಥವಾ ತೂಕ ಕಳೆದುಕೊಳ್ಳಲು ಆಗದಿರುವುದು ಇವೆಲ್ಲವೂ ನೀವು ತಿನ್ನುವ ಆಹಾರ ಅಥವಾ ಕಡಿಮೆ ವ್ಯಾಯಾಮ ಮಾಡುವುದಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ. ಇದೆಲ್ಲವೂ ಒತ್ತಡ, ನಿದ್ರೆ, ಕುಳಿನ ಆರೋಗ್ಯ, ಜೀನ್‌ಗಳು, ಮಲಿನ ಪರಿಸರ, ಮನಸ್ಸು ಮತ್ತು ದೇಹದ ನಡುವಿನ ಸಂಪರ್ಕ ಹಾಗೂ ಹಾರ್ಮೋನ್‌ಗಳಿಂದಲೂ ಉಂಟಾಗುತ್ತದೆ ಎಂದು ನ್ಯೂಟ್ರೀಷನ್‌ ತಜ್ಞರಾದ ಮರೀನಾ ರೈಟ್‌ ಹೇಳುತ್ತಾರೆ.(Unsplash)
ದೇಹದಲ್ಲಿ ಥೈರಾಯ್ಡ್‌ ಹಾರ್ಮೋನ್‌ಗಳು ಕಡಿಮೆ ಉತ್ಪಾದನೆಯಾದರೆ ಅದು ಕೊಬ್ಬನ್ನು ಕರಗಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಮತ್ತು ಅದು ಕ್ಯಾಲೋರಿಗಳು ಶೇಖರಣೆಗೊಳ್ಳುವಂತೆ ಮಾಡುತ್ತದೆ.
(2 / 7)
ದೇಹದಲ್ಲಿ ಥೈರಾಯ್ಡ್‌ ಹಾರ್ಮೋನ್‌ಗಳು ಕಡಿಮೆ ಉತ್ಪಾದನೆಯಾದರೆ ಅದು ಕೊಬ್ಬನ್ನು ಕರಗಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಮತ್ತು ಅದು ಕ್ಯಾಲೋರಿಗಳು ಶೇಖರಣೆಗೊಳ್ಳುವಂತೆ ಮಾಡುತ್ತದೆ.(HT File Photo)
ಇನ್ಸುಲಿನ್‌ ಪ್ರಮಾಣವು ದೇಹದಲ್ಲಿ ಹೆಚ್ಚಾಗುವುದು ತೂಕ ಏರಿಕೆ, ಉರಿಯೂತ ಮತ್ತು ಇತರ ಗಂಭೀರ ಸಮಸ್ಯೆಗಳಿಗೆ ಕಾರಣವಾಗಿದೆ. 
(3 / 7)
ಇನ್ಸುಲಿನ್‌ ಪ್ರಮಾಣವು ದೇಹದಲ್ಲಿ ಹೆಚ್ಚಾಗುವುದು ತೂಕ ಏರಿಕೆ, ಉರಿಯೂತ ಮತ್ತು ಇತರ ಗಂಭೀರ ಸಮಸ್ಯೆಗಳಿಗೆ ಕಾರಣವಾಗಿದೆ. (HT File Photo)
ದೇಹದಲ್ಲಿ ಕೊಬ್ಬು ಶೇಖರಣೆಗೊಳ್ಳಲು ಕಾರ್ಟಿಸೊಲ್‌ ಹಾರ್ಮೋನ್‌ಗಳು ಕಾರಣವಾಗುತ್ತದೆ. ಇದು ಸಿಹಿ ಪದಾರ್ಥಗಳನ್ನು ತಿನ್ನುವ ಕಡು ಬಯಕೆಯನ್ನು ಹೆಚ್ಚಿಸುತ್ತದೆ. ಚಯಾಪಚಯ ಕ್ರಿಯೆಯನ್ನು ಕುಂಠಿತಗೊಳಿಸುತ್ತದೆ.
(4 / 7)
ದೇಹದಲ್ಲಿ ಕೊಬ್ಬು ಶೇಖರಣೆಗೊಳ್ಳಲು ಕಾರ್ಟಿಸೊಲ್‌ ಹಾರ್ಮೋನ್‌ಗಳು ಕಾರಣವಾಗುತ್ತದೆ. ಇದು ಸಿಹಿ ಪದಾರ್ಥಗಳನ್ನು ತಿನ್ನುವ ಕಡು ಬಯಕೆಯನ್ನು ಹೆಚ್ಚಿಸುತ್ತದೆ. ಚಯಾಪಚಯ ಕ್ರಿಯೆಯನ್ನು ಕುಂಠಿತಗೊಳಿಸುತ್ತದೆ.(HT File Photo)
ಗ್ರೆಲಿನ್‌ ಹಾರ್ಮೋನ್‌ ಲೆಪ್ಟಿನ್‌ ಹಾರ್ಮೋನ್‌ಗೆ ವಿರುದ್ಧವಾಗಿದೆ. ಗ್ರೆಲಿನ್‌ ಇದು ಹಸಿವಿನ ಹಾರ್ಮೋನ್‌ ಆಗಿದೆ. ಇದರ ಮುಖ್ಯ ಕಾರ್ಯವೆಂದರೆ ಹಸಿವನ್ನು ಹೆಚ್ಚಿಸುವುದು. 
(5 / 7)
ಗ್ರೆಲಿನ್‌ ಹಾರ್ಮೋನ್‌ ಲೆಪ್ಟಿನ್‌ ಹಾರ್ಮೋನ್‌ಗೆ ವಿರುದ್ಧವಾಗಿದೆ. ಗ್ರೆಲಿನ್‌ ಇದು ಹಸಿವಿನ ಹಾರ್ಮೋನ್‌ ಆಗಿದೆ. ಇದರ ಮುಖ್ಯ ಕಾರ್ಯವೆಂದರೆ ಹಸಿವನ್ನು ಹೆಚ್ಚಿಸುವುದು. (HT File Photo)
ಲೆಪ್ಟಿನ್‌, ಇದು ಕೊಬ್ಬಿನ ಕೋಶಗಳಲ್ಲಿ ಉತ್ಪತ್ತಿಯಾಗುತ್ತದೆ. ಇದು ಸಂತೃಪ್ತಿಯ ಭಾವನೆಯನ್ನು ಉಂಟುಮಾಡುತ್ತದೆ. ಆದರೆ ಲೆಪ್ಟಿನ್‌ ಪ್ರತಿರೋಧವು ಹೊಟ್ಟೆ ತುಂಬಿದ ಅನುಭವವನ್ನು ತಡೆಯುತ್ತದೆ.
(6 / 7)
ಲೆಪ್ಟಿನ್‌, ಇದು ಕೊಬ್ಬಿನ ಕೋಶಗಳಲ್ಲಿ ಉತ್ಪತ್ತಿಯಾಗುತ್ತದೆ. ಇದು ಸಂತೃಪ್ತಿಯ ಭಾವನೆಯನ್ನು ಉಂಟುಮಾಡುತ್ತದೆ. ಆದರೆ ಲೆಪ್ಟಿನ್‌ ಪ್ರತಿರೋಧವು ಹೊಟ್ಟೆ ತುಂಬಿದ ಅನುಭವವನ್ನು ತಡೆಯುತ್ತದೆ.(HT File Photo)
ಈಸ್ಟ್ರೋಜೆನ್‌ ಹಾರ್ಮೋನ್‌ ಗ್ಲುಕೋಸ್‌ ಮತ್ತು ಇನ್ಸುಲಿನ್‌ ತಯಾರಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈಸ್ಟ್ರೋಜೆನ್‌ನ ಮಟ್ಟದಲ್ಲಾಗುವ ಏರುಪೇರುಗಳು ದೇಹದಲ್ಲಿ ತೂಕ ಹೆಚ್ಚಾಗಲು ಕಾರಣವಾಗುಬಹುದು. 
(7 / 7)
ಈಸ್ಟ್ರೋಜೆನ್‌ ಹಾರ್ಮೋನ್‌ ಗ್ಲುಕೋಸ್‌ ಮತ್ತು ಇನ್ಸುಲಿನ್‌ ತಯಾರಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈಸ್ಟ್ರೋಜೆನ್‌ನ ಮಟ್ಟದಲ್ಲಾಗುವ ಏರುಪೇರುಗಳು ದೇಹದಲ್ಲಿ ತೂಕ ಹೆಚ್ಚಾಗಲು ಕಾರಣವಾಗುಬಹುದು. (HT File Photo)

    ಹಂಚಿಕೊಳ್ಳಲು ಲೇಖನಗಳು